ಪ್ರಮುಖ ಸುದ್ದಿ

ರಸ್ತೆ ಕಳಪೆ ಕಾಮಗಾರಿ: ಟಿ.ಜಿ. ನೇರೆಂದ್ರ ಆರೋಪ

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರ ಆರೋಪಿಸಿದರು. ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಡಿ ಕೆಲಸ ಪ್ರಾರಂಭವಾದಾಗಿನಿಂದ ಗುಣಮಟ್ಟವನ್ನೇ ಕಾಯ್ದುಕೊಂಡಿಲ್ಲ. ಜತೆಗೆ ನಗರದ ರಸ್ತೆಗಳೆಲ್ಲವೂ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚಿಲ್ಲ. ರಸ್ತೆ ಕಾಮಗಾರಿ ಕೂಡ ಕಳಪೆ ಆಗಿದೆ ಎಂದು ದೂರಿದರು. ಕೋಟ್ಯಾಂತರ ರೂ. ಹಣ ವ್ಯರ್ಥವಾಗುತ್ತಿದೆ. ಈ ಕುರಿತು ಜಿಲ್ಲಾ ಸಚಿವರು, ಜಿಲ್ಲಾಡಳಿತ ಮೌನ ವಹಿಸಿರುವುದು ಸಂಶಯಕ್ಕಿಡು ಮಾಡಿದೆ ಎಚಿದ ಅವರು,  ಜಿಲ್ಲೆಯಲ್ಲಿ ಪಕ್ಷವನ್ನ ಮತ್ತಷ್ಟು ಬಲಿಷ್ಠಗೊಳಿಸಲು ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕಾರ್ಯನಿರ್ವಹಿಸಲಿವೆ ಎಂದರು.

ಬರದ ನಾಡಿನಲ್ಲೊಬ್ಬ ಅರಣ್ಯ ಮಾಲಿಕ – ಬಿ.ಎಸ್. ರಘುನಾಥ್

ಭಾರತೀಯ ಕೃಷಿ ಎಂದಾಕ್ಷಣ ಎಲ್ಲರ ಮನದಲ್ಲಿಯೂ ಮೊಟ್ಟ ಮೊದಲಿಗೆ ಮೂಡಿಬರುವ ಚಿಂತನೆ “ಅದೊಂದು ಸಮಸ್ಯೆಗಳ ಸಾಗರ” ಎನ್ನುವಂತದ್ದು ಇದು ಸುಳ್ಳೇನೂ ಅಲ್ಲ. ಪ್ರಕೃತಿ, ಸಮಾಜ, ಮಾರುಕಟ್ಟೆ ಹಾಗೂ ಇನ್ನೂ ಮುಂತಾದ ವ್ಯವಸ್ಥೆಗಳೊಂದಿಗೆ ಸದಾ ಹೋರಾಡುವ ಕೃಷಿಕ ನಿರೀಕ್ಷಿತ ಹಾಗೂ ಅನಿರೀಕ್ಷಿತ ಸಮಸ್ಯೆಗಳನ್ನು ತನ್ನ ವೃತ್ತಿಯುದ್ದಕ್ಕೂ ಎದುರಿಸಬೇಕಾಗಿ ಬಂದಿರುವುದು ಅನಿವಾರ್ಯ. ಕೃಷಿಯಲ್ಲಿ ಸಮಸ್ಯೆಗಳು ಹೇಗೆ ಹೇರಳವಾಗಿವೆಯೋ, ಅದಕ್ಕೆ ಪರಿಹಾರ ಕೂಡಾ ಅಪರಿಮಿತವಾಗಿವೆ. ಸಮಸ್ಯೆಗಳನ್ನು ಸ್ವೀಕರಿಸಿ, ಆಲೋಚಿಸಿ, ಯೋಜಿಸಿ ಮುನ್ನಡೆದಾಗ ಕೃಷಿಕನ ದಾರಿಗೆ ಅಡ್ಡವಾಗಿ ಬರುವ ಸಮಸ್ಯೆಗಳೆಲ್ಲವೂ ತಾನಾಗಿಯೇ ಬದಿಗೆ ಸರಿಯುತ್ತವೆ.  ಬಂದ ಸಮಸ್ಯೆಗಳೆಲ್ಲವನ್ನೂ ಹಿಮ್ಮೆಟ್ಟಿ ಯಶಸ್ವಿ ಕೃಷಿಕನೆಂದೆನಿಸಿಕೊಂಡ ಕೀರ್ತಿ ಸಲ್ಲಬೇಕಾದುದು ನಮ್ಮ ನಿಮ್ಮ ನಡುವಿನ ಹರಿಯಬ್ಬೆಯ ಬಿ.ಎಸ್. ರಘುನಾಥ್ ಅವರಿಗೆ.

ಹೃದಯಕ್ಕೆ ಮದ್ದು

ಹೃದಯದ ಖಾಯಿಲೆಯನ್ನು ದೂರಮಾಡಲು ನಿಯಮಿತವಾಗಿ ಬಾದಾಮಿಯನ್ನು ಸೇವಿಸುವುದರಿಂದ ಹೃದಯದ ಖಾಯಿಲೆಯನ್ನು ದೂರಮಾಡಬಹುದು ಜೊತೆಗೆ ಇದು ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಮಾಡಲು ಸಹಕಾರಿಯಾಗುತ್ತದೆ.

ಗ್ರಾಮ ಪಂಚಾಯಿತಿ ಚುನಾವಣೆ; ಫಲಿತಾಂಶ ಪ್ರಕಟ

ಚಿತ್ರದುರ್ಗ:ಜಿಲ್ಲೆಯಲ್ಲಿನ ೧೮೬ ಗ್ರಾಮ ಪಂಚಾಯಿತಿಗಳ ೩೩೬೭ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿರುತ್ತದೆ. ಇದರಲ್ಲಿ ೨೭೦ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೩೦೯೫ ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಕ್ಷೇತ್ರ ಎರಡರಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಮತ್ತು ಮೊಳಕಾಲ್ಮುರು ತಾಲ್ಲೂಕಿನ ಅಶೋಕ ಸಿದ್ದಾಪುರ ಪಂಚಾಯಿತಿ ಸಿದ್ದಾಪುರ ಕ್ಷೇತ್ರದಲ್ಲಿ ಎಸ್.ಟಿ.ಮಹಿಳೆಗೆ ಮೀಸಲಿರುವ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಸದಿರುವುದರಿಂದ ಆಯ್ಕೆಯಾಗಿರುವುದಿಲ್ಲ. ಎರಡು ಸ್ಥಾನಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿನ ೩೩೬೫ ಸದಸ್ಯರ ಆಯ್ಕೆಯಾಗಿರುತ್ತದೆ. ಆಯ್ಕೆಯಾದವರಲ್ಲಿ ಪ.ಜಾತಿ ಸಾಮಾನ್ಯ ೩೭೦, ಮಹಿಳೆ ೪೭೬, ಎಸ್.ಟಿ. ಸಾಮಾನ್ಯ ೨೮೧, ಮಹಿಳೆ

ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಕಾರ್ಯಗಾರ

ಚಿತ್ರದುರ್ಗ:ನೂತನವಾಗಿ ಆಯ್ಕೆಯಾಗಿರುವ ಹೊಸದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೂನ್ ೯ ರಂದು ಬೆಳಗ್ಗೆ ೧೦.೩೦ ರಿಂದ ಹೊಸದುರ್ಗದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ತರಬೇತಿ ಸಂಸ್ಥೆ ಹಾಗೂ ಅಧ್ಯಯನ ಪೀಠ, ಮೈಸೂರು, ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ನೂತನ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಹೆಚ್.ಕೆ.ಪಾಟೀಲ್ ಉದ್ಘಾಟಿಸುವರು. ಶಾಸಕರಾದ ಬಿ.ಜಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಆಂಜನೇಯ, ಸಂಸದರಾದ ಬಿ.ಎನ್.ಚಂದ್ರಪ್ಪ ಉಪಸ್ಥಿತರಿರುವರು. ಜಿಲ್ಲಾ ಪಂಚಾಯತ್

ವಿವಿಧೆಡೆ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂನ್.ಕುರುಗೋಡು ೧೧೦/೩೩/೧೧ ಕೆ.ವಿ. ಉಪಕೇಂದ್ರದಿಂದ ಎಮ್ಮಿಗನೂರು ೩೩ ಕೆ.ವಿ. ಉಪಕೇಂದ್ರಕ್ಕೆ ಬರುವ ೩೩ ಕೆ.ವಿ. ಮಾರ್ಗದ ಹಳೆ ವಿದ್ಯುತ್ ತಂತಿಗಳನ್ನು ಬದಲಾಯಿಸುವ ಕಾಮಗಾರಿಯನ್ನು ಜೂನ್.೮ ರಿಂದ ಜೂನ್.೨೨ ರವರಿಗೆ ಹಮ್ಮಿಕೊಂಡ ಪ್ರಯುಕ್ತ ಆಯಾ ದಿನಗಳಂದು ಬೆ.೯ ರಿಂದ ಸಂಜೆ ೪ ಗಂಟೆಯವರಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಗು.ವಿ.ಸ.ಕಂ.ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರರಾದ ವಿ.ವೈ.ದೇವಿರೆಡ್ಡಿ ಅವರು ತಿಳಿಸಿದ್ದಾರೆ. ಎಮ್ಮಿಗನೂರು ೩೩ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಮ್ಮಿಗನೂರು, ಹೊಸನೆಲ್ಲುಡಿ, ಹಳೆನೆಲ್ಲಡಿ, ಬಾಳಪುರ, ಶಾಂತಿನಗರ, ಮೆಹಬೂಬನಗರ, ಶಂಕರಸಿಂಗ್‌ಕ್ಯಾಂಪ್, ಕೋಟ್ಟಲ್, ಸೋಮಲಪುರಕ್ರಾಸ್, ತಿಮ್ಮನಕೇರೆ, ರಾಮಚಂದ್ರಕ್ಯಾಂಪ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತ ಗೊಳಿಸಲಾಗಿದೆ. ಸದರಿ ಗ್ರಾಹಕರು, ರೈತರು ಬೆಸ್ಕಾಂಗೆ ಸಹಕರಿಸಬೇಕೆಂದು

ಪರಿಸರ ಸ್ವಚ್ಛತೆ ಉತ್ತಮ ಆರೋಗ್ಯ : ಸಿ.ವಿ.ಮರಗೂರ

ಬಳ್ಳಾರಿ:ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೇ ಉತ್ತಮ ಆರೋಗ್ಯ ಹೊಂದಬಹುದು ಎಂದು  ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಸಿ.ವಿ.ಮರಗೂರ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಧೀಶರ ವಸತಿಗೃಹದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ೧೯೭೨ರ ಜೂನ್ ೫ನೇ ದಿನದಂದು ಯುನೈಟೆಡ್ ನೇಷನ್‌ರ ಪ್ರಕಾರ ಪ್ರಾರಂಭವಾಗಿ ೧೩೨ ದೇಶದ ಗಣ್ಯರುಗಳು ಸೇರಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ ಚೆನ್ನಾಗಿಟ್ಟುಕೊಂಡರೆ ಆರೋಗ್ಯವು ಚೆನ್ನಾಗಿರುವುದು. ನಮ್ಮ ಪೂರ್ವಜರು ಸೂರ್ಯ, ಚಂದ್ರ, ಗಿಡ, ಮರಗಳನ್ನು ಪೂಜಿಸುತ್ತಾ ಬಂದಿರುತ್ತಾರೆ. ಹಿಂದಿನ ದಿನಗಳಲ್ಲಿ ರಾಜರು ಗಿಡದ ಟೊಂಗೆಗಳನ್ನು ಕಡಿದರೂ ಸಹ ದಂಡ ಮತ್ತು

ಅನುಭಾವ ಇರುವಲ್ಲಿ ಆನಂದ: ಶರಣರು

ಅನುಭಾವ ಇರುವಲ್ಲಿ ಆನಂದ: ಶರಣರು ಚಿತ್ರದುರ್ಗ: ಅನುಭಾವ ಸಂತಸವನ್ನು ನೀಡುತ್ತದೆ. ಸಂತಸ ಮತ್ತು ಖುಷಿಯ ಆಚೆಗೆ ಏನಾದರು ಇದ್ದರೆ ಅದು ಅನುಭಾವ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು. ಶ್ರೀಮುರುಘಾಮಠ ಮತ್ತು ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜು, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಶರಣಸಂಗಮದ ಅಧ್ಯಕ್ಷತೆಯನ್ನುವಹಿಸಿ, ಜೀವಸಂಕುಲ ಮತ್ತು ಪರಿಸರ ವಿಷಯ ಕುರಿತು ಶ್ರೀಗಳು ಚಿಂತನ ನೀಡುತ್ತ, ಅನುಭಾವ ಇರುವಲ್ಲಿ ಆನಂದವಿರುತ್ತದೆ ಎಚಿದರು. ಹಣ ಎನ್ನುವ ಸಿರಿವಂತಿಕೆ ಜೊತೆ ಓಡುತ್ತಿದೆ. ಆದರೆ ಜ್ಞಾನ ಎಂಬ ಸಂಪತ್ತಿನ ಜೊತೆ ಕೆಲವರು ಮಾತ್ರ ಹೋಗುತ್ತಿದ್ದಾರೆ. ಆದ್ದರಿಂದ ೧೨ನೇ ಶತಮಾನದಲ್ಲಿ ಅನುಭವ ಮಂಟಪ ಇತ್ತು. ಅದು ಜ್ಞಾನ ಸಂಗಮ. ಅನುಭವ ಮಂಟಪ ಇಂದೂ ಜೀವಂತವಾಗಿದೆ

ನಾಗರೀಕ ಸೇವಾ ಪರೀಕ್ಷಾ ತರಬೇತಿಗೆ ಆನ್‌ಲೈನ್

ಬಳ್ಳಾರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಾಗರೀಕ ಸೇವಾ ಪರೀಕ್ಷೆಗಳಾದ ಐ.ಎ.ಎಸ್, ಕೆ.ಎ.ಎಸ್. ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಸಕ್ತ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ) ವರ್ಗಕ್ಕೆ ಸೇರಿದ್ದು ಯಾವುದೇ ಪದವಿ ಹೊಂದಿರಬೇಕು. ಆಸಕ್ತರು  www.backwardclasses.kar.nic.in   ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ. ೯೪೮೦೮೧೮೦೧೩, ೯೪೮೦೮೧೮೦೧೦ ಅಥವಾ ೦೮೦-೪೪೫೫೪೪೪೪ ಕ್ಕೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

೩ನೇ ಸುತ್ತಿನ ಇಂದ್ರ ಧನುಷ್ ಅಭಿಯಾನ

  ಬಳ್ಳಾರಿ: ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ೪ ಸುತ್ತುಗಳಂತೆ ಪ್ರತಿ ತಿಂಗಳು ೭ ದಿನಗಳ ಕಾಲ ಇಂದ್ರ ಧನುಷ್ ಅಭಿಯಾನ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮವನ್ನು  ಜೂನ್.೫ ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಇಂದ್ರಧನುಷ್ ಕಾರ್ಯಕ್ರಮದಲ್ಲಿ  ಹುಟ್ಟಿನಿಂದ ೨ ವರ್ಷದ ಮಗುವಿಗೆ ೭ ಮಾರಕ ರೋಗಗಳ ವಿರುದ್ದ ಮತ್ತು ಗರ್ಭಿಣಿ ಸ್ತ್ರೀಯರಿಗೆ ಈ ಮೊದಲು ಯಾವುದೇ ಲಸಿಕೆ ಹಾಕಿಸದಿದ್ದಲ್ಲಿ ಅಂತಹವರನ್ನು ಪತ್ತೆ ಹಚ್ಚಿ ಲಸಿಕೆಯಿಂದ ವಂಚಿತರಾಗದಂತೆ ಸಂಪೂರ್ಣ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಇಂತಹ ಒಟ್ಟು ೧೨೯೦ ಪ್ರದೇಶ ಗುರುತಿಸಿ ಅದರಲ್ಲಿ ೫೦೪೪ ಮಕ್ಕಳು ಮತ್ತು ೫೫೨ ಗರ್ಭಣಿಯರಿಗೆ ಲಸಿಕೆ