ಕ್ರೈಂ ಸುದ್ದಿ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭೀಕರ ಅಪಘಾತ. ಮೈನ್ಸ್ ಲಾರಿ ದ್ವಿಚಕ್ರಕ್ಕೆ ವಾಹನಕ್ಕೆ ಡಿಕ್ಕಿ ಮೂರು ಜನ್ರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ  ನಡೆದಿದೆ. ಕುಟುಂಬವೊಂದು ಚಿಕಿತ್ಸೆಗೆ ತೆರಳಿ ಮರಳಿ ಬರುತ್ತಿರುವ ವೇಳೆ ಸಂಭವಿಸಿದ ದುರಂತದಲ್ಲಿ ಒಂಬತ್ತು ತಿಂಗಳ ಗರ್ಭಿಣಿ ಸೇರಿದ್ದಂತೆ ಇಬ್ಬರ ಸಾವನ್ನಪ್ಪಿದ್ದಾರೆ. ಗರ್ಭಿಣಿ ಮಹಿಳೆ ದೀಪಾ (೨೧), ಮಹಾತೇಂಶ್(೩೮), ಮೃತ ಮಹಾತೇಂಶ್ ನ 8 ವರ್ಷದ ಅಣ್ಣನಗಳು ಚೇತನ  ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಹಿನ್ನಲೆ ಸ್ಥಳೀಯರಿಂದ ಮೈನ್ಸ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾರು –ಲಾರಿ ಡಿಕ್ಕಿ ನಾಲ್ವರು ಸಾವು.!

  ಮಂಡ್ಯ: ಕಾರು, ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪಿದ ಘಟನೆ ಮದ್ದೂರು ಪಟ್ಟಣದ ಬಳಿ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ೀ ಘಟನೆ ನಡೆದಿದ್ದು, ಮೃತರು ಕೇರಳ ಮೂಲದ ವರೆಂದು ತಿಳಿದು ಬಂದಿದ್ದು, ಜಯದೀಪ್(29), ಜೆನ್ಸಿ(27), ಜ್ಞಾನತೀರ್ಥ(26) ಹಾಗೂ ಕಿರಣ್(30) ಎಂದು ಗುರುತಿಸಲಾಗಿದೆ. ಪೊಲೀಸರು ಇದರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಶೀಲ ಶಂಕಿಸಿ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಪತಿ ಕರಿಯಪ್ಪ ಬಂಧನ: ಎಸ್.ಪಿ

ಚಿತ್ರದುರ್ಗ: ಶೀಲ ಶಂಕಿಸಿ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಪತಿ ಕರಿಯಪ್ಪನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ತಿಳಿಸಿದರು. ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಕೊಲೆ ಬಗ್ಗೆ ಮಾಹಿತಿ ನೀಡಿದ ರಕ್ಷಣಾಧಿಕಾರಿ ಹೊಸದುರ್ಗ ತಾಲೂಕು ಮಾಡದಕೆರೆ ಹೋಬಳಿಯ ಬೇವಿನಹಳ್ಳಿಯ ಕರಿಯಪ್ಪ ತನ್ನ ಪತ್ನಿ ಶುಭಳ ಶೀಲ ಸರಿಯಿಲ್ಲವೆಂದು ಶಂಕಿಸಿ ಪದೇ ಪದೇ ಜಗಳವಾಡುತ್ತಿದ್ದ. ಇಬ್ಬರು ಅನ್ಯೋನ್ಯವಾಗಿರುವಂತೆ ಹಿರಿಯರು ಅನೇಕ ಬಾರಿ ದಂಪತಿಗಳಿಗೆ ಬುದ್ದಿ ಮಾತು ಹೇಳಿದ್ದರು. ಬುಧವಾರ ರಾತ್ರಿಯೂ ಇಬ್ಬರ ನಡುವೆ ಇದೇ ವಿಚಾರಕ್ಕೆ ಜಗಳವಾಗಿತ್ತು. ಗುರುವಾರ ಬೆಳಗಿನ ಜಾವ ಮಲಗಿದ್ದ ಪತ್ನಿಗೆ ಇಟ್ಟಿಗೆಯಿಂದ ತಲೆಗೆ ಹೊಡೆದು ನಂತರ ಹೊದಿಕೆಯಿಂದ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾನೆ. ತನ್ನ

ಓಮ್ನಿ ಪಲ್ಟಿ: ಇಬ್ಬರ ಸಾವು, ನಾಲ್ವರಿಗೆ ಗಾಯ..!

ಹಾನಗಲ್: ಓಮ್ನಿ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರ ಬಳಿ ನಡೆದಿದೆ. ಮೃತರು ನೀಲಕಂಠಪ್ಪ ಎಲಿಗಾರ (60), ನೀಲಮ್ಮ(74) ಎಂದು ಗುರುತಿಸಲಾಗಿದೆ. ಇನ್ನು ಅಫಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು,  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮದುವೆಗೆ ಹೋಗಿ ಮಸಣ ಸೇರಿದ ಮೂವರು..!

  ಚಿತ್ರದುರ್ಗ:  ಹಿರಿಯೂರಿನ ಮದುವೆ ಮುಗಿಸಿ ವಾಪಸ್ ಬೆಂಗಳೂರಿಗೆ ವಾಪಸ್ ಮರಳುತ್ತಿದ್ದ ವೇಳೆ ಬೈಕ್ ಅಪಘಾತ ಸಂಭಿಸಿ ಮೂವರು ಸಾವನ್ನಪ್ಪಿರುವ ಘಟನೆ  ನಡೆದಿದೆ. ದುರ್ಗದ ನಿವಾಸಿಗಳಾದ ಪೃಥ್ವಿರಾಜ್(24), ಹನುಮಂತರಾಯ ಹಾಗೂ ಶಿವಕುಮಾರ್ ಮೃತರು ಎಂದು ತಿಳಿದು ಬಂದಿದೆ. ಹಿರಿಯೂರಿನಲ್ಲಿ ತಮ್ಮ ಸ್ನೇಹಿತನ ಮದುವೆ ಮುಗಿಸಿ ಒಂದೇ ಬೈಕಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ದುರಾದೃಷ್ವಶಾತ್ ದಾರಿ ಮಧ್ಯೆ ಬೈಕ್ ಅಪಘಾತ ಸಂಭವಿಸಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರೂ ಒಂದೇ ಬೈಕಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಮುಖ್ಯ ಮಂತ್ರಿ ಕುಮಾರಸ್ವಾಮಿ ಬೆಂಗಾವಲು ಪಡೆ ವಾಹನ ಪಲ್ಟಿ..!

ಶಿವಮೊಗ್ಗ: ಮುಖ್ಯ ಮಂತ್ರಿ ಕುಮಾರಸ್ವಾಮಿ ಬೆಂಗಾವಲು ಪಡೆಯ ವಾಹನ ಕೊಪ್ಪ ತಾಲೂಕಿನ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹೋಮ ನಡೆಸಿ ಸಿಎಂ ಹಿಂದಿರುಗುತ್ತಿದ್ದ ವೇಳೆ ಪಲ್ಟಿಯಾಗಿದೆ. ಆಲ್ದೂರಿನ ಶಂಕರ್ ಫಾಲ್ಸ್​ ಬಳಿಯ ರಸ್ತೆ ತಿರುವಿನಲ್ಲಿ ಈ ಘಟನೆ ನಡೆದಿದ್ದು, ವಾಹನದಲ್ಲಿದ್ದ ಇನ್ಸ್​ಪೆಕ್ಟರ್​ ಪ್ರದೀಪ್​ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದಲ್ಲಿ ಕಾರಿನ ಮುಂಭಾಗ ಹಾಗೂ ಕಿಟಕಿಗಳ ಗಾಜು ಪುಡಿ ಪುಡಿಯಾಗಿವೆ ಎಂದು ತಿಳಿದು ಬಂದಿದೆ.

ಎರಡು ಲಾರಿಗಳ ನಡುವೆ ಡಿಕ್ಕಿ ಇಬ್ಬರು ಚಾಲಕರು ಸಜೀವ ದಹನ..!

  ವಿಜಯಪುರ : ಕಂಟೇನರ್ ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕರಿಬ್ಬರು ಸಜೀವ ದಹನವಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಎನ್ ಹೆಚ್ 13 ರಲ್ಲಿ ನಡೆದಿದೆ. ಕಂಟೇನರ್ ಲಾರಿಗಳ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡು ಲಾರಿಗಳು ಹೊತ್ತಿ ಉರಿದಿದ್ದು, ಚಾಲಕರಿಬ್ಬರು ಸಜೀವ ದಹನವಾಗಿದ್ದಾರೆ. ಕಂಟೇನರ್ ನಲ್ಲಿದ್ದ ಕ್ಲೀನರ್ ಒಬ್ಬರು ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ವಿದ್ಯುತ್ ತಂತಿ ತುಳಿದು ನಾಲ್ವರು ಸಾವು.!

ಬೆಳಗಾವಿ: ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲ್ಲೂಕಿನ ಬಿ.ತಿಮ್ಮಾಪರು ಗ್ರಾಮದಲ್ಲಿ ನಡೆದಿದೆ ಮೃತರು  ರೇವಪ್ಪ ಕಲ್ಲೋಳಿ, ರತ್ನವ್ವ ಕಲ್ಲೋಳಿ, ಸಚಿನ್ ಹಾಗೂ ಕೃಷ್ಣ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಭಾರಿ ಮಳೆ-ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಬೆಳಗ್ಗೆ ಜಮೀನಿಗೆ ತೆರಳಿದಾಗ ಘಟನೆ ನಡೆದಿದೆ. ಈ ಬಗ್ಗೆ ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.! (ಸಾಂದರ್ಭಿಕ ಚಿತ್ರ)

2.52 ಕೋಟಿ ಮೌಲ್ಯದ ಮದ್ಯ ವಶ.!

ಬೀದರ್: ಪರವಾನಗಿ ಇಲ್ಲದೆ ಕಂಟೈನರ್ ನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ 2.52 ಕೋಟಿ ಮೌಲ್ಯದ ಮದ್ಯ ವಶವನ್ನು ಅಬಕಾರಿ ಅಧಿಕಾರಿಗಳು ಹಿಡಿದಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ್ ಚೆಕ್ ಪೋಸ್ಟ್ ನಲ್ಲಿ ಕಂಟೈನರ್ ವಾಹನದಲ್ಲಿ ಸಾಗಿಸತ್ತಿದ್ದಾಗ ವಾಹನವನ್ನು ತಡೆದು, ತಪಾಸಣೆ ನಡೆಸಿದಾಗ ಮದ್ಯಸಾಗಣಿಸುತ್ತಿದ್ದು ತಿಳಿದುಬಂದಿದೆ. ಮಹಾರಾಷ್ಟ್ರದಿಂದ ಹೈದರಾಬಾದ್ ಗೆ  ಸಾಗಿಸುತ್ತಿದ್ದ ಅಕ್ರಮ ದೇಶಿ, ವಿದೇಶಿ ಮದ್ಯಗಳನ್ನು ತುಂಬಿದ ಕಂಟೈನರ್ ನ್ನು ವಶಪಡಿಸಿಕೊಂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾ ಸಾಗಣೆ : ಓರ್ವ ಬಂಧನ

ಚಿತ್ರದುರ್ಗ: ಜಿಲ್ಲೆಯ ಅಬಕಾರಿ ಇಲಾಖೆ ಹಿರಿಯೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ 1 ಕೆ.ಜಿ. 20 ಗ್ರಾಂ ಒಣ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿ ಗ್ರಾಮ ನಿವಾಸಿ ಶ್ರೀನಿವಾಸ್ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕ ಮೊತಿಲಾಲ್, ಅಬಕಾರಿ ನಿರೀಕ್ಷಕರುಗಳಾದ ವನಜಾಕ್ಷಿ, ಪ್ರಹ್ಲಾದಾಚಾರ್ಯ ಸೇರಿದಂತೆ ವಿವಿಧ ಅಧಿಕಾರಿ, ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.