ಕ್ಯಾಂಪಸ್

ಕೆ.ಸಿ.ಶರಣಪ್ಪ ಅವರಿಗೆ ಪಿ.ಹೆಚ್.ಡಿ. ಪದವಿ ಪ್ರದಾನ

ಚಿತ್ರದುರ್ಗ: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಸಿ.ಶರಣಪ್ಪ ಅವರು “ ಹಟ್ಟಿ ಸಂಸ್ಕೃತಿ ಮತ್ತು ಪರಂಪರೆ ಸಾಮಾಜಿಕ ಅಧ್ಯಯನ“ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಈಚೆಗೆ ನಡೆದ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಿದೆ. ಡಾ: ಚೆಲುವರಾಜು ಅವರ ಮಾರ್ಗದರ್ಶನದಲ್ಲಿ ಶರಣಪ್ಪ ಅವರು ಸಂಶೋಧನಾ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದರು. ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ಸ್ನೇಹದ ಅಂಗಳದಿ ಪ್ರೀತಿಯ ಬೇಸುಗೆ

ನೀನು ತುಂಬಾ ಬಿಜಿ ಇದ್ದಿಯಾ, ಫ್ರೀ ಇದಿಯೋ ನನಗೆ ಗೊತ್ತಿಲ್ಲ. ಆದರೂ ಯಾವಗಲಾದರೂ ನನ್ನ ನೆನಪಿಸಿಕೊಂಡು ನನ್ನ ಮೊಬೈಲ್‌ಗೆ ಬಂದು ತಪ್ಪಿದಕರೆ ಅಥವಾ ಸಂದೇಶ ಆದರೂ, ರವಾನಿಸುತ್ತಿಯೊ ಎಂಬ ದೂರದ ಆಸೆ ನನ್ನದು. ಅದಕ್ಕೆ ತಾಸಿಗೊಂದು ಸರಿ ಫೋನ್ ಹಿಡಿದು ನೋಡುತ್ತಾ ಇರುತ್ತೇನೆ. ಆದರೆ ನೀನು ನನ್ನ ಮರೆತು ಬಿಟ್ಟಿದ್ದಿಯಾ ಅನಿಸುತ್ತಿದೆ. ನಾನು ಜೊತೆಗೆಇದ್ದಾಗ ನನ್ನನು ಬಿಟ್ಟರೆ ಲೋಕವೆ ಇಲ್ಲಾ ಎಂಬಷ್ಟು ನನ್ನ ಅಚ್ಚಿಕೂಂಡವಳು ನೀನು..? ನಮ್ಮ ಊರಿನಿಂದ ವಿದ್ಯಾಭ್ಯಾಸಕೇಂದು ಮಂಗಳೂರಿನಲ್ಲಿರುವ ಕರಾವಳಿ ಕಾಲೇಜಿನಲ್ಲಿ ಬಿ.ಎಡ್. ಮಾಡುವಾU ಉದಾಹರಣೆ ಕೌಶಲ್ಯಕೆಂದು ಒಂದು ಪಿಂಕ್ ರೋಸ್‌ತಂದಿದ್ದೆ, ಈ ಕೌಶಲ್ಯವನ್ನು ಪ್ರೇಸೆಂಟ್ ಮಾಡುವಾಗ ಆ ರೋಸ್‌ಕೈಯಲ್ಲಿ ಹಿಡಿದು, ಇದರ ಬಣ್ಣಯಾವುದೆಂದು ನಾ

ಮುಂಜಾನೆ ಮಂಜಿನಲಿ ರಾಜ್ ಕುಮಾರ್ ಪಾರ್ಕಿನಲಿ……………….

ಉಸಿರು ನೀನೆ, ಜೀವಾ ನೀನೆ  ನನಗೆ ಸರ್ವವೂ ನೀನೆ ಕನಸಲ್ಲೂ ಮನಸಲ್ಲೂ ನಿನ್ನ ನೆನಪುಗಳೆ ಕಾಡುತ್ತಿವ ನನಗೆ ಈ ವಿಶಾಲವಾದ ಜಗತ್ತಿನಲ್ಲಿ ಪ್ರೀತಿಯ ಲೋಕವಾಗಿತ್ತು ನಮ್ಮಿಬ್ಬರಿಗೆ. ನಿನಗೆ ನಾನು ನನಗೆ ನೀನು ಹಾಲು ಸಕ್ಕರೆಯಂತೆ ಕೂಡಿದ್ದೆವು. ನಮ್ಮಿಬ್ಬರ ಅನ್ಯೋನ್ಯ ಪ್ರೀತಿಗೆ ಕಾಲೇಜ್ ನಲ್ಲಿ ಪ್ರಿನ್ಸಿಪಲ್ ಸಹ ತಲೆಬಾಗಿದ್ದುಂಟು. ಒಂದು ಚಿಕ್ಕ ಜಗಳದಿಂದ ಪ್ರಾರಂಭವಾದ ನಮ್ಮ ಪ್ರೀತಿ ಆ ರೋಮಿಯೋ ಜುಲೆಟ್ ಗಿಂತ ಏನು ಕಡಿಮೆಯಿಲ್ಲ. ಇಡಿ ಕಾಲೇಜ್ ಎಲ್ಲಾ ಸೇರಿ ನಮಗೆ ಬೆಸ್ಟ್ ಲವರ್ಸ್ ಅವಾರ್ಡ್ ನೀಡಿದ್ದಾರೆ. ಜೀವನವನ್ನು ಗೆಲ್ಲುವ ಮಾರ್ಗ ಮತ್ತು ಅಗಾಧ ಆತ್ಮವಿಶ್ವಾಸವನ್ನು ತುಂಬುದವಳು ನೀನು. ನಾನು ಸೋತಾಗ ಧೈರ್ಯ ತುಂಬಿದವಳು ನೀನು. ನನ್ನ ಸ್ಪೂರ್ತಿ

ಶೋಷಿತರ ವರ್ಗದವರು ಆಡಳಿತ ಅಧಿಕಾರದಿಂದ ವಂಚಿತರು: ಡಿಜಿ ಸಾಗರ

  ದಾವಣಗೆರೆ : ಶೋಷಿತ ವರ್ಗದವರು ಆಡಳಿತದ ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ ಜಿ ಸಾಗರ್ ಹೇಳಿದರು. ಸದ್ಯ ಶೋಷಿತ ವರ್ಗಗಳಿಗೆ ಆಡಳಿತ ಕೊರತೆಯಿದೆ ಆಡಳಿತ ಅಧಿಕಾರವನ್ನ ನೀಡಿದಲ್ಲಿ ಈ ದೇಶವನ್ನು ಸಮರ್ಥವಾಗಿ ನಿಭಾಹಿಸಬಲ್ಲರು ಎಂದು ತಿಳಿ ಹೇಳಿದರು. ವಿಶ್ವವಿದ್ಯಾನಿಲದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ  “ಭಾರತ ಸಂವಿಧಾನ ದಿನಾಚರಣೆ’’ಯ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದ ಕಲ್ಬುರ್ಗಿಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ ಜಿ ಸಾಗರ್, ಪ್ರಸ್ತುತ ಸಂವಿಧಾನದ ಅರಿವು ವಿದ್ಯಾರ್ಥಿಗಳಲ್ಲಿ ಅಗತ್ಯವಾಗಿದೆ. ಸ್ವಾತಂತ್ರ್ಯ ಸಿಕ್ಕು 69

ನಾವು ಏಕಾಂಗಿಗಳಲ್ಲ: ಸಂಬಂಧಗಳ ಬಲೆಯಲ್ಲಿ ಬಂಧಿಯಾಗಿದ್ದೇವೆ

ಯುವಕರು ಅದರಲ್ಲೂ ಪ್ರೇಮಿಗಳು ತಮ್ಮ ಪ್ರೀತಿಯಲ್ಲಿ ಹುಡುಗಿ ಕೈಕೊಟಾಕ್ಷಣ ಜೀವನದಲ್ಲಿ ಸೋತಾಕ್ಷಣ ಏಕಾಂಗಿಗಳಂತೆ ವರ್ತಿಸುತ್ತಾರೆ. ತಮ್ಮ ಫೇಸ್ ಬುಕ್ ಪೋಸ್ಟ್ ಗಳಲ್ಲಿ ವಾಟ್ಸಾಪ್ ಡಿಪಿ ಹಾಗೂ ಸ್ಟೇಟಸ್ ಗಳಲ್ಲಿ ಏಕಾಂಗಿಯ ಭಾವನೆಗಳು ಏಕಾಂಗಿಯ ಭಾವಚಿತ್ರಗಳು ಐ ಯಾಮ್ ಅಲೋನ್ ಡೋಂಟ್ ಡಿಸ್ಟರ್ಬ್ ಮಿ ಎನ್ನುವ ಸ್ಟೇಟಸ್ ಭಾವನೆಗಳೆ ರಾರಾಜಿಸುತ್ತಿರುತ್ತವೆ. ದಯವಿಟ್ಟು ಯಾರು ನನ್ನನ್ನು ಡಿಸ್ಟರ್ಬ್ ಮಾಡಬೇಡಿ, ನಾನು ಏಕಾಂಗಿ ಎಂದೆಲ್ಲಾ ಬರೆದು ಪೋಸ್ಟ್ ಮಾಡಿರುತ್ತಾರೆ. ಒಂದು ಕ್ಷಣ ಒಂದೇ ಒಂದು ಕ್ಷಣ ಪ್ರಜ್ಞಾಪೂರ್ವಕವಾಗಿ ತಾರ್ಕಿಕವಾಗಿ ಯೋಚಿಸಿದಾಗ ತಿಳಿಯುತ್ತದೆ ನಾವೆಲ್ಲಾ ಏಕಾಂಗಿಗಳಲ್ಲ ಸಂಬಂಧಗಳ ಬಲೆಯಲ್ಲಿ ಬಂಧಿಯಾಗಿದ್ದೇವೆ ಎಂದು. ಪ್ರೀತಿಸಿದವರು ದೂರವಾದರೇನಂತೆ ಜೀವಕ್ಕೆ ಜೀವ ನೀಡುವ ಸ್ನೇಹಿತರಿಲ್ಲವೆ. ಈ ಪ್ರಪಂಚದಲ್ಲಿ ಪ್ರೀತಿಯಲ್ಲಿ 

ಪ್ರೀತಿಯಿಂದ ಕಂಡ ಪ್ರಪಂಚ: ಅಮ್ಮನ ಪ್ರೀತಿಯನ್ನು ಪ್ರೀತಿಯಿಂದ ಕಂಡೆ

ಅದೇನೋ ಯಾಕೋ ಗೊತ್ತೆ ಇಲ್ಲ, ಸುಮ್ಮನೆ ನಾನಾಯ್ತು, ನನ್ನ ಕೆಲಸವಾಯ್ತು ಎಂದು ನನ್ನ ಪಾಡಿಗೆ ನಾನಿದ್ದ ಜೀವನದಲ್ಲಿ ಇದ್ದಕ್ಕಿದ್ದಹಾಗೆ ಕಾಲಿಟ್ಟಳು ಪ್ರೀತಿ. ಇರುಳಲ್ಲಿ ದೀಪವಿಡಿದು ನಿಂತು ಯಶಸ್ಸೆಂಬ ಹಾದಿ ತೋರಿಸಿದಳು. ನಾನು ಕಂಡಾಗಲೆಲ್ಲಾ ‘ನೀನೆಂದರೆ ನನಗೆ ತುಂಬಾ ಇಷ್ಟ, ಯಾವಾಗ ಮದುವೆ ಯಾಗ್ತೀಯಾ’ ಎಂದೇ ಕೇಳುತ್ತಿದ್ದಳು. ಆಗ ನಾನು ಮುಗುಳು ನಕ್ಕಾಗ ಮನಸಾರೆ ನಗೋ ನೋಡೋ ಆಸೆಯಾಗಿದೆ ಎನ್ನುತ್ತಿದ್ದಳು. ಜೀವನದ ಕಷ್ಟ-ಸುಖಗಳನ್ನು ಅರಿತಿರುವ ಅವಳು ನನಗೂ ಅವನ್ನೆಲ್ಲಾ ಕಲಿಸಿದಳು. ಪ್ರತಿ ಗುರುವಾರ ಸಾಯಿಬಾಬಾ ಟೆಂಪಲ್ ಗೆ ಕರೆದೊಯ್ಯುವಳು, ವೀಕೆಂಡ್ ಗೆ ಒಂದೊಳ್ಳೆ ಕನ್ನಡ ಮೂವೀ ಜೊತೆಗೆ ಬೈಕ್ ನಲ್ಲಿ ಜಾಲೀರೈಡ್,  ನಾ ಆಫೀಸ್ ನಲ್ಲಿರುವಾಗ ನಾಲ್ಕೈದು ಪೋನ್ ಕಾಲ್

ನ್ಯೂ ಇಯರ್ ಟೈಮ್ ಇಸ್ ಮೈ ಲೈಫ್ ಗೊಲ್ಡನ್ ಟೈಮ್

ಕೆಲವರ ವಿಚಾರದಲ್ಲಿ ಅದೇಷ್ಟು ಸರಿಯೋ ನನಗೆ ಗೊತ್ತಿಲ್ಲ ಆದರೆ ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಡೆದ ಘಟನೆ ಮರೆಯಲಾಗದು. ಅದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದ್ದರೆ ಈ ಮುಂದಿನ ಸಂಗತಿಯನ್ನು ಚಾಚು ತಪ್ಪದೆಓದಿ…. ಕಳೆದ ಎರಡು ವರ್ಷಗಳ ಹಿನದೆ ಅಂತಿಮ ಬಿಎ ಓದುತಿದ್ದ ನಾವು ನಮ್ಮ ಆಯ್ಕೆಯ ವಿಷಯದಲ್ಲಿ ಕೇವಲ ೧೯ ಜನ ವಿದ್ಯಾರ್ಥಿಗಳು, ಅದರಲ್ಲಿ ೧೪ ಜನ ಹುಡುಗರು ೫ ಜನ ಹುಡುಗಿಯರು ಮಾತ್ರ.. ಇನ್ನುಅಂತಿಮ ವರ್ಷದ ಬಿಎ ಬರೊವತ್ತಿಗೆ ಕೇವಲ ೧೨ ಜನ ಹುಡುಗರು. ಒಂದು ಹುಡುಗಿ ಮಾತ್ರ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ ನಮ್ಮ ಸೆಕ್ಷನ್‌ನಲ್ಲಿ ಮೋಜು ಮಸ್ತಿಗೆ, ಹೊಂದಾಣಿಕೆಗೆ ಹೆಚ್ಚು ಮಹತ್ವವನ್ನುಕೊಟ್ಟಿದ್ದೆವು. ಒಬ್ಬಳೇ ಇದ್ದ ಹುಡುಗಿ

ವಿಜಯಶ್ರೀ ಐ. ಎಸ್. ಅವರಿಗೆ ಡಾಕ್ಟರೇಟ್ ಪದವಿ

  ಶಿವಮೊಗ್ಗ: ಶ್ರೀಮತಿ ವಿಜಯಶ್ರೀ ಐ. ಎಸ್. ಇವರು ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪಿ. ನಿರಂಜನ ಇವರ ಮಾರ್ಗದರ್ಶನದಲ್ಲಿ”Biosynthesis Characterization and Pharmacotoxicological Effect of Noble Metal Nanoparticles and their Alloys” ವಿಷಯವಾಗಿ ಸಂಶೋಧನಾ ಅಧ್ಯಯನ ಮಾಡಿ, ಮಂಡಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ. ಇತ್ತೀಚೆಗೆ ವಿಶ್ವವಿದ್ಯಾಲಯವು ಏರ್ಪಡಿಸಿದ್ದ 28 ನೇ ಘಟಿಕೋತ್ಸವದಲ್ಲಿ ವಿಜಯಶ್ರೀ ಐ. ಎಸ್. ಅವರಿಗೆ ಪದವಿ ಪ್ರದಾನ ಮಾಡಲಾಯಿತು.

ಚಿತ್ರದುರ್ಗ: ಸರಕಾರಿ ವಿಜ್ಞಾನ ಕಾಲೇಜಿಗೆ ರ್‍ಯಾಂಕ್ ಗಳ ಸುರಿಮಳೆ

ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಚಿದಾನಂದ.ಸಿ ಪ್ರಥಮ ರ್‍ಯಾಂಕ್ (79.85%), ಮಣಿಕಂಠ ದ್ವಿತೀಯ ರ್‍ಯಾಂಕ್ (76%), ಅಶ್ವಿನಿ.ವಿ ತೃತೀಯ ರ್‍ಯಾಂಕ್ (75.08%) ಪಡೆದಿರುತ್ತಾರೆ. ಇದು ನಮ್ಮ ಕಾಲೇಜಿನ ಹೆಮ್ಮೆಯ ಸಂಗತಿ ಎಂದು ಭೋಧಕವರ್ಗ ಹಾಗೂ ಪ್ರಾಂಶುಪಾಲರು ತಿಳಿಸುತ್ತಾ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಎಸ್.ಜೆ.ಎಂ. ಕಾಲೇಜ್: ಬಿ.ಎ. ಪದವಿ ಪರೀಕ್ಷೆಯಲ್ಲಿ ರೇಷ್ಮಾಗೆ 6ನೇ ರ್‍ಯಾಂಕ್

ಚಿತ್ರದುರ್ಗ : ನಗರದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿನಿ ರೇಷ್ಮಾ ಡಿ. ದಾವಣಗೆರೆ ವಿಶ್ವವಿದ್ಯಾನಿಲಯವು 2016–17ನೇ ಸಾಲಿನ ಮೇ/ಜೂನ್‌ನಲ್ಲಿ ನಡೆಸಿದ ಬಿ.ಎ. ಪದವಿ ವಿಭಾಗದಲ್ಲಿ 6ನೇ ರ್‍ಯಾಂಕ್ ಗಳಿಸಿರುತ್ತಾರೆ. 6ನೇ ರ್‍ಯಾಂಕ್ ಗಳಿಸಿ ಕಾಲೇಜಿಗೆ ಹಾಗು ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುವ ರೇಷ್ಮಾ ಡಿ. ಇವರನ್ನು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯರು, ಬೋಧಕವರ್ಗ ಹಾಗು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.