ಸಂಪಾದಕೀಯ
ಹಳೆಯದನ್ನು ಮರೆತು ಹೊಸ ವರ್ಷ ಬರಮಾಡಿಕೊಳ್ಳುವ. ರಾಗ, ದ್ವೇಶಗಳಿಂದ ಮುಕ್ತರಾಗಿ ಹೊಸ ಬದುಕು ರೂಪಿಸಿಕೊಳ್ಳುವ. ಕಷ್ಟಗಳು ಬಂದರೂ ಎದುರಿಸುವ ಧೈರ್ಯ ನಮ್ಮದಾಗಲಿ. ಈ ವರ್ಷ ಮಳೆ ಬಂದು ರೈತರ ಮುಖದಲ್ಲಿ ನಗವು ಅರಳುವಂತಾಗಲಿ ಎಂಬ ಸದಾಶಯದಿಂದ…… ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಹೊಸ ವರ್ಷದ ಶುಭಾಶಯಗಳು ಸಂ
ಕನ್ನಡ ವೆಂದರೆ ಬರಿ ನುಡಿಯಲ್ಲಾ ಮತ್ತಿನ ಮಳೆ ಸಾಲು… ಈ ಹಾಡುಗಳು ಕನ್ನಡ ರಾಜ್ಯೋತ್ಸವದ ದಿನದೊಂದು ಹಾಡುವುದಲ್ಲಾ ಪ್ರತಿ ದಿನ ಮನೆ ಮನಗಳಲ್ಲಿ ನಿತ್ಯ ಗುಣಗಾನವಾಗಬೇಕು. ಆಗಲೇ ಭಾಷೆಯ ಜೊತೆಗೆ ಬದಕು ಹಸನಾಗುತ್ತದೆ. ನಮ್ಮೆಲ್ಲಾ ಓದುಗರಿಗೆ ಜಾಹೀರಾತು ದಾರರಿಗೆ 63 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು -ಸಂ
ಬಳ್ಳಾರಿ: ಯಾವಾಗ ಡಿಕೆಶಿ ಮನೆ ಮೇಲೆ ಐಟಿ ದಾಳಿ ಆಯಿತು ಅಂದಿನಿಂದ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡುತ್ತಿರುವುದು ಹೊಸದೇನಲ್ಲಾ. ಆದ್ರೆ ಇಂದು ಸಂಡೂರಿನ ಕಾಡತಾತಯ್ಯ ಭವಿಷ್ಯ ಕೇಳಿ ಫುಲ್ ಖುಷಿ ಆಗಿದ್ದಾರೆ. ಖುಷಿ ಆಗಿರುವುದಕ್ಕೆ ಕಾರಣ ಏನಪ್ಪ ಅಂದ್ರೆ ಬಳ್ಳಾರಿಯ ಸಂಡೂರಿನ ಕಾಡಿನ ಮಧ್ಯದಲ್ಲಿರುವ ಅನ್ನಪೂಣೇಶ್ವರಿ ಮಠಕ್ಕೆ ಭೇಟಿ ನೀಡಿದಾಗ ಅಲ್ಲಿ ಭವಿಷ್ಯ ಹೇಳಿದ್ದೇನೆಂದರೆ ಈ ಬಾರಿ ಬಳ್ಳಾರಿ ಉಪಚುನಾವಣೆಯಲ್ಲಿ ಗೆಲುವು ನಿಮ್ಮದೇ ಎಂದು ಹೇಳಿದ್ದಾರೆ ಎಂಬ ಸುದ್ದಿ ಬಳ್ಳಾರಿ ಜಿಲ್ಲೆಯ ವೈರಲ್ ಆಗಿದೆ.
ನಮ್ಮೆಲ್ಲಾ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು -ಸಂ
ಆತ್ಮೀಯ, ಬಿಸಿ ಸುದ್ದಿ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ 72 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಎಲ್ಲರ ಬದುಕಿನಲ್ಲಿ, ಎಲ್ಲಾ ಜಾತಿಯ ಸಮಾನತೆ ತೋರುವ ದಿಕ್ಕಿನಲ್ಲಿ ನಾವು ಚಲಿಸೋಣ. ನವ ಸಮಾಜಕ್ಕೆ ನಾಂದಿಯಾಗೋಣ. ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸೋಣ. -ಸಂ
ಸ್ನೇಹಿತರೆ, ಪ್ರತಿಮೆಗಳನ್ನು ಒಡೆದು ಹಾಕುವ ಸಂಸ್ಕೃತಿ ಏನನ್ನ ಸೂಚಿಸುತ್ತದೆ ಎಂಬುದು ನನ್ನ ಮನಸ್ಸಿನಲ್ಲಿ ತಳಮಳ ಶುರುವಾಗಿದೆ. ರಾಜಕೀಯ ಗದ್ದುಗೆಗಾಗಿ ಯಾವ ಯಾವ ತಂತ್ರಗಳನ್ನು ಬಳಸಲಾಗುತ್ತದೆ. ಜನರ ಮನಸ್ಸಿನ ಮೇಲೆ ಯಾವ ಪರಿಣಾಬೀರುತ್ತದೆ ಎಂಬುದುರ ಪರಿವೆ ಇಲ್ಲದೆ ಪ್ರತಿಮೆಗಳನ್ನು ಧ್ವಂಸ ಮಾಡಿದರೆ, ಅವರ ಸಿದ್ದಾಂತಗಳನ್ನು ಧ್ವಂಸಮಾಡಿದಂತ್ತಲ್ಲ. ಮೊದಲು ಪ್ರತಿಮೆಗಳನ್ನು ನಿಲ್ಲಿಸುವುದೇ ಸರಿ ಅಲ್ಲ. ಕೆಲವೊಂದು ಪ್ರತಿಮೆಗಳು ಸರಕಾರಗಳೇ ಜನರ ದುಡ್ಡಿನಿಂದ ಪ್ರತಿಷ್ಠಾಪಿಸಲಾಗುತ್ತದೆ. ಒಂದು ಸರಕಾರ ಬಂದಾಗ ಒಂದೊಂದು ಪ್ರತಿಮೆಗಳನ್ನು ನಿಲ್ಲಿಸಲಾಗುತ್ತದೆ. ಮತ್ತೆ ಬೇರೆ ಪಕ್ಷ ಅಧಿಕಾರಕ್ಕೆ ಬಂದಾಗ ಆ ಪ್ರತಿಮೆಗಳನ್ನು ಧ್ವಂಸಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಒಂದು ಸರಕಾರ ಅಧಿಕಾರದಲ್ಲಿದ್ದಾಗ ಆನೆಗಳನ್ನು ನಿಲ್ಲಿಸಲಾಯಿತು. ಮತ್ತೆ ಬೇರೆ ಪಕ್ಷ ಅಧಿಕಾರಕ್ಕೆ ಬಂದಾಗ
ಬೆಂಗಳೂರು: ಮತದಾರನ್ನು ಸಳೆಯಲು ಒಂದೊಂದು ಪಕ್ಷದವರು ಒಂದೊಂದು ರೀತಿಯ ತಂತ್ರಗಳನ್ನು ಎಣೆಯುತ್ತಿದ್ದಾರೆ,ಜೆಡಿಎಸ್. ಕುಮಾರಣ್ಣನ ಗ್ರಾಮ ವಾಸ್ತವ್ಯ, ಮನೆ ಮನೆಗೆ ಕುಮಾರ ಪರ್ವ. ಕಾಂಗ್ರೆಸ್ ಸಾಧನಾ ಸಮಾವೇ. ಬಿಜೆಪಿಯವರ ದಲಿತ ಮನೆಯಲ್ಲಿ ಊಟ, ಪರಿವರ್ತನಾ ಯಾತ್ರೆ, ಈಗ ಸ್ಲಂ ವಾಸ್ತವ್ಯ. ಹೇಗಿದೆ ನೋಡಿ ಚುನಾವಣೆ ಗಿಮಿಕ್. ಈ ಎಲ್ಲಾ ಗಿಮಿಕ್ ಮಾಡುವುದರ ಬದಲು ಅಧಿಕಾರ ಸಿಕ್ಕಾಗ ಸರಿಯಾಗಿ ಜನ ಪರ ಕೆಲಸಗಳನ್ನು ಮಾಡಿದ್ರೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಾಗಿತ್ತ. ಅಧಿಕಾರ ಸಿಕ್ಕಾಗ ಹಣ ಮಾಡುವುದರಲ್ಲಿಯೇ ಸಾಕಷ್ಟು ಶ್ರಮಹಾಕಿದ ರಾಜಕಾರಣಿಗಳು, ಗೆದ್ದಾಗ ವಿಧಾನ ಮಂಡಲದ ಅಧಿವೇಶನಗಳಲ್ಲಿ ಕೆಸರಾಟದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇಲ್ಲವಾದರೆ ಹಾಜರಾಗುವುದಿಲ್ಲ. ಅಷ್ಟರಮಟ್ಟಿಗೆ ನಮ್ಮ ಜನಪ್ರತಿನಿಧಿಗಳು. ಗೆಳೆಯರೇ, ಮತ್ತೆ
ರಾಜ್ಯದ ರೈತರಿಗೆ ಸಂಕ್ರಾಂತಿ ಸುಗ್ಗಿ ಹಬ್ಬ. ಸಂಕ್ರಾಂತಿಯ ಹಬ್ಬದೊಂದು ಹಲವಾರು ವಿಶೇಷಗಳನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ರಾಜ್ಯಗಳಲ್ಲಿ ಮುಖ್ಯವದ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು ಬೆಲ್ಲ”. ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳುಹಂಚುವುದು” ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು ಬೆಲ್ಲ” ತಯಾರಿಸಲಾಗುತ್ತದೆ. ಸಂಕ್ರಾಂತಿ ಮುಖ್ಯವಾಗಿ
ಆತ್ಮೀಯ ಗೆಳೆಯರೇ, ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಎಲ್ಲರ ಬದುಕ್ಕಲ್ಲೂ ನವ ಜೀವನ. ಹೊಸ ಉಲ್ಲಾಸ, ಶಾಂತಿ ನೆಲಸಲಿ ಎಂಬ ಸದಾಶಯದೊಂದಿಗೆ -ಸಂ
ಇದು ನನ್ನೊಬ್ಬನ ಪ್ರಶ್ನೆ ಅಲ್ಲ. ಕಳೆದ ನಾಲ್ಕು ದಿನಗಳಿಂದ ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ರೋಗಿಗಳಿಗೆ ಚಿಕಿತ್ಸೆ ಸಿಗದೇ ರಾಜ್ಯದಲ್ಲಿ ೨೨ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಲೋ ಡಾಕ್ಟರ್ ನಿಮ್ಮ ಮನೆಯವರಿಗೆ ಇಂತಹ ನೋವು ಬಂದಿದ್ದರೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ರಾ ಎಂಬ ಪ್ರಶ್ನೆ. ಮತ್ತೊಂದು ಕಡೆ ಸರಕಾರ ಉಡಾಫೆ ಮಾತು. ಆದ್ರೆ ಇಂದಿಗೂ ಸಾಮಾನ್ಯ ಜನರಿಗೆ ಖಾಸಗಿ ವೈದ್ಯರು ಏಕೆ ಶಾಪ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಅಂತ ಗೊತ್ತಿಲ್ಲ. ಆದ್ರೆ ನೋವು ಮಾತ್ರ ರೋಗಿಗಳಿಗೆ ಅವರ ಕುಟುಂಬದವರಿಗೆ. ಸರಕಾರಿ ಆಸ್ಪತ್ರೆಗಳು ಬರು ಬರುತ್ತಾ ಬಿಳಿ ಆನೆಗಳಂತಾಗಿ. ಜನರು ಸರಕಾರಿ ಆಸ್ಪತ್ರೆ ಅಂದ್ರೆ ಹೇದರಿಕೆ ಉಂಟಾಗಿದೆ. ಇದನ್ನು ಕಂಡ