ಜಿಲ್ಲಾ ಸುದ್ದಿ

ನಮ್ಮದು ಶರಣರ ಪರಂಪರೆ : ಮುರುಘಾ ಶರಣರು..!

ಚಿತ್ರದುರ್ಗ: ಶರಣ ಸಂಸ್ಕೃತಿಯನ್ನು ಗರ್ಭೀಕರಿಸಿಕೊಂಡಿರುವ ಪರಂಪರೆ ನಮ್ಮದು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೨೪ನೇ ಸ್ಮರಣೋತ್ಸವದ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತ, ಬೆಂಗಾಡಿಗಿದ್ದ ನಾಡನ್ನು ಭಕ್ತಿಯ ನಾಡನ್ನಾಗಿ ಮಾಡಿದವರು ಶ್ರೀ ಮುರುಗಿ ಶಾಂತವೀರಸ್ವಾಮಿಗಳು. ಮಲ್ಲಿಕಾರ್ಜುನ ಶ್ರೀಗಳ ವಿದ್ವತ್ತಿನ ಸಂಚಾರ ವಿದ್ಯುತ್ತಿನಂತೆ ಕೆಲಸ ಮಾಡುತ್ತಿತ್ತು. ಮಾನವನ ಮೆದುಳನ್ನು ಪ್ರಕಾಶಗೊಳಿಸುವುದರಲ್ಲಿ ಅವರು ಪ್ರಖ್ಯಾತಿ ಪಡೆದಿದ್ದರು. ಮಲ್ಲಿಕಾರ್ಜುನ ಸ್ವಾಮಿಗಳು ಲೋಕ ಕಲ್ಯಾಣದಲ್ಲಿ ಮುಂದುವರಿದುಕೊಂಡು ಹೋಗುವಂತೆ ಶೈಕ್ಷಣಿಕ ಶಾಲಾ-ಕಾಲೇಜುಗಳನ್ನು ತೆರೆದು ಬರದ ನಾಡಿಗೆ ಅಕ್ಷರಕ್ರಾಂತಿಯ ಮಳೆಗರೆದರು. ಶ್ರೀಮಠದಿಂದ ಲಕ್ಷಾಂತರಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಾಗಿದೆ.ಸ್ವಾಮೀಜಿಗಳಲ್ಲಿ ಮೂರುತರಹದ ಶಕ್ತಿ ಇರಬೇಕು.ಧೀ.ಶಕ್ತಿ ಇರಬೇಕು.ಸಾತ್ವಿಕವಾಗಿರುವ ಶಕ್ತಿ ಇರಬೇಕು.ಈ

ತೋಂಟದಾರ್ಯ ಶ್ರೀಗಳು ಕನ್ನಡದ ಕುಲಗುರುಗಳು: ಮುರುಘಾ ಶರಣರು

ಚಿತ್ರದುರ್ಗ: ಜಗದ್ಗುರು ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ. ಅವರು ಕನ್ನಡದ ಕುಲಗುರುಗಳು ಎಂದೇ ಹೆಸರಾಗಿದ್ದರು. ಒಂದು ವಿಶ್ವವಿದ್ಯಾಲಯ ಮಾಡುವ ಕಾರ್‍ಯಕ್ಕಿಂತ ಹೆಚ್ಚಿನ ಜನ ಮತ್ತು ಲೋಕ ಸೇವೆ ಮಾಡಿದ್ದಾರೆ, ಅವರ ಅಗಲಿಗೆ ನಮಗೆ ನೋವು ತಂದಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು. ಶ್ರೀಮಠದ ಅನುಭವ ಮಂಟಪದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಶರಣ ಪರಂಪರೆಗೆ ಮುರುಘಾ ಪರಂಪರೆಯ ಕೊಡುಗೆ ವಿಚಾರ ಕುರಿತಾದ ಗೋಷ್ಠಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, ಶರಣ ಪರಂಪರೆಗೆ ಮುರುಘಾ ಪರಂಪರೆ ಕೊಡುಗೆ ಎಂಬ ಚಿಂತನೆಯಿಂದ ಜನರಿಗೆ ಜ್ಞಾನರ್ಜನೆ ಮಾಡುತ್ತಿದೆ. ಶರಣ ಪರಂಪರೆಯಲ್ಲಿ ಲೋಕೋತ್ತರ ಕಾರ್‍ಯ ಮಾಡಿದಂತೆ ಶ್ರೀಮಠದ ಮುರುಗಿ ಶಾಂತವೀರಸ್ವಾಮಿಗಳ ಲೋಕೋತ್ತರ ಬದುಕಿನಿಂದ ಶ್ರೀಮಠ ಬೆಳೆದಿದೆ.

ಬುರುಜನಹಟ್ಟಿ ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಪೂಜೆ

ಚಿತ್ರದುರ್ಗ: ಬುರುಜನಹಟ್ಟಿಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ವಿಶೇಷವಾಗಿ ವಿಜಯದಶಮಿಯಂದು ಶುಕ್ರವಾರ ಗಂಧದ ಅಲಂಕಾರ ಮಾಡಲಾಗಿತ್ತು. ಬಗೆ ಬಗೆಯ ಹೂವು-ಹಾರಗಳ ಝೇಂಕಾರವಿಲ್ಲದೆ ಬರೀ ಗಂಧದಿಂದಲೇ ಬನಶಂಕರಿಯನ್ನು ಕಣ್ಮನ ಸೆಳೆಯುವಂತೆ ಸಿಂಗಾರ ಮಾಡಿದ್ದನ್ನು ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ವೀಕ್ಷಿಸಿದರು. ಡಿ.ಬಿ.ನರಸಿಂಹಪ್ಪ, ಶ್ರೀನಿವಾಸ್, ಡಿ.ಎನ್.ವೆಂಕಟೇಶ್, ಚಿದಾನಂದ್, ರಂಗನಾಥ್, ಕಾಂತರಾಜ್, ದೇವಸ್ಥಾನದ ಅರ್ಚಕರಾದ ರಾಮಭಾರಧ್ವಾಜ್ ಇವರುಗಳು ಅಲಂಕಾರದ ಮುಂದಾಳತ್ವ ವಹಿಸಿದ್ದರು.

ಶರಣಸಂಸ್ಕೃತಿ ಉತ್ಸವ -೨೦೧೮ ಮಕ್ಕಳ ಗೋಷ್ಠಿಯಲ್ಲಿ ಯಾರ್‍ಯಾರು ಇದ್ದರು.!

ಚಿತ್ರದುರ್ಗ: ಝೀ ಟಿ.ವಿ. ಸರಿಗಮಪ ಪ್ರಶಸ್ತಿ ವಿಜೇತ ಪ್ರತಿಭೆಗಳಾದ ವಿಶ್ವಪ್ರಸಾದ್ ಮಲ್ಲಿಕಾರ್ಜುನ ಗಾಣಿಗ, ತನುಶ್ರೀ, ಜ್ಞಾನೇಶ್ವರ, ಅಭಿಜಾತ್ ಭಟ್, ಎ.ತೇಜಸ್ ಶಾಸ್ತ್ರಿ, ನೇಹಾ ಆರ್. ಕುಂದಾಕ್ಕರ್ ಇವರುಗಳಿಂದ ಸುಗಮ ಸಂಗೀತ, ಭದ್ರಾವತಿಯ ಧಾತ್ರಿ ಕುಬಸದ, ಕಲಕೇರಿಯ ಸುಹಾಸಿನಿ ಈರಣ್ಣ ಜಳಕೆ ಭಾಷಣ, ಬೆಂಗಳೂರಿನ ಪೂಜಾ, ಪ್ರತೀಕ್ ಆಚಾರ್ಯ ನೆರಳು ಬೆಳಕಿನ ಆಟ, ಮಂಗಳೂರಿನ ಶ್ರೀ ಸುಧೀರ್ ಉಳ್ಳಾಲ ನಿರ್ದೇಶನದಲ್ಲಿ ಸಿಪಾಲಿ ಮತ್ತು ಶ್ರಾವ್ಯ, ಸಿಟಿ ಗೈಸ್ ಕುಡ್ಲ ಕ್ವೀನ್ಸ್ ವಿಶೇಷ ನೃತ್ಯ ಪ್ರದರ್ಶನ, ಕಲರ್‍ಸ್ ಕನ್ನಡ ಪ್ರತಿಭೆ ಪ್ರೇರಣಾ ಎಂ ನೃತ್ಯ, ಬೆಂಗಳೂರಿನ ಸೃಷ್ಟಿ ವಾದ್ಯತಂಡದ ಹಿನ್ನಲೆ ಸಂಗೀತ, ಹೊಳೆ ಆಲೂರು ಮಕ್ಕ ಮಲ್ಲಕಂಬ ಪ್ರದರ್ಶನ ನಡೆಯಿತು.

ನಾಡ ಹಬ್ಬ ಮೈಸೂರು ದಸರಹಬ್ಬದ ಜಂಬೂಸವಾರಿ

  ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿದೆ. 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಅರ್ಜುನ ಬನ್ನಿ ಮಂಟಪದತ್ತ ಹೆಜ್ಜೆ ಹಾಕುತ್ತಿದ್ದಾನೆ.

ಶರಣ ಸಂಸ್ಕೃತಿ ಉತ್ಸವ೨೦೧೮ ಹಾಗೂ ಜಾನಪದ ಕಲಾಮೇಳ

ಚಿತ್ರದುರ್ಗ: ಐತಿಹಾಸಿಕ ನಗರ ಚಿತ್ರದುರ್ಗವು ಪ್ರತಿವರ್ಷದಂತೆ ಈ ವರ್ಷವೂ ಶರಣ ಸಂಸ್ಕೃತಿ ಉತ್ಸವ ಅನೇಕ ವಿಶೇಷಗಳಿಗೆ ಸಾಕ್ಷಿಯಾಯಿತು. ಕಳೆದ ೧೩ನೇ ತಾರೀಖಿನಿಂದ ನಡೆಯುತ್ತಿರುವ ಉತ್ಸವ ಇಂದು ಮತ್ತೊಂದು ವಿಶೇಷತೆಗೆ ಕಾರಣವಾಯಿತು. ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ನೇತೃತ್ವದಲ್ಲಿ ಅದ್ಧೂರಿ ಜನಪದ ಜಾತ್ರೆಯೇ ನಡೆಯಿತು. ಲಕ್ಷಾಂತರಜನಆ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಮುಂಜಾನೆ ಎಂದಿನಂತೆ ಮುರುಘಾ ಶರಣರು ಸಹಜ ಶಿವಯೋಗ ಕಾರ್‍ಯಕ್ರಮವನ್ನುಶ್ರೀ ಮಠದ ಅನುಭವಮಂಟಪದಲ್ಲಿ ನಡೆಸಿಕೊಟ್ಟ ನಂತರ ಮುರುಘಾ ಶಾಂತವೀರ ಸ್ವಾಮಿಗಳ ಗದ್ದುಗೆಯ ಮುಖಾಂತರ ಶ್ರೀಮಠದ ಪ್ರಾಂಗಣದಲ್ಲಿ ಸಿಂಗರಿಸಿದ್ದ ಪುಷ್ಪಾಲಂಕೃತ ಸಾರೋಟಿನತ್ತ ಸಾಗಿ ನಾಡಿನ ನಾನಾ ಮಠಗಳ ಸ್ವಾಮಿಗಳು, ಬಸವ ಭಕ್ತರು, ಸಾರ್ವಜನಿಕರು, ಕಲಾವಿದರು, ಜನಪ್ರತಿನಿಧಿಗಳ ಹರ್ಷೋಧ್ಘಾರಗಳ ನಡುವೆ ಸಾರೋಟನ್ನು ಏರಿದರು. ನಂತರ

ದ್ಯಾಮಲಾಂಬ ದೇವಸ್ಥಾನದಲ್ಲಿ ಇಂದಿನಿಂದ ದಸರಾ ಉತ್ಸವ.

ಚಿತ್ರದುರ್ಗ:  ಜಿಲ್ಲೆಯ ಹೆಸರಾಂತ ದೇವಾಲಯಗಳಲ್ಲಿ ಒಂದಾದ ತಾಲ್ಲೂಕಿನ ಹಿರೇಗುಂಟನೂರಿನ ಶ್ರೀ ದ್ಯಾಮಲಾಂಬ ದೇವಸ್ಥಾನದಲ್ಲಿ ಇಂದಿನಿಂದ ದಸರಾ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಗುರುವಾರ ಆಯುಧ ಪೂಜೆ ನೀಮಿತ ದ್ಯಾಮಲಾಂಬ ದೇವಿಗೆ  ಹಾಗೂ ಶ್ರೀ ವೀರಭದ್ರ ಸ್ವಾಮಿಗಳಿಗೆ ಇಂದಿನಿಂದಲೆ ವಿಶೇಷ ಅಲಂಕಾರ ಮಾಡಲಾಗುತ್ತಿದ್ದು, ಶುಕ್ರವಾರ ದೇವಿಯು ಬನ್ನಿ ಮುಡಿಯಲಿದೆ, ಇದೆ ವೇಳೆ ಜಿಲ್ಲೆ ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಗೆ ಕೃಪೆಗೆ ಪಾತ್ರರಾಗುತ್ತಾರೆ.

ವಿಚಾರ ಸಂಕಿರಣ: ಶೂನ್ಯದಿಂದ ಸಾಧನೆ ಮಾಡುತ್ತಾರೆ ಕೆಲವರು: ಮುರುಘಾಶರಣರು

ಚಿತ್ರದುರ್ಗ: ನಮ್ಮ ಸುತ್ತ ಮೂರು ವರ್ಗದ ಜನರಿರುತ್ತಾರೆ. ಒಂದನೇ ವರ್ಗದವರು ಕಾಲಗರ್ಭದಲ್ಲಿ ಕರಗಿ ಹೋಗುವವರು, ಎರಡನೆಯ ವರ್ಗದವರು ಹಣದ ಹಿಂದೆ ಹೋಗುವವರು. ಹಣ ಇದ್ದರು ಕೆಲವರಿಗೆ ಗೌರವ ಉಳಿಸಿಕೊಳ್ಳಲು ಆಗುವುದಿಲ್ಲ. ಹಣವು ಒಂದು ದಿನ ಮರ್ಯಾದೆಯನ್ನು ಕಳೆಯುತ್ತದೆ. ಮೂರನೆಯ ವರ್ಗದವರು ಶೂನ್ಯದಿಂದ ಎದ್ದು ಬಂದವರು. ಇವರು ಯಾವತ್ತಿಗೂ ಬರಿಗೈಯಲ್ಲಿರುತ್ತಾರೆ ಹಾಗು ಶೂನ್ಯದಿಂದ ಸಾಧನೆ ಮಾಡುತ್ತಾರೆ ಎಂದು ಮುರುಘಾ ಶರಣರು ಹೇಳಿದರು. ವಿಚಾರ ಸಂಕಿರಣದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಇದಕ್ಕೆ ಉಜ್ವಲವಾದ ಉದಾಹರಣೆ ಫ.ಗು.ಹಳಕಟ್ಟಿ. ಹಣಕ್ಕಾಗಿ ಸಂಶೋಧನೆ ಮಾಡುವವರು ಇದ್ದಾರೆ, ಆದರೆ ಕೆಲವರು ಸಾಹಿತ್ಯಕ್ಕಾಗಿ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಹಳಕಟ್ಟಿಯಂತವರನ್ನು ನಾವು ಆದರ್ಶವಾಗಿಟ್ಟುಕೊಂಡು ಅವರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದರು.

ಸಹಜ ಶಿವಯೋಗ: ಅನುಭವದ ಮೂಲಕ ಜೀವನ ನಡೆಸುವುದೇ ನಿಜ ಶರಣ

ಚಿತ್ರದುರ್ಗ: ಅನುಭವದ ಮೂಲಕ ಜೀವನ ನಡೆಸುವುದೇ ಶರಣ ಸಂಸ್ಕೃತಿಯ ವೈವಿಧ್ಯತೆ. ಅನುಭವವಿಲ್ಲದವರೇ ದುರ್ಬಲರು ಅನುಭವ ಹೊಂದಿದವರು ಪ್ರಬಲರು. ಭೌತಿಕ ದಾಸ್ಯದಿಂದ ಜನರನ್ನು ಹೊರತಂದರೆ ಸ್ವಾತಂತ್ರಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಮುರುಘಾಶರಣರು ಹೇಳಿದರು. ಶ್ರೀಮಠದ ಅನುಭವ ಮಂಟಪದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಸಹಜ ಶಿವಯೋಗ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡುತ್ತಿದ್ದರು. ಸಹಜ ಶಿವಯೋಗದ ಧ್ಯಾನ ಎಂದರೆ ಮೌನ, ಮೌನವೇ ಧ್ಯಾನ. ಕಾಯಕ, ದಾಸೋಹ, ಸಮಾನತೆ, ತತ್ತ್ವ ಸಿದ್ದಾಂತ ನೀಡಿದ ಬಸವಾದಿ ಶರಣರ ನುಡಿಗಳು ಮಹತ್ವವನ್ನು ಪಡೆದಿವೆ ಎಂದರು. ೧೨ನೇ ಶತಮಾನದ ಅನುಭವ ಮಂಟಪ ವಚನಗಳ ಮೂಲಕ ವಿಚಾರಧಾರೆಗಳನ್ನು ಹರಡಿತು. ಶರಣರ ಪ್ರತಿಪಾದನೆಗಳನ್ನು ಕೇಳುವುದು ಮುಖ್ಯ. ಅಬ್ರಹಾಂ ಲಿಂಕನ್ ಅಧ್ಯಯನ ಮಾಡಲು

ಶರಣ ಸಂಸ್ಕೃತಿ ಉತ್ಸವ: ಮುರುಘಾಶ್ರೀ ಪ್ರಶಸ್ತಿ ಪ್ರದಾನ

ಚಿತ್ರದುರ್ಗ: ಮುರುಘಾಮಠ ಶೂನ್ಯಪೀಠದ ಹೆಸರಿಗೆ ತಕ್ಕಂತೆ ಬಸವಾದಿ ಶರಣರ ವಚನಗಳನ್ನು ಯತಾವತ್ತಾಗಿ ಕಾರ್‍ಯರೂಪಕ್ಕೆ ತರುತ್ತಿದೆ. ಜಗದ್ಗುರು ಪದವಿ ತೊರೆದು ಶರಣ ಪದವಿಯನ್ನು ಅಲಂಕರಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ ಎಂದು ಮುರುಘಾಶರಣರು ಹೇಳಿದರು. ಮುರಘಾಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಅವರು ಬಸವತತ್ತ್ವ ಬೋದಿಸುವ ಮಠಗಳಲ್ಲಿ ಇಂದಿಗೂ ಸಹ ರುದ್ರಾಭಿಷೇಕ, ವಿಗ್ರಹ ಆರಾಧನೆ ನಡೆಯುತ್ತಿದೆ. ಶೂನ್ಯಪೀಠದ ಹೆಸರಿಗೆ ತಕ್ಕಂತೆ ಬಸವಾದಿ ಶರಣರ ವಚನಗಳನ್ನು ಯತಾವತ್ತಾಗಿ ಕಾರ್‍ಯರೂಪಕ್ಕೆ ತರುತ್ತಿದೆ ಎಂದರು. ವಿಗ್ರಹವಿರುವ ಸ್ಥಳದಲ್ಲಿ ವಚನಗಳ ಸಂಗ್ರಹಗಳನ್ನು ಇರಿಸಿ ಗೌರವಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ಮುರುಘಾಶ್ರೀ ಪ್ರಶಸ್ತಿ ಸಾಧಕರಿಗೊಂದು ಪ್ರೇರಣೆಯಾಗಲಿದೆ ಎಂದು ನುಡಿದರು. ಯಮನಕರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟೇಶ್ವರ ಸ್ವಾಮಿಗಳು ಕಾರ್‍ಯಕ್ರಮದ ಸಮ್ಮುಖ