ದೇಶ

ನಿಮ್ಮ ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಹಣ ಎಷ್ಟು ಬಂತು ಎಂಬುದರ ಬಗ್ಗೆ ಮಾಹಿತಿ ಬೇಕಾ.?

ನವದೆಹಲಿ : ಹಾಗಾದರೆ ಹೀಗೆ ಮಾಡಿ. ಎಷ್ಟು ಸಬ್ಸಿಡಿ ಮೊತ್ತವನ್ನ ತಮ್ಮ ಖಾತೆಯಲ್ಲಿ ಜಮಾ ಮಾಡಲಾಗಿದೆ ಮತ್ತು ಅದನ್ನ ತಿಳಿದುಕೊಳ್ಳೋದು ಹೇಗೆ ಅನ್ನೋದು ಕಾತುರತೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಸಬ್ಸಿಡಿ ಹಣ ಜಮಾ ಆಗಿದೆ ಎಂಬುದನ್ನ ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಬಹುದು. 1ಮೊದಲು ಅಧಿಕೃತ ವೆಬ್ಸೈಟ್ Mylpg.in‌ ಗೆ ಭೇಟಿ ನೀಡಿ. 2 ನಿಮ್ಮ ಸಿಲಿಂಡರ್ ಕಂಪನಿಯ ಮೇಲೆ (HP, India and Indane) 3 ನೀವು ಅದರಲ್ಲಿ ಹೊಸ ಇಂಟರ್ಫೇಸ್ ಅನ್ನ ತೆರೆಯುತ್ತೀರಿ. ಮೆನುಗೆ ಹೋಗಿ. 4ನಿಮ್ಮ 17 ಅಂಕಿಗಳ LPG IDಯನ್ನ ನಮೂದಿಸಿ 5LPG ID ಗೊತ್ತಿಲ್ಲದಿದ್ದರೆ, ‘ನಿಮ್ಮ LPG ID ತಿಳಿಯಲು ಇಲ್ಲಿ

ದ್ವಿಚಕ್ರ ವಾಹನ ಸವಾರರೆ ಈ ಸುದ್ದಿ ಗಮನಿಸಿ

ನವದೆಹಲಿ : ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದ್ದು, 2021 ರ ಜೂ.1 ರಿಂದ ದೇಶಾದ್ಯಂತ ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (BIS) ಹೆಲ್ಮೆಟ್ ಗಳನ್ನೇ ದ್ವಿಚಕ್ರ ವಾಹನ ಸವಾರರು ಬಳಕೆ ಮಾಡಬೇಕು ಎಂದು ಹೇಳಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು, ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದು ಆದೇಶ ಹೊರಡಿಸಿದ್ದು, ಜೂನ್ 1 ರಿಂದ ದ್ವಿಚಕ್ರ ವಾಹನ ಸವಾರರು ಬಿಐಎಸ್ ಹೆಲ್ಮೆಟ್ ಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವುದರಿಂದ ರಸ್ತೆ ಅಪಘಾತದಲ್ಲಿ ಸವಾರರು ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಈ ಕ್ರಮ

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 368 ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಬಿಇ, ಬಿ.ಟೆಕ್, ಬಿಎಸ್ಸಿ, ಎಂಬಿಎ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 32 ವರ್ಷ, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕಡೆ ದಿನ ಜನವರಿ 14, 2021 ಆಗಿದೆ.

ಡಿಸೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ.!

ಬೆಂಗಳೂರು : ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ 7 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿವೆ. ಡಿಸೆಂಬರ್ ತಿಂಗಳಲ್ಲಿ ಒಟ್ಟು 7 ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಲಿದ್ದು, ನಾಲ್ಕು ಭಾನುವಾರ, 2 ನೇ ಶನಿವಾರ ಸೇರಿದಂತೆ ಕ್ರಿಸ್ ಮಸ್ ಹಬ್ಬಕ್ಕೆ ರಜೆ ಇರಲಿವೆ. ಡಿಸೆಂಬರ್ 6 : ಭಾನುವಾರ. ಡಿಸೆಂಬರ್ 12 : ಎರಡನೇ ಶನಿವಾರ, ಡಿಸೆಂಬರ್ 13 : ಭಾನುವಾರ. ಡಿಸೆಂಬರ್ 20 : ಭಾನುವಾರ. ಡಿಸೆಂಬರ್ 25 : ಶುಕ್ರವಾರ (ಕ್ರಿಸ್ ಮಸ್). ಡಿಸೆಂಬರ್ 26 : ಎರಡನೇ ಶನಿವಾರ. ಡಿಸೆಂಬರ್ 27 : ಭಾನುವಾರ

ಬೆಂಕಿ ಅವಘಢ : ಕೋವಿಡ್ 19 ಆಸ್ಪತ್ರೆಯಲ್ಲಿ ಆರು ಮಂದಿ ಸಾವು..!

ಗುಜರಾತ್‌: ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿನ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಶುಕ್ರವಾರ ಮುಂಜಾನೆ ಆರು ಮಂದಿ ಸಾವನ್ನಪ್ಪಿದ್ದಾರೆ. ರಾಜ್‌ಕೋಟ್‌ನ ಶಿವಾನಂದ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಿವಾನಂದ್ ಆಸ್ಪತ್ರೆ ಕರೋನವೈರಸ್ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯವಾಗಿರುವುದರಿಂದ, ಘಟನೆಯ ಸಮಯದಲ್ಲಿ ಐಸಿಯು ಒಳಗೆ 11 ರೋಗಿಗಳು ಇದ್ದರು. ಐಸಿಯುನಿಂದ ಬೆಂಕಿ ಪ್ರಾರಂಭವಾಯಿತು ಎಂದು ಹೇಳುತ್ತಿದ್ದರೂ, ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿಲ್ಲ. ರಾಜ್‌ಕೋಟ್ ಅಗ್ನಿಶಾಮಕ ಇಲಾಖೆಯು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಎಲ್ಲಾ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಇಳಿದುಬಂದಿದೆ. (ಸಾಂದರ್ಭಿಕ ಚಿತ್ರ)

ಅಂಚೆ ಕಚೇರಿಯಲ್ಲಿನ ಉಳಿತಾಯ ಖಾತೆಗೆ ಹೊಸ ನಿಯಮ ಜಾರಿ.!

ನವದೆಹಲಿ: ಅಂಚೆ ಕಚೇರಿಯಲ್ಲಿನ ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಬಾಕಿ ಮೊತ್ತವನ್ನು ಹೆಚ್ಚಿಸಲಾಗಿದೆ. ಇದರ ಅನ್ವಯ ಕನಿಷ್ಠ ₹500 ಮೊತ್ತ ಖಾತೆಯಲ್ಲಿ ಇರಬೇಕು. ಈ ಹೊಸ ನಿಯಮ ಡಿ.12ರಿಂದ ಜಾರಿಗೆ ತರಲು ಅಂಚೆ ಇಲಾಖೆ ನಿರ್ಧರಿಸಿದೆ. ಕನಿಷ್ಠ ಮೊತ್ತ ₹500 ಇಲ್ಲದೆ ಖಾತೆಗಳಲ್ಲಿ ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ₹100 ಕಡಿತಗೊಳಿಸಲು ಇಲಾಖೆ ತೀರ್ಮಾನಿಸಿದೆ. ನೀವು ಸಹ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ತಪ್ಪದೇ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ₹500 ಇರುವಂತೆ ನೋಡಿಕೊಳ್ಳಿರಿ.

ಜನವರಿ 1 ರಿಂದ ಲ್ಯಾಂಡ್ ಲೈನ್ ಬದಲಾವಣೆ ಏನು.?

ಬೆಂಗಳೂರು: ಜ.1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ. ಬದಲಾದ ನಿಯಮ ಏನೆಂದರೆ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೋ ಸೇರಿಸುವುದು ಕಡ್ಡಾಯ. ವ್ಯಕ್ತಿಯ ಲ್ಯಾಂಡ್‌ಲೈನ್‌ನಲ್ಲಿ ಸೊನ್ನೆ ಒತ್ತದೇ ನೇರವಾಗಿ ಮೊಬೈಲ್ ನಂ‌ಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್ ರೆಕಾರ್ಡ್ ಪ್ಲೇ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಸೋನಿಯಾ ಗಾಂಧಿ ಅವರ ಪ್ರಬಲ ರಾಜಕೀಯ ಕಾರ್ಯದರ್ಶಿ: ಅಹ್ಮದ್ ಪಟೇಲ್ ನಿಧನ.!

ನವದೆಹಲಿ : ರಾಜಕೀಯ ವಲಯದಲ್ಲಿ ‘ಅಹ್ಮದ್ ಭಾಯಿ’ ಅಥವಾ ‘ಆಪ್’ ಎಂದೇ ಜನಪ್ರಿಯಗಳಿಸದವರು,  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಬಲ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಾಗು  ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್(71) ಅವರು ಇಂದು ಮುಂಜಾನೆ ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಅಕ್ಟೋಬರ್ 1ರಂದು ಫರೀದಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗುರುಗ್ರಾಮದ ಮೇದಂತಾ ಮೆಡಿಸಿಟಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ .!

ಬೆಂಗಳೂರು:ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 264 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ & ವಯೋಮಿತಿಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಕಡೆ ದಿನ ಡಿ.21 ಆಗಿದೆ. ಹೆಚ್ಚಿನ ಮಾಹಿತಿಗೆ https://anganwadirecruit.kar.nic.in/ಗೆ ಸಂಪರ್ಕಿಸಬಹುದು.

ವಿದ್ಯಾರ್ಥಿ ವೇತನಕ್ಕಾಗಿ ಈ ವೆಬ್ ಗಳ ಮಾಹಿತಿ ನಿಮಗಾಗಿ

ನವದೆಹಲಿ: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ – https://pue.kar.nic.in/ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) – https://pue.kar.nic.in/ ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ – www.karepass.cgg.gov.in ಸಮಾಜ ಕಲ್ಯಾಣ ಇಲಾಖೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ- www.sw.kar.nic.in ನಮ್ಮ ರಾಜ್ಯದ ಹೆಮ್ಮೆಯ ಐಟಿ ಕಂಪನಿ ಇನ್ಫೋಸಿಸ್