ಜಿಲ್ಲಾ ಸುದ್ದಿ

ನಾಡೋಜ ಡಾಕ್ಟರ್ ನಾರಾಯಣ ರೆಡ್ಡಿ ವಿಧಿವಶ: ಡಾ.ಶಾಂತವೀರ ಸ್ವಾಮೀಜಿ ಸಂತಾಪ

ಹೊಸದುರ್ಗ: ಸರಳತೆಯ, ಗೋ ಆಧಾರಿತ ಕೃಷಿಯ ರಾಸಾಯನಿಕ ಮುಕ್ತ ಕೃಷಿಯ ಹರಿಕಾರ ನಮ್ಮ ಗುರುಗಳು ಅದ  ನಾಡೋಜ ಡಾಕ್ಟರ್ ನಾರಾಯಣ ರೆಡ್ಡಿ ವಿಧಿವಶರಾಗಿದ್ದಾರೆ. ಅವರಿಗೆ ಶಾಂತವೀರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.  ರೈತ ಸಮೂಹಕ್ಕೆ ಮಾದರಿಯಾಗಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿ ರೈತರಿಗೆ ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿನ ಜ್ಞಾನಾರ್ಜನೆ ಕೊಡುತ್ತಿದ್ದ ಅವರ ಕೊಡುಗೆ ಅವಿಸ್ಮರಣೀಯ ಎಂದ ಶ್ರೀಗಳು.ಇಳಿ ವಯಸ್ಸಿನಲ್ಲೂ ಅವರು ತರಬೇತಿ ಕಾರ್ಯಕ್ರಮ ಗಳನ್ನು ನಡೆಸುತ್ತಾ ಎಲ್ಲಾ ರೈತ ಸಮೂಹಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಜ್ಞಾನದ ಪುಸ್ತಕಗಳು, ಹಂಚಿದ ಜ್ಞಾನ ಕೋಟ್ಯಂತರ ರೈತರಿಗೆ ಮಾದರಿಯಾಗಿ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗುತ್ತಾ

ಆಪರೇಷನ್ ಕಮಲದ ಆಟ ಏನು ನಡೆಯಲ್ಲ: ಮುಖ್ಯ ಮಂತ್ರಿ ಕುಮಾರಸ್ವಾಮಿ.!

ಮೈಸೂರು: ದೋಸ್ತಿ ಸರಕಾರವನ್ನು ಕೆಡವಲು ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿದ್ದಾರೆ ಅಂತ ಗೊತ್ತು ಆದ್ರೆ ಯಾವುದೇ ಕಾರಣಕ್ಕೂ ಸರಕಾರ ಸುಭದ್ರವಾಗಿದೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯವರು ಶಾಸಕರಿಗೆ ಯಾವ ಯಾವ ಆಮಿಷ ಒಡ್ಡುತ್ತಿದ್ದಾರೆಂದು ನನಗೆ ಗೊತ್ತಿದೆ. ನಾನು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬಿಜೆಪಿಯವರ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ ಎಂದು ಆಪರೇಷನ್ ಕಮಲದ ಆಟ ನಡೆಯಲ್ಲಾ ಎಂದರು. (ಸಾಂದರ್ಭಿಕ ಚಿತ್ರ)

ಸರ್ಕಾರಿ ನೌಕರಿದಾರರಿಗೊಂದು ಗುಡ್ ನ್ಯೂಸ್..!

ಬೆಂಗಳೂರು: ಸರ್ಕಾರಿ ನೌಕರರ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಅರ್ಹತಾ ಅವಧಿ ಇಳಿಕೆಗೆ ಆರನೇ ವೇತನ ಆಯೋಗ ಮಾಡಿದ್ದ ಶಿಫಾರಸು ಮಂಜೂರಾಗಿದ್ದು, ಇನ್ನು ಮುಂದೆ 30 ವರ್ಷ ಕಾರ್ಯ ನಿರ್ವಹಿಸಿದ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ಸೌಲಭ್ಯ ಪಡೆಯಲಿದ್ದಾರೆ. ಅರ್ಹತಾ ಅವಧಿಯನ್ನು 33ರಿಂದ 30 ವರ್ಷಕ್ಕೆ ಇಳಿಸಲಾಗಿದ್ದು, ಜ.1ರಿಂದಲೇ ಈ ನಿಯಮ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಎಲ್ಲ ನೌಕರರಿಗೆ ನೀಡಲಾಗುವ ಬಡ್ಡಿರಹಿತ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಪಂಚಮಸಾಲಿ ಪೀಠದ ಬಸವ ಕೃಷಿ ಪ್ರಶಸ್ತಿ ಈ ಬಾರಿ ಯಾರಿಗೆ.?

ವಿಜಯಪುರ : 2019 ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿ ಪ್ರಕಟವಾಗಿದ್ದು, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಮಾದ್ಯಮದವರೊಂದಿಗೆ ಮಾತನಾಡಿದ ಅವರು  ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ನೀಡುವ 2019 ನೇ ವರ್ಷದ ಪ್ರತಿಷ್ಠಿತ ಪ್ರಶಸ್ತಿಯನ್ನು ಶರದ್ ಪವಾರ್ ಅವರಿಗೆ ನೀಡಲಾಗುತ್ತಿದೆ ಫೆಬ್ರವರಿ ಎರಡನೇ ವಾರದಲ್ಲಿ ಕೂಡಲ ಸಂಗಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದರು..

ನಾಳೆ ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಎಲ್) ಹುದ್ದೆಗೆ ಪರೀಕ್ಷೆ.!

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಘಟಕದಲ್ಲಿ ಖಾಲಿರುವ ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಎಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಾಳೆ ಬೆಂಗಳೂರು ನಗರದ 09 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 7498 ಅಭ್ಯರ್ಥಿಗಳಿಗೆ ಪತ್ರಿಕೆ-1ನ್ನು ಬೆಳಗ್ಗೆ10ರಿಂದ 11.30 ಗಂಟೆಗೆ ಮತ್ತು ಪತ್ರಿಕೆ-2ನ್ನುಮಧ್ಯಾಹ್ನ 2 ಗಂಟೆಯಿಂದ 3.30 ವರೆಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಇಲಾಖಾ ವೆಬ್‍ಸೈಟ್ www.ksp.gov.inನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಕರಪತ್ರವನ್ನು ಮೇಲ್ಕಂಡ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಸೂಚಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ತಿಳಿಸಲಾಗಿದೆ. 

ಲೋಕಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಷ್ಟರಲ್ಲಿ ಪ್ರಕಟ: ದಿನೇಶ್ ಗುಂಡೂರಾವ್.!

ಬೆಂಗಳೂರು : ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ ಸೇರಿದಂತೆ ಪ್ರಣಾಳಿಕೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಪ್ರಕ್ರಿಯೆಯೂ ಬೇಗ ಮುಗಿಯಲಿದೆ ಎಂದರು. ಜನವರಿ 18 ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ಧತಾ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಸಿಇಟಿ ಪರೀಕ್ಷೆ ದಿನಾಂಕ ಪ್ರಕಟ..!

ಸಿಇಟಿ ಪರೀಕ್ಷೆ ದಿನಾಂಕ ಪ್ರಕಟ..! ಬೆಂಗಳೂರು : 2019 ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು,  ಏಪ್ರೀಲ್ ತಿಂಗಳಲ್ಲಿ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 23 ರ ಬೆಳಗ್ಗೆ 10.30 ರಿಂದ 11.50 ರ ವರಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ ಗಣಿತ ಪರೀಕ್ಷೆ, ಏ.24 ರ ಬೆಳಗ್ಗೆ 10.30 ರಿಂದ 11. 50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿವೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏ.25 ರಂದು ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ

ಐಟಿ ವಿಚಾರಣೆ: ನಟ ಯಶ್ ಹೇಳಿದ್ದೇನು ಗೊತ್ತಾ.!

ಬೆಂಗಳೂರು : ನಟ ಯಶ್ ಐಟು ರೇಡ್ ಆದ ಬಳಿಕ ಇಂದು ಐಟಿ ವಿಚಾರಣೆ ಮುಗಿಸಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದು ಏನಪ್ಪ ಅಂದ್ರೆ ನನಗೆ 17 ಬ್ಯಾಂಕ್ ಗಳಲ್ಲಿ ಲೋನ್ ಆಗಿದೆ. ಲೋನ್ ಆಗಿದೆ ಅಂದ್ರೆ, ನಾನು ಸರಿಯಾಗಿ ತೆರಿಗೆ ಪಾವತಿಸಿದ್ದೇನೆ ಎಂದು ಅರ್ಥ, ಟ್ಯಾಕ್ಸ್ ಕಟ್ಟದೇ ಇದ್ದರೆ ಯಾರು ಲೋನ್ ಕೊಡ್ತಾರೆ ಎಂದು ಯಶ್ ಪ್ರಶ್ನೆ ಮಾಡಿದ್ದಾರೆ ಯಾರೇ ಏನು ಹೇಳಿಲಿ ಹಾಗೂ ಯಾವುದೇ ಊಹಾಪೋಹಗಳಿಗೆ ನಾನು ತಲೆಕೆಡೆಸಿಕೊಳ್ಳುವುದಿಲ್ಲ. ನನ್ನ ಕೆಲಸ ಮಾಡೋದು ನನಗೆ ಗೊತ್ತಿದೆ. ನಮ್ಮ ಮನೆಯಲ್ಲಿ ಅಷ್ಟು ದುಡ್ಡು ಸಿಕ್ಕಿದೆ ಎನ್ನುವುದು ಸುಳ್ಳು ಎಂದರು. ಇನ್ನು 2 ವರ್ಷಗಳವರೆಗೂ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು

ಶಿಕ್ಷಕರ ವರ್ಗಾವಣೆ: 5 ವರ್ಷದಿಂದ 3 ವರ್ಷ ಇಳಿಕೆ.!

ಬೆಂಗಳೂರು: ಶಿಕ್ಷಕರ ವರ್ಗಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದು, ಇನ್ನು ಮುಂದೆ ಶಿಕ್ಷಕರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ನಾನಾ ವೃಂದಗಳ ವಲಯಗಳಲ್ಲಿನ ವರ್ಗಾವಣೆ ಸೇವಾಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಕೆ ಮಾಡಿ ಹಾಗೂ ಕಡ್ಡಾಯ ವರ್ಗಾವಣೆ ಯಿಂದ ಕೆಲವೊಂದು ಪ್ರಕರಣಗಳಲ್ಲಿ ವಿನಾಯಿತಿ ನೀಡುವ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. ಮಾಧ್ಯಮಗಳಿಗೆ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಹಕಾರ ಸಚವಿ ಬಂಡೆಪ್ಪ ಕಾಶಂಪುರ ಶಿಕ್ಷಕರ ವರ್ಗಾವಣೆ ಸಮಸ್ಯೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿದ್ದೇವು ಆದರೂ ಸಹ ವಿಧೇಯಕಕ್ಕೆ ಇನ್ನು

ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್‌ ಕಂಪನಿ 523 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಬೆಂಗಳೂರು: ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್‌ ಕಂಪನಿ 523 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10/12/ಐಟಿಐ ಪಾಸಾದವರು ಅರ್ಹತೆ ಹೊಂದಿದ್ದು, 25 ವರ್ಷದೊಳಗಿನ ನಿಗದಿತ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಲೆಕ್ಟ್ರಿಷಿಯನ್ : 150 ಹುದ್ದೆ ಫಿಟ್ಟರ್ : 150 ಹುದ್ದೆ ಮೆಶಿನಿಸ್ಟ್ ಕಾಂಪೋಸಿಟ್ : 60 ಹುದ್ದೆ ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) : 50 ಹುದ್ದೆ ಟರ್ನರ್ : 40 ಹುದ್ದೆ ಕಂಪ್ಯೂಟರ್ (COPA/PASAA) : 60 ಹುದ್ದೆ ಡ್ರಾಫ್ಟ್ ಮನ್ (ಮೆಕಾನಿಕ್) : 10 ಹುದ್ದೆ ಎಲೆಕ್ಟ್ರಾನಿಕ್ : 06 ಹುದ್ದೆ ಮೆಕಾನಿಕ್ ಮೋಟಾರ್ ವೆಹಿಕಲ್ : 06 ಹುದ್ದೆ ಮೆಶಿನಿಸ್ಟ್ ಗ್ರೈಂಡರ್