ಜಿಲ್ಲಾ ಸುದ್ದಿ

ಸಂಪಾದಕರ ಸಂಘದ ಅಧ್ಯಕ್ಷರಾಗಿ ಶ. ಮಂಜುನಾಥ

ಚಿತ್ರದುರ್ಗ:ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾಗಿ ಚಿತ್ರದುರ್ಗ ಸುದ್ದಿಗಿಡುಗ ಪತ್ರಿಕೆ ಸಂಪಾದಕ ಶ. ಮಂಜುನಾಥ ಸರ್ವಾನುಮತದಿಂದ ಆಯ್ಕೆಯಾದರು. ಚಿತ್ರದುರ್ಗದಲ್ಲಿಂದು ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ೧೫೦ ಕ್ಕೂ ಹೆಚ್ಚು ಸಂಪಾದಕರುಗಳು ಶ. ಮಂಜುನಾಥ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಶ. ಮಂಜುನಾಥ ಮಾತನಾಡಿ, ಜಿಲ್ಲಾ ಮಟ್ಟದ ಪತ್ರಿಕೆಗಳು ಉಳಿಯುವ ನಿಟ್ಟಿನಲ್ಲಿ ತಮ್ಮ ಸೇವಾಧಿಕಾರದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಸಂಘದ ಸಂಘಟನೆ ಹಿತದೃಷ್ಠಿಯಿಂದ ಕೆಲವೊಮ್ಮೆ ತೆಗೆದುಕೊಳ್ಳುವ ಕಟು ನಿರ್ಧಾರಗಳಿಗೆ ಸಂಘದ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಂತರ ವಿವಿಧ ಜಿಲ್ಲೆಗಳ ಸಂಪಾದಕರುಗಳು

ವಿಶ್ವ ಯೋಗದಿನಾಚರಣೆ : ಬೈಕ್

ಚಳ್ಳಕೆರೆ: ಶಾಂತಿ ಮಂತ್ರದಿಂದ ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯವನ್ನು ಪಡೆದ ಏಕೈಕ ರಾಷ್ಟ್ರ ನಮ್ಮದು ಎಂದು ಪತಂಜಲಿ ಯೋಗಶಿಕ್ಷಣ ಸಮಿತಿ ಅಧ್ಯಕ್ಷ ಹೆಚ್.ಹನುಮಂತಪ್ಪ ಹೇಳಿದರು. ಪಟ್ಟಣದಲ್ಲಿ ಪ್ರಪ್ರಥಮವಾಗಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾನುವಾರ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ಮತ್ತು ಪಾದಯಾತ್ರೆ ಮೂಲಕ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜೂನು ೨೧ರಂದು ಪಟ್ಟಣದ ಬಿಎಂಜಿಹೆಚ್‌ಎಸ್ ಶಾಲಾ ಆವರಣದಲ್ಲಿ ನಡೆಯಲಿದ್ದು. ಅದೇ ರೀತಿ  ೧೭೫ ಕ್ಕೂ ಹೆಚ್ಚು ರಾಷ್ಟ್ರಗಳು ವಿಶ್ವಯೋಗ ದಿನಾಚರಣೆಯನ್ನು ಆಚರಿಲಿವೆ. ಈ ಸಂದರ್ಭದಲ್ಲಿ ನಾವೆಲ್ಲರೂ ನಿರ್ಲಕ್ಷಿಸದೆ ನಾವೂ ಸಹ  ಯೋಗವಿದ್ಯೆಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಕೊಂಡು ವಿಶ್ವಶಾಂತಿ ತರುವ ಯೋಗವಿದ್ಯೆಯನ್ನು

ಬಿ.ಶಿವಕುಮಾರ್ ರವರಿಗೆ ಡಾಕ್ಟರೇಟ್

ಚಿತ್ರದುರ್ಗ: ಹೊಳಲ್ಕೆರೆಯ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ವಾಣಿಜ್ಯ ಶಾಸ್ರ ಮತ್ತು ನಿರ್ವಹಣಾ ಶಾಸ್ರ ವಿಭಾಗದ ಮುಖ್ಯಸ್ಥರಾದ ಬಿ.ಶಿವಕುಮಾರ್ ರವರಿಗೆ  ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.   ಬಿ. ಶಿವಕುಮಾರ್ ರವರು ಶಿವಮೊಗ್ಗದ   ಸಹ್ಯಾದ್ರಿ ಕಲಾ ಕಾಲೇಜಿನ ವಾಣಿಜ್ಯ ಶಾಸ್ತ್ರ  ಮತ್ತು ನಿರ್ವಹಣಾ ಶಾಸ್ತ್ರ  ಸ್ನಾತಕೋತ್ತರ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ಕುಂದನ್ ಬಸವರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಕೆರಿಯರ್ ಡೆವಲಪ್ ಮೆಂಟ್ ಪಾಲಿಸೀಸ್ ಅಂಡ್ ಪ್ರಾಕ್ಟೀಸಸ್ ಇನ್ ಬ್ಯಾಂಕ್ಸ್ -ಎ ಸ್ಟಡಿ ವಿತ್ ಸ್ಪಷಲ್ ರೆಫರೆನ್ಸ್ ಟು ಸೆಲೆಕ್ಟೆಡ್ ಪ್ರೈವೇಟ್ ಅಂಡ್ ಪಬ್ಲಿಕ್ ಸೆಕ್ಟಾರ್ ಬ್ಯಾಂಕ್ಸ್ (ಆಯ್ಡ  ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳಲ್ಲಿ  ವೃತ್ತಿಬೆಳವಣಿಗೆಯ  ನೀತಿಗಳು ಹಾಗು ಆಚರಣೆಗಳ

ಅರ್ಜಿ: ಆಹ್ವಾನ

ಚಿತ್ರದುರ್ಗ ತಾಲ್ಲೂಕು ತುರುವನೂರು ಗ್ರಾಮದಲ್ಲಿ ಪ್ರಾರಂಭವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ೨೦೧೫-೨೦೧೬ ನೇ ಸಾಲಿಗೆ ಪದವಿ ತರಗತಿಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ  ಪ್ರಥಮ ವರ್ಷದ ಬಿ.ಎ.(ಎಚ್.ಇ.ಪಿ) ಮತ್ತು ಬಿ.ಕಾಂ. ತರಗತಿಗಳ ಪ್ರವೇಶ ಪ್ರಾರಂಭವಾಗಿದ್ದು  ದ್ವಿತೀಯ ಪಿ ಯು ಸಿ ಪಾಸಾದ  ಅಭ್ಯರ್ಥಿಗಳು ಕಾಲೇಜಿನ ಕಛೇರಿ ಇಂದ ಅರ್ಜಿಗಳನ್ನು ಪಡೆದು ಪ್ರವೇಶ ಪಡೆಯ ಬಹುದಾಗಿದೆ. ಇದೇ ತಿಂಗಳು ದಿನಾಂಕ ೧೫ ನೇ ತಾರೀಖು ನಿಂದ ಆನ್ ಲೈನ್ ಮೂಲಕ ಸಹ ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಸಲು ಇಚ್ಚೇ ಇರುವ ಅಭ್ಯರ್ಥಿಗಳು ತಿತಿತಿ//ಜಛಿe.ಞಚಿಡಿ.ಟಿiಛಿ.iಟಿ   ವೆಬ್ ಸೈಟ್ ಮುಖಾಂತರ ಆನ್ ಲೈನ್ ನಲ್ಲಿ

ಅಹಿಂದ ವರ್ಗ ಆರ್ಥಿಕ ಸದೃಡತಗೆ ಒತ್ತು

ಚಳ್ಳಕೆರೆ: ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ಜನಾಂಗದವರಿಗಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಡರಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಿಂದ ಶನಿವಾರ ಅಲ್ಪಂಖ್ಯಾತ  ಮೂರು ಸ್ವ-ಸಹಾಯ ಗುಂಪುವಗಳಿಗೆ,  ೧೦ ಫಲಾನುಭವಿಗಳಿಗೆ ವೈಯುಕ್ತಿಕ ಹಾಗೂ ಗಂಗಾಕಲ್ಯಾಣದ ಕೊಳವೆ ಬಾವಿಗಳ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಾರ್ಷಿಕ ಶೇ ೪ ರ ಬಡ್ಡಿದರದಲ್ಲಿ  ಶ್ರಮಿಕ ಸಾಲ ಯೋಜನೆಯಡಿ ೫ ಸಾವಿರ ಸಹಾಯದನ ೧೫ ರ ಮರುಪಾತಿಯಂತೆ ೨೪ ಜನರಿಗೆ ತಲಾ ೨೦ ಸಾವಿರೂ ನಂತೆ ೪.೮೦ ಲಕ್ಷರೂ, ಹಾಗೂ ಮೈಕೋ ಸಾಲ ಯೋಜನೆಯಡಿ

ಪೊಲೀಸ್ ಕ್ರೀಡೆ: ಮಾನಸಿಕ ಒತ್ತಡಕ್ಕೆ ಆಟವೇ ಮದ್ದು

ಚಳ್ಳಕೆರೆ: ಕರ್ತವ್ಯದ ಒತ್ತಡದ ನಡುವೆಯೂ  ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಹಾಗೂ ಉತ್ತಮ ಆರೋಗ್ಯವಂತಾಗಲು ಸಾಧ್ಯ ಎಂದು ಡಿವೈಎಸ್‌ಪಿ ಶ್ರೀನಿವಾಸ್ ಅಭಿಪ್ರಾಯಪ್ಟರು. ಪಟ್ಟಣದ ಹೆಚ್‌ಪಿಪಿಸಿ ಪ್ರಥಮದರ್ಜೆ ಕಾಲೇಜ್ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ತಳಕು, ನಾಯಕನಹಟ್ಟಿ, ಚಳ್ಳಕೆರೆ, ಪರ ಇಮ್ರಾನ್‌ಬೇಗ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಸ್ವೀಕರಿಸಿದರು.ಶುರಾಂಪುರ ಹೋಬಳಿ ಕೇಂದ್ರದ ಠಾಣೆಯ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂವನ್ನು ಉದ್ಘಾಟಿಸಿ ಮಾತನಾಡಿದರು. ಸೋಲು ಗೆಲವು ಎರಡು ಮುಖಗಳ ನಾಣ್ಯವಿದ್ದಂತೆ ಆದರೆ ಕ್ರೀಡೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳುವುದರಿಂದ ಇಲ್ಲಿ ಮೇಲಾಧಿಕಾರಿ ಎಂಬ ಯಾವುದೇ ಬೇದ ಭಾವವಿಲ್ಲ ಸಮಾನ ಹಾಗೂ ಸ್ನೇಹ ಮನೋಭಾವನೆ ಸೃಷ್ಠಿಯಾಗಲು ಕ್ರೀಡೆ ಸಹಕಾರಿಯಾಗಿದೆ

ಗ್ರಾ.ಪಂ. ಅಲ್ಪಸಂಖ್ಯಾತರಿಗೆ ಇಲ್ಲ ಅಧ್ಯಕ್ಷ ಪಟ್ಟ

ನಾಯಕನಹಟ್ಟಿ:ಇತ್ತೀಚೇಗೆ ಗ್ರಾಮ ಪಂಚಾಯಿತಿಯ ಚುನಾವಣೆ ನಡೆದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿ ನಿಗಧಿಯಲ್ಲಿ  ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ  ಅವಕಾಶ ದೊರತಿಲ್ಲವೆಂದು ನಾಯಕನಹಟ್ಟಿ ಗ್ರಾ.ಪಂ. ಸದಸ್ಯ, ಅಲ್ಪಸಂಖ್ಯಾತರ ಮುಖಂಡ ಎನ್.ಐ. ಮಹಮ್ಮದ್ ಮನ್ಸೂರ್ ಮನ್ಸೂರ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಹಮ್ಮದ್ ಮನ್ಸೂರ್ ಅವರು, ಹಿಂದುಳಿದ ವರ್ಗಗಳು ಹೆಚ್ಚಾಗಿರುವ  ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಜನಾಂಗದವರಿಗೆ, ಅಲ್ಪಸಂಖ್ಯಾತರಿಗೆ  ಯಾವುದೇ ಪಂಚಾಯ್ತಿಗಳಲ್ಲಿ ಅವಕಾಶ ನೀಡದೇ ವಂಚಿಸಲಾಗಿದೆ. ಈ ಮೀಸಲಾತಿಯನ್ನು ಚುನಾವಣಾ ಆಯೋಗವೇ  ಮಾಡಿದರು ಅದಕ್ಕೆ ಬೇಕಾದ ಪೂರಕವಾದ  ವಾತಾವರಣವನ್ನು ಸರ್ಕಾರ ಸೃಷ್ಟಿ ಮಾಡಿಕೊಟ್ಟಿದೆ ಇದರಿಂದಾಗಿ ಚಳ್ಳಕೆರೆ,

ಶಿಕ್ಷಕ ವೃತ್ತಿ ಪ್ರೀತಿಸಿ: ಶರಣರು

ಚಿತ್ರದುರ್ಗ: ಶಿಕ್ಷಕ ಹೊರಗಿನ ಎಲ್ಲ ಜಂಜಡಗಳನ್ನು ಬದಿಗೊತ್ತಿ ಶಾಲೆಯೊಳಗೆ ಪ್ರವೇಶಿಸಿ ಬೋಧನೆ ಮಾಡಬೇಕು. ಶಿಕ್ಷಕ ಹೇಳುವ ಬೋಧನಾ ಕ್ರಮ ವಿದ್ಯಾರ್ಥಿಗಳ ಮೆದುಳಿನೊಳಗೆ ದಾಖಲೆಯಾಗಬೇಕು ಮತ್ತು ನಿಮ್ಮ ಶಿಕ್ಷಕ ವೃತ್ತಿಯನ್ನು ಪ್ರೀತಿಸ ಬೇಕು ಎಂದು ಶರಣರು ಹೇಳಿದರು. ಶ್ರೀಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿಂದು ಎಸ್.ಜೆ.ಎಂ. ನೌಕರರ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಎಸ್.ಜೆ.ಎಂ. ಸಂಸ್ಥೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಹಮ್ಮಿಕೊಂಡಿದ್ದ ಸಮಗ್ರ ಗುಣಾತ್ಮಕ ಶಿಕ್ಷಣ ಮತ್ತು ಆಡಳಿತ ಕಾರ್ಯಾಗಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಹಾಕಿಕೊಂಡಿರುವ ಮಿತಿಗಳಿಂದ ಎದ್ದು ಹೊರಬರಬೇಕು. ಎಲ್ಲಿಯು ಸ್ವಾರ್ಥಭಾವನೆ ಬರಬಾರದು. ಯಾರು ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಾರೋ ಅವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಈ ಶತಮಾನದ ಹಿನ್ನೆಡೆ

ನಾಯಿ ಮೊಲೆ ಹಾಲು!

ಚಳ್ಳಕೆರೆ: ನಿರುಪಯುಕ್ತವಾದ ವಿಷಯಗಳಿಗೆ ಮಾತಿನ ಸಂದರ್ಭದಲ್ಲಿ ನಾಯಿ ಮೊಲೆಯಾಗಿನ ಹಾಲಿನಂತೆ ಎಂದ ಹಳ್ಳಿ ಜನರಲ್ಲಿ ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ ನಾಯಿ  ಮೊಲೆ ಹಾಲು ಮೇಕೆ ಮರಿಗೆ ಜೀವದಾನವದ ಘಟನೆ ನಾಯಕನಹಟ್ಟಿ ಹೋಬಳಿಯ ತಿಪ್ಪಯ್ಯನಕೋಟೆ ಗ್ರಾಮದ ಸಂತೋಶ್ ಎಂಬುವರ ನಾಯಿಯೊಂದು ಮೇಕೆ ಮರಿಗೆ ಹಾಲುಣಿಸುತ್ತಿರುವುದನ್ನು ಕಂಡು ಆಶ್ಚಯಗೊಂಡಿದ್ದಾರೆ. ನಾಯಿ ಮರಿಗಳಿಗೆ ಮಾತ್ರ ಸೀಮಿತವಾಗಿದ್ದ ಹಾಲು, ಮೇಕೆ ಮರಿಗೆ ಅಮೃತ ಸಮಾನವಾಗಿದೆ ದಿನಕ್ಕೆ ಒಂದು ಬಾರಿಯಂತೆ ಮನೆಯಲ್ಲಿನ ಮೇಕೆ ಮರಿಗೆ ಹಾಲನ್ನು ದಾರೆ ಎರೆಯುತ್ತಿರುವುದು ನಾಯಿ ಪುಣ್ಯಕೋಟಿ ಸ್ವರೂಪ ಪಡೆದುಕದೊಂಡಿದೆ. ಆದರೆ  ನಾಯಿ ಹಾಲು ಕುಡಿದ ಮೇಕೆ ಮರಿಗೆ ಯಾವ ಗುಣ ಬರುವುದೋ ಎಂಬುದು ಕಾದುನೋಡಬೇಕಿದೆ.

ಬಾಲ ಕಾರ್ಮಿಕ ಪದ್ದತಿ: ಇಚ್ಚಾಶಕ್ತಿ ಬೇಕು

ಚಳ್ಳಕೆರೆ:  ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನನೆಗೆ ಇಚ್ಚಾಶಕ್ತಿ ಅವಶ್ಯಕತೆ ಇದ್ದು . ಪ್ರತಿಯೊಬ್ಬರು ಬದ್ದತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಬಾಲಕಾರ್ಮಿಕ ಪದ್ದತಿನಿರ್ಮೂಲನೆ ಮಾಡಲು ಸಾಧ್ಯ ಎಂದು ತಹಸೀಲ್ದಾರ್ ಶ್ರೀಧರ್‌ಮೂರ್ತಿ ಎಸ್. ಪಂಡಿತ್ ಕವಿಮಾತು ಹೇಳಿದರು. ೧೪ ವರ್ಷದೊಳಗಿನ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಮನೆ ಕೆಲಸ ಹಾಗೂ ಕೂಲಿ ಕೆಲಸಕ್ಕೆ ನೇಮಕ ಮಾಡಿಕೊಂಡರೆ ಜೈಲು ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂದು ತಹಸೀಲ್ದಾರ್ ಶ್ರೀಧರ್‌ಮೂರ್ತಿ ಎಸ್.ಪಂಡಿತ್ ಹೇಳಿದರು. ಪಟ್ಟಣದ ಬಿಸಿ ನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ