ವಿದೇಶ

ಅಮೆರಿಕ ಹೊಸ ಅಧ್ಯಕ್ಷ ಬೈಡನ್ ಟ್ರಂಪ್ ವಿರುದ್ಧ ವಾಗ್ದಾಳಿ ಮಾಡಿದ್ದು ಇದಕ್ಕೆ.!

ಅಮೆರಿಕ: ಟ್ರಂಪ್ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದು, ನಂಬಲು ಸಾಧ್ಯವಾದ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ನಡೆಯಿಂದ ಅವರನ್ನು ಅತ್ಯಂತ ಬೇಜವಾಬ್ದಾರಿಯುತ ನಾಯಕ ಎಂದು ಅಮೆರಿಕಾದ ಇತಿಹಾಸವು ನೆನಪಿಸಿಕೊಳ್ಳುವುದು ಖಾತ್ರಿಯಾಗಿದೆ. ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಜಗತ್ತಿನ ಇತರ ದೇಶಗಳಿಗೆ ಹಾನಿಕಾರಕ ಸಂದೇಶ ನೀಡಲಾಗುತ್ತಿದೆ ಎಂದು ಬೈಡನ್ ಹೇಳಿದ್ದಾರೆ ಎನ್ನಲಾಗಿದೆ.

ಆನ್‌ಲೈನ್ ನ್ಯೂಸ್, ಧ್ವನಿಮುದ್ರಿಕೆಗಳು ಮತ್ತು ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ವಾರ್ತಾ ಇಲಾಖೆ ವ್ಯಾಪ್ತಿಗೆ

ನವದೆಹಲಿ-ಆನ್‍ಲೈನ್‍ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು , ಧ್ವನಿಮುದ್ರಿಕೆಗಳು, ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ವಾರ್ತಾ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ. ದೇಶ-ವಿದೇಶಗಳ ಚಲನಚಿತ್ರಗಳು ಪ್ರಸಾರವಾಗುವ ಅಂತಾರಾಷ್ಟ್ರೀಯ ಖ್ಯಾತಿಯ ನೆಟ್‍ಫಿಕ್ಸ್ ಮತ್ತಿತರ ಜಾಲ ತಾಣಗಳು ಇನ್ನು ಮುಂದೆ ವಾರ್ತಾ ಇಲಾಖಾ ವ್ಯಾಪ್ತಿಗೆ ಒಳಪಡಿಸುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸರ್ಕಾರದ ಈ ತೀರ್ಮಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆನ್‍ಲೈನ್‍ನಲ್ಲಿ ಅಡೆ ತಡೆ ಇಲ್ಲದೆ ಪ್ರಸಾರವಾಗುವ ಮಾಹಿತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.

ರಶ್ಯ ಸೇನಾ ಹೆಲಿಕಾಪ್ಟರ್ ಪತನ: 2 ಸಾವು

ಬಾಕು (ಅಝರ್‌ಬೈಜಾನ್), ನ. 10: ಅರ್ಮೇನಿಯ ಜೊತೆಗಿನ ಗಡಿಯಲ್ಲಿ ರಶ್ಯದ ಸೇನಾ ಹೆಲಿಕಾಪ್ಟರೊಂದನ್ನು ಹೊಡೆದುರುಳಿಸಿರುವುದನ್ನು ಅಝರ್‌ಬೈಜಾನ್ ಸೋಮವಾರ ಒಪ್ಪಿಕೊಂಡಿದೆ ಹಾಗೂ ಅದಕ್ಕಾಗಿ ಕ್ಷಮೆ ಯಾಚಿಸಿದೆ. ಆರ್ಮೇನಿಯದಲ್ಲಿ ಅಝರ್‌ಬೈಜಾನ್ ಜೊತೆಗಿನ ಗಡಿಯ ಸಮೀಪ ಸೋಮವಾರ ಹೆಲಿಕಾಪ್ಟರನ್ನು ಹೊಡೆದುರುಳಿಸಿದಾಗ ಅದರಲ್ಲಿದ್ದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ. ”ಈ ದುರಂತ ಘಟನೆಗೆ ಸಂಬಂಧಿಸಿ ಅಝರ್‌ಬೈಜಾನ್ ರಶ್ಯದ ಕ್ಷಮೆ ಯಾಚಿಸಿದೆ” ಎಂದು ಅಝರ್‌ಬೈಜಾನ್ ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಘಟನೆಯು ಅಪಘಾತವಾಗಿದೆ ಹಾಗೂ ರಶ್ಯವನ್ನು ಗುರಿಯಾಗಿಸಿ ನಡೆಸಿದ ಕೃತ್ಯವಲ್ಲ ಎಂದು ಅದು ಹೇಳಿದೆ. ಹೆಲಿಕಾಪ್ಟರ್ ಕತ್ತಲೆಯಲ್ಲಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ನಡುವಿನ

ಅಧಿಕಾರ ತ್ಯಜಿಸುವ ಮುನ್ನ ಶಾಕಿಂಗ್ ಟ್ವೀಟ್ ಮಾಡಿದ ಟ್ರಂಪ್

ವಾಷಿಂಗ್ಟನ್ – ಅಧಿಕಾರ ತ್ಯಜಿಸುವ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರಿಗೆ ಕೋಕ್ ನೀಡಿ ಕ್ರಿಸ್ಟೋಪರ್ ಸಿ.ಮಿಲ್ಲರ್ ಅವರನ್ನು ನೇಮಕ ಮಾಡಿದ್ದಾರೆ. ಮಾರ್ಕ್ ಎಸ್ಪರ್ ಅವರ ಸ್ಥಾನಕ್ಕೆ ಕ್ರಿಸ್ಟೋಪರ್ ಅವರನ್ನು ನೇಮಕ ಮಾಡಿದ್ದು , ತಕ್ಷಣದಿಂದಲೇ ಜಾರಿಗೆ ಬರುವಂತೆ ಮಿಲ್ಲರ್ ಅವರು ರಕ್ಷಣಾ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಎಸ್ಪರ್ ಅವರ ಸೇವೆಗೆ ನಾನು ಚಿರ ಋಣಿ. ಅವರ ಸೇವೆ ಸಾಕಾಗಿದೆ. ರಕ್ಷಣಾ ಕಾರ್ಯದರ್ಶಿಯಾಗಿ ಕ್ರಿಸ್ಟೋಪರ್ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಟ್ರಂಪ್ ಮತ್ತೊಂದು ಟ್ವಿಟ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋಬಿಡೆನ್ ವಿರುದ್ಧ ಸೋಲು

ಕಾರ್ ಬಾಂಬ್ ಸ್ಫೋಟ : 30 ಮಂದಿಗೆ ಗಾಯ

ಕಾಬೂಲ್: ಕಾರ್ ಬಾಂಬ್ ಸ್ಫೋಟದಲ್ಲಿ 10 ನಾಗರಿಕರು ಸೇರಿದಂತೆ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ನಡೆದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪ್ರಾಂತ್ಯದ ಮೈವಾಂಡ್ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಬಳಿ ಸ್ಫೋಟ ಸಂಭವಿಸಿದೆ. ತಾಲಿಬಾನ್ ಸೇರಿದಂತೆ ಯಾವುದೇ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಕಳೆದ ಕೆಲವು ವಾರಗಳಿಂದ ಕಂದಹಾರ್ ಹಾಗೂ ನೆರೆಯ ಪ್ರಾಂತ್ಯ ಹೆಲ್ಮಂಡ್‍ನಲ್ಲೂ ಸೇನಾ ಪಡೆಗಳು ಮತ್ತು ತಾಲಿಬಾನ್ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘರ್ಷಣೆ ಬೆನ್ನಲ್ಲೇ ಈ ಬೆಳೆವಣಿಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ದೋಹಾದಲ್ಲಿ ಶಾಂತಿ ಮಾತುಕತೆ ಬಿಕ್ಕಟ್ಟಿನಲ್ಲಿರುವುದರಿಂದ ಕಳೆದ ಮೂರು

ನೂತನ ಅಧ್ಯಕ್ಷನಿಗೆ ಶುಭಾಶಯ ತಿಳಿಸದ ಚೀನಾ : ಕ್ಲಾರಿಟಿ ಸಿಗೋವರ್ಗೂ ವಿಶ್ ಮಾಡಲ್ವಂತೆ ಚೀನಾ..!

ಬೀಜಿಂಗ್: ನಮ್ಮ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್ ಅವರಿಗೆ ಶುಭಾಶಯ ಕೋರಿವೆ. ಆದ್ರೆ, ಚೀನಾ ದೇಶ ಮಾತ್ರ ಈ ಸುದ್ದಿಗೆ ಹೋಗಿಲ್ಲ. ಅದ್ಯಾಕಪ್ಪಾ ಅಂತಾ ಕೇಳಿದ್ರೆ ಚೀನಾ ಹೇಳೋದೇನು ಗೊತ್ತಾ? ’ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೈನ್ ಜಯಗಳಿಸಿದ್ದಾರೆ ಎಂಬುದನ್ನು ಗಮನಿಸಿದ್ದೇವೆ. ಆದ್ರೆ, ಅಂತಿಮ ಫಲಿತಾಂಶ ಇನ್ನೂ ಬರದ ಕಾರಣ ಚೀನಾ ತನ್ನ ಅಧಿಕೃತ ಶುಭಾಶಯವನ್ನ ತಿಳಿಸಲು ಸಾಧ್ಯವಿಲ್ಲ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ. ಇನ್ನು ಇಲ್ಲಿ ಚೀನಾ ಮಾತ್ರವಲ್ಲದೇ ರಷ್ಯಾ ಹಾಗೂ ಮೆಕ್ಸಿಕೋ ದೇಶಗಳು ಸಹ ಜೋ ಬಿಡನ್

ಭಾರತೀಯ ಮೂಲದ ಮಹಿಳೆ ​ಅಮೆರಿಕ ಉಪಾಧ್ಯಕ್ಷೆ

 ಅಮೆರಿಕ : ಜೋಸೆಫ್​ ಬಿಡೆನ್​ ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆ ಕಮಲ ಹ್ಯಾರಿಸ್​ ಉಪಾಧ್ಯಕ್ಷರಾಗಿದ್ದಾರೆ. ಈ ಮೂಲಕ ಶ್ವೇತಭವನಕ್ಕೆ ಪ್ರವೇಶಿಸಿದ ಬ್ಲಾಕ್​ ಅಮೆರಿಕನ್​ ಅವರಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್​ ಅಮೆರಿಕನ್​ ಮಹಿಳೆ ಇವರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್​ ಆಗಿರುವ ಹ್ಯಾರಿಸ್​, ಈ ಮೊದಲು ಸ್ಯಾನ್​ಫ್ರಾಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್​ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಮೂಲದ ಹ್ಯಾರಿಸ್​ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ. ಇನ್ನು ,ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರೀಸ್​ ಅವರಿಗೂ ಅಭಿನಂದನೆ ತಿಳಿಸಿರುವ ಪ್ರಧಾನಿ ಮೋದಿ, ನಿಮ್ಮ ಗೆಲುವು ಎಲ್ಲ ಭಾರತೀಯ ಅಮೆರಿಕನ್ನರಿಗೆ ಹೆಮ್ಮೆಯ ವಿಷಯವಾಗಿದೆ.

ಅಗಲಿದ ಪುತ್ರನ ಅಚ್ಚುಮೆಚ್ಚಿನ ಪ್ರಾರ್ಥನಾ ಗೀತೆಯನ್ನು ಹಾಡಿದ ಬೈಡನ್

ವಾಶಿಂಗ್ಟನ್: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ತನ್ನ ವಿಜಯೋತ್ಸವದ ಭಾಷಣದಲ್ಲಿ, ತನ್ನ ದಿವಂಗತ ಪುತ್ರ ಬ್ಯೂ ಅವರ ಅಚ್ಚುಮೆಚ್ಚಿನ ಕ್ರಿಶ್ಚಿಯನ್ ಪ್ರಾರ್ಥನಾ ಗೀತೆ ” ಆನ್ ಇಗಲ್ಸ್ ವಿಂಗ್ಸ್” ಹಾಡನ್ನು ಹಾಡಿದರು. ಈ ಸ್ತುತಿ ಗಾಯನವು ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಾವಿರಾರು ಅಮೆರಿಕನ್ನರಿಗೆ ಸಾಂತ್ವಾನ ನೀಡಲಿದೆಯೆಂಬ ಆಶಾವಾದವನ್ನು ವ್ಯಕ್ತಪಡಿಸಿದರು. ”ನನ್ನ ಹೃದಯವು ನಿಮ್ಮಲ್ಲಿನ ಪ್ರತಿಯೊಬ್ಬರಿಗೂ ಮಿಡಿಯುತ್ತಿದೆ ಎಂದು ಕೊರೋನ ವೈರಸ್ ಸಂತ್ರಸ್ತರನ್ನು ಉದ್ದೇಶಿಸಿ ಬೈಡೆನ್ ಹೇಳಿದರು. ತನ್ನ ಚುನಾವಣಾ ಪ್ರಚಾರದ ಕೊನೆಯ ದಿನಗಳುದ್ದಕ್ಕೂ ತಾನು ಈ ಪ್ರಾರ್ಥನಾ ಗೀತೆಯಿಂದ ಪ್ರೇರಿತನಾಗಿದ್ದಾಗಿ 77 ವರ್ಷದ ಬೈಡೆನ್ ಹೇಳಿದರು. ಬೈಡೆನ್ ಪುತ್ರ ಬ್ಯೂ ಅವರು

5 ಮಕ್ಕಳನ್ನು ದತ್ತು ಪಡೆದ ಅನಾಥ

ಓಹಿಯೋ: ಒಡಹುಟ್ಟಿದವರನ್ನು ಬೇರೆ ಮಾಡಬಾರದು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಐವರು ಒಡಹುಟ್ಟಿದವರನ್ನು ದತ್ತು ಪಡೆದು ಸುದ್ದಿಯಾಗಿದ್ದಾರೆ. ಅಮೆರಿಕಾದ ಓಹಿಯೋದ ರಾಬರ್ಟ್ ಕಾರ್ಟರ್ ಎಂಬ 29 ವರ್ಷದ ವ್ಯಕ್ತಿ 2018 ರ ಡಿಸೆಂಬರ್‌ನಲ್ಲಿ ಮೂವರು ಗಂಡು ಮಕ್ಕಳನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದು, ಈ ಬಾರಿ ಅಕ್ಟೋಬರ್‌ನಲ್ಲಿ ಅವರ ಇಬ್ಬರು ಸಹೋದರಿಯರನ್ನೂ ಅಧಿಕೃತವಾಗಿ ದತ್ತು ಪಡೆದಿದ್ದಾರೆ. ಮೆರಿಯೋನಾ, ರಾಬರ್ಟ್ ಜೆಆರ್, ಮಕಾಲೆ, ಜಿಯೋವಿನ್ನಿ, ಕಿಯೋಂಟೈ ಎಂಬ ಐವರು ಈಗ ರಾಬರ್ಟ್ ಕಾರ್ಟರ್ ಅವರ ಅಧಿಕೃತ ಮಕ್ಕಳಾಗಿದ್ದಾರೆ. ಅವರು ಈಗ ಮಕ್ಕಳನ್ನು ಸಾಕಲು ದೊಡ್ಡ ಮನೆ ಹುಡುಕುತ್ತಿದ್ದು, ಗೋ ಫಂಡ್ ಮಿ ಎಂಬ ಆನ್‌ಲೈನ್ ಪೇಜ್‌ನ್ನು ಪ್ರಾರಂಭಿಸಿ ಹಣ ಒಟ್ಟುಗೂಡಿಸುತ್ತಿದ್ದಾರೆ. ಇದುವರೆಗೆ 92,370 ಡಾಲರ್ ಹಣ

ಅಮೆರಿಕದ ಹೊಸ ಅಧ್ಯಕ್ಷರಾಗಿ ಜೊ ಬೈಡನ್‌ ಆಯ್ಕೆ ಖಚಿತ.!

ವಾಷಿಂಗ್ಟನ್: ಬಹುತೇಕ  ‘ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವುದು ಖಚಿತ ಎಂದು  ಅಮೆರಿಕದ ಪ್ರಮುಖ ಸುದ್ದಿ ವಾಹಿನಿ ಗಳು ಶನಿವಾರ ವರದಿ ಮಾಡಿವೆ. ಇವರ ಗೆಲುವಿನ ಅಧಿಕೃತ ಘೋಷಣೆಯಷ್ಟೇ ಇನ್ನು ಬಾಕಿ ಉಳಿದಿದೆ. ಪೆನ್ಸಿಲ್ವೇನಿಯಾದಲ್ಲಿ ಬೈಡನ್‌ ಅವರ ಗೆಲುವು ಖಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಡೆಮಾಕ್ರೆಟ್‌ ಪಕ್ಷದ ಪ್ರತಿನಿಧಿಗಳ ಸಂಖ್ಯೆ 273ಕ್ಕೆ ಏರಿಕೆಯಾದಂತಾಗುತ್ತದೆ. ನೆವಾಡ ಮತ್ತು ಜಾರ್ಜಿಯಾದಲ್ಲೂ ಅವರಿಗೆ ಖಚಿತ ಮುನ್ನಡೆ ಇರುವುದರಿಂದ, ಒಟ್ಟು ಪ್ರತಿನಿಧಿಗಳ ಸಂಖ್ಯೆ 290ಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 270 ಪ್ರತಿನಿಧಿಗಳನ್ನು ಹೊಂದುವುದು ಅಗತ್ಯ. ಎಡಿಸನ್ ರಿಸರ್ಚ್ ಸಂಸ್ಥೆ, ಸಿಎನ್‌ಎನ್‌,