ಜಿಲ್ಲಾ ಸುದ್ದಿ

ಎಸಿಬಿ ಬಲೆಗೆ ಇಂಜಿನಿಯರ್..!

ಚಿತ್ರದುರ್ಗ: ಲೋಕೋಪಯೋಗಿ ಇಲಾಖೆ  ಹಿರಿಯೂರು ಉಪ ವಿಭಾಗದ  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಪ್ಪ ಹಾಗೂ ಕಿರಿಯ ಇಂಜಿನಿಯರ್ ಪುಟ್ಟಸ್ವಾಮಿ ಇವರು 48 ಸಾವಿರ ಲಂಚ ಸ್ವೀಕರಿಸುವ ವೇಳೆ ಎ.ಸಿ.ಬಿ ಬಲೆಗೆ ಸಿಕ್ಕಿದ್ದಾರೆ.  ಪಾವಗಡ ತಾ: ಕೆ.ಟಿ.ಹಳ್ಳಿ ಮಂಜುನಾಥ ಎರಡನೇ ದರ್ಜೆ ಗುತ್ತಿಗೆದಾರರಾಗಿದ್ದು ಕಾಮಗಾರಿ  ಬಿಲ್ ಪಾವತಿಸಲು 48 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.  ಮಾರ್ಚ್ 14 ರ ಸಂಜೆ ಕಚೇರಿಯಲ್ಲಿ ಹಣ ಪಡೆಯುವಾಗ ಬಂಧಿಸಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ. ಎ.ಸಿ.ಬಿ ಉಪಾಧೀಕ್ಷಕರಾದ ಮಂಜುನಾಥರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್ ರವರು ಹಾಗೂ  ಸಿಬ್ಬಂದಿಯವರು ದಾಳಿ ನಡೆಸಿರುವರು.

ಸೈಕಲ್ ಬಳಸಿ; ಪರಿಸರ ಉಳಿಸಿ, ಸೈಕಲ್ ಪ್ರವಾಸ ಎಚ್.ಪಿ. ತಿಪ್ಪೇಶ ರ ಸಾಧನೆ

ಮೈಸೂರು: ಸೈಕಲ್ ಬಳಸಿ; ಪರಿಸರ ಉಳಿಸಿ, ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಸುಮಾರು ಹತ್ತು ಸಾವಿರ ಕಿಲೋಮೀಟರ್ ಗಳಿಗೂ ಹೆಚ್ಚು ದೂರ ಸೈಕಲ್ ಪ್ರವಾಸ ಕೈಗೊಂಡಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮಲ್ಲೂರಹಟ್ಟಿಯ ಕುಮಾರ ಎಚ್.ಪಿ. ತಿಪ್ಪೇಶ ಅವರು ಪ್ರವಾಸ ಮತ್ತು ಪರಿಸರ ಜಾಗೃತಿ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿಗೆ ಭೇಟಿ ನೀಡಿದ್ದರು. ಶ್ರೀಯುತರನ್ನು ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕರೂ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳಾದ ಡಾ. ಕೆ. ಶ್ರೀನಿವಾಸ ಅವರು ವೈಯಕ್ತಿಕವಾಗಿ ಗೌರವಿಸಿ

ಮಾತೇ ಮಹಾದೇವಿಯವರ ಅಗಲಿಕೆ ತುಂಬಲಾರದ ನಷ್ಟ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ: ಸ್ತ್ರೀಕುಲದ ಪ್ರಥಮ ಜಗದ್ಗುರು, ಆಳವಾದ ಅಧ್ಯಯನದ ಫಲವಾಗಿ ಅತ್ಯಂತ ಶ್ರೇಷ್ಠ ಕೃತಿಗಾರ್ತಿ ಮಾತೇ ಮಹಾದೇವಿಯವರ ಅಗಲಿಕೆ ತುಂಬಲಾರದ ನಷ್ಟವಾಗಿದೆಯೆಂದು  ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ,ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದರು. ವಿರೋಧ – ವಿರೋಧಿಗಳನ್ನು ಲೆಕ್ಕಿಸದೇ ಕಂಚಿನ ಕಂಠದಿಂದ ಬಸವತತ್ವವಾಣಿ ಪ್ರತಿಪಾದಿಸಿದ ಕಣ್ಮಣಿ. ದಿಟ್ಟ ಅಪ್ಪಟ ಬಸವ ಅನುಯಾಯಿಯಾಗಿ ನೇರ, ನಿಷ್ಟೂರದ ಬಸವಪೀಠದ ಪೂಜ್ಯ ನಾರಿಯಾಗಿದ್ದರು. ಪೂರ್ವಾಶ್ರಮ ಪಿತಸಂಕಲ್ಪ ಭವರೋಗ ವೈದ್ಯಾರಾಗಬೇಕೆಂಬುದು, ಗುರುಪಿತನ ಆಶ್ರಮದ ಸತ್ಸಂಕಲ್ಪದಂತೆ ಮಂತ್ರ ವೈದ್ಯರಾಗಿ ಭಕ್ತರಿಗೆ ವೈಜ್ಞಾನಿಕ, ವೈಚಾರಿಕವೆಂಬ ಔಷಧೋಪಚಾರಗಳನ್ನು ನೀಡಿ ಧಾರ್ಮಿಕ ಸತ್ಪಥ ತೋರಿದ ಸಾದ್ವಿ. ಲಿಂಗಾಯತ ಭಕ್ತರನ್ನು ವಿಚಾರವಂತ, ಪ್ರಜ್ಞಾವಂತರನ್ನಾಗಿಮಾಡಿದ ಕೀರ್ತಿ ಮಾತಾಜಿಯವರಿಗೆ ಸಲ್ಲುತ್ತದೆ. ಬಸವತತ್ವ ಪ್ರಚಾರಕ್ಕೆ

ಮಾತೆ ಮಹಾದೇವಿ ನಿಧನ: ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ

ಚಿತ್ರದುರ್ಗ : ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಿಧನಕ್ಕೆ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುಶಿಸಿ ಮಾತನಾಡಿದ ಶ್ರೀಗಳು, ಶರಣತತ್ತ್ವ ಅರ್ಥಾತ್ ಬಸವತತ್ತ್ವ. ಶರಣತತ್ತ್ವದಲ್ಲಿ ಬಸವತತ್ತ್ವ; ಬಸವತತ್ತ್ವದಲ್ಲಿ ಶರಣತತ್ತ್ವ ಇದೆ. ಇದು ಸೈದ್ಧಾಂತಿಕವಾಗಿರುವ ತತ್ತ್ವ. ಯಾವ ತತ್ತ್ವಸಿದ್ಧಾಂತ ಪ್ರಯೋಗಮುಖಿಯಾಗಿರುತ್ತದೋ ಅದಕ್ಕೆ ಸಾವು ಇಲ್ಲ. ೯೦೦ವರ್ಷಗಳ ಹಿಂದೆ ಬಸವ ಅಲ್ಲಮಾದಿ ಶರಣರು ಪುರುಷರು ಮತ್ತು ಸ್ತ್ರೀಯರನ್ನು ಮೊದಲ್ಗೊಂಡು ನೆಲಮಟ್ಟದ ತಳಮಟ್ಟದ ಎಲ್ಲ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಇಂತಹ ಅಪ್ರತಿಮ ಕಾರ್ಯವನ್ನು ಅವರು ಕೊಟ್ಟು ಹೋಗಿದ್ದಾರೆ. ಅವರು ಹಲವು ಹತ್ತು ಪ್ರಯೋಗಗಳನ್ನು ಮಾಡಿದ್ದಾರೆ. ಅಲ್ಲಿ ಪರಿವರ್ತನೆ ಮತ್ತು ಪ್ರಯೋಗ ಇವೆರಡನ್ನೂ

ಮದುವೆ, ಹುಟ್ಟುಹಬ್ಬಕ್ಕೆ ಆಯೋಗದ ಅನುಮತಿ ಬೇಕಿಲ್ಲ: ಚುನಾವಣಾ ಆಯೋಗ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯ. ಆದರೆ, ಮದುವೆ- ಹುಟ್ಟುಹಬ್ಬ ಸೇರಿದಂತೆ ಇನ್ನಿತರೆ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್, ರಾಜಕೀಯ ವ್ಯಕ್ತಿಗಳು ಭಾಗವಹಿಸದ ಖಾಸಗಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಅಗತ್ಯವಿಲ್ಲ ಎಂದು ತಿಳಿಸಿದರು.

ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಹಿನ್ನೆಲೆ ಏನು.?

ಚಿತ್ರದುರ್ಗ: ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ 1946ರ ಮಾ.13ರಂದು ಬಸಪ್ಪ & ಗಂಗಮ್ಮ ದಂಪತಿಯ ಪುತ್ರಿಯಾಗಿ ಚಿತ್ರದುರ್ಗದ ಸಾಸಲಹಟ್ಟಿಯಲ್ಲಿ ಜನಿಸಿದ್ದರು.  ಲಿಂಗಾಯತ ಸಮುದಾಯದವರಾಗಿದ್ದ ಇವರು, ಬಿ.ಎಸ್ಸಿ, ಎಂ.ಎ ಅಭ್ಯಸಿಸಿದ ಬಳಿಕ 1966ರ ಏ.5ರಂದು ಲಿಂಗಾನಂದ ಮಹಾಸ್ವಾಮಿ ಅವರಿಂದ ದೀಕ್ಷೆ ಪಡೆದರು. ಇದರೊಂದಿಗೆ ದಕ್ಷಿಣ ಭಾರತದ ಮೊದಲ ಮಹಿಳಾ ಜಗದ್ಗುರು ಎನಿಸಿಕೊಂಡಿದ್ದರು.  ಇವರು ಶರಣ ಧರ್ಮ ಪ್ರಚಾರಕ್ಕಾಗಿ ಕೂಡಲಸಂಗಮದಲ್ಲಿ ಪ್ರತೀ ವರ್ಷ ಶರಣ ಸಮ್ಮೇಳನ ಆಯೋಜಿಸುತ್ತಿದ್ದರು. ಇವರ ಅಂಕಿತನಾಮ ಸಚ್ಚಿದಾನಂದ.

ಮಾತೇ ಮಹಾದೇವಿ ಲಿಂಗೈಕ್ಯ: ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ ಸಂತಾಪ

ಚಿತ್ರದುರ್ಗ : ಬಸವ ಧರ್ಮದ  ಹೋರಾಟಗಾರ್ತಿ ಹಾಗೂ ನಮ್ಮೆಲ್ಲರಿಗೂ ಮಾತೃಸ್ವರೂಪಿಯಾಗುದ್ದ… ಬಸವಧರ್ಮ ಪೀಠದ ಪ್ರಥಮ ಮಹಿಳಾ ಜಗದ್ಗುರು ಮಾತೇ ಮಹಾದೇವಿಯವರು ಇಂದು ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿರುವ ವಿಷಯ ತಿಳಿದು  ದುಃಖಿತನಾಗಿದ್ದೇನೆ. ಬಸವ ತತ್ವ ಪ್ರಸಾರದ ಒಂದು ಕೊಂಡಿಯೇ ಕಳಚಿದಂತಾಗಿದೆ ಯಾವುದೇ ಲಾಭದಾಯಕ ವಿದ್ಯೆ ಸಂಸ್ಥೆ ತೆರೆಯದೆ ಕೇವಲ ಬಸವ ತತ್ವಗಳನ್ನು ಪ್ರಚಾರ ಮಾಡುವುದಕ್ಕೆ ತಮ್ಮ ಇಡಿ ಬದುಕನ್ನು ಸಮರ್ಪಿಸಿದ ಮಹನ್ ಸಾಧಕಿ ವೀರ ಸನ್ಯಾಸಿ ಮಾತೇ ಮಹಾದೇವಿಯವರು ಶರಣ ತತ್ವಗಳನ್ನು ಮನೆ ಮನೆಗೆ ಅಂಚಿದ ಮಾತೆ ಅವರ ಸೇವೆ ನಮಗೆ ಮಾದರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ

ಹಳ್ಳಿಯಲ್ಲಿ ಪಲ್ಸ್ ಪೋಲಿಯು ಯಶಸ್ವಿ ಕಾರ್ಯಕ್ರಮ

ಚಿತ್ರದುರ್ಗ: ಪಲ್ಸ್ ಪೋಲಿಯೋ ಕಾರ್ಯಕ್ರಮಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದ್ದು ಅದರಲ್ಲಿ ಗೊಡಬನಹಾಳ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿ ಆಗಿ ನಡೆಯಿತು. ಡಾ||ರೂಪ ರವಿ ಅವರು ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕುವುದರ ಮೂಲಕ ಚಾಲನೆ ನೀಡಿದರು.

ಶಾಸ್ತ್ರ ಹೇಳುವವರು ಇನ್ನು ಮುಂದೆ ಹಸ್ತ ಚಿಹ್ನೆ ಬಳಸುವಂತಿಲ್ಲ ಏಕೆ.?

ಬೆಂಗಳೂರು: ಇದು ಚುನಾವಣೆಯ ಇಫೆಕ್ಟ್. ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿ ಗೊಳಿಸಿದ ಬಳಿಕ ರಾಜಕೀಯ ಪಕ್ಷಗಳು ತಮ್ಮ ಜಾಹಿರಾತಿನ ಫಲಕಗಳನ್ನು ಸಾರ್ವಜನಿಕವಾಗಿ ಹಾಕುವಂತಿಲ್ಲ ಎಂದು ಆದೇಶಿಸಿದ್ದು, ಕಾಂಗ್ರೆಸ್ ಪಕ್ಷದ ‘ಹಸ್ತ’ ಚಿಹ್ನೆಯನ್ನು ಹೋಲುವ ಜ್ಯೋತಿಷಿಗಳ ಫಲಕಗಳನ್ನು ಸಾರ್ವಜನಿಕವಾಗಿ ಹಾಕುವಂತಿಲ್ಲ ಎಂದು  ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.  ಇಂತಹ ಬೋರ್ಡ್ ಗಳ ಮೇಲೆ ಪೇಪರ್ ಹಾಕಿ ಮುಚ್ಚಲಾಗಿದ್ದು, ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ಜ್ಯೋತಿಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದು ಸುದ್ದಿ. Edit

ದೋಸ್ತಿ ಸರಕಾರದಿಂದ ತರಕಾರಿ ಬೀಜಗಳಿಗೆ ಸಹಾಯಧನ..!

ಬೆಂಗಳೂರು : ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ, ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕೆರೆಗೆ 2 ಸಾವಿರ ರೂ. ನೀಡುವ `ತರಕಾರಿ ಬೀಜಗಳ ಕಿಟ್’ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಪ್ರತಿ ಎಕೆರೆಯಲ್ಲಿ ತರಕಾರಿ ಬೆಳೆಯಲು 4 ಸಾವಿರ ರೂ. ಘಟಕ ವೆಚ್ಚವನ್ನು ಅಂದಾಜಿಸಿ, ಈ ಪೈಕಿ ಬೀಜಗಳ ವೆಚ್ಚವಾಗಿ ತೋಟಗಾರಿಕೆ ಇಲಾಖೆ ಮೂಲಕ 2 ಸಾವಿರ ರೂ. ವಿತರಣೆಗೆ ಸರ್ಕಾರ ಆದೇಶ ಹೊರಡಿಸಿದೆ. ಈ ಉದ್ದೇಶಕ್ಕೆ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರ್ಹ ರೈತರಿಗೆ ಸುಧಾರಿತ ಬೇಸಾಯ ಕ್ರಮದಡಿ ತರಕಾರಿ ಬೆಳೆಯಲು ಗುಣಮಟ್ಟದ