ಆರೋಗ್ಯ

ಮೂಳೆಗಳ ದುರ್ಬಲತೆಗೇನು ಕಾರಣ.?

ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ವಯಸ್ಸಾದ ಮೇಲೆ ಮೂಳೆಗಳು ದುರ್ಬಲವಾಗುತ್ತವೆ. ಆದರೆ, ಕೆಲವರಿಗೆ ಈ ಸಮಸ್ಯೆ ಮಧ್ಯ ವಯಸ್ಸಿನಲ್ಲಿಯೇ ಕಾಣಿಸುತ್ತದೆ ಇದಕ್ಕೇನು ಕಾರಣವಿರಬೇಕು ಎಂಬುದು ಕೆಲವರ ಪ್ರಶ್ನೆ.! ವೈದ್ಯರು ಹೇಳುವಂತೆ ನಮ್ಮ ಆಹಾರದ ಕ್ರಮವೇ ಕಾರಣವಂತೆ. ಅಧಿಕ ಕಾಫಿ, ಪಿಜ್ಜಾ, ಬರ್ಗರ್, ಪಾಸ್ತಾ, ಮದ್ಯ ಸೇವನೆ ಮಾಡಿದರೆ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಎಲುಬುಗಳು ದುರ್ಬಲಗೊಳ್ಳುತ್ತವೆ. ಅಲ್ಲದೇ, ವಿಟಮಿನ್ ಡಿ ಕೊರತೆಯಾಗುತ್ತದೆ. ವಿಟಮಿನ್ ಎ ಕೊರತೆ ನೀಗಿಸಲು ಸಪ್ಲಿಮೆಂಟ್ ಗಳನ್ನು ಸೇವಿಸುತ್ತಿದ್ದರೂ ಮೂಳೆಗಳು ದುರ್ಬಲಗೊಳ್ಳುತ್ತವೆ. ಇಂತಹ ಆಹಾರವನ್ನು ಸೇವಿಸದೇ ಇರುವುದು ಒಳಿತಂತೆ.!   ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಉತ್ತಮ ಆಹಾರಗಳಾದ ಹಾಲು ಬೆಣ್ಣೆಮೊಸರುಸಾರ್ಡೆçನ್‌ ಗಳು ಮತ್ತು ಮೀನುಗಳುಬಸಳೆ, ಟರ್ನಿಪ್‌ ಗಡ್ಡೆಯಂತಹ ದಟ್ಟ ಹಸುರು

ನಿಮಗೆ ಪ್ರೊಟೀನ್ ಕೊರತೆಯೇ ಹಾಗಾದರೆ ಈ ಕಾಳು ಸೇವಿಸಿ

ಪ್ರಸ್ತುತ ದಿನಮಾನಗಳಲ್ಲಿ ಪ್ರೋಟೀನ್ ಕೊರತೆಯಿಂದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಇದರ ಕೊರತೆಯಿಂದ ಪಾರಾಗಲು ಪ್ರೋಟೀನ್ ಯುಕ್ತ ಆಹಾರ ಸೇವನೆ ಅವಶ್ಯಕ. ಸಸ್ಯಾಹಾರಿಗಳು ಪ್ರೋಟೀನ್ ಕೊರತೆ ನೀಗಿಸಲು ಮೊಳಕೆ ಕಾಳುಗಳು ಸೇವಿಸಬೇಕು. ಮೊಳಕೆ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ, ನರಗಳ ಕ್ರಿಯೆ ಚುರುಕು, ಚರ್ಮದ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿ, ಕಣ್ಣಿನ ಆರೋಗ್ಯಕ್ಕೆ ಉತ್ತಮ, ಅಧಿಕ ರಕ್ತದೊತ್ತಡ ಹತೋಟಿಗೆ ತರುತ್ತವೆ. ಮಕ್ಕಳಿಗೂ ಈ ಕಾಳು ನೀಡುವುದು ಒಳ್ಳೆಯದು.

ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಉತ್ತಮ

ಭಯಂಕರ ಬೇಸಿಗೆಯ ಬಿಸಿಲಿನ  ಝಳಕ್ಕೆ ಯಾವೆಲ್ಲಾ ತಂಪು ಪಾನಿಯಗಳನ್ನು ಕುಡಿಯುತ್ತೇವೆ. ಆದರೆ ಸೌತೆಕಾಯಿ ತಿಂದ್ರೆ ಬಹಳ ಉಪಯುಕ್ತವಂತೆ ಏಕೆ ಅಂದ್ರೆ.? ಸೌತೇಕಾಯಿಯಲ್ಲಿ  ವಿಟಮಿನ್ ಎ, ಬಿ1, ಬಿ6, ಸಿ, ಪೊಟ್ಯಾಸಿಯಂ, ಫಾಸ್ಫರಸ್, ಕಬ್ಬಿಣ ಅಂಶ ದೇಹವನ್ನು ತಮ್ಪಾಗಿದುವಲ್ಲಿ ನೆರವಾಗುತ್ತದೆ. ಶರೀರದಲ್ಲಿ ನೀರಿನ ಕೊರತೆ ನೀಗಿಸಿ ಆಮ್ಲಜನಕದ ಮಟ್ಟ ಹೆಚ್ಚಿಸುತ್ತದೆ. ಮಲಬದ್ಧತೆ, ತಲೆ ನೋವು, ಆಲಸ್ಯ, ಕೀಲು ನೋವು, ದೇಹದ ತಾಪಮಾನ ನಿಯಂತ್ರಣ ಹಾಗೂ ಮುಟ್ಟಿನ ಸಮಸ್ಯೆ ನಿವಾರಕವಾಗಿ ಸೌತೆ ಕಾಯಿ ಕೆಲಸ ಮಾಡುತ್ತದೆ.

ಮಾನಸಿಕ ಒತ್ತಡವನ್ನೂ ಕಡಿಮೆ ಆಗಬೇಕೆ ಬಾಳೆ ಹಣ್ಣು ಇದೆಯಲ್ಲಾ.!

ಬಾಳೆಹಣ್ಣಿನಲ್ಲಿ ಪೊಟಾಷಿಯಂ ಅಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಸೆರೊಟೋನಿನ್ ಅಂಶ ಒಂದು ವೇಳೆ ಕಡಿಮೆಯಾದರೆ ನಮಗೆ ಒತ್ತಡದ ಅನುಭವವಾಗುತ್ತದೆ. ಬಾಳೆಹಣ್ಣು ಇದರ ಸಮತೋಲನ ಕಾಪಾಡುತ್ತದೆ. ದೇಹಕ್ಕೆ ಆವಶ್ಯಕ ೧೨%ರಷ್ಟು ಫೈಬರ್ ಅಂಶವನ್ನು ಬಾಳೆಹಣ್ಣು ಒದಗಿಸುತ್ತದೆ, ಈ ಮೂಲಕ ಅನಾವಶ್ಯಕ ತೂಕ ಇಳಿಸಿಕೊಳ್ಳಬಹುದು. ಮೊಳೆಗಳಿಗಾಗಿ ಕ್ಯಾಲ್ಸಿಯಂ ಒದಗಿಸಿ ಅವನ್ನು ಸದೃಢಗೊಳಿಸುತ್ತವೆ. ಹಾಗಾಗಿ ದಿನಕ್ಕೊಂದು ಬಾಳೆಹಣ್ಣು ತಿನ್ನಲು ಮರೆಯಬೇಡಿ. ಆದರೆ ಸಕ್ಕರೆ ಖಾಯಿಲೆ ಇದ್ದವರು ಒಮ್ಮೆ ಡಾಕ್ಟರ್ ಕೇಳಿ..!

ಹಲ್ಲು ನೋವು ಬಂದಾಗ ಹೀಗೆ ಮಾಡಿ..! ಕೆಲ ಟಿಪ್ಸ್..!

ಹಲ್ಲು ನೋವು ಎಲ್ಲರಿಗೂ ಬಂದೇ ಬರುತ್ತೆ. ನೋವು ಬಂದಾಗ ಯಾವ ಶತ್ರುಗೂ ಈ ನೋವು ಬರಬಾರದು ಎಂದು ಹೇಳಿರುತ್ತೀರ ಆದ್ರೆ ನೋವು ಬಂದಾಗ ತಕ್ಷಣ ಮನೆಯಲ್ಲಿರುವ ಈ ಪದಾರ್ಥಗಳನ್ನು ಬಳಸಿ ಉಪಶಮನಮಾಡಿಕೊಳ್ಳ ಬಹುದು.! ೧. ಸ್ವಲ್ಪ ಉಪ್ಪು, ಬೆಳ್ಳುಳ್ಳಿಯ ಪೇಸ್ಟ್? ಮಿಶ್ರಣ ಮಾಡಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ೨. ಅರ್ಧ ಕಪ್ ನೀರು, ಒಂದು ಚಿಟಿಕೆ ಉಪ್ಪು, ಅರ್ಧ ಚಮಚ ಅಡುಗೆ ಸೋಡಾ ಮಿಶ್ರಣ ಮಾಡಿ ಬಾಯಿ ಮುಕ್ಕಳಿಸುವುದು ವಸಡಿನ ಹಾಗೂ ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ೩. ಮಂಜುಗಡ್ಡೆ?ಗಳಿಂದ ಮಸಾಜ್ ಮಾಡಿದರೆ ತಾತ್ಕಾಲಿಕವಾಗಿ ಹಲ್ಲುನೋವು ಕಡಿಮೆಯಾಗುತ್ತದೆ. ೪. ಲವಂಗದ ಎಣ್ಣೆಯನ್ನು ನೇರವಾಗಿ ಹಲ್ಲುನೋವಿರುವ ಜಾಗಕ್ಕೆ ಹಚ್ಚಿದರೆ

ಪಡವಲಕಾಯಿಯ ಟಿಪ್ಸ್ ……..!

ಪಡವಲಕಾಯಿ ಸೇವನೆಯಿಂದ ಸಂಧಿವಾತ ಮತ್ತು ಮಧುಮೇಹ ದೂರವಾಗುತ್ತದೆ. ಶರೀರವನ್ನು ತಂಪಾಗಿಡುವುದರಿಂದ, ಶೀತ ದೇಹ ಪ್ರಕೃತಿಯವರು ಇದನ್ನು ಬಳಸಕೂಡದು. ದೇಹದ ತೂಕವನ್ನು ಇಳಿಸುವಲ್ಲಿ ಉಪಯುಕ್ತಕರ ತರಕಾರಿಯಾಗಿದೆ. ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಕರಿಸುವುದರಿಂದ ಮಧುಮೇಹಿಗಳು ಸೇವಿಸಬಹುದು. ಇದರಲ್ಲಿನ ನಾರಿನ ಅಂಶ ಮಲಬದ್ಧತೆ ಸಮಸ್ಯೆ ನಿವಾರಿಸುವುದರ ಜೊತೆಗೆ ಹೊಟ್ಟೆಯುಬ್ಬರ ಸಮಸ್ಯೆ ನಿವಾರಿಸುತ್ತದೆ.

ಬೊಜ್ಜು ಕರಗಿಸಲು ಇಲ್ಲಿದೆ ಟಿಪ್ಸ್

ಬೊಜ್ಜು ಕರಗಿಸಿಲು ಏನೆಲ್ಲಾ ಕಸರತ್ತು ಮಾಡುತ್ತಿರ ಅಲ್ವ ಹಾಗದರೆ ಇಲ್ಲೊಂದು ಸರಳ ಉಪಾಯವಿದೆ. ಬೊಜ್ಜು ಕರಗಿಸಲು ಈ ಉಪಾಯ ಮಾಡಿದರೆ ಮೂರೇ ದಿನದಲ್ಲಿ ನಿಮ್ಮ ತೂಕ ಇಳಿಸಿಕೊಳ್ಳಬಹುದು. ಸ್ವಲ್ಪ ತುರಿದ ಶುಂಠಿ, ಸ್ವಲ್ಪ ನಿಂಬೆ ಹೋಳು, ಒಂದು ಕಪ್ ನೀರು ಹಾಗೂ ಒಂದು ಚಮಚ ಜೇನುತುಪ್ಪ ತೆಗೆದುಕೊಳ್ಳಿ. ಪಾತ್ರೆಯೊಂದಕ್ಕೆ ನೀರು ಹಾಕಿ ಚೆನ್ನಾಗಿ ಕುದಿಯಿಸಿ, ಈ ನೀರಿಗೆ ನಿಂಬೆ ಹೋಳು-ಶುಂಠಿ ಹಾಕಿ ಮಿಕ್ಸ್ ಮಾಡಿ. ಅರ್ಧ ಗಂಟೆಯವರೆಗೆ ಪಾತ್ರೆಯನ್ನು ಮುಚ್ಚಿಡಿ. ಬಳಿಕ ಒಂದು ಲೋಟದಲ್ಲಿ ಈ ಮಿಶ್ರಣ ಹಾಕಿಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ ನೋಡಿ. ನಿಮಗೆ ಗೊತ್ತಾಗುತ್ತದೆ.!

ಗೊರಕೆಯಿಂದ ಪಕ್ಕದವರಿಗೆ ನಿದ್ದೆ ಮಾಡಲು ಸಾಧ್ಯವಿಲ್ಲ ಹಾಗಾದರೆ ಹೀಗೆ ಮಾಡಿ..!

ಗೊರಕೆ ಹೊಡೆಯುವವರನ್ನು ಕಂಡರೆ ಛೇ… ಇವರ ಪಕ್ಕದಲ್ಲಿ ಮಲಗಬಾರದಪ್ಪ ಎಂದು ಕೆಲವರು ಗೊಣಗುವುದನ್ನು ಕೇಳಿರುತ್ತೀರ ಅಲ್ವ. ಪಾಪ ಗೊರಕೆ ಹೊಡೆಯುವವರಿಗೂ ಸ್ವಲ್ಪ ಕಿರಿ ಕಿರಿ ಆಗುವುದು ಸಹಜ ಹಾಗಾಗಿ ಗೊರಕೆ ಹೊಡೆಯುವವರು ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ.! ಮಲಗುವುದಕ್ಕೂ ಮುಂಚೆ ಕಡಿಮೆ ಬಿಸಿ ಇರುವ ಒಂದು ಗ್ಲಾಸ್ ನೀರಿನೊಂದಿಗೆ ಒಂದು ಚಮಚ ಏಲಕ್ಕಿ ಪುಡಿ ಮಿಕ್ಸ್ ಮಾಡಿ ಕುಡಿದರೆ ಗೊರಕೆ ದೂರವಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕುಡಿದರೆ, ಗೊರಕೆ ಇಲ್ಲದೆ ಹಾಯಾಗಿ ನಿದ್ದೆ ಮಾಡಬಹುದು. ಮುಖ ಮೇಲೆ ಮಾಡಿ ಮಲಗುವ ಬದಲು ಎಡ ಅಥವಾ ಬಲಗಡೆ ತಿರುಗಿ

ಮೊಳಕೆಯೊಡೆದ ಹೆಸರು ಕಾಳು ತಿಂದ್ರೆ ಏನಾಗಬಹುದು.?

ಮೊಳಕೆಯೊಡೆದ ಯಾವುದಾದರು ಕಾಳು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೀರ ಅಲ್ವೆ. ಅದರಲ್ಲೂ ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಏನೆಲ್ಲಾ ಆಡಗಿದೆ ಅಂದ್ರೆ. ಮೊಳಕೆಯೊಡೆದ ಕಾಳಿನಲ್ಲಿ ಕ್ಯಾಲೋರಿಸ್ ಇಲ್ಲದಿರುವುದರಿಂದ ಎಷ್ಟೇ ತಿಂದರೂ ದೇಹದ ತೂಕ ಹೆಚ್ಚಾಗುವುದಿಲ್ಲ.  ಮೊಳಕೆಯೊಡೆದ ಕಾಳು ಸೇವಿಸುವುದರಿಂದ ಇದರಲ್ಲಿನ ಒಮೆಗಾ ಫ್ಯಾಟೀ ಆಸಿಡ್ ದೇಹಕ್ಕೆ ಕೊಬ್ಬಿನಂಶ ಒದಗಿಸಿ ರಕ್ತನಾಳ ಕಾಪಾಡಿ ಹೃದಯದ ಆರೋಗ್ಯ ಚೆನ್ನಾಗಿಡುತ್ತದೆ.  ವಿಟಮಿನ್ ಸಿ ದೇಹಕ್ಕೆ ಸೋಂಕು ತಗಲುವುದನ್ನು ತಡೆದು, ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುತ್ತದೆ.  ಕಾಳಿನಲ್ಲಿಯ ಪೋಷಕಾಂಶ ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ, ಮಲಬದ್ಧತೆ ತೊಂದರೆ ನಿವಾರಿಸುತ್ತದೆ.  ಹಾಗಾದ್ರೆ ನಿತ್ಯ ಮೊಳಕೆ ಕಟ್ಟಿದ ಹೆಸರು ಕಾಳನ್ನು ತಿನ್ನಿ ಆರೋಗ್ಯವನ್ನು ವೃದ್ಧಸಿಕೊಳ್ಳಿ.!

ಹೊಸ ಬಟ್ಟೆ ಹಾಕುವ ಮುನ್ನಾ ಇದನ್ನು ಓದಿ ಬಿಡಿ..!

ಹೊಸ ಬಟ್ಟೆ ಕೊಳ್ಳುವುದು ಎಂದ್ರೆ ತುಂಬಾ ಖುಷಿ ಅಲ್ವ. ಹಾಗೇನೆ ತಂದ ತಕ್ಷಣ ಹೊಸ ಬಟ್ಟೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಚೆನ್ನಾಗಿದೆಯೋ ಎಂದು ಎಲ್ಲರಿಗೂ ತೋರಿಸಿ ಸಂತೋಷ ಮಟ್ಟು ಕೊಳ್ಳುತ್ತಿರ ಅಲ್ವ  ಹಾಗಾದ್ರೆ ಹೊಸ ಬಟ್ಟೆ ಹಾಕುವ ಮುನ್ನ ಯೋಚಿಸಿ.! ನೀವು ಖರೀದಿ ಬಟ್ಟೆ ಮಾಡಿದ ಬಳಿಕ ಕೆಲವರು ಅದನ್ನು ತೊಳೆಯದೇ ಧರಿಸುತ್ತೀರ ವಿಜ್ಞಾನಿಗಳ ಪ್ರಕಾರ ಇದು ದೇಹಕ್ಕೆ ಒಳ್ಳೆಯದಲ್ಲವಂತೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೊಸ ಬಟ್ಟೆ ತಯಾರಿ ಮಾಡುವಾಗ ಕೆಲ ರಾಸಾಯನಿಕಗಳನ್ನು ಬಳಸಿರುತ್ತಾರೆ. ಇದರಿಂದ ತೊಳೆಯದೇ ಬಟ್ಟೆ ಧರಿಸಿದರೆ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಹೊಸ ಬಟ್ಟೆ ಧರಿಸುವ ಮೊದಲು ಅದನ್ನು ತೊಳೆದ ಹಾಕಿ