ಸಾಹಿತ್ಯ

ನಾಟಕಗಳಿಗೆ ಪೋಷಣೆ ಮಾಡುವ ಮನಸ್ಸುಗಳು ಇಲ್ಲವಾಗಿರುವುದು ದೊಡ್ಡ ದುರಂತ ಡಾ.ಸಿ.ಶಿವಲಿಂಗಪ್ಪ

ನಾಟಕಗಳಿಗೆ ಪೋಷಣೆ ಮಾಡುವ ಮನಸ್ಸುಗಳು ಇಲ್ಲವಾಗಿರುವುದು ದೊಡ್ಡ ದುರಂತ ಡಾ.ಸಿ.ಶಿವಲಿಂಗಪ್ಪ ಚಿತ್ರದುರ್ಗ: ನಾಟಕಗಳನ್ನು ನೋಡುವ ಅಭಿರುಚಿ ಪೋಷಣೆ ಮಾಡುವ ಮನಸ್ಸುಗಳು ಇಲ್ಲವಾಗಿರುವುದು ದೊಡ್ಡ ದುರಂತ ಎಂದು ವಿಶ್ರಾಂತ ಪ್ರಾಂಶುಪಾಲರು ಹಾಗೂ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಬೇಸರ ವ್ಯಕ್ತಪಡಿಸಿದರು. ಚಿತ್ರದುರ್ಗ ವಿಜ್ಞಾನ ಕೇಂದ್ರ, ಆಂಜನೇಯ ವಿದ್ಯಾಸಂಸ್ಥೆ ಗುಯಿಲಾಳು, ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಬಹುಮುಖಿ ಕಲಾಕೇಂದ್ರ, ರಚನಾ ಹವ್ಯಾಸಿ ಕಲಾ ಸಂಘ, ಲಯನ್ಸ್ ಕ್ಲಬ್ ಚಿತ್ರದುರ್ಗ ಫೋರ್ಟ್, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಪುಸ್ತಕ ಬಿಡುಗಡೆ, ರಂಗ ಸನ್ಮಾನ, ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಪತ್ತು ಕೇಂದ್ರೀಕೃತವಾಗಿರುವ ಸಮಾಜದಲ್ಲಿ ಮೌಲ್ಯ ಅಪಮೌಲ್ಯವಾಗುತ್ತಿದೆ. ಕ್ರೌರ್ಯ

ಹೆಚ್ ಎಸ್ ದ್ಯಾಮೇಶ್ ಅವರ ‘ಇಳೆಯ ಮಾತು’ ನಾಟಕ ಕೃತಿಗೆ ಪುಸ್ತಕ ಪ್ರಶಸ್ತಿ

ಸಾಣೇಹಳ್ಳಿ: ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಹೆಚ್ ಎಸ್ ದ್ಯಾಮೇಶ್ ಅವರು ರಚಿಸಿರುವ ‘ಇಳೆಯ ಮಾತು’ ನಾಟಕ ಕೃತಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ‘ಚಿಣ್ಣರ ಚಂದಿರ’ ಪುಸ್ತಕ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ. ಡಿಸೆಂಬರ್ ೨೧ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಪ್ರಶಸ್ತಿ ಬಂದಿರುವ ಬಗ್ಗೆ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.  

ಬದುಕಿನ ಒತ್ತಡದಿಂದ ಹೊರಬರಲು ಬರಹ ಅತೀ ಮುಖ್ಯ: ಡಾ.ಮಾಳಿಗೆ ಕರಿಯಪ್ಪ

ಚಿತ್ರದುರ್ಗ: ಜಂಜಾಟ, ಒತ್ತಡದ ಜೀವನದಿಂದ ಮನುಷ್ಯ ಹೊರಬರಬೇಕಾದರೆ ಮಾತು ಬರಹ ಅತಿ ಮುಖ್ಯವಾದುದು ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. ಸಂಭ್ರಮ ಪ್ರಕಾಶನ ಹಾಗೂ ವಾಸ್ತವ ವೇದಿಕೆ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಎಂ.ಮಂಜುನಾಥ್ ಕಳ್ಳಿಹಟ್ಟಿರವರ ಜೀವನ ಕಾಂತಿ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳ್ಳಿ ಹಾಡು ಇಡೀ ಬದುಕಿನ ಆಶಯವನ್ನು ಹೇಳುತ್ತದೆ. ಯಾವುದೇ ಕೃತಿ ಅರ್ಥವಾಗಬಾರದು. ಆಲೋಚನೆ, ಚಿಂತನೆಗೆ ಹಚ್ಚಿದಾಗ ಮಾತ್ರ ಅಂತಹ ಕೃತಿ ಜೀವಂತವಾಗಿರಲು ಸಾಧ್ಯ. ಜೀವಂತವಾಗಿದ್ದರೆ ಯಾರು ಯಾರಿಗೂ ಅರ್ಥವಾಗುವುದಿಲ್ಲ. ಪ್ರಾಣ ಬಿಟ್ಟ ಮೇಲೆ ಮನುಷ್ಯನ ನಿಜವಾದ ಬೆಲೆ ಗೊತ್ತಾಗುತ್ತದೆ. ಅದೇ ರೀತಿ ಕೃತಿ ಕೂಡ

ಸ್ವಚ್ಚ ಭಾರತ ಸಮೃದ್ದ ಕರ್ನಾಟಕ ಕೃತಿ ಬಿಡುಗಡೆ: ಜನರಲ್ಲಿಯೂ ಶುಚಿತ್ವದ ಪ್ರಜ್ಞೆ ಇರಬೇಕು- ತಿಪ್ಪಾರೆಡ್ಡಿ.!

ಚಿತ್ರದುರ್ಗ: ನಗರವನ್ನು ಸ್ವಚ್ಚವಾಗಿಡುವುದು ಕೇವಲ ನಗರಸಭೆ, ಗ್ರಾಮ ಪಂಚಾಯಿತಿಯ ಕೆಲಸವಲ್ಲ. ಸಾಮಾನ್ಯ ಜನರಲ್ಲಿಯೂ ಶುಚಿತ್ವದ ಪ್ರಜ್ಞೆ ಇರಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು. ಕೋಟೆ ಮುಂಭಾಗವಿರುವ ಮದಕರಿನಾಯಕ ವಿದ್ಯಾಸಂಸ್ಥೆಯ ವಾಲ್ಮೀಕಿ ಸಭಾಂಗಣದಲ್ಲಿ ಕೆ.ಮಂಜುನಾಥನಾಯ್ಕರವರ ಸ್ವಚ್ಚ ಭಾರತ ಸಮೃದ್ದ ಕರ್ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ಒಂದು ಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಹಣಕಾಸು ಹೊಂದಾಣಿಕೆ ಸೇರಿದಂತೆ ಅನೇಕ ಕಡೆ ಸುತ್ತಾಡಿ ಮಾಹಿತಿಗಳನ್ನು ಸಂಗ್ರಹಿಸಬೇಕು. ಹಾಗಾಗಿ ಲೇಖಕರಿಗೂ ಅನೇಕ ಸಮಸ್ಯೆಗಳಿವೆ. ಜನಸಂಖ್ಯೆಯಲ್ಲಿ ಎರಡನೆ ಸ್ಥಾನದಲ್ಲಿರುವ ಭಾರತದಲ್ಲಿ ಸ್ವಚ್ಚತೆಗೆ ದೇಶದ ಪ್ರಧಾನಿ ನರೇಂದ್ರಮೋದಿ ಹಳ್ಳಿಯಿಂದ ಡಿಲ್ಲಿಯವರೆಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಚ್ಚತೆಗೆ ಅತ್ಯಂತ ಮಹತ್ವ ನೀಡುತ್ತಿದ್ದಾರೆ ಸಾರ್ವಜನಿಕರು ಸ್ವಚ್ಚತೆಗೆ ಕೈಜೋಡಿಸಬೇಕು

83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚಂಪಾ ಆಯ್ಕೆ.!

ಮಂಗಳೂರು: ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಂದ್ರಶೇಖರ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಚಂದ್ರಶೇಖರ ಪಾಟೀಲ್ ಕುರಿತು ಒಂದಿಷ್ಟು ಮಾಹಿತಿ* ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ್ `ಚಂಪಾ’ ಎಂದೇ ಪ್ರಸಿದ್ಧರು. 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ ಚಂಪಾ ಹತ್ತಿಮತ್ತೂರು – ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, 1956 ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿ.ಎ. ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1962 ರಲ್ಲಿ ಎಂ.ಎ.ಮಾಡಿದರು. 1963 ರಲ್ಲಿ

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಬಗ್ಗೆ…………

      -ಲೇಖನ ಗಿರಿಜಾಶಂಕರ್ ಜಿ ಎಸ್ ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಿಲ್ಲ ಎಲೈ ಮೂರ್ಖ ಶಿಷ್ಯ ಸಮುದಾಯವೇ! ನಿಮಗೇನು ಹುಚ್ಚು ಹಿಡಿದಿದೆ? ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಳುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ನೀಚ ಗುರುವರ್ಗ! ಅಧಮ ಗುರುವರ್ಗ! ಜಗದ್ರೋಹಿ! ನಿನಗೆ ಧಿಕ್ಕಾg! ಪತಿತ ಗುರುವರ್ಗ! ನಿನಗೆ ಧಿಕ್ಕಾರ! ಧಿಕ್ಕಾರ! ನಿಮಗೇನು ಮಾಡಿದರೂ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗುವುದಿಲ್ಲಾ. ಅಘೋರ ನಾಯಕ ನರಕದಲ್ಲಿ ಬೀಳುವಿರಿ. ಅಧಮರೇ ಶೀಘ್ರವಾಗಿ ತೊಲಗಿರಿ ಹೀಗೆ ಇಷ್ಟು ತೀಕ್ಷ್ಣವಾಗಿ ಯಾವ ಹಂಗೂ ಇಲ್ಲದೆ ಮಠ ಹಾಗೂ ಮಠಾಧೀಶರ ಅನೈತಿಕ ಜೀವನವನ್ನು ಕುರಿತು ಬರೆದವರು ಯಾರೋ ಮಠದ

 ಚಾಂದ್‌ಸುಲ್ತಾನ ಅವರಿಗೆ ಪಿ.ಹೆಚ್.ಡಿ.ಪದವಿ

ಚಿತ್ರದುರ್ಗ: ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ ಕವಿಗಳ ಕೊಡುಗೆ ಎಂಬ ವಿಷಯ ಕುರಿತು ಇಲ್ಲಿನ ಸರ್ಕಾರಿ ಕೋಟೆ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಚಾಂದ್‌ಸುಲ್ತಾನ ಹೆಚ್.ಎಂ. ಇವರು ಮಂಡಿಸಿರುವ ವಿಷಯಕ್ಕೆ ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಭಾ ಧಾರವಾಡ ಯೂನಿರ್ವಸಿಟಿ ಪಿ.ಹೆಚ್.ಡಿ.ಪದವಿ ನೀಡಿ ಗೌರವಿಸಿದೆ. ಗುಲ್‌ನಿಗಾರ್ ಖಾಜಿರವರ ಮಾರ್ಗದರ್ಶನದಲ್ಲಿ ವಿಷಯ ಮಂಡಿಸಿರುವ ಚಾಂದ್‌ಸುಲ್ತಾನ ಹೆಚ್.ಎಂ.ರವರಿಗೆ ಮದ್ರಾಸ್‌ನಲ್ಲಿ ಪಿ.ಹೆಚ್.ಡಿ. ಪ್ರದಾನ ಮಾಡಲಾಯಿತು. ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ ಕವಿಗಳ ಕೊಡುಗೆ: ಚಾಂದ್‌ಸುಲ್ತಾನ ಪಿ.ಹೆಚ್.ಡಿ.ಪದವಿ ಚಿತ್ರದುರ್ಗ: ಹಿಂದಿ ಭಕ್ತಿ ಸಾಹಿತ್ಯಕ್ಕೆ ಮುಸಲ್ಮಾನ ಕವಿಗಳ ಕೊಡುಗೆ ಎಂಬ ವಿಷಯ ಕುರಿತು ಇಲ್ಲಿನ ಸರ್ಕಾರಿ ಕೋಟೆ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಚಾಂದ್‌ಸುಲ್ತಾನ ಹೆಚ್.ಎಂ. ಇವರು ಮಂಡಿಸಿರುವ

ಕವನ__– ನನ್ನ ಇನಿಯನ ಪ್ರೀತಿ

ಗುಣದಲ್ಲಿ ನನ್ನ ಇನಿಯ ಶುದ್ಧ ಒರಟ ಪ್ರೀತಿಯಲಿ ಇದರಿಂದ ತುಂಬಾ ಸೆಣಸಾಟ ಮೌನಿ ನಾನು, ಮಾತು ಅವನು ಆದರೂ ಅರಿತಿರುವನು ನನ್ನ ಮನಸ್ಸನು ಅವನಿಗೆ ತಿಳಿಯದು ಪ್ರೀತಿ ವ್ಯಕ್ತಪಡಿಸುವ ರೀತಿ ಆದರೆ ತಿಳಿದಿರುವನು ಪ್ರೀತಿಯ ನೀತಿ ಸದಾ ನುಡಿಯುವನು ನಿನ್ನ ಬಿಟ್ಟಿರಲು ಅಸಾಧ್ಯ ನನ್ನ ಮೌನದಲ್ಲೆ ಅರ್ಥೈಸಿಕೊಳ್ಳುವನು ಪ್ರೀತಿಯಲ್ಲಿ ಎಲ್ಲವೂ ಸಾಧ್ಯ ನಾ ಎಣಿಸಿರುವೆ ನನ್ನ ಮನದಲ್ಲಿ ಏಳು ಜನ್ಮದಲ್ಲಿಯೂ ಈ ಪ್ರೀತಿ ನನ್ನದಾಗಲಿ ಅವನು ಹೇಳುವನು ಏಳು ಜನ್ಮದ ಪ್ರೀತಿ ಈ ಜನ್ಮದಲ್ಲೇ ನೀಡುವುದು ನನ್ನ ರೀತಿ ಮುಕ್ತ ಹೃದಯದ ಅವನ ನಗು ಇಷ್ಟವಾಗುವುದು ನನ್ನ ಮನಸ್ಸಿಗು ಏನನ್ನು ಬಚ್ಚಿಡದ ಅವನ ನಡತೆ ನನ್ನ ಪ್ರೀತಿಗೆ ಮಾಡಿಲ್ಲ

ಅಲ್ಲಮನ ವಚನಗಳ ಚರ್ಚೆಮೂಲಕ ಹೊಸ ಹಾದಿ: ಓ ಎಲ್ ನಾಗಭೂಷಣಸ್ವಾಮಿ

ಸಾಣೇಹಳ್ಳಿ: ಪೂರ್ವಭ್ರಮೆಗಳನ್ನು ಬಿಟ್ಟು ಪ್ರತಿ ವಚನಗಳನ್ನು ಮತ್ತೆ ಮತ್ತೆ ಓದುವುದೇ ‘ವಚನಗಳ ಮರು ಓದು ಎಂದು ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣಸ್ವಾಮಿ ಹೇಳಿದರು. ಇಲ್ಲಿನ ಲತಾಮಂಟಪದಲ್ಲಿ ನಡೆದ ‘ಅಲ್ಲಮನ ವಚನಗಳ ಅನುಸಂಧಾನ’ ಕುರಿತ ಆಪ್ತ ಸಮಾಲೋಚನೆಯಲ್ಲಿ ಮಾತನಾಡಿದ ಅವರು, ಈ ಓದಿನಿಂದಾಗುವ ಆನಂದ ಶಿಶುಕಂಡ ಕನಸಿನಂತೆ ವರ್ಣಿಸಲು ಸಾಧ್ಯವಿಲ್ಲ. ವ್ಯಾಖ್ಯಾನ ರಹಿತವಾಗಿ ಓದುವ, ಬದುಕುವ ಪ್ರಯತ್ನ ಮಾಡಬೇಕು. ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೇ ಧ್ಯಾನ. ಯಾವುದೇ ನಿರ್ಣಯಕ್ಕೆ ಬರಲಾಗುವುದಿಲ್ಲ ಎನ್ನುವುದೂ ಕೂಡ ಒಂದು ನಿರ್ಣಯವೇ. ಒಗಟಿನಂತಿರುವ ಅನುಭಾವಿಗಳ ಮಾತಿನ ಹಿಂದಿನ ಭಾವವನ್ನು ಗ್ರಹಿಸಬೇಕಾದರೆ ನಾವೂ ಅವರ ಮನಸ್ಥಿತಿಗೆ ತಲುಪಬೇಕೇಂದರು. ನಮ್ಮ ಯೋಗ್ಯತೆ, ಸಾಮರ್ಥ್ಯ, ಪ್ರಯತ್ನದಿಂದ ಸಿಗುವುದು

ಓ ಹೆಣ್ಣೆ ನೀ ಏಕೆ ಹೀಗೆ?

ಓ ಹೆಣ್ಣೆ ನೀ ಏಕೆ ಹೀಗೆ? ಕಷ್ಟ ಎಂದರೆ ಕರಗುವೆ ಕರುಣಾಮಯಿ ಎಂದೆನಿಸಿಕೊಂಡಿರುವೆ ಅಯ್ಯೋ ಎಂದರೆ ಮರುಗುವೆ ದಯಾಮಯಿ ಎಂದೆನಿಸಿಕೊಂಡಿರುವೆ ಆದರೆ ಭಾವನೆಗಳ ಸುಳಿಯಲಿ ಸಿಲುಕಿ ನೀ ತೊಳಲಾಡುತ್ತಿರುವೆ ಓ ಹೆಣ್ಣೆ ನೀ ಏಕೆ ಹೀಗೆ? ಮಕ್ಕಳ ಸಾಮಾಜೀಕರಣ ಮಾಡುವೆ ತಾಯಿಯೇ ಮೊದಲಗುರು ಎಂದೆನಿಸಿಕೊಂಡಿರುವೆ ಕುಟುಂಬ ನಿರ್ವಹಣೆಯ ಯಶಸ್ಸು ಗಳಿಸಿ ಗೃಹಲಕ್ಷ್ಮೀ ಎಂದೇ ಕರೆಸಿಕೊಂಡಿರುವೆ ಆದರೆ ತನ್ನ ಅಂತಸ್ತನ್ನು ಸುಧಾರಿಸಿಕೊಳ್ಳುವಲ್ಲಿ ನೀ ಸೋತಿರುವೆ ಓ ಹೆಣ್ಣೆ ನೀ ಏಕೆ ಹೀಗೆ? ಜೈವಿಕ ಭಿನ್ನತೆಗೆ ಸಿಲುಕಿ ಪುರುಷರ ಅಧಿನದಲ್ಲಿ ಬದುಕುತ್ತಿರುವೆ ಸಾಮಾಜಿಕ ಭಿನ್ನತೆಯ ಸಮಸ್ಯೆಗಳ ಕೊಪದಲ್ಲಿ ಬೆಯುತ್ತಲಿರುವೆ ಬೇರೆಯವರ ಬದುಕನ್ನು ಕಟ್ಟುವ ನೀನು ನಿನ್ನ ಬದುಕು ಕಟ್ಟಿಕೊಳ್ಳಲಾಗದ ಸ್ಥಿತಿಯಲ್ಲಿರುವೆ ಓ