ಆರೋಗ್ಯ

ಈ ಡ್ರೈ ಫ್ರೂಟ್ಸ್ ತಿಂದ್ರೆ ಸಕ್ಕರೆ ಖಾಯಿಲೆಗೆ ತೊಂದರೆ ಆಗುತ್ತಾ.?

  ಈ ಡ್ರೈ ಫ್ರೂಟ್ಸ್ ತಿಂದ್ರೆ ಸಕ್ಕರೆ ಖಾಯಿಲೆಗೆ ತೊಂದರೆ ಆಗುತ್ತಾ.? ಇಂತಹ ಪ್ರಶ್ನೆಗಳು ನಿಮ್ಮಲ್ಲೂ ಕಾಡ ಬಹುದು. ಅದಕ್ಕೆ.? ಮಧುಮೇಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಇತರ ಆಹಾರಗಳಂತೆ ಆರೋಗ್ಯದ ಮೇಲೆ ಡ್ರೈಫ್ರೂಟ್ಸ್ ಗಮನಾರ್ಹ ಪರಿಣಾಮ ಬೀರುತ್ತದೆ. ಮಧುಮೇಹ ಇರುವವರಿಗೆ ಬಾದಾಮಿ ಉಪಯುಕ್ತ ಎನ್ನಬಹುದು. ಇನ್ನು ಮಧುಮೇಹ ಅಪಾಯ ಕಡಿಮೆ ಮಾಡಲು ವಾಲ್ನೆಟ್ ಪ್ರಮುಖ ಪಾತ್ರವಹಿಸುತ್ತದೆ.  ಸಕ್ಕರೆ ಕಾಯಿಲೆ ಇರುವವರಿಗೆ ಗೋಡಂಬಿ ಅತ್ಯುತ್ತಮ ಡ್ರೈಫ್ರೂಟ್ಸ್ ಎಂದು ಹೇಳಬಹುದು. ಮಧುಮೇಹ ಕಾಯಿಲೆ ಇರುವವರು ಪಿಸ್ತಾ ಕೂಡಾ ಸೇವಿಸಬಹುದಾಗಿದೆ. ಆದರೆ ಲಿಮಿಟ್ ಇರ ಬೇಕು ಅಷ್ಟೆ.!

ಬೀಟ್ ರೂಟ್ ಬಗ್ಗೆ ನಿಮಗೆಷ್ಟು ಗೊತ್ತು.?

  ಕೆಲವರು ಬೀಟ್ ರೂಟ್ ಬಗ್ಗೆ ಮೂಗು ಮುರಿಯುವವರು ಇದ್ದಾರೆ. ಆದರೆ ಬೀಟ್ ರೂಟ್ ಬಹುಪಯೋಗಿ ಮನೆಮದ್ದಾಗಿದೆ. ಎಂಬುದು ಕೆಲವರಿಗೆ ಗೊತ್ತಿಲ್ಲ. ಗೊತ್ತಾದರೆ ,ಆತ್ರ ಬಿಡಲ್ಲ. ಬೀಟ್ ರೂಟ್ ನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣದ ಅಂಶ ಹೆಚ್ಚಿರುತ್ತದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನೂ ಹೆಚ್ಚಿಸುತ್ತದೆಯಲ್ಲದೆ, ಮಲಬದ್ಧತೆ ಸಮಸ್ಯೆಗೂ ಇದು ರಾಮಬಾಣವಾಗಿದೆ. ರಕ್ತ ಹೀನತೆ ಮತ್ತು ಕ್ಯಾನ್ಸರ್ ತಡೆಯುವಲ್ಲಿಯೂ ಸಹಕಾರಿಯಾದ ಬೀಟ್ ರೂಟ್, ಡಯೆಟ್ ಮಾಡುವವರೂ ಕೂಡ ಬಳಸಬಹುದಾದ ಉತ್ತಮ‌ ತರಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.!

ಸಪೋಟ ಹಣ್ಣು ತಿನ್ನುವವರಿಗೆ ಈ ಖಾಯಿಲೆಯಿಂದ ದೂರವಿರಬಹುದು.!

ಆರೋಗ್ಯ ಸೇವನೆಯಿಂದ ಸಪೋಟ ಹಣ್ಣಿನ ಸೇವನೆಯು ತುಂಬಾ ಒಳ್ಳೆಯದು. ಇದರ ಸೇವನೆಯಿಂದ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಬಾಯಿಯ ಕ್ಯಾನ್ಸರ್ ನಿಂದ ರಕ್ಷಣೆ ದೊರೆಯುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅಲ್ಲದೆ, ಇದರ ಸೇವನೆಯಿಂದ ಶೀತ ಮತ್ತು ಕೆಮ್ಮು ಕಡಿಮೆಯಾಗುತ್ತದೆ.!

ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುತ್ತೀರ ಹಾಗಾದರೆ……..

ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವ ಮಹಿಳೆಯರ ಮೆದುಳಿನಲ್ಲಿ ಹಾರ್ಮೋನ್ ಬದಲಾವಣೆ ಆಗಲಿದ್ದು, ಅಂತಹ ಮಹಿಳೆಯರು ಬೇರೆಯವರ ಭಾವನೆ ಮತ್ತು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ! ಯಾವುದೇ ವಿಷಯದ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದಷ್ಟೇ ಅಲ್ಲ, ತಮ್ಮ ಸಂಗಾತಿಗೆ ಲೈಂಗಿಕ ಸುಖ ನೀಡಲು ಹಾಗೂ ಅವರನ್ನು ಭಾವನಾತ್ಮಕವಾಗಿ ಪ್ರೀತಿಸಲು ನಿರಾಕರಿಸುತ್ತಾರೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚು ಸೇವಿಸಬಾರದು.!

ಜಾಯಿಕಾಯಿ ಮಹತ್ವದ ಬಗ್ಗೆ ಗೊತ್ತಾ.? ಆರೋಗ್ಯಕ್ಕೆ ಎಷ್ಟು ಉಪಯುಕ್ತ

  ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥವಾಗಿ  ಜಾಯಿಕಾಯಿಯನ್ನು ಶತಮಾನಗಳಿಂದ ಬಳಕೆ ಮಾಡುವ ಪದ್ದತಿ ನಮ್ಮಲ್ಲಿ ರೂಢಿಯಲ್ಲಿದೆ. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ, ಹಲ್ಲು ನೋವು ನಿವಾರಣೆ, ವಾಕರಿಕೆ ಸಮಸ್ಯೆ ನಿವಾರಣೆ, ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣತೆ ಸಮಸ್ಯೆಗೆ ಪರಿಹಾರ, ನರಮಂಡಲದ ಆರೋಗ್ಯವೃದ್ಧಿ, ರಕ್ತದೊತ್ತಡ ಸಮಸ್ಯೆಗೆ ಪರಿಹಾರ, ಮೊಡವೆಗಳ ಸಮಸ್ಯೆ ನಿಯಂತ್ರಣವಾಗುತ್ತೆ. ಅಲ್ಲದೆ, ಜಾಯಿಕಾಯಿ ಎಣ್ಣೆಯನ್ನು ಕೂದಲಿಗೆ ಅಪ್ಲೈ ಮಾಡುವುದರಿಂದ ಕೂದಲುದುರುವಿಕೆ ಸಮಸ್ಯೆಯೂ ನಿವಾರಣೆಯಾಗುತ್ತೆ.

ನೆನೆಸಿದ ನೆಲಗಡಲೆ ಸೇವನೆಯಿಂದ ಆರೋಗ್ಯ ಬಲ

  ನೆಲಗಡಲೆಯಲ್ಲಿ ಕೊಬ್ಬು, ಪ್ರೊಟೀನ್, ಪೊಟಾಶಿಯಂ, ನಾರಿನಾಂಶ, ಪೋಸ್ಪರಸ್, ವಿಟಮಿನ್ ಬಿ ಮತ್ತು ಮೆಗ್ನಿಶಿಯಂ ಇದೆ. ಇದರಿಂದಾಗಿ ನೆಲಗಡಲೆಯನ್ನು ಒಂದು ಆರೋಗ್ಯಕಾರಿ ತಿಂಡಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಹೃದಯ ಸಮಸ್ಯೆಗಳು ದೂರವಾಗುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಬೆನ್ನು ನೋವು ನಿವಾರಣೆಯಾಗಲು ಸಹಕಾರಿಯಾಗಿದೆ.

ನಮ್ಮಲ್ಲಿರುವ ಔಷಧಿ ಸಸ್ಯಗಳು: ಅರೋಗ್ಯಕ್ಕೆ ಎಷ್ಟು ಉಪಯುಕ್ತ ಅಂದ್ರೆ.?( ಭಾಗ-3)

    ಪಾರೀಶ (ಪಾದರಿ) : ಚರ್ಮರೋಗದಿಂದ ಬಳಲುತ್ತಿರುವವರು ಇದರ ಕಾಯನ್ನು ಸುಟ್ಟು ಬೂದಿಯನ್ನಾಗಿಸಿ ಬಳಸುವರು. ಮೂಲವ್ಯಾದಿ ನಿಯಂತ್ರಣದಲ್ಲೂ ಸಹ ಇದರ ಕಷಾಯ ಉಪಯುಕ್ತವಾಗಿದೆ. ಕೀಲುನೋವಿನ ಸಮಸ್ಯೆಗೂ ಇದು ರಾಮಬಾಣ. ಮೂರ್ವಾ (ಮಂಜಿನಾರು) : ಎಲೆ ಹಾಗೂ ಕಾಂಡದ ಕಷಾಯವನ್ನು ಕಡಿಮೆ ರಕ್ತ ಇರುವವರು ಸೇವಿಸಿದರೆ, ರಕ್ತ ಶುದ್ಧಿ ಹಾಗೂ ರಕ್ತ ವೃದ್ಧಿಯಾಗುತ್ತದೆ. ವ್ರಣರೋಪಿಣಿ (ಮುರಿಕೂಡು) : ರಕ್ತಸ್ರಾವವಾಗುವ ಸಂದರ್ಭದಲ್ಲಿ ಇದರ ಎಲೆಯ ರಸವನ್ನು ಗಾಯಕ್ಕೆ ಹಚ್ಚಿದರೆ ರಕ್ತಸ್ರಾವ ನಿಲ್ಲಿಸಬಹುದು.  ಇದನ್ನು ಸೇವಿಸುವುದರಿಂದ ದೇಹದ ಒಳಗಡೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ದೇಹದ ಮೂಳೆ ಮುರಿದ ಸಂದರ್ಭದಲ್ಲಿ ಕಟ್ಟು ಹಾಕಲು ಈ ಸಸ್ಯ ಬಳಸಲಾಗುತ್ತದೆ. ತುವರಕ (ಗರುಡಫಲ) : ಚರ್ಮರೋಗದ

ದೇಹದ ಕೊಬ್ಬು ಕರಗಿಸಲು ಇಲ್ಲಿದೆ ಟಿಪ್ಸ್….

  ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸಲು ಜೀರಿಗೆ-ಶುಂಠಿ ಜ್ಯೂಸ್ ಸೇವಿಸಿರಿ. ಈ ಜ್ಯೂಸ್ ರಾಮ ಬಾಣ. ತಯಾರಿಸಲು ಹೀಗೆ ಮಾಡಿ ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿ. ಇದಕ್ಕೆ ಜಜ್ಜಿದ ಶುಂಠಿ & ಅರ್ಧ ಚಮಚ ಜೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕುದಿಸಿ ಮತ್ತು ಮುಚ್ಚಳ ಮುಚ್ಚಿಡಿ. 2 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ನೀರನ್ನು ಸೋಸಿಕೊಂಡು ಬಳಿಕ ಜೇನುತುಪ್ಪ, ಲಿಂಬೆರಸ ಮತ್ತು ಕಪ್ಪು ಉಪ್ಪು ಸೇರಿಸಿ ಕುಡಿಯಿರಿ. ಸ್ವಲ್ಪ ಬಿಸಿಯಾಗಿರುವಾಗಲೇ ಕುಡಿದರೆ ಅದರಿಂದ ದೇಹದ ಕೊಬ್ಬು ಕರಗಿಸ ಬಹುದು.

ನಮ್ಮಲ್ಲಿರುವ ಔಷಧಿ ಸಸ್ಯಗಳು: ಅರೋಗ್ಯಕ್ಕೆ ಎಷ್ಟು ಉಪಯುಕ್ತ ಅಂದ್ರೆ.?( ಭಾಗ-2)

ಆಯುರ್ವೇದದಲ್ಲಿ ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾದ ಔಷಧಿ ಸಸ್ಯಗಳನ್ನು ಪತ್ತೆಮಾಡಲಾಗಿದೆ. ಈ ಸಸ್ಯಗಳಿಂದ ಸರ್ವ ರೋಗಗಳಿಗೂ ಔಷಧಿ ಪಡೆಯಬಹುದು. ಚರಕ ಸಂಹಿತೆ ಹಾಗೂ ಸುಶ್ರುತ ಸಂಹಿತೆಯಲ್ಲೂ ಕೂಡ ಔಷಧಿ ಸಸ್ಯಗಳ ಪ್ರಾಮುಖ್ಯತೆ ಹಾಗೂ ಚಿಕಿತ್ಸಾ ಪದ್ಧತಿಯನ್ನು ವಿವರಿಸಲಾಗಿದೆ. ಪ್ರಮುಖ ಔಷಧೀಯ ಸಸ್ಯಗಳ ಪ್ರಾಮುಖ್ಯತೆ: ವಾಸಾ (ಆಡುಸೋಗೆ) : ಹೆಚ್ಚು ಅಸ್ತಮಾದಿಂದ ಬಳಲುತ್ತಿರುವವರು ಇದರ ಕಷಾಯ ಸೇವಿಸುವುದರಿಂದ ಆಸ್ತಮಾದ ತೀವ್ರತೆ ಕಡಿಮೆಯಾಗುತ್ತದೆ. ಅಲ್ಲದೆ ಕಷಾಯದೊಂದಿಗೆ ಜೇನುತುಪ್ಪ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ಹೀರಕ (ಹಪ್ಪು) : ಜ್ವರದ ತಾಪ ಹೆಚ್ಚಾಗಿದ್ದಾಗ ಇದರ ಕಷಾಯ ಸೇವಿಸುವುದರ ಮೂಲಕ ತಾಪ ಕಡಿಮೆ ಮಾಡಬಹುದು. ಅಲ್ಲದೇ ಖಿನ್ನತೆ ಹಾಗೂ ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಪಲಾಶ (ಮುತ್ತುಗ) :

ನಮ್ಮಲ್ಲಿರುವ ಔಷಧಿ ಸಸ್ಯಗಳು: ಅರೋಗ್ಯಕ್ಕೆ ಎಷ್ಟು ಉಪಯುಕ್ತ ಅಂದ್ರೆ.?

  ಆಯುರ್ವೇದದಲ್ಲಿ ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾದ ಔಷಧಿ ಸಸ್ಯಗಳನ್ನು ಪತ್ತೆಮಾಡಲಾಗಿದೆ. ಈ ಸಸ್ಯಗಳಿಂದ ಸರ್ವ ರೋಗಗಳಿಗೂ ಔಷಧಿ ಪಡೆಯಬಹುದು. ಚರಕ ಸಂಹಿತೆ ಹಾಗೂ ಸುಶ್ರುತ ಸಂಹಿತೆಯಲ್ಲೂ ಕೂಡ ಔಷಧಿ ಸಸ್ಯಗಳ ಪ್ರಾಮುಖ್ಯತೆ ಹಾಗೂ ಚಿಕಿತ್ಸಾ ಪದ್ಧತಿಯನ್ನು ವಿವರಿಸಲಾಗಿದೆ. ಪ್ರಮುಖ ಔಷಧೀಯ ಸಸ್ಯಗಳ ಪ್ರಾಮುಖ್ಯತೆ: ಪುನ್ನಾಗ (ಸುರಹೊನ್ನೆ)  : ಈ ಸಸ್ಯದಿಂದ ತಯಾರಿಸಿದ ಕಷಾಯ ಸೇವನೆ ಮೂತ್ರ ಸರಾಗವಾಗಿ ಹೋಗಲು ಸಹಕಾರಿಯಾಗುತ್ತದೆ.  ಹೆಚ್ಚು ರಕ್ತಸ್ರಾವದ ಸಂದರ್ಭದಲ್ಲಿ ಈ ಸಸ್ಯದ ಹೂವಿನ ರಸವನ್ನು ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು. ಹೂವಿನ ಕೇಸರವನ್ನು ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಲಕೋಚ (ಜೀಗುಜ್ಜಿ) : ಈ ಸಸ್ಯ ಕಾಂಡದ ರಸವನ್ನು ಸುಟ್ಟಗಾಯ ಬೊಬ್ಬೆಗಳಿಗೆ