ಸಂಪಾದಕೀಯ

ಬಿಸಿ ಸುದ್ದಿ ಇನ್ನುಮುಂದೆ ಯೂಟ್ಯೂಬ್ ನಲ್ಲಿ ಆನ್ ಲೈನ್ ನ್ಯೂಸ್ ಚಾನಲ್.!

ಆತ್ಮೀಯರೇ, ಬಿಸಿ ಸುದ್ದಿ ಆನ್ ಲೈನ್ ನ್ಯೂಸ್ ಪ್ರೋಟಾಲ್ ಜೂನ್ 1 ಕ್ಕೆ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಬಿಸಿ ಸುದ್ದಿ ಮೊದಲು ಪ್ರಾರಂಭಮಾಡಿದಾಗ ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬ ಅಳಕು ಕಾಡುತ್ತಿತ್ತು. ಆದರೆ ನಮ್ಮೇಲ್ಲ ನಿರೀಕ್ಷೆಗಳನ್ನು ದಾಟಿ ಬಿಸಿ ಸುದ್ದಿಯನ್ನು ಅಪ್ಪಿಕೊಂಡರು. ತಮ್ಮದೇ ಪತ್ರಿಕೆ ಎಂಬಂತೆ ಪ್ರೋತ್ಸಾಹಿಸಿದರು. ಓದುಗರು ನೀಡಿದ ಉತ್ಸಾಹದಿಂದ ಇನ್ನೂ ಏನಾದರು ಹೊಸತು ನೀಡ ಬೇಕೆಂಬ ತುಡಿತ ಹೆಚ್ಚಾಯಿತು. ಅದರ ಅಂಗವಾಗಿ ಜೂನ್ ೧ ರಿಂದ ಬಿಸಿ ಸುದ್ದಿ ಯೂಟ್ಯೂಬ್ ನಲ್ಲಿ ಆನ್ ಲೈನ್ ನ್ಯೂಸ್ ಚಾನಲ್ ಆಗಿ ಹೊರ ಬರಲಿದೆ. ಚಾನಲ್ ನಲ್ಲಿ ಏನೆಲ್ಲಾ ಇರುತ್ತೆ ಅಂದ್ರೆ ಸುದ್ದಿ ವಿಶ್ಲೇಷಣೆ, ಸಾಹಿತ್ಯ,

ಬಸವ ಜಯಂತಿ: ಮತ್ತೆ ಹುಟ್ಟ ಬೇಡ.! ಏಕೆಂದರೆ ನಿನ್ನ ಹೆಸರು ಮಾರಾಟಾದ ಸರಕು.!

  ಇದು ಬಹಳ ದುಖ‍ಃದ ಸಂಗತಿ. ಸ್ಥಾವರಕ್ಕೆ ಅಳಿ ಉಂಟು- ಜಂಗಮಕ್ಕೆ ಅಳಿವಿಲ್ಲ ಅಂತ ಹೇಳಿದವ ನೀನು. ಆದರೆ ಇಂದು ಬಹುತೇಕ ವಿರಕ್ತ ಮಠಗಳು ನಿನ್ನ ಹೆಸರು , ನೀನು ಹೇಳಿದ ವಚನಗಳನ್ನು ಮಾರಟಕ್ಕೆ ಇಟ್ಟಿದ್ದಾರೆ.! ನಿನ್ನನ್ನು ಸ್ಥಾವರಮಾಡಲೊರಟ್ಟಿದ್ದಾರೆ. ಅಂದು ವಿರಕ್ತ ಮಠಗಳು ಜೋಳಿಗೆ ಹಿಡಿದು ಕಂತೆ ಮಾಡಿ ಎಲ್ಲಾ ಜಾತಿಯ ಮಕ್ಕಳಿಗೆ ವಿದ್ಯಾ ದಾನ ಮಾಡಿದ್ದವು. ಇಂದು ಮಠಗಳು ವ್ಯಾಪಾರಿಕಣಗೊಂಡು ಹಣ ಮಾಡಲು ಮುಂದಾಗಿದ್ದಾವೆ. ಇನ್ನೂ ಕೆಲ ಪ್ರಗತಿಪರರು ಅಂತ ಕರೆಸಿಕೊಳ್ಳುವವರು ನೀನು ಯಾವ ಜಾತಿ ಅಂತ ಕೂದಲು ಸೀಳುವ ಕಾಯಕದಲ್ಲಿ ನಿರತರಾಗಿದ್ದಾರೆ. ಏಳಪ್ಪ ಬಸವಣ್ಣ ಕತ್ತಲು ಆವರಿಸಿದ ರಾಜ್ಯದಲ್ಲಿ ಹೊಸ ಬೆಳಕು ನೀಡಿದವ. ಎಲ್ಲಾ ಕುಲ 

ಯುಗಾದಿ ಹಬ್ಬದ ಶುಭಾಶಯಗಳು

ಹೊಸ ವರ್ಷ ಆಗಮನ. ಬೇವು ಕಹಿ- ಸಿಹಿ ಬೆಲ್ಲ. ಈ ಎರಡರ ಸಮ್ಮಿಲನದಲ್ಲಿ ಎಲ್ಲರ ಬದಕು ಹಸನಾಗಲಿ. ಹೊಸ ವರ್ಷದಲ್ಲಿ ಮುಂಗಾರು ಮಳೆ ಬಂದು ಜನ ಜಾನುವಾರುಗಳಿಗೆ ಸಂತೃಪ್ತಿ ಸಿಗಲಿ ಎಂಬ ಸಾದಾಶಯದೊಂದಿಗೆ,  ನಮ್ಮೇಲ್ಲಾ ಓದುಗರಿಗೆ, ಜಾಹೀರಾತುದಾರರಿಗೆ ಯುಗಾದಿ ಹಬ್ಬದ ಶುಭಾಶಯಗಳು. -ಸಂ

ಶ್ರೀಗಳಿಗೊಬ್ಬರಿಗೆ ಜೀವ ಬೆದರಿಕೆ: ಮತ್ತೊಬ್ಬ ಶ್ರೀಗಳು ನೀರಿಗಾಗಿ ತಪನ.!

ಚಿತ್ರುರ್ಗ: ಈ ಸುದ್ದಿ ಯಾರನ್ನು ಮೆಚ್ಚಿಸಲಿಕ್ಕೆ ಆಗಲಿ ಮತ್ತೊಬ್ಬರನ್ನು ತೆಗಳುವುದಕ್ಕಾಗಲಿ ಅಲ್ಲ. ಏಕೆಂದರೆ ಚಿತ್ರದುರ್ಗ ಜಿಲ್ಲೆ ಹಲವಾರು ಕಾರಣಕ್ಕೆ ರಾಜ್ಯದಲ್ಲಿ ಹೆಸರು ಮಾಡಿದೆ. ಅದೊಂದು ಸದಾ ಬರಗಾಲದ ಜಿಲ್ಲೆ. ಹುಲ್ಲುಗಾವಲು ಪ್ರದೇಶ. ಬುಡಕಟ್ಟು ಸಮಾಜ. ಹೀಗೆ ಅಂತ ಹೆಸರುಮಾಡಿದ ಈ ಜಿಲ್ಲೆ. ಹಲವು ತಳ ಸಮುದಾಯಗಳ ಸ್ವಾಮೀಜಿಗಳನ್ನು ಕೊಟ್ಟ ಜಿಲ್ಲೆ ಅಂತ ಕರೆದರೂ ತಪ್ಪಲ್ಲಾ. ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರು ಪ್ರಗತಿ ಪರ ಸ್ವಾಮೀಜಿಗಳೆಂದೇ  ರಾಜ್ಯದಲ್ಲಿ  ಹೆಸರು ಮಾಡಿದ್ದಾರೆ. ತಳ ಸಮುದಾಯದವರಿಗೆ ಸ್ವಾಮೀಜಿಗಳನ್ನು ಕೊಟ್ಟವರಲ್ಲಿ ಮೊದಲಿಗರು. ಇಂತಹ ಸ್ವಾಮೀಜಿಗೆ ಬೆದರಿಕೆ ಕರೆ ಬರುತ್ತದೆ ಅಂದ್ರೆ ಏನರ್ಥ. ಈ ಹಿಂದೆ ಮುರುಘಾ ಮಠದಿಂದ ನೀಡುವ ಬಸವಶ್ರೀ ಪ್ರಶಸ್ತಿಯನ್ನು ಕ್ರಾಂತಿ

ಈ ರಾಜಕಾರಣಿಗಳಿಗೆ ಜನರ ದುಡ್ಡು ಎಲ್ಲಮ್ಮನ ಜಾತ್ರೆ. ಉಧೋ… ಉಧೋ

ಇದು ಬಹಳ ನೋವಿನ ಸಂಗತಿ. ಏಕೆಂದರೆ ಚುನಾಯಿತ ಪ್ರತಿನಿಧಿಗಳು ಚೆರಂಡಿ ಕ್ಲೀನಿಮಾಡಿದರೂ, ರಸ್ತೆಗೆ ಡಾಂಬರ್ ಹಾಕಿದರೂ, ಕುಡಿಯುವ ನೀರಿನ ನಲ್ಲಿ ತಿರುವಿದರೂ ಸಹ ಮಾಧ್ಯಮದವರಿಗೊಂದು ಫೋಸ್ ನೀಡಿ ಪತ್ರಿಕೆಗಳಲ್ಲಿ ಬರುವಂತೆ ನೋಡಿಕೊಳ್ಳುವುದು ಕರತಲಾಮಲಕ ಮಾಡಿಕೊಂಡಿದ್ದಾರೆ. ಇವರು ನಲ್ಲಿ ತಿರುವಿ ನಂತರ ನಲ್ಲಿಗಳಲ್ಲಿ ನೀರು ಬರುವುದಕ್ಕಿಂತ ಗಾಳಿ ಬರುತ್ತದೆ. ರಸ್ತೆಗೆ ಡಾಂಬಾರ್ ಹಾಕಿದ ಕೆಲ ತಿಂಗಳಲ್ಲಿ ರಸ್ತೆಗಳು ಆಳು ಮಟ್ಟದ ಗುಂಡಿಗಳಾಗುತ್ತವೆ. ಇನ್ನೂ ಚೆರಂಡಿಗಳ ಬಗ್ಗೆ ಮಾತನಾಡುವುದು ನಿಮಗೂ ಗೊತ್ತು. ನಿಮ್ಮ ಹಳ್ಳಿಗಳಲ್ಲಿ ಮಾಡಿದ ರಸ್ತೆಗಳು ಚೆರಂಡಿಗಳು ಇಂದು ಯಾವಮಟ್ಟಿಗೆ ಬಂದು ತಲುಪಿದ್ದಾವೆ ಅಂತ. ಅದರ ಜೊತೆಗೆ ತಮ್ಮ ಮನೆಯಿಂದ ತಂದ ದುಡ್ಡು ಎಂಬಂತೆ ಇದು ಇವರ ಅನುಧಾನದ ಹಣ

ಕ ನ್ನಡ ಸಿನಿಮಾ: ಅನ್ಯ ಭಾಷೆ ಚಿತ್ರ ಡಬ್ಬಿಂಗ್ ಚಿತ್ರನ್ನಾ : ಸ್ವ ಮೇಕ್..!

ಯಾವುದೇ ಮಗುವಿಗೆ ಇಂತಹದ್ದೇ ಊಟ ಮಾಡು ಅಥವ ಇದನ್ನು ತಿನ್ನು ಅಂತ ಹೇಳಿದ್ರೆ ಮೂತಿ ತಿರುವಿಸಿಕೊಳ್ಳುತ್ತೆ. ಆ ಮಗು.?  ಚನ್ನಾಗಿದ್ರೆ ಚಂದವಾಗಿ ಊಟ ಮಾಡುತ್ತೆ ಅಲ್ವ.? ನಾನು ಹೇಳಲೊರಟಿರುವುದು ಅನ್ಯ ಭಾಷೆಯ ಸಿನಿಮಾಗಳ ಡಬ್ಬಿಂಗ್. ಪರ ವಿರೋಧ. ಡಬ್ಬಿಂಗ್ ಬಂದ್ರೆ ಕನ್ನಡದ ನಟ. ನಟಿಯರಿಗೆ, ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೆಲಸ ಇಲ್ಲದಂತ್ತಾಗುತ್ತದೆ. ನಮ್ಮ ಸಂಸ್ಕೃತಿ, ಭಾಷೆ ನಾಶವಾಗುತ್ತದೆ ಹಾಗಾಗಿ ಡಬ್ಬಿಂಗ್ ಸಿನಿಮಾ ಬೇಡ ಅಂತ ಕೆಲವರ ವಾದ. ಈ ಗಾಗಲೇ ಬೇರೆ ಬೇರೆ ಭಾಷೆಗಳ ಚಿತ್ರಗಳು ಡಬ್ಬಿಂಗ್ ಆಗಿ ಹೊರ ರಾಜ್ಯಗಳಲ್ಲಿ ರಿಲೀಸ್ ಆಗಿವೆ . ಅದರಿಂದ ಹಣವನ್ನು ಗಳಿಸಿದ್ದಾರೆ. ನನಗೆ ಕನ್ನಡ ಬಿಟ್ಟರೆ ಯಾವುದೇ ಭಾಷೆ ಅರ್ಥವಾಗುತ್ತಿಲ್ಲದ

ಭ್ರಷ್ಟ ನೀನು- ಇಲ್ಲ ನೀನು- ಅಧಿಕಾರಕ್ಕೆ ಬಂದ್ರೆ ಜೈಲಿಗೆ

ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ. ಒಬ್ಬರು ಮಾಜಿ ಮುಖ್ಯ ಮಂತ್ರಿ. ಇನ್ನೊಬ್ಬರು ಹಾಲಿ ಮುಖ್ಯ ಮಂತ್ರಿ. ಒಬ್ಬರಿಗೊಬ್ಬರು ಕೆಸರಾಟಕ್ಕೆ ಮುಂದಾಗಿದ್ದಾರೆ. ಆದ್ರೆ ಯಾರು ಅಂತ ಗೊತ್ತಾಯಿತಲ್ಲ. ರಾಜಕಾರಣಕ್ಕೂ ಬರುವುದಕ್ಕೂ ಮುನ್ನಾ ಅವರ ಆಸ್ತಿ ಎಷ್ಟಿತ್ತು . ಅಧಿಕಾರಕ್ಕೆ ಬಂದಮೇಲೆ ಎಷ್ಟು ದುಪ್ಪಟ್ಟು ಹೇಗಾಯಿತು. ಆ ಹಣ ಹೇಗೆ ಬಂತು. ಎಂಬುದು ನಾಡಿನ ಜನತೆಗೆ ಗೊತ್ತಿದ್ದರು ಸಹ ಅಂತಹ ನಾಯಕರುಗಳೇ ಆಯ್ಕೆ ಆಗುತ್ತಾರಲ್ಲ ಹೇಗೆ ಎಂಬುದು ಪ್ರಶ್ನೆ. ಅದು ನಿಮಗೆ ಬಿಟ್ಟ ಉತ್ತರ.? ಪ್ರತಿಯೊಂದು ಪಕ್ಷದವರು ಚುನಾವಣೆ ಸಮಯದಲ್ಲಿ ಕೋಟಿಗಟ್ಟಲೆ ಹಣವನ್ನು ನೀರಿನಂತೆ ಖರ್ಚುಮಾಡುತ್ತಾರೆ.  ಇವರಿಗೆ ಆ ಅಷ್ಟೊಂದು  ಹಣವನ್ನು ಕೊಟ್ಟವರು ಯಾರು.? ಎಲ್ಲಿಂದ ಬಂತು.? ಅಧಿಕಾರಕ್ಕಾಗಿ ಏನೆಲ್ಲಾ

ಅಹಿಂದ ಸಮಾವೇಶ ಎಂಬುದು ಪಕ್ಷಗಳಿಗೆ ಸಿಕ್ಕ ಪುಕಸಟ್ಟೆ ಡೈಲಾಗಾ.?

ಹೌದು .! ಈ ಹಿಂದೆ ಸಿದ್ದರಾಮಯ್ಯರು ಸಹ ಇಂತಹ ಸಮಾವೇಶವನ್ನು ಸಂಘಟಿಸಿದ್ದರು. ಆ ನಂತರ ಬಿಜೆಪಿ ಸಹ ಇಂತಹ ಸಮಾವೇಶವನ್ನು ದುರ್ಗದಲ್ಲಿ ಸಂಘಟಿಸಿತ್ತು. ಜೆಡಿಎಸ್ ಇದಕ್ಕೆ ಬಿನ್ನಹ ಇಲ್ಲವೆಂಬಂತೆ ಅಹಿಂದ ಸಮಾವೇಶವನ್ನು ಸಂಘಟಿಸುಲ್ಲಿ ಮುಂದಾಗಿತ್ತು. ಆದರೆ ಅಧಿಕಾರಕ್ಕೆ ಬರುವ ಮುನ್ನಾ ಅಲ್ಪ ಸಂಖ್ಯಾತ, ಹಿಂದುಳಿದ, ದಲಿತರ ಸಮಾವೇಶವನ್ನು ನಡೆಸುವುದು ಅದಕ್ಕೆ ಜನರನ್ನು ಕರೆತರುವುದು ಮೂಗಿಗೆ ತುಪ್ಪ ಸವರಿ ಓಟಿ ಬ್ಯಾಂಕ್ ಘಟ್ಟಿ ಮಾಡುಕೊಳ್ಳುವುದರಲ್ಲಿ ಎಲ್ಲಾ ಪಕ್ಷಗಳು ಮುಂದಾಗಿವೆ. ಇದಕ್ಕೆ ಮಾಧ್ಯಮದವರು ತಾವೇನು ಕಡಿಮೆ ಇಲ್ಲ ಅನ್ನುವಂತೆ  ಆಯಾ ಪಕ್ಷದ ಚಾನಲ್- ಪತ್ರಿಕೆಗಳು ವೈಭವಿಕರಿಸಿ ಬರೆದಿದ್ದು ಬಿತ್ತರಿಸಿದ್ದೇನು  ಕಡಿಮೆ ಏನಿಲ್ಲ. ಆದರೆ ಇಷ್ಟೆಲ್ಲಾ ಪಕ್ಷಗಳು ಅಹಿಂದ ಸಮಾವೇಶ ಸಂಘಟಿಸಿ ಆ

ಚಿತ್ರದುರ್ಗ: ಎಪಿಎಂಸಿ ಚುನಾವಣೆ- ಮಾಧ್ಯಮದವರು ಬರೆದಿದ್ದೇನು.?

ಚಿತ್ರದುರ್ಗ: ಬಹುಶಃ ಇಂದಿನ ಮಾಧ್ಯಮ ಗೆಳೆಯರು ಸತ್ಯವನ್ನು ಬರೆಯವುದಕ್ಕಿಂತಲೂ ತಮಗೆ ಬೇಕಾದವರ ಬಗ್ಗೆ ಬರೆಯುವುದು ಸಾಮಾನ್ಯವಾಗಿದೆ. ಆಯಾ ವರಿದಿಗಾರ ತನ್ನ ಮೂಗಿನ ನೇರಕ್ಕೆ ವರದಿ ಮಾಡುವುದು  ಜೊತೆಗೆ ತನಗೆ ಆತ್ಮೀಯ ಪಕ್ಷ ಅಥವಾ ವ್ಯಕ್ತಿ ಎಂಬಕಾರಣಕ್ಕೆ ವೈಭವಿಕರಿಸುವುದರಿಂದಲೇ ಪತ್ರಿಕೆಗಳ ಮೇಲೆ ಜನ ಸಾಮಾನ್ಯರಿಗೆ ನಂಬಿಕೆ ಹೊರಟು ಹೋಗುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಚಿತ್ರದುರ್ಗ ಎಪಿಎಂಸಿ ಚುನಾವಣೆ ನಡೆಯಿತು. ಅದರ ಫಲಿತಾಂಶವೂ ಬಂತು ಆಗ ವಿ.ಕ. ಭಾನುವಾರ ಪತ್ರಿಕೆಯಲ್ಲಿ  ಬರೆದಿದ್ದು ಬಿಜೆಪಿ- ಕಾಂಗ್ರೆಸ್ ಅಂತ ಆದರೆ ಮರುದಿನ ಸೋಮವಾರ  ನಂದಿ ಬ್ರಾಂಡ್ ಬರೆದಿದ್ದು ಕಾಂಗ್ರೆಸ್ – ಬಿಜೆಪಿ ಅಂತ . ಯಾವುದು ಸರಿ, ಯಾವುದು ತಪ್ಪು ಅಂತ. ಆದರೆ

ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಏನು.?

ನಮ್ಮ ಓದುಗರಿಗೂ ಹಾಗೂ ಜಾಹೀರಾತುದಾರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಆಲೋಚಿಸುತ್ತಾ,  ನಾಲ್ಕು ಒಳ್ಳೆ ಮಾತುಗಳನ್ನುಮಾತನಾಡೋಣ.! -ಸಂ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ ಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಕರ್ನಾಟಕ  ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು ಬೆಲ್ಲ“. ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳುಹಂಚುವುದು”