ಸಾಹಿತ್ಯ

#ಗಜಲ್: ಕೊರತೆ ಒರತೆಯ ಪಾಠವಾಗುವುದರ ಹೊರತು…….

ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು ಬಿರಿವ ಹೂವಿಗೆ ದೇವಳ ಸ್ಮಶಾನ ಬೇರೆಯಲ್ಲ ಅರಳುವುದರ ಹೊರತು   ಹಿಟ್ಟಿಗೆ ಹೊಟ್ಟೆ ಸೇರಿ ಉಪವಾಸ ನೀಗಿಸುವುದಷ್ಟೇ ಗೊತ್ತು ಬಡಿವ ರೊಟ್ಟಿಗೆ ಚಿನ್ನ ತಾಮ್ರದ ತಟ್ಟೆಯ ಹಂಗಿಲ್ಲ ಹಸಿವು ನೀಗಿಸುವುದರ ಹೊರತು   ಬಿರುಕು ಚಪ್ಪರದ ಕಿಂಡಿಯಿಂದ ನಗು ನರಳಿಕೆಗೂ ದಾರಿಯಿದೆ ಗಟ್ಟಿ ಗೋಡೆಗೆ ಕಿವಿಗಳಿಲ್ಲ ಹುಟ್ಟಿಗೂ ಸಾವಿಗೂ ಮೌನವಾಗುವುದರ ಹೊರತು   ಒಡಲ ಬೆಂಕಿಗೆ ಸುರಿದುಕೊಂಡ ಅನ್ನಕ್ಕೆ ಎಲ್ಲರ ಪಾಲಿದೆ ಹಸಿವಿಗೆ ಮನುಜಗೂ ಮಾರ್ಜಾಲಕ್ಕೂ ಉಸಿರಾಗುವುದರ ಹೊರತು   ಹಸಿ ಬಡತನ ಹೆಮ್ಮರವಾಗಿ ಬೇರು ಬಿಟ್ಟಿರಲಿ ಬಿಡು ಸಾವನ್ ಕಲಿಸಲಿ ಬಿಡು ಅದಕ್ಕೆ ಕೊರತೆ ಒರತೆಯ ಪಾಠವಾಗುವುದರ

ಗಜಲ್… ತತ್ವ ಬಿತ್ತರಿಸಿದವರು…

ಗಜಲ್ ಬೆಂದು ಬಳಲಿ ಉದುರಿದ ಎಲೆಗಳನ್ನು ಪ್ರೀತಿಸುವೆ ನಾನು ಹಸಿದ ಒಡಲೊಳಗೆ ನೋವು ನುಂಗಿದವರನ್ನು ಪ್ರೀತಿಸುವೆ ನಾನು ಮೌನದಿ ನಿಂತ ಭವ್ಯ ಕೋಟೆಗಳು ದಿನವಿಡಿ ನೆನೆದಿವೆ ಬೆನ್ನಿಗೆ ಬೆಳಕಾದವರನ್ನು ಕಲ್ಲು ಮಣ್ಣು ಹೊತ್ತು ಬೆವರು ಸುರಿಸಿದವರನ್ನು ಪ್ರೀತಿಸುವೆ ನಾನು ಹಸಿ ಗಾಯದಿ ಜಗದ ವ್ಯಾಪಾರ ಮಾಡಿ ಮೌನದಿ ಕತ್ತಲ ಗೂಡಿಗೆ ಅಡಗಿದವರೆಷ್ಟೋ ಮುಟ್ಟ ಬೇಕಾದ ಗುರಿ ಮುಟ್ಟಿ ಗುರುತಿಲ್ಲದವರನ್ನು ಪ್ರೀತಿಸುವೆ ನಾನು ಅರಿವೆ ಜೋಳಿಗೆಯಲಿ ಹಿಡಿಯಷ್ಟು ಒಲುಮೆ ತುಂಬಿಕೊಂಡು ತಿರುಗುವ ಫಕೀರ ಬಡವ ಬಲ್ಲಿದವರೆನ್ನದೆ ಬಾಂಧವ್ಯದಿ ತತ್ವ ಬಿತ್ತರಿಸಿದವರನ್ನು ಪ್ರೀತಿಸುವೆ ನಾನು “ಶಂಕರ” ಗಟ್ಟಿ ಧೈರ್ಯದಿ ಕಾಲೂರಬೇಕಾಗಿದೆ ಈ ಲೋಕದಲಿ ತಮಣಿಯಿಂದ ಸಹಾಯ ಸಲಹೆ ಪಾಠ ಹೇಳಿದವರನ್ನು ಪ್ರೀತಿಸುವೆ

ಕೊರೊನಾ ವೈರಸ್ ಬಗ್ಗೆ ಮುರುಘಾ ಶರಣರ ಕವನ

  ಹೆದರದಿರು ಆಧುನಿಕ ಮಾನವ ಕಂಗೆಡದಿರು ಎಲವೊ ಜೀವ || ಪ || ಕೊರೋನಾ ವೈರಸ್‌ನಿಂದ ನೀ ಬಲು ಕಂಗಾಲಾಗಿರುವೆಯಾ ! ಉದ್ಯೋಗ ವ್ಯಾಪಾರ ಕುಂಠಿತವಾಯಿತೆಂದು ಚಿಂತಿಸಿರುವೆಯಾ ! ಮನೆಯೊಳಗೆ ಮುದ್ದೆಯಂತೆ ಕುಳಿತು ಕಾಲ ನೂಕುತಿರುವೆಯಾ ! ಜೀವಭಯದಿಂದ ಕುಬ್ಜನಾಗಿ ಕೈಹೊತ್ತು ನೀನು ಕುಳಿತಿರುವೆಯಾ ! || ೧ || ಶಾಲಾ ಕಾಲೇಜು ವಿದ್ಯಾಲಯ ಅವು ನಡೆಸುವ ಪರೀಕ್ಷಾ ಪದ್ಧತಿ ಜಾತ್ರೆ ಉತ್ಸವ ಮದುವೆ ರಥೋತ್ಸವ ಮುಂತಾದವುಗಳ ರದ್ಧತಿ ಕಾಣದ ಕೊರೋನಾ ವೈರಸ್‌ನಿಂದ ಜಗತ್ತಿನಾದ್ಯಂತ ತುರ್ತುಪರಿಸ್ಥಿತಿ ಹಿಂದೆಂದಿಗೂ ಕಂಡರಿಯದ ಕೇಳರಿಯದ ದಯನೀಯ ಸ್ಥಿತಿ || ೨ || ಮರೆಯದಿರು ದಿನದೊಳು ಮೂರ್‍ನಾಲ್ಕು ಬಾರಿ ಕೈತೊಳೆಯುವುದು ಆಲಿಂಗನ ಹಸ್ತಲಾಘವಕೆ ಬದಲು

ಗಜಲ್

  ಕಣ್ಣೀರು ಉಳಿಸಿ ಹೋದ ವಜಾ ಕೇಳಿದಾಗ ಅವಳು ನೆನಪಾಗುತ್ತಾಳೆ ಉಸಿರು ನಿಲ್ಲುವ ಗಳಿಗೆ ಹೆಸರು ಕರೆದಾಗ ಅವಳು ನೆನಪಾಗುತ್ತಾಳೆ ಬೆಚ್ಚನೆ ಕನಸುಗಳು ಛಿದ್ರವಾಗಿ ಮೂರಾಬಟ್ಟೆ ಆಗಿವೆ ಕುಸಿದ ತಾಜ್ಮಹಲ್ಲಿನ ಚದ್ದರ್ ಗೋರಿಗೆ ಇಳಿದಾಗ ಅವಳು ನೆನಪಾಗುತ್ತಾಳೆ ಬಿಟ್ಟು ಹೊರಟ ದಿಕ್ಕಿನ ನಿನ್ನ ಹೆಜ್ಜೆಗಳು ಮೂಡುತ್ತಲೇ ಇಲ್ಲ ಬಿಸ್ತರ್ ತೋಯಿಸಿದ ಪ್ರೀತಿ ಇದ್ದರೂ ಸತ್ತಾಗ ಅವಳು ನೆನಪಾಗುತ್ತಾಳೆ ನಿನ್ನ ಲಂಗದ ಚುಂಗಿಗೆ ಕಟ್ಟಿದ ಪ್ರೇಮಪತ್ರಕ್ಕೆ ದಸ್ತಕ್ ಹಾಕಿಲ್ಲ ನೆರಳು ಹುಡುಕುವ ಪರಿಗೆ ಬಿಸಿಲು ಬಂದಾಗ ಅವಳು ನೆನಪಾಗುತ್ತಾಳೆ ಒಡೆದ ಗುಂಡಿಗೆಯ ಹೊತ್ತು ಅದೆಷ್ಟು ಒಲವ ತುಂಬುವೆ ಸಾವನ್ ಎದೆಗೆ ಇಳಿಯದೆ ಹೋದವಳ ದಾರಿ ನೋಡಿ ಗಜಲ್ ಬರೆದಾಗ ಅವಳು

ಕೇಳಿರಣ್ಣಾ ಕೇಳಿರೋ……

    ಕೇಳಿರಣ್ಣಾ ಕೇಳಿರೋ ನನ್ನದೊಂದು ಮಾತನ್ನು ಬಾಗಿ ಬಾಗಿ ಬಸವಳಿದ ಜೀವ ನೊಂದ ಮಾತನ್ನು ನಗುವನ್ನು ಅದುಮಿಟ್ಟ ಜೀವ ಬೆಂದ ನೋವನ್ನು ಕೇಳಿರಣ್ಣಾ ಕೇಳಿರೋ ನನ್ನದೊಂದು ಮಾತನ್ನು ||   ಶಾಂತಿ ಮಂತ್ರ ಜಪಿಸುವ ನಿಮ್ಮ ಮನವು ಕೆಂಡ ನೀತಿ ಬಾಳು ಭೋದಿಸುವ ನಿಮ್ಮ ದರ್ಪ ಭೇರುಂಡ ಶಾಂತಿಯಿಲ್ಲ ಬಾಳಿನಲ್ಲಿ ಭುಗಿಲೇಳಿಸುವಿರಿ ನೆಮ್ಮದಿ ನೀತಿಯಿಲ್ಲ ಬದುಕಿನಲ್ಲಿ ಅಹಂಕಾರದ ಸಮಾಧಿ ಬೊಗಳೆ ಮಾತುಗಳು ಕೇಳಲು ಕಿವಿ ಹರಿಯುವ ಹಾಗೆ ಸತ್ವವಿರದ ಸಾಲುಗಳು ಕೊಳೆತ ಮನಸುಗಳ ಹಗೆ ಕೇಳಿರಣ್ಣಾ ಕೇಳಿರೋ ನನ್ನದೊಂದು ಮಾತನ್ನು ||   ವನ ಕಡಿದು ಹೊಲ ಮಾಡಿ ಹಸಿರನ್ನು ಕೊಲ್ಲಲು ಬನ ಸುಂದರತೆ ಅರಿಯದೆ ಹಣದಾಸೆಗೆ

ಗಜಲ್

  ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ ಕಣ್ಣ ನೋಟಕ್ಕೆ ಕೊನೆ ಇಲ್ಲ ಜಾಣ. ಬೆನ್ನುಹುರಿಯ ಹಳೆ ಸರಪಳಿಗೆ ಬಂಧನದ ಹೊಸ ವಜಾ ಸಿಕ್ಕುತ್ತಿಲ್ಲ ಹೊಸೆವ ಮಜಬೂತ್ ಹೆಜ್ಜೆಗಳೇ ಮೂಡದ ಜಾಗಕ್ಕೆ ಕೊನೆ ಇಲ್ಲ ಜಾಣ. ಇರುವಷ್ಟು ದಿನ ಕಾಲನ ರಸ್ತಾ ನೋಡುವ ಬದಲಿಗೆ ಇನ್ನೇನಿದೆ ಇಲ್ಲಿ ದುತ್ತನೆ ಎದುರಾಗಿ ಬೆತ್ತಲಾಗುವ ಗುಟುಕು ಜೀವಕ್ಕೆ ಕೊನೆ ಇಲ್ಲ ಜಾಣ. ಇಲ್ಲಿ ನಂದಿದ ದೀಪಕ್ಕೆ ಅಲ್ಲೆಲ್ಲೋ ಬತ್ತಿ ಮಸೆದು ಥೇಲ್ ಹಾಕುತ್ತಿದ್ದಾರೆ ಬಿಡುಗಡೆ ಪಡೆದ ಪ್ರಾಣಪಕ್ಷಿ ಗೂಡು ಮರೆತಂತೆ ಆತ್ಮಕ್ಕೆ ಕೊನೆ ಇಲ್ಲ ಜಾಣ. ಪ್ರೀತಿಯೊಂದ ಮರೆತು ಬೇರೆ ಎಲ್ಲವೂ

ತಪ್ಪಿದ ಹೆಜ್ಜೆ ತಾಳದ ಗೆಜ್ಜೆ

ತಪ್ಪಿದ ಹೆಜ್ಜೆ ತಾಳದ ಗೆಜ್ಜೆ   ಸಹಿಸಲಾರದ ಘೋರ ಕಾಮುಕರದ್ದು ಮುಗಿಬಿದ್ದ ರಕ್ಕಸರ ಕುಲ ರಣಹದ್ದು ಜನ್ಮ ಕೊಟ್ಟ ತಾಯಿ ನೆನಪಾಗುವುದಿಲ್ಲವೇ? ಜೊತೆಗೆ ಹುಟ್ಟಿದ ಸಹೋದರಿ ‌ನೆನಪಾಗುವುದಿಲ್ಲವೇ ? ವಿಶ್ವಾಸ ತೋರುವ ಗೆಳತಿಯರು ನೆನಪಾಗುವುದಿಲ್ಲವೇ? ವಿದ್ಯೆ ನೀಡಿದ ಮಾತೆಯರು ನೆನಪಾಗುವುದಿಲ್ಲವೇ? ಪರನಾರಿಯ ಬಾಳಿಗೆ ಪಾಷಾಣವಾಗುವಾಗ ? ಪ್ರೀತಿಸಿ ಮುದ್ದಿಸುವ ಬದಲು ಹದ್ದಾಗುವುದೇಕೆ? ರೊಚ್ಚಿಗೆಬ್ಬಿಸಿದವರೂ ಇದ್ದರೂ ಕಿಚ್ಚು ಹೊತ್ತಿಸುವವರು ಇದ್ದರೂ ಸಂಯಮ ನೀತಿ ‌ಮರೆತರೇ ಸಭ್ಯವೇ ?   ಹಗಲು ಇರುಳಾಗಿ ಕತ್ತಲೆ ಎದೆ ತುಂಬಿ ನಡುಗಿತೋ ! ಹರಿವ ಜಲಪಾತ ಪ್ರವಾಹವಾಗಿ ಎದೆಗೆ ನುಗ್ಗಿತೋ ! ರಾಕ್ಷಸರ ಕೇಕೆ ಕೆಂಪು ಕಣ್ಣುಗಳು ‌ರಕ್ತಕಾರಿದವೋ! ಅಟ್ಟಹಾಸದ ಕೇಕೆಯ ನಡುವೆ ಅಳುವಿನಾಕ್ರಂಧನ

ಗಜಲ್

ಗಜಲ್ ಅವಳ ನೆರಳು ತೊರೆದು ಹೋದ ಗಳಿಗೆಯಿಂದ ಮಾತು ಮೌನಕ್ಕೆ ಶರಣು ಮಧುರ ಪ್ರೀತಿ ಕಳೆದು ಹೋದ ಸಮಯದಿಂದ ಸಾವು ಜೀವಕ್ಕೆ ಶರಣು ಬರಿಯ ದೇಹಕ್ಕೆ ಬದುಕಲು ನೂರೆಂಟು ಮಜಬೂರಿ ಸಬೂತುಗಳಿವೆ ಸತ್ತ ಮೇಲೂ ಬದುಕಿ ಕಾಡುವ ನಿನ್ನ ಹಸಿ ಪ್ರೇಮವು ವಿರಹಕ್ಕೆ ಶರಣು ಅವರು ಮೊಹಬ್ಬತ್ತಿನ ಗೋಡೆಗೆ ಬರೀ ಹೆಸರು ಗೀಚಿದ್ದಾರೆ ಬಣ್ಣಕ್ಕೆ ಗುಣವಿಲ್ಲ ಯಾರಿಗೂ ದಕ್ಕದ ಅನುಭವಕ್ಕೆ ಅವರು ಕುರುಡು ಬೆರಳ ಸ್ಪರ್ಶಕ್ಕೆ ಶರಣು ಇರುವ ಮಣ್ಣಲ್ಲೆ ಹೂಳಲು ಖಬರ್ ಸ್ತಾನಗಳ ಕೊರತೆ ಪ್ರೀತಿಯೂ ಸತ್ತಾಗ ಭೂಮಿಗೆ ಬೇಲಿ ಹಾಕಿ ಬೆತ್ತಲಾದ ಜನರ ನಗ್ನ ಜ್ಞಾನ ಮೌಢ್ಯಕ್ಕೆ ಶರಣು ಯುದ್ಧಕ್ಕೆ ನಿಂತ ಅವರಿಗೆ ತಲೆಗಳ, ಕೊಲೆಗಳ

ಕವನ: ಜಗದಗಲ ಭೀಮ ದೀವಿಗೆ

ಜನಿಸಿದ ಪುಣ್ಯಾತ್ಮ ಗುಡಿಸಲೊಳು ಬೆಳಕಿಲ್ಲದ ಸೂರು ಬರೀ ಕಗ್ಗತ್ತಲು ಎಳೆ ವಯಸ್ಸಿನಲ್ಲೇ ದಂಗಾದ ಜಾಗೃತಗೊಂಡ ಮುಟ್ಟದ ಸೊಪ್ಪಾದ ಅನಿಷ್ಟ ಸಮಾಜದಲ್ಲಿ ತನ್ನೊಬ್ಬನ ಏಳಿಗೆಗಾಗಿ ಶ್ರಮಿಸದೆ ಶೋಷಿತರ ಬದುಕಿನ ಬಗ್ಗ ಕರುಣೆ ತೋರಿದ ಬೇಕಿತ್ತು ಶಿಕ್ಷಣ ಕತ್ತಲೆಯಲ್ಲಿ ಬೆಳಕು ಚೆಲ್ಲಲು ತೊಡರಿತ್ತು ನೂರು ಮಡಿವಂತರ ಮೀರಿ ಬಾಳಲು ಪುಸ್ತಕಗಳ ಓದು ಬರಹ ನೀಡುತಲಿತ್ತು ಶಕ್ತಿ ಒಂಟಿಸಲಗದಂತೆ ಹೋರಾಡಿತ್ತು ಕೇವಲ ಯುಕ್ತಿ ದೇಶ ವಿದೇಶಗಳಲ್ಲಿ ಓದಿದ ಜ್ಞಾನಾಮೃತ ಕುಡಿದ ತನ್ನ ಜೀವದ ಹಂಗು ತೊರೆದು ಹೊಸ ಆಯಾಮ ನೀಡಿದ ಅಸ್ಪೃಶ್ಯತೆ ವಿರುದ್ಧ ಯೋಜನೆಗಳ ರೂಪಿಸಿದ ಶೋಷಿತರ ಅಂತರಾಳದ ಒತ್ತಡ ಕಡಿಮೆ ಮಾಡಿದ ಓದಿ ಓದಿ ಬರೆದ ದೇಶಕ್ಕೊಂದು ಮಹಾಗ್ರಂಥ ಸಮಾನತೆ ನೀಡಲೋಸುಗ

ಕವಿತೆ -1 ಹುಟ್ಟು- ಸಾವಿನ ಮಧ್ಯೆ

ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ ಸ್ಮಶಾನ ನೆನಪಾಗುತ್ತದೆ. ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ ನನ್ನ ಕತ್ತಿ, ಗುರಾಣಿ ತುಕ್ಕು ಹಿಡಿದಿವೆ. ಗಾಂಧಿ ನೋಟಿನ ಹಿಂದೆ ಬಿದ್ದ ನನಗೆ ಅದಕ್ಕಂಟಿದ ಬೆವರು, ರಕ್ತ, ವೀರ್ಯ ಮಿಶ್ರಣದ ಹೊಚ್ಚ ಹೊಸ ವಾಸನೆ. ತೊಳೆದರೂ ಅಳಿಯದ ಕಲೆಗಳ ಕಂಡು ಈ ಬಣ್ಣದ ಹಾಳೆಗೆ ಬೆನ್ನು ಮಾಡುತ್ತೇನೆ. ನಿದ್ರೆಗೆಟ್ಟು ರಾತ್ರಿ ಪೂರಾ ಬರೀ ಬೆತ್ತಲೆ ಕಣ್ಣುಗಳೇ ಈಗೀಗ ರೆಪ್ಪೆಗಳೂ ಪಟಪಟಿಸುತ್ತಿಲ್ಲ ಕತ್ತಲೆಗೆ ದೃಷ್ಟಿಯಿಲ್ಲವಲ್ಲ.!