0°C Can't get any data. Weather

,

ಸಾಹಿತ್ಯ

ಆದೆಪ್ಪ ಹಂದಿಹಾಳ್ ಅವರ ’ಅಕ್ಷರದವ್ವ’ ಕವನಸಂಕಲನ ಬಿಡುಗಡೆ

ಬಳ್ಳಾರಿ: ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಶಿರಗಾನಹಳ್ಳಿ ಶಾಂತಾನಾಯ್ಕ ಅವರು ’ಅಕ್ಷರದವ್ವ’ ಕವನಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆದೆಪ್ಪ ಅವರ ಕವಿತೆಗಳು ತುಂಬಾ ಗಂಭೀರವಾದ ವಸ್ತುವನ್ನು ಕಟ್ಟಿಕೊಟ್ಟಿವೆ. ಆಕರ್ಷಕವಾದ ರೂಪಕಗಳಿಂದ ರಚನೆಗೊಂಡಿದ್ದು ಓದುಗರನ್ನು ಚಿಂತನೆಗೆ  ಹಚ್ಚುತ್ತವೆ. ಅಜ್ಞಾನದ ಕತ್ತಲೆಯಲ್ಲಿರುವವರಿಗೆ ಜ್ಞಾನದ ದೀಪ ಅಕ್ಷರ. ಇಂಥ ಅಕ್ಷರ ದೀಪವನ್ನು ತಾಯಿಯಂತೆ ಭಾವಿಸಿದ ಕವಿ ಆದೆಪ್ಪ ಅವರು ಅಕ್ಷರದವ್ವನ ಆಶ್ರಯದಲ್ಲಿ ಬೆಳೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ ಎಂದರು. ಮಹಾನ್ ಮಾನವತಾವಾದಿಗಳಾದ ಬುದ್ಧ-ಬಸವ-ಅಂಬೇಡ್ಕರ್ ಅವರೂ ಸಹ ಇಂಥ ಅಕ್ಷರದವ್ವನನ್ನೇ ಧ್ಯಾನಿಸಿ ಮುನ್ನಡೆದ ಕಾರಣ ಈ ಜಗತ್ತಿಗೆ ಬೆಳಕು ಬೀರುವಂತಾಗಿದ್ದು. ಹೀಗಾಗಿ ಕವಿ ಈ ಬೆಳಕಿನ ಪರಂಪರೆಯನ್ನು ಸಮರ್ಥವಾಗಿ ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನವೂ

ಕಥೆ: “ಸೋರಿ ಹೋದ ಬದುಕು” ರಾ.ವೆಂಕಟೇಶ ಶೆಟ್ಟಿ

ಸಿರಿಗೆರೆಯ ಸದ್ಧರ್ಮ ನ್ಯಾಯಪೀಠ. ಮೂರನೆಯ ಮಹಡಿಯಿಂದ ನೆಲಮಹಡಿಗೆ ಸುಶೀಲಮ್ಮ ಇಳಿಯಬೇಕಾಗಿತ್ತು. ದುರದೃಷ್ಟವಶಾತ್ ಬೆಳಗ್ಗೆ ಹತ್ತಿ ಬಂದ ಲಿಫ್ಟ್ ಕರೆಂಟ್ ಇಲ್ಲದ್ದರಿಂದಲೋ ಏನೋ ಕೆಲಸ ಮಾಡುತ್ತಿರಲಿಲ್ಲ. ಸೋತು ಹೋದ ಕೈಕಾಲುಗಳು. ಸೊರಗಿ ಸುಣ್ಣವಾದ ಜೀವ. ಹುಡುಗನೊಬ್ಬನ ಆಸರೆಯೊಂದಿಗೆ ಇಳಿಯುತ್ತಿದ್ದಳು. ಬಲಪಾದವನ್ನು ಕೆಳಮೆಟ್ಟಲಿಗಿಳಿಸಿ ಅದೇ ಮೆಟ್ಟಿಲಿಗೇ ಎಡಪಾದವನ್ನು ಇಡುತ್ತಾ ನಿಧಾನ ನಿಧಾನವಾಗಿ ಪಾದಗಳನ್ನು ಕಿತ್ತಿಡುತ್ತಾ ಒಂದೊಂದೇ ಮೆಟ್ಟಿಲನ್ನು ಹರಸಾಹಸಪಡುತ್ತಾ ಇಳಿಯುತ್ತಿದ್ದಳು. ಆಕೆಯ ಮುಂದೆ  ಬಸಪ್ಪನ ಬಲತೋಳನ್ನು ಹಿಡಿದು ಜಗ್ಗಿ ಎಳೆಯುತ್ತಾ ಬೇಗ ಬೇಗ ಇಳಿಯಲು ಅವಸರಿಸುತ್ತಿರುವ ಮೀನಾಕ್ಷಮ್ಮ. ಸುಶೀಲಮ್ಮ ಹಾಗೂ ಹೀಗೂ ಒಂದು ಮಹಡಿ ಇಳಿಯುವುದರೊಳಗೆ ಮೀನಾಕ್ಷಮ್ಮ ಮೂರು ಮಹಡಿಗಳನ್ನು ಒಂದೇ ಉಸಿರಿಗೆ ಇಳಿದಿದ್ದಳು. ಜೊತೆಗೆ ಬಸಪ್ಪನನ್ನೂ ಒತ್ತಾಯದಿಂದ ಎಳೆದು ಇಳಿಸಿದ್ದಳು.

ಕಾವ್ಯ: ಅಪ್ಪ- ಜಡೇಕುಂಟೆ ಮಂಜುನಾಥ್

ಈವಾರ  ಪತ್ರಕರ್ತರು ಹಾಗೂ ಕವಿಗಳು ಆದ ಜಡೇಕುಂಟೆ ಮಂಜುನಾಥ್ ಅವರ ಕವನ ಅಪ್ಪ… ಯಪ್ಪೋ.. ಇದೊಂದಾಟ ಗೋಲಿ ಆಡಿ ಮನೆಗೆ ಬತ್ತಿನೋಗಪ್ಪೋ! ನಮ್ಮಿಸ್ಕೂಲು ಬೆಲ್ಲು ಹೊಡೆಯಲು ಇನ್ನೂ ಸ್ಯಾನೆ ಟೈಮೈತೆ, ಅವ್ವಯ್ಯ ಕೂಲಿ ಹೋಗೋ ಟೈಮಿಗೆ ನಾ ಇಸ್ಕೂಲಿಗೆ ಹೋಗ್ತೀನಿ ಅಂದರೂ..ನೀ ನಮಿಸಿ ಮೈತೊಳೆದು ಇಸ್ಕೂಲ ಹಾದಿ ತುಳಿಸಿದೆ ನೋಡು. ಬಲಗೈಯ್ಯ ತುದಿ ಬೆರಳಲಲ್ಲೇ ನನ್ನ ಎಡಗೈಯ್ಯ ಹಿಡಕೊಂಡು ಇಸ್ಕೂಲ- ಕಾಪೌಂಡಿನೊಳಕ್ಕೆ ಬಿಟ್ಟು ಬಂದವನೇ ನೀನು.. ಅವ್ವಯ್ಯನ ಕೂಲಿ ದುಡ್ಡು ತಂದ ಮ್ಯಾಲೆ, ಗಣೇಶ ಬೀಡಿಗೆ ಆಸೆಯ ಪಟ್ಟು, ನನ್ನೆಡೆಗೆ ಆಸೆ ಕಣ್ಣು ಬಿಟ್ಟವನೇ,, ನಾ ಸತ್ತ ಮ್ಯಾಲೆ ಇಲ್ಲಿಗೇ ನನ್ನನ್ನು ಮಣ್ಣು ಮಾಡಬೇಕೆಂದು, ಸಾಯೋ ಮುನ್ನ ಮಗುವಿನಂತೆ

ಕಾವ್ಯ:- ಆತ್ಮಗೌರವದ ಆದಿತ್ಯ

ಆತ್ಮಗೌರವದ  ಆದಿತ್ಯ            ಅಂಬರಕ್ಕೆ ಹಾರಿ, ನೆಲದ ಉರಿಗೆ ಬೆಚ್ಚಿಬಿದ್ದು ಉರಿಯ ಹುಟ್ಟಾಡಗಿಸಲು ಹೋರಾಡಿದ ಧೀರನೇ|| ಭಾರತದೊಳಗಿನ ಭಗ್ನಕ್ಕೆ ಮಾನವೀಯತೆಯ ಕವಚ ತೊಡಿಸಿ ಬಾಂಧವ್ಯದ ಬೆಸುಗೆಯಲ್ಲಿ ಭವ್ಯ ಭಾರತದ ಕನಸ್ಸು ಕಂಡು ನನಸ್ಸಾಗಲು ಹಗಲಿರುಳು ಹೋರಾಡಿದ ವೀರನೇ|| ಅಕ್ಷರವೇ ಅಭಿವೃದ್ಧಿಗೆ ಪಥ ಅಕ್ಷರವೇ ಆನಂದಕ್ಕೆ ಸತ್ಪಥ ಅಕ್ಷರವೇ ಅನಾಥತೆಗೆ ಪ್ರತಿಘಾತ ಅಕ್ಷರವೇ ಅಹಿತಕ್ಕೆ ಆಘಾತವೆಂದು ಅಕ್ಷರಕ್ಕೆ ಆದ್ಯತೆ ನೀಡಿದ ಕಲ್ಪವೃಕ್ಷವೇ|| ಸಂಘಟನೆಯೇ ಸಂತಸಕ್ಕೆ ಸರಿದಾರಿ ಸಂಘಟನೆಯೇ ಸಂತೃಪ್ತಿಗೆ ಹೆದ್ದಾರಿ ಸಂಘಟನೆಯೇ ಸಂಪನ್ನತೆಗೆ ಮಹಾ ದಾರಿ ಸಂಘಟನೆಯೇ ಸಂಪರ್ಕಕ್ಕೆ ಸಹಕಾರಿಯೆಂದು ಸಾವರಿಸಿದ ಸನ್ಮಾರ್ಗದ ಸರದಾರನೇ || ಹೋರಾಟವೇ ಕ್ರೂರಿಗೆ ಚೂರಿ ಹೋರಾಟವೇ ಅಸಮತೆಗೆ ಹೆಮ್ಮಾರಿ ಹೋರಾಟವೇ ಮನುಷ್ಯತ್ವಕ್ಕೆ ನಿಜದಾರಿ ಹೋರಾಟವೇ ಹಸಿವಿನ

ಮನೆಯಂಗಳಕೆ ರಂಗನೆರೆಯೋಣ

    -ಹರಿನೇತ್ರಾ, ಹರಿಹರ.        ಅಂದು……… ಹಸಿರು ಮರಗಳ ಸಾಲಿನಲ್ಲಿ ತೋಪು ಚೆಲ್ಲಿದ ನೆರಳಿನಲ್ಲಿ ದಾರಿಯುದ್ದಕ್ಕೂ ನೀರಿನರವಟ್ಟಿಗೆಗಳು ಪೊದೆ ಹುಲ್ಲಿನ ಮಧ್ಯದ ಸೀಳುದಾರಿ ಊರಿಂದೂರಿಗೆ ಕಾಲ್ನಡಿಗೆ ಧಗೆಯಿಲ್ಲ….ಆಯಾಸವಿಲ್ಲ ! ಯಾಂತ್ರಿಕತೆಗೆ-ವಿಮುಖರೆಲ್ಲರೂ ಆಗ ಎಲ್ಲರದ್ದೂ ಒಂದೇ ರಾಗ- ಮನುಕುಲದ ಏಳ್ಗೆಗೆ ನಿಸರ್ಗವೇ ಸಿಂಧು…..! ಇಂದಾದರೋ…… ಚಿಗುರು ಎಲೆ ಕಳಚಿದ ಬೋಳು ಮರಗಳ ಗೋಳು…. ಮಳೆಯಿಲ್ಲದೇ ಬಿರಿದ ಭೂಮಿ ಉರಿದೆದ್ದ ಧಗೆ, ಹಸಿರು ಕಾಣದೇ ಬಿಸಿಯನುಸುರುವ ಪಕೃತಿ, ಹುಡಿ ಹಾಯ್ದ ದಾರಿ ಮರಳುಗಾಡಿನ ಒಂಟೆಯ ನಡಿಗೆ! ಕಾರಣಕರ್ತರು ನಾವು- ಮರವ ಕಡಿದು ಮನೆಯ ಕಟ್ಟಿದೆವು, ಹಸಿರ ಕಿತ್ತು ಬರಡ ಬಿತ್ತಿದೆವು ನೆಲವ ಬಗಿದು ನೀರ ಸೇದಿದೆವು; ಆ……….. ಫಲವನಿಂದು ಉಣ್ಣುತಿಹೆವು

ಕತೆ:- ಒಡಲ ಕಿಚ್ಚು

ನೀವೂ ಬರೆಯ ಬಹುದು ಕತೆ, ಕವನ, ಮನದಾಳದ ವಿಚಾರಗಳು ಹಾಗೂ ಜೊತೆಗೆ ನಿಮ್ಮ ಕವನ ಸಂಕಲ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳ ಬಹುದು. ಬಿಸಿ ಸುದ್ದಿ ನಿಮಗಾಗಿ ವೇದಿಕೆಯನ್ನು ಒದಗಿಸಿದೆ. ಈ ವಾರ ದಯಾ ಪುತ್ತೂರ್ಕರ್, ಅವರು  ಒಡಲ ಕಿಚ್ಚು ಕತೆ ನಿಮಗಾಗಿ -ಸಂ ಒಡಲ ಕಿಚ್ಚು ಮನೆಯ ಕಸ ಮುಸುರೆಯ ಕೆಲಸ ಮುಗಿಸಿದ ಸಾವಿತ್ರಮ್ಮ, ಯಜಮಾನಿ ರೂಮಿನಿಂದ ಹೊರಗೆ ಬರುವುದನ್ನೇ ಕಾಯುತ್ತ ನಿಂತಿದ್ದಳು.  ಹೊರಗೆ ಬಂದ ಲಕ್ಷ್ಮಿ ಸಾವಿತ್ರಮ್ಮನನ್ನು ನೋಡಿ ಏನ್ ಸಾವಿತ್ರಮ್ಮ, ಕೆಲಸ ಎಲ್ಲಾ ಮುಗಿದರೂ ಇನ್ನು ನಿಂತೆ ಇದ್ದೀಯಲ್ಲ. ಏನ್ ಬೇಕು. ಏನಾದ್ರು ಬೇಕಾದ್ರೆ ತಾನೇ ನೀನು ಕೆಲಸ ಮುಗಿದರೂ ನನ್ನನ್ನು ಕಾಯುತ್ತಾ ನಿಲ್ಲುವುದು.

ಅಲ್ಬರ್ಟ್ ಕಮೊ: ಅಂತರಂಗ, ಬಹಿರಂಗ ದರ್ಶನ

ಪಾಶ್ಚಾತ್ಯ ಲೇಖಕರನ್ನು ಕನ್ನಡಕ್ಕೆ ಪರಿಚಯಿಸುವುದರಿಂದ ಓದುಗರಿಗೆ ದೊಡ್ಡ ಲಾಭವಿದೆ. ಅಲ್ಲಿನ ಕಾಲ, ದೇಶ ಕುರಿತ ಕವಿ ತಳೆದ ನಿಲುವಿನ ಅರಿವಾಗುತ್ತದೆ. ಮತ್ತು ಅದು ಓದುಗನ ಕಾಲ ದೇಶದೊಂದಿಗೆ ಚಿಂತನೆಗೆಡೆ ಮಾಡುತ್ತದೆ. ಈ ಪರಂಪರೆ ನವೋದಯದ ಉದಯದೊಂದಿಗೆ ಆರಂಭವಾಯಿತು ಎನ್ನಬಹುದು. ಅಸಂಗತವಾದವನ್ನು ಬಲವಾಗಿ ಪ್ರತಿಪಾದಿಸಿದ ಅಲ್ಬರ್ಟ್ ಕಮೊ, ಹಲವು ಪ್ರಾಕಾರಗಳಲ್ಲಿ ಪ್ರಸಿದ್ಧಿ ಹೊಂದಿದ ಮಹಾನ್ ಸಾಹಿತಿ. ಕಮೂವಿನ ಕುರಿತು ಕನ್ನಡದಲ್ಲಿ ಕೆಲವು ಪುಸ್ತಕಗಳು ಬಂದಿದ್ದು, ಆತನ ಕೃತಿ ಹಾಗೂ ಬದುಕಿನ ಕುರಿತು ಬೆಳಕು ಚೆಲ್ಲಿವೆ. ಅದರಂತೆ ‘ಅಲ್ಬರ್ಟ್ ಕಮೊ ನೂರರ ನೆನಪು’ ಕೃತಿ ಕೂಡ ಕಮೂವಿನ ಅಂತರಂಗ, ಬಹಿರಂಗ ದರ್ಶನಕ್ಕೆ ಸಹಕಾರಿಯಾಗಿದೆ. ಇದು ಕಮೊವಿನ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ