ಪ್ರಮುಖ ಸುದ್ದಿ

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಯಾರಿಂದಲೂ ಸಾದ್ಯವಿಲ್ಲ: ಹೆಚ್.ಡಿ .ದೇವೇಗೌಡರು..!

ಹಾಸನ : ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಯಾವ ಪ್ರಧಾನಿ ಅಥವಾ ಸಿಎಂಗೂ ಬಗೆಹರಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಅಷ್ಟು ಸುಲಭವಾದುದಲ್ಲ ಅಂತ ಹೇಳುವುದರ ಜೊತೆಗೆ ಇತ್ತೀಚೆಗೆ ಕೇಂದ್ರದ ಜನಪ್ರಿಯತೆ ಕುಗ್ಗುತ್ತಿದೆ. ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ ಮೀಸಲಾತಿ ನೀಡಲಾಗುತ್ತಿದೆ ಇದೇ ಕಾರಣಕ್ಕೆ ಮರು ಮಾತನಾಡದೇ ಎಲ್ಲಾ ಪಕ್ಷಗಳು ಬೆಂಬಲ ನೀಡಿದ್ದಾರೆ ಎಂದರು. ಹಾಗೂ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ನೊಂದಿಗೆ ಮೈತ್ರಿ ಮುಂದುವರೆಯುತ್ತದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್ ಅಂಟಿಸಿದ್ರೆ ಆರು ತಿಂಗಳು ಜೈಲು!

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ  ಫ್ಲೆಕ್ಸ್, ಬ್ಯಾನರ್​ ನಿಷೇಧ ಕಾಯಿದೆ ಜಾರಿಯಾಗಿದ್ದರೂ ಉಲ್ಲಂಘನೆ ಪ್ರಮಾಣ ನಿಲ್ಲದಿರುವದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್​ಗಳನ್ನು ಅಂಟಿಸಿದರೆ ಶಿಕ್ಷಾರ್ಹ ಅಪರಾಧ ಎಂದು ನಗರ ಪೊಲೀಸ್​​ ಆಯುಕ್ತರು ಸಾರ್ವಜನಿಕ ಪ್ರಕಟಣೆ ತಿಳಿಸಿದ್ದಾರೆ. ಕೆಓಪಿಡಿ ಆ್ಯಕ್ಟ್ 1981ರ ಅಡಿಯಲ್ಲಿ ಆರು ತಿಂಗಳ ಸಜೆ ಅಥವಾ ಒಂದು ಸಾವಿರ ರೂ.ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

ತೆಂಗಿನ ನಾರಿನ ಉದ್ಯಮ ಸ್ಥಾಪನೆಗೆ ಸರಕಾರ ಬದ್ಧ: ಮುಖ್ಯ ಮಂತ್ರಿ ಕುಮಾರಸ್ವಾಮಿ

ಬೆಂಗಳೂರು : ತೆಂಗಿನ ನಾರಿನ ಉದ್ಯಮ ಸ್ಥಾಪನೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಕನಿಷ್ಠ 1 ಲಕ್ಷ ಉದ್ಯೋಗಾವಕಾಶ ಸೃಷ್ಠಿ ಆಗಲಿದೆ ಇದರಿಂದ ನಿರುದ್ಯೋಗ ಯುವಕರಿಗೆ ಕೆಲಸ ಸಿಕ್ಕಂತ್ತಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ತೆಂಗಿನ ನಾರಿನ ಉದ್ಯಮಗಳ ಪುನಶ್ಚೇತನದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಈ ಸೂಚನೆ ನೀಡಿದ್ದು, ದೇಶದ ಒಟ್ಟು ತೆಂಗು ಉತ್ಪಾದನೆಯಲ್ಲಿ ಶೇ. 29 ರಷ್ಟು ಕರ್ನಾಟಕದಲ್ಲಿ ಆಗುವ ಮೂಲಕ 2ನೇ ಸ್ಥಾನದಲ್ಲಿದೆ. ಆದರೆ ನಾರಿನ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ. 10 ರಷ್ಟು ಮಾತ್ರ ಎಂದು ಹೇಳಿದರು.. ತೆಂಗಿನ ನಾರು ಹೇರಳವಾಗಿ ಲಭ್ಯ ಇರುವುದರಿಂದ ಈ ಉದ್ಯಮದ

ಉಪನ್ಯಾಸಕರ ನೇಮಕ: ಸರಕಾರ ರೆಡಿ-ಜಿಟಿ. ದೇವೇಗೌಡ..!

ಬೆಂಗಳೂರು: ರಾಜ್ಯ ಸರ್ಕಾರವು 3800 ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿಟಿ.ದೇವೇಗೌಡ ಅವರು ನಿನ್ನೆ ತಿಳಿಸಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಸಿಕ್ಕ ಬಳಿಕ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು. ಇದರೊಂದಿಗೆ ಬಿಎ ಪದವಿಯ ಪಠ್ಯಕ್ರಮವನ್ನು ಮೇಲ್ದರ್ಜೆಗೆ ಏರಿಸಲು ನಿರ್ಣಯ ಬಾಕಿ ಇದ್ದು, ಇಂದು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಹಾಗೂ ಶಿಕ್ಷಣ ತಜ್ಞರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.

ಪಕ್ಷ ಅಂದ್ರೆನೆ ಭಿನ್ನಾಭಿಪ್ರಾಯ: ಲಕ್ಷ್ಮಿ ಹೆಬ್ಬಾಳ್ಕರ್..!

ಬೆಳಗಾವಿ: ಪಕ್ಷ ಅಂತ  ಮೇಲೆ ರಾಜಕಾರಣದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳು ಇರುತ್ತವೆ ಎಂದು ಶಾಸಕಿ  ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ತಾಯಿಯ ಮಕ್ಕಳಲ್ಲಿ ಹೊಂದಾಣಿಕೆ ಇರುವುದಿಲ್ಲ. ಇನ್ನು ರಾಜಕಾರಣದಲ್ಲಿ ಎಲ್ಲರೂ ಒಂದೇ ರೀತಿ ಯೋಚಿಸಬೇಕೆಂದರೆ ಅದು ಹೇಗೆ ಸಾಧ್ಯ ಎಂದರು. ಮುಂದು ವರೆದು ಪಕ್ಷದ ನಾಯಕರ ಮಾತಿಗೆ ಬೆಲೆ ಕೊಟ್ಟು, ಜಾರಕಿಹೊಳಿ ಸಹೋದರರು ಮತ್ತು ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು

ಸರಕಾರ ಬೀಳುತ್ತೆ ಎಂಬ ಡೆಡ್ ಲೈನ್ ಕೊಡುವ ಬಿಜೆಪಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ ಏನಂತ.?

ಬೆಂಗಳೂರು: ಈ ಗಾಗಲೇ ಬಿಜೆಪಿಯವರು ಸರಕಾರ ಇನ್ನೇನು ಬಿದ್ದೆ ಬಿಡ್ತು ಅಂತ ಪ್ರತಿಸಲ ಡೆಡ್ ಲೈನ್ ಕೊಡುತ್ತಾರೆ. ಶಿವರಾತ್ರಿಗೆ ಒಂದು ಡೆಡ್ ಲೈನ್ ಕೊಡುತ್ತಾರೆ ಅದೆಲ್ಲ ಸುಳ್ಳು ವದಂತಿ ಹಬ್ಬಿಸುತ್ತಾರೆ ಅಂತ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಯಡಿಯೂರಪ್ಪ ಹಾಗೂ ಇತರ ನಾಯಕರ ಸಂಕ್ರಾಂತಿಗೆ ಸರ್ಕಾರ ಬೀಳುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಸಂಕ್ರಾಂತಿಗೆ ಡೆಡ್ ಲೈನ್ ಕೊಟ್ಟಿದ್ದಾರೆ ನಂತರ ಶಿವರಾತ್ರಿಗೆ, ಯುಗಾದಿಗೆ ಒಂದು ಡೆಡ್ ಲೈನ್ ಕೊಡುತ್ತಾರೆ. ಅವರು ಹೇಳಿದ್ದು ಒಂದೂ ಆಗಲ್ಲ ಎಂದು ನಕ್ಕು ಬಿಟ್ಟರು ಕುಮಾರಸ್ವಾಮಿಯವರು.!

ಲೋಕಸಭಾ ಚುನಾವಣೆ: ರಾಜ್ಯಕ್ಕೆ ಎಷ್ಟು ಬಾರಿ ನರೇಂದ್ರ ಮೋದಿಯವರು ಬರುತ್ತಾರೆ……!

ಬೆಂಗಳೂರು:ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು,  ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಏಳು ಸಮಾವೇಶ ಅಯೋಜಿಸಲು ತೀರ್ಮಾನಿಸಿದೆ ಎಂಬುದು ಸುದ್ದಿ. ಚುನಾವಣಾ ದಿನಾಂಕ ಘೋಷಣೆ ಬಳಿಕ ಹೆಚ್ಚಿನ ಸಮಾವೇಶಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಧಿಸೂಚನೆಗೂ ಮುನ್ನವೇ ಮೋದಿ ಅವರನ್ನು ರಾಜ್ಯದಲ್ಲಿ 7 ಸಮಾವೇಶ ನಡೆಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯೋಜನೆಯಾಗಿದೆಯಂತೆ. ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಸಮುದಾಯಗಳ ಸಮಾವೇಶ ನಡೆಸಿ ಕೇಂದ್ರ ಸರ್ಕಾರ ಆ ಸಮುದಾಯಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು ಜನರ ಮುಂದಿಡುವ ಪ್ಲಾನ್ ಮಾಡಲಾಗಿದೆ ಎಂಬುದು ಸುದ್ದಿ.

ಶಾಸಕ ಚಂದ್ರಪ್ಪ ವಿರುದ್ಧ ಯಾವ ಕೇಸ್ ದಾಖಲಾಗಿದೆ.?

ಚಿತ್ರದುರ್ಗ : ನಿನ್ನೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪೊಲೀಸ್ ಠಾಣೆಯ ಎದುರು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ  309 ಕೇಸ್ ದಾಖಲಾಗಿರುವ ಬೆನ್ನೆಲ್ಲೆ ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಕೇಸ್ ದಾಖಲಾಗಿದೆ. ಶಾಸಕ ಚಂದ್ರಪ್ಪರ ಮೇಲೆ ಕೇಸ್ ದಾಖಲಾಗಿರುವುದು ದುರ್ಗದ ನಗರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 189, 504 ಹಾಗೂ 506. ಏಕೆಂದ್ರೆ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಹಾಗಾಗಿ ಚಂದ್ರಪ್ಪರ ಮೇಲೆ ಕೇಸ್ ದಾಖಲಾಗಿದೆ.

ಶಾಸಕ ಗೂಳಿಹಟ್ಟಿ ಶೇಖರ್ ಏಕೆ ಪೆಟ್ರೋಲ್ ಸುರಿದು ಕೊಂಡ್ರು..?

ಹೊಸದುರ್ಗ: ಮರಳು ಸಾಗಿಸಲು ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೊಸದುರ್ಗ ಪೊಲೀಸ್ ಠಾಣೆಯ ಮುಂದೆ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಗೂಳಿಹಟ್ಟಿ ಶೇಖರ್, ಒಂದು ಹಂತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಅವರ ಬೆಂಬಲಿಗರು ಈ ಪ್ರಯತ್ನವನ್ನು ತಡೆದರಾದರೂ ಪೆಟ್ರೋಲ್, ಗೂಳಿಹಟ್ಟಿ ಶೇಖರ್ ಅವರ ಕಿವಿ, ಮೂಗು, ಬಾಯೊಳಗೆ ಹೋದ ಪರಿಣಾಮ ಅಸ್ವಸ್ಥರಾದರು. ಅವರನ್ನು ಕೂಡಲೇ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಆಂಗ್ಲಮಾಧ್ಯಮ ಶಾಲೆಗಳ ಪ್ರಾರಂಭ: ದೇವೇಗೌಡರ ಬೆಂಬಲ..!

ಬೆಂಗಳೂರು : ರಾಜ್ಯದಲ್ಲಿ 1 ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುವ ಕುರಿತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಿಲುವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬೆಂಬಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತೃಭಾಷಾ ಶಿಕ್ಷಣ ಮಾಧ್ಯಮದ ವಿಚಾರದಲ್ಲಿ ನಾಡಿನ ಸಾಹಿತಿಗಳಲ್ಲೇ ಎರಡು ಗುಂಪಿದೆ. ಒಬ್ಬರಿಗೆ ಇಂಗ್ಲಿಷ್ ಬೇಕು, ಕೆಲವರಿಗೆ ಬೇಡ, ಆದರೆ, ನಾನು ಸಾಹಿತಿಯಲ್ಲ ಎಂದರು. ರಾಜಕಾರಣಿಯಾಗಿ ಇಂಗ್ಲಿಷ್ ಕಲಿಕೆ ವಿಚಾರದಲ್ಲಿ ನನ್ನ ಹೇಳಿಕೆ ಸ್ಪಷ್ಟವಾಗಿದೆ ಎಂದರು. ಬಹುಭಾಷೆಗಳ ಭಾರತದಲ್ಲಿ ಇಂಗ್ಲಿಷ್ ಒಂದು ಸಂವಹನ ಭಾಷೆ ಆಗಿದೆ ಎಂದರು.