ಸಂಪಾದಕೀಯ

ನಿಲ್ಲಿ ಮೋಡಗಳೆ. ನಾಲ್ಕು ಹನಿಯ ಚೆಲ್ಲಿ.!

ಈ ಮಾತು ಕಳೆದ ಹತ್ತು ವರ್ಷಗಳಿಂದ ಇದೇ ಹಾಡು ಮತ್ತು ಪಾಡು. ಹಾಗೇನೆ ನಮ್ಮ ಜನಪದರು ಹೇಳುವ ಹಾಡು ನೆನಪಾಗುತ್ತದೆ. ಯಾತಕ್ಕೆ ಮಳೆ ಹೋದವೋ ಶಿವ..ಶಿವ ಲೋಕ ತಲ್ಲಣಿಸುತ್ತಾವೋ… ದುರ್ಗ ಅಂದರೆ ಕೋಟೆ ಕೊತ್ತಲುಗಳನಾಡು. ಬರಡು ಭೂಮಿ. ಕಡಯುವುದಕ್ಕೆ ಶುದ್ಧ ನೀರು ಇಲ್ಲದ ಸ್ಥಿತಿ. ಜನ-ಜಾನುವಾರುಗಳು ಊಟ ಮೇವಿಗಾಗಿ ಗುಳೆ ಹೋರಡುತ್ತಾರೆ. ಆದರೆ ನಮ್ಮನ್ನ ಆಳುವ ಜನ ಪತ್ರಿನಿಧಿಗಳು ದಿನಕ್ಕೊಂದು ಆಶ್ವಾಸನೆ ನೀಡುತ್ತಾರೆ. ಆದ್ರೆ. ಅವರ ಜೇಬು ತುಂಬಿಸಿ ಕೊಳ್ಳಲ್ಲು ಲೆಕ್ಕಾ ಹಾಕುತ್ತಾರೆ. ಏಕೆಂದರೆ ಮುಂದಿನ ಚುನಾವಣೆಗೆ ಕಾಸು ಹೊಂದಿಸ ಬೇಕಲ್ಲಾ. ನಾನು ಹೇಳುವುದೇನು ಹೊಸ ಮಾತೇನಲ್ಲಾ. ನಾನು ಪತ್ರಿಕೆ ಪ್ರಾರಂಭಮಾಡಿದಾಗಿನಿಂದಲೂ. ಅಂದರೆ ಲೆಟರ್ ಪ್ರೆಸ್ ನಿಂದ ನೋಡಿದ್ದೇನೆ.

ದೇಶ ಅಂದರೆ ಮಣ್ಣಲ್ಲ. ಮನುಷ್ಯರು..

ಈ ಮಾತು ನಾನು ಹೋರಾಟದ ಹಾದಿಯಲ್ಲಿದ್ದಾಗ ಕೇಳಿದ ಮಾತು. ಅದು ಇಂದಿಗೂ ಎಂದೆಂದಿಗೂ ಅಕ್ಷರಃ ಸತ್ಯ. ಈ ಮಾತು ಹೇಳುವುದಕ್ಕೆ ನಾನು ಈಗ ಮೌನಿ ಆಗಿದ್ದೇನೆ. ನೀವು ಯಾವುದೇ ಸಿದ್ದಾಂತಗಳನ್ನು ಮೈ ಮೇಲೆ ಎಳದುಕೊಳ್ಳಿ. ಅದು ಹಿಂದು ಅಥವಾ ಕಮ್ಯೂನಿಷ್ಟ್ ಇಲ್ಲ ಅಂದರೆ ಸೂಪಿ, ಅದು ಬಿಟ್ಟರೆ ಜಿಹಾದ್. ಹೀಗೆ ನಾನಾ ರೀತಿಯಲ್ಲಿ ಕರೆದುಕೊಳ್ಳುವ ಸಿದ್ದಾಂತಗಳನ್ನು ಮೈದುಂಬಿಕೊಂಡು ಹೋಗುವ ಮಂದಿಗೆ ನನ್ನದೊಂದು ಮಾತು. ಏಕೆಂದರೆ ಕಳೆದ ೩೫ ವರ್ಷಗಳಿಂದ ಹಲಾವರು ಹೋರಾಟಗಳನ್ನು ಕಂಡು ಮತ್ತು ಭಾಗವಹಿಸಿದ ನನಗೆ ಇಂದು ದೇಶ ಅಂದರೆ ಏನು ಎಂಬುದರ ಬಗ್ಗೆ  ಇನ್ನೂ ಚರ್ಚೆಗೆ ಬಿಟ್ಟ ವಿಷಯವಾದರು, ಆದರೆ ನನಗೆ ಗೊತ್ತಿರುವದ್ದು ಏನಪ್ಪ ಅಂದರೆ

ಭಂಡ ಸರಕಾರಕ್ಕೆ ಏನೆನ್ನ ಬೇಕು.!

ಈ ಸರಕಾರ ಜನರಿಂದ ಆಯ್ಕೆ ಆದ ಸರಕಾರವೋ, ಮತದಾರರಿಗೆ ಆಮಿಷನೀಡಿ ಅಧಿಕಾರಕ್ಕೆ ಬಂದವರು ಏನು ಒಟ್ಟಿನಲ್ಲಿ ಮಳೆಗಾಲದ ಅಧಿವೇಶನ ಚರ್ಚೆ ಹಾಗೂ ಗೊಂದಲ. ಸಾವು ಯಾರಿಗಾದರೂ ಅದು ಸಾವೇ. ಯಾರಾದರೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೆ.? ಸಾವಿನ ಮನೆಯಲ್ಲಿ ಕುಳಿತು ಪಾಲಿಗಾಗಿ ಕಾದು ಕುಳಿತಿದ್ದಾರೆ ಅಂತ ನಾಡಿನ ಜನತೆಗೆ ಅನಿಸಿದರೆ ಅದು ಸರಿಯೂ ಇರಬಹುದು. ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ನಾನು ಕಳೆದ ೩೦ ವರ್ಷಗಳ ಹಿಂದೆ ಪತ್ರಿಕೆ ಪ್ರಾರಂಭಮಾಡಿದವನು. ನನಗೆ ಲಂಕೇಶ್ ಪ್ರತಿಕೆ ಪ್ರಭಾವಕ್ಕೆ ಒಳಗಾದವನು. ಅವರಂತೆ ಪತ್ರಿಕೆ ತರಲು ಜಿಲ್ಲಾ ಮಟ್ಟದ ಪತ್ರಿಕೆ ಪ್ರಾರಂಭಿಸಿದವನು. ಕೈ ಸುಟ್ಟುಕೊಂಡವನು. ಅದೆಲ್ಲಾ ಬಿಡಿ. ಇವತ್ತು ರಾಜ್ಯದ ಜನತೆ ಸಿದ್ದರಾಮಯ್ಯರ ನೇತೃತ್ವದ

ಸೋ ಕಾಲ್ಡ್ ಪ್ರಗತಿಪರರು ಇಟ್ಟ ಗುರಿ ದಿಟ್ಟ ಹೆಜ್ಜೆ ಪುಸ್ತಕದ ಬಗ್ಗೆ ಏನು ಹೇಳುತ್ತಾರೆ.

ನೆಚ್ಚಿದ ಎಮ್ಮೆ ಕೋಣ……. ಎಂಬ ಗಾದೆ ಯಾರಿಗೆ  ಅನ್ವಯಿಸುತ್ತದೆ.? ಅಹಿಂದ ನಾಯಕ, ಪ್ರಗತಿಪರ ಚಿಂತಕ ಹೀಗೆ ಹಲವು ಹತ್ತು ಬಿರುದುಗಳನ್ನು ಕೊಟ್ಟಿದ್ದು ಬೇರ್‍ಯಾರು ಅಲ್ಲ ನಮ್ಮ ಸೋ ಕಾಲ್ಡ್ ಬುದ್ಧಿ ಜೀವಿಗಳು. ಬಹುಶಃ ಬೇರೆ ಯಾವ ಮುಖ್ಯ ಮಂತ್ರಿಗಳ ಸುತ್ತಲೂ ಬುದ್ಧಿ ಜೀವಿಗಳು ಅಂತ ಕರೆಸಿಕೊಂಡವರು ಗಿರಿಕಿ ಹೊಡೆಯುತ್ತಿರಲಿಲ್ಲ. ಕಾಂಗ್ರೆಸ್ ಸರಕಾರದ ವಿರುದ್ಧ ತಮ್ಮ ಭಯಂಕರ ಟೀಕೆಗಳ ಸುರಿಮಳೆ ಹಾಕುತ್ತಿದ್ದವರು, ಕಾವ್ಯ, ಕಥೆಗಳನ್ನು ರಚಿಸಿದವರೇ ಇಂದು ಮಹಾನ್ ಪ್ರಗತಿಪರರು ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಹೊಗಳುವುದರಲ್ಲಿ ನಾ ಮುಂದು ತಾ. ಮುಂದು ಕ್ಯೂ ನಿಂತಿದ್ದಾರೆ. ಇನ್ನೂ ಕೆಲ ಪ್ರಗತಿಪರರು ನಾವು ಸರಕಾರದ ವಕ್ತಾರರಲ್ಲ. ನಮ್ಮ ವ್ಯಕ್ತಿತ್ವವನ್ನು ಗುರುತಿಸಿ ನಮಗೆ ಕೆಲವೊಂದು

ಪರಿಸರ ದಿನಾಚರಣೆ: ಏನು ಮಾಡಬಹುದು

ಪ್ರತಿಯೊಂದು ವಿಷಯಕ್ಕೂ ನಾವು ದಿನಾಚರಣೆಯನ್ನು ಆಚರಸುತ್ತಿದ್ದೇವೆ. ಅದರಂತೆ ಇಂದು ವಿಶ್ವ ಪರಿಸರ ದಿನಾಚರಣೆ. ದಿನಾಚರಣೆ ಅಂದರೆ ಕೇಳಬೇಕೆ ಅದಕ್ಕೊಂದು ಕಾರ್ಯಕ್ರಮ. ಅದಕ್ಕೊಬ್ಬ ಭಾಷಣಕಾರ ಉದ್ದ ಅಗಲ ಆಕಾಶದಷ್ಟು ಎತ್ತರದ ಡೈಲಾಗ್. ಚಪ್ಪಾಳೆ. ಅಲ್ಲೆ ತೆಗೆದ ಗುಂಡಿ ಅದಕ್ಕೊಂದು ಗಿಡ ನೆಟ್ಟು ಉದ್ಘಾಟನೆ ಹೀಗೆ ಹಲವಾರು ದಿನಾಚರಣೆಗಳನ್ನು ನಡೆಸುವುದು ಫ್ಯಾಷನ್ ಆಗಿದೆ. ಹಾಗಾದರೆ ಇಂತಹ ದಿನಾಚರಣೆಗಳನ್ನು ನಡೆಸ ಬಾರದೆಂದೆಲ್ಲಾ ನನ್ನ ಅಭಿಪ್ರಾಯ. ಈ ಹಿಂದೆ ಚಿತ್ರದುರ್ಗದ ಬರಗಾಲದ ಜಿಲ್ಲೆಯಲ್ಲಿ ಒಬ್ಬ ಅರಣ್ಯವನ್ನು ರಕ್ಷಕನೊಬ್ಬ ಗಾರ್ಡ್ ಇದ್ದ ಅತನ ಹೆಸರು ನೆನಪಾಗುತ್ತಿಲ್ಲ. ಆತ ಮೊಳಕಾಲ್ಮೂರು ತಾಲ್ಲೂಕಿನ ಬಾಂಡ್ರಿವಿ ಕಾಡನ್ನು ಉಳಸಿ ಬೆಳಸಲು ತನ್ನ ಶ್ರಮವನ್ನು ಹಾಕಿದ. ಆತನಿಗೆ ಒಂದೇ ಕೆಲಸ ನಾನು

ಬಸವ ಜಯಂತಿ ಶುಭಾಶಯಗಳು

ಮತ್ತೊಮ್ಮೆ ಬಸವಣ್ಣ ಹುಟ್ಟಿ ಬಾ ಸ್ವಾಮೀಗಳ ಕೈ ಯಿಂದ ವಚನಗಳನ್ನು ಬಿಡಿಸಿ ಸಾಮಾನ್ಯ ಜನರಿಗೆ ಹಂಚು ಬಿಡು. ಕೆಲ ಮಠಗಳ ಸ್ವಾಮೀಜಿಗಳು ಬಸವಣ್ಣರನ್ನು ಗುತ್ತಿಗೆ ಹಿಡಿದಿವರಂತೆ ವರ್ತಿಸುತ್ತಾರೆ.  ಬಾಯಿ ಬಿಟ್ಟರೆ, ಸಾಕು ಬಾಯಿ ತುಂಬ ವಚನಗಳ ಸಾಲು ಸಾಲು ಹೇಳುತ್ತಾರೆ. ಆದರೆ ಅವರ ನುಡಿಗೂ ನಡೆಗೂ ಒಂದೊಕ್ಕೊಂದು ತಾಳೆ ಆಗುವುದಿಲ್ಲ. ಬಸವಣ್ಣ ರ ವಿಚಾರಧಾರೆಗಳು ಇಂದಿನ ಸಮಾಜದಲ್ಲಿ ಪ್ರಸ್ತುತ ಆದರೂ ಆಚರಣೆಯಲ್ಲಿ ಬಸವಣ್ಣರ ಅನುಯಾಗಿಳು ಮುಂದಾಗುತಿಲ್ಲ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ . ಆದರೆ ನಿನ್ನ ಸ್ಥಾವರ ಮಾಡಲು ಹೊರಟ್ಟಿದ್ದಾರೆ ಬಸವಣ್ಣ. ಬಹುತೇಕ ಸ್ವಾಮಿಗಳು. ಆದರೆ ಇಂದಿಗೂ ನಿಜ ಬಸವಣ್ಣರ ಅನುಯಾಯಿಗಳು ಬಸವಣ್ಣರ ಆಚರಣೆಯನ್ನು ಅನುಸರಿಸುತ್ತಿದ್ದಾರೆ ಅವರನ್ನು ನೋಡಿ

ಇಂದು ವಿಶ್ವ ತಾಯ್ನುಡಿ ದಿನ(ಮಾತೃಭಾಷೆದ ದಿನ) ಆಚರಣೆ

೧೯೯೯ ರಲ್ಲಿ ಯುನೆಸ್ಕೋ ಫೆಬ್ರುವರಿ ೨೧ ರ ದಿನವನ್ನು ವಿಶ್ವ ತಾಯ್ನುಡಿ ದಿನವೆಂದು ಘೋಷಣೆಮಾಡಿರುವ ಹಿನ್ನೆಲೆಯಲ್ಲಿ, ವಿಶ್ವದಲ್ಲಿರುವ ಎಲ್ಲಾ ಭಾಷೆಗಳಿಗೂ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಹೇಗೆ ಆಚರಿಸುತ್ತೇವೆ ಎಂಬ ಕುತುಹಲ. ಒಂದಲ್ಲ ಒಂದು ದಿನಾಚರಣೆಯನ್ನು ಅದು ಪ್ರೇಮಿಗಳ ದಿನಾಚರಣೆ. ಅಮ್ಮನ ದಿನಚರಣೆ ಹೀಗೆ ಹಲವು ಹತ್ತು ದಿನಾಚರಣೆಗಳನ್ನು ಆಚರಿಸುತ್ತೇವೆ. ಆದರೆ ಈ ದಿನಾಚರಣೆ ಅದೆಲ್ಲದಕ್ಕಿಂತಲೂ ವಿಭಿನ್ನ. ಭಾಷೆ ಒಂದು ಸಂಪರ್ಕಸಾಧನ ಎಂದು ಹೇಳುವವರು ಇದ್ದಾರೆ. ಆದರೆ ಭಾಷೆ ಅಂದರೆ ಅದು ಬದುಕಿನ ಅವಿಭಾಜ್ಯ ಅಂಗ ಎಂಬುದನ್ನು ನಾವು ಮರೆತು ಬಿಟ್ಟಿದ್ದೇವೆ. ಭಾಷೆ ಅಂದರೆ ಅಕ್ಷರಗಳಲ್ಲ. ಆಕಾರಗಳಲ್ಲ. ಉಸಿರು. ಪ್ರಪಂಚದ ಯಾವುದೇ ಮೂಲೆಯ ಭಾಷೆ ಅದಾಗಿರಲಿ ಆ ಭಾಷೆಯನ್ನು ಗೌರವಿಸಬೇಕು

ನಿಮ್ಮ ಬರವಣಿಗೆಗೆ ಒಂದು ವೇದಿಕೆ

ಆತ್ಮೀಯರೇ, ನಿಮ್ಮೆಲ್ಲರ ಸಹಕಾರದಿಂದ ಬಿಸಿ ಸುದ್ದಿಗೆ ನ್ಯೂ ಲುಕ್ಕಿನಿಂದ ಮತ್ತಷ್ಟೊ ಮೆರಗು ಬಂದಿದೆ. ಸಂಪಾದಕೀಯ, ಸಾಹಿತ್ಯ, ಕ್ಯಾಂಪಸ್ ಎಂಬ ಕಾಲಂ ಸೇರ್‍ಪಡೆ ಆಗಿದೆ. ಸಾಹಿತ್ಯದಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ. ನೀವೂ ಕವನ ಬರೆಯಬಹುದು. ಪುಸ್ತಕ ವಿಮರ್ಶೆ, ನೀವು ಬರೆದ ಹೊಸ ಪುಸ್ತಗಳ ಪರಿಚಯ, ಸಾಹಿತ್ಯಕ್ಕೆ ಸಂಬಧಿಸಿದ ವಿಚಾರಗಳ ಗುಚ್ಚ. ಕ್ಯಾಂಪಸ್ ನೀವು ಕಾಲೇಜು ವಿದ್ಯಾರ್ಥಿಗಳು ಅಲ್ಲವೆ. ನಿಮ್ಮ ಮನಸ್ಸಿನಲ್ಲಿ ಹಲವಾರು ಬಾವನೆಗಳು ಸುಳಿಯುತ್ತವೆ. ಅವುಗಳಿಗೆ ರೂಪ ಕೊಡುವ ಉದ್ದೇಶದಿಂದ ಕ್ಯಾಂಪಸ್ ಕಾಲಂ. ತಡ ಇನ್ನೇಕೆ ಬರೆಯುವ ಸಾಹಸಕ್ಕೆ ಕೈ ಹಾಕಿ. ನಾವು ನಿಮ್ಮ ಜೊತೆಗಿರುತ್ತೇವೆ. ನೀವು ರೂಪಕೊಡುವ ಬರಹದ ಜೊತೆಗೆ ನಿಮ್ಮ ಚಿತ್ರಕಳುಹಿಸಿ. ನಿಮ್ಮ ನಂಬರ್ ಹಾಕಿ. ನಿಮ್ಮ