ಆರೋಗ್ಯ

ಭೇದಿ ನಿಯಂತ್ರಣಕ್ಕೆ ದಾಳಿಂಬೆ ರಸ

ಭೇದಿಉಂಟಾದಾಗ ಎರಡು ಮೂರು ತಾಸುಗಳಿಗೆ ಒಮ್ಮೆ ದಾಳಿಂಬೆ ರಸವನ್ನು ಸೇವಿಸುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ. ಮಾವಿನ ತೊಗಟ್ಟೆ ಯ ಕಪಾಯಕ್ಕೆ ಉಪ್ಪು ಬೆರಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು  ನೊವು ನಿವಾರಣೆಯಾಗುತ್ತದೆ.

ಬೊಜ್ಜಿಗೆ ಮದ್ದು

ನಾರಿನಂಶ ಮತ್ತು ಪ್ರೋಟೀನ್ ಅಂಶವುಳ್ಳ ಬೆಣ್ಣೆ ಹಣ್ಣನ್ನು (ಬಟರ್ ಪ್ರೂಟ್) ನಿಯಮಿತವಾಗಿ ಸೇವಿಸುದರಿಂದ ಬೊಜ್ಜನ್ನು ಕರಗಿಸಬಹುದು. -ಸಂಗ್ರಹ

ದುರ್ಗದ ಪುಷ್ಕರಣಿಗಳು ಭಾಗ-೩

ಚೆನ್ನಕೇಶವಸ್ವಾಮಿ ಕಲ್ಯಾಣಿ ನಾನು ಚೆನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿದ್ದೇನೆ. ನನ್ನಿಂದ ಜನಗಳಿಗಷ್ಟೇ ಅಲ್ಲದೆ ನೂರಾರು ಗಿಡಮರಗಳು ನೀರನ್ನು ಪಡೆಯುತ್ತಿದ್ದವು. ಈಗ ಸಂಪೂರ್ಣ ಬತ್ತಿರುವ ನಾನು ಪ್ಲಾಸ್ಟಿಕ್ ಎಸೆಯುವ ಕಸದ ಗುಂಡಿಯಾಗಿದ್ದೇನೆ. ನನ್ನ ಸುತ್ತಲೂ ಬೆಳೆದಿರುವ ಆಲದ ಮರಗಳು ನನ್ನನ್ನು ಸಂಪೂರ್ಣ ನುಂಗಬಹುದು.ವನದ ಮಧ್ಯಯೇ ಇದ್ದರೂ ಇಂದು ನಾನು ಸಂಪೂರ್ಣ ಬತ್ತಿ ಹೋಗಿದ್ದೇನೆ. ದೇಹ ಇದ್ದರೂ ಸತ್ತಂತಿದ್ದೇನೆ. ನಾನು ಸಂತೇ ಹೊಂಡ ನಿಮಗೆ ನೆನಪಿರಬೇಕು. ಕೆಲ ವರ್ಷಗಳ ಹಿಂದೆ ಬಸ್ಸೊಂದು ನನ್ನಲ್ಲಿ ಬಿದ್ದು ೬೧ ಜನ ಬಲಿಯಾಗಿ ಅಂತರ್ ರಾಷ್ಟ್ರೀಯ ಸುದ್ದಿಯಾಗಿದ್ದರು. ತಪ್ಪು ನನ್ನದೇ ಎಂದು ಅನೇಕರು ಶಪಿಸಿದ್ದೂ ಉಂಟು. ನನ್ನ ಸುತ್ತ ಇದ್ದ ಶಿಥಿಲ ತಡೆಗೋಡೆಯನ್ನು  ಸುಸ್ಥಿತಿಯಲ್ಲಿ ಇಡದಿರುವುದು ನನ್ನ

ಮೂಲವ್ಯಾಧಿ -ಹತೋಟಿ

ಮೂಲ ವ್ಯಾಧಿಯಿಂದ ಬಳಲುತ್ತಿದ್ದರೆ , ನಿತ್ಯ ನಿಯಮಿತವಾಗಿ ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುರಿಂದ ಮೂಲವ್ಯಾಧಿ ತೊಂದರೆಯನ್ನು ಹತೋಟಿಯಲ್ಲಿಡಬಹುದು. -ಸಂಗ್ರಹ  

ಕರಿಬೇವಿನ ಮದ್ದು

ಜ್ವರ, ವಾಂತಿ ಭೇದಿಯನ್ನು ಹತೋಟಿಯಲ್ಲಿಡಲು ದಿನಕ್ಕೆ ನಾಲ್ಕೈದು ಬಾರಿ ಕರಿಬೇವಿನ ಎಲೆಯನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಉಪಶಮನವಾಗುತ್ತದೆ.