ಕ್ಯಾಂಪಸ್

ಬಿ.ರೇವಣ್ಣನವರಿಗೆ ಪಿಹೆಚ್.ಡಿ. ಪದವಿ

ಚಿತ್ರದುರ್ಗ : ನಗರದ ಎಸ್.ಜೆ.ಎಂ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಬಿ.ರೇವಣ್ಣ ದಾವಣಗೆರೆ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎಂ. ಮುತ್ತಯ್ಯನವರ ಮಾರ್ಗದರ್ಶನದಲ್ಲಿ ಮಂಡಿಸಿದ ಕರ್ನಾಟಕದ ಚರಗ ಆಚರಣೆಗಳು ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ ಲಭಿಸಿದೆ. ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು, ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರಾಂಶುಪಾಲರಾದ ಡಾ.ಕೆ.ಸಿ. ರಮೇಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಪಿಹೆಚ್.ಡಿ. ಪದವಿಗೆ ಭಾಜನರಾದ ರೇವಣ್ಣನವರನ್ನು ಅಭಿನಂದಿಸಿದ್ದಾರೆ.

ಡಾ|| ಶ್ರೀ.ಮುಸ್ಸವೀರ್ ಪಾಷಾ ಅವರಿಗೆ ಡಾಕ್ಟರೇಟ್ ಪದವಿ

ಚಿತ್ರದುರ್ಗ: ಡಾ|| ಶ್ರೀ.ಮುಸ್ಸವೀರ್ ಪಾಷಾ ಕೆ.ಎಂ ಮೊಳಕಾಲ್ಮೂರು ರವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ೨೦೧೯-೨೦ನೇ ಸಾಲಿನ ಸಿಂಥೆಸಿಸ್, ಕ್ಯಾರೆಕ್ಟರೈಜೇಷನ್ ಅಂಡ್ ಸ್ಟಡಿ ಆಫ್ ಎಲೆಕ್ಟ್ರಾನ್ ಡಿಲೋಕಲೈಜೇಷನ್ ಆಫ್ ಆರ್ಗನೊಮೆಟಾಲಿಕ್ ಕಾಪೌಂಡ್ಸ್ ಡಿರೈವ್ಡ್ ಫ್ರಮ್ ಎಲೆಕ್ಟ್ರಾನ್ ಲಿಂಗಾಂಡ್ಸ್  4nπಗೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಪಿ.ಎಚ್,ಡಿ ಪದವಿ ಪಡೆದ ಆತ್ಮೀಯ ಸ್ನೇಹಿತನಿಗೆ ಫಜುಲುರ್ ರೆಹಮಾನ್ ವೈ.ಬಿ, ಅಜಮತ್‌ವುಲ್ಲಾ, ಸೈಯದ್ ಮುಜಮಿಲ್ ಮತ್ತು ಸ್ನೇಹಿತರ ಬಳಗ ಹೃದಯಸ್ಪರ್ಶಿ ಶುಭ ಕೋರಿದ್ದಾರೆ.

ಭೈರಸಿದ್ದಪ್ಪಗೆ ಪಿಎಚ್‌ಡಿ ಪದವಿ

ಚಿತ್ರದುರ್ಗ: ನಗರದ ವೆಂಕಟೇಶ್ವರ ಬಿಇಡಿ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಜಿ.ಇ ಭೈರಸಿದ್ಧಪ್ಪ ಅವರಿಗೆ ದಾವಣಗೆರೆ ವಿಶ್ವ ವಿದ್ಯಾನಿಲಯ ಶಿಕ್ಷಣ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ನೀಡಿದೆ. ದಾವಣಗೆರೆ ಎಂ.ಎಂ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಹೆಚ್.ವಿ ವಾಮದೇವಪ್ಪ ಅವರ ಮಾರ್ಗದರ್ಶನದಲ್ಲಿ ’ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯಗಳ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯ ಮೇಲೆ ಪ್ರಭಾವ ಬೀರುವ ಅಂಶಗಳು’ ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ, ಸಂಸ್ಥೆ ಸಿಇಒ ಎಂ.ಸಿ ರಘುಚಂದನ್ ಮತ್ತು ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ರಾಣಿ ಬಾಲಕೃಷ್ಣ- ಪಿ.ಎಂ.ಚಿನ್ನಯ್ಯಗೆ ಪಿಹೆಚ್‍ಡಿ ಪದವಿ

  ಚಿತ್ರದುರ್ಗ:  ನಗರದ ಬಿ.ಎಲ್.ಗೌಡ ಲೇಔಟ್‍ನ ಸಿ.ರಾಣಿ ಬಾಲಕೃಷ್ಣ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಹೆಚ್.ಡಿ ಪದವಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ.ವಿರೂಪಾಕ್ಷಿ ಪೂಜಾರಳ್ಳಿ ಅವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಕೆರೆಗಳು: ಚಾರಿತ್ರಿಕ ಅಧ್ಯಯನ” ಎಂಬ ವಿಷಯ ಕುರಿತು ಪಿಹೆಚ್.ಡಿ ಪ್ರಬಂಧ ಮಂಡಿಸಿದ್ದರು. ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ದಾಸರಮುತ್ತಿನಹಳ್ಳಿಯ ಪಿ.ಎಂ.ಚಿನ್ನಯ್ಯ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ. ವ್ಯವಹಾರ ಆಡಳಿತ ಪ್ರಾಧ್ಯಾಪಕ ಡಾ.ಆರ್.ಮಹೇಶ್ ಅವರ ಮಾರ್ಗದರ್ಶನದಲ್ಲಿ ಫೈನಾನ್ಷಿಯಲ್ ಪಾಲಿಸೀಸ್ ಅಂಡ್ ಸ್ಟ್ರಾಟರ್‍ಜಿಸ್ ಆಫ್ ಸೆಲೆಕ್ಟ್ ಇಂಡಿಯನ್ ಕಾಂಗ್ಲೋಮೆರೆಟ್ಸ್ ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ ನೀಡಿ ಗೌರವಿಸಲಾಗಿದೆ.  

ಮೈಕ್ರೋಬಯಾಲಜಿಯಲ್ಲಿ ಮೂರನೇ ರ್ಯಾಂಕ್ ಪಡೆದ ದುರ್ಗದ ರಾಜೇಶ್ವರಿ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾನಿಲಯದ ಮೈಕ್ರೋಬಯಾಲಜಿ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ರ್ಯಾಂಕ್ ಪಡೆದಿರುತ್ತಾರೆ . ಇವರು ಚಿತ್ರದುರ್ಗ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ.( ಸಾಮಾನ್ಯ ರಾಜ್ಯ ವಲಯ ) ಜೋಗಿಮಟ್ಟಿ ರಸ್ತೆ ಚಿತ್ರದುರ್ಗ ಇಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸಿ ಹೋಗಿ ನಂತರ ಕುವೆಂಪು ವಿಶ್ವ ವಿ ವಿ ಯಲ್ಲಿ ಯಶಸ್ವಿಯಾಗಿದ್ದಾರೆ  .ಆದ್ದರಿಂದ ಈ ವಿದ್ಯಾರ್ಥಿಯನ್ನು ಸಹ ನೆಲೆಯಲ್ಲಿ ಮೇಲ್ವಿಚಾರಕಿಯಾದ ದೀಪಾ ರಾಣಿ ಎಎಂ.. ಅವರು ಮತ್ತು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಅಬೂಬಕರ್ ಸಿದ್ದಿಕ್‌ಗೆ: ಪಿಹೆಚ್.ಡಿ. ಪದವಿ

ಚಿತ್ರದುರ್ಗ : ನಗರದ ಎಸ್.ಜೆ.ಎಂ. ಔಷಧ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಬೂಬಕರ್ ಸಿದ್ದಿಕ್ ಮಂಡಿಸಿದ ಪಿಹೆಚ್.ಡಿ. ಪದವಿ ಲಭಿಸಿದೆ. ಅವರು ಬರೆದ ಡ್ರಗ್ ಯುಟಿಲೈಜೇಷನ್ ಎವ್ಯಾಲ್ಯುವೇಷನ್ ಅಂಡ್ ಕಾಸ್ಟ್ ಅನಾಲಿಸಿಸ್ ಆಫ್ ಮ್ಯಾನೇಜ್‌ಮೆಂಟ್ ಆಫ್ ಡಯಾಬಿಟೀಸ್ ಮಿಲಿಟಸ್ ವಿಷಯ ಕುರಿತ ಮಹಾಪ್ರಬಂಧಕ್ಕೆ ರಾಜೀವ್‌ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‌ಸ್, ಬೆಂಗಳೂರು ಪಿಹೆಚ್.ಡಿ ಪದವಿಯನ್ನು ನೀಡಿದೆ. ಡಾ. ಭಾರತಿ ಡಿ.ಆರ್. ಅವರು ಮಾರ್ಗದರ್ಶನ ನೀಡಿರುತ್ತಾರೆ.

ಆಶಾ ಟಿ. ಅವರಿಗೆ ಡಾಕ್ಟರೇಟ್ (ಪಿಎಚ್.ಡಿ.)ಪದವಿ

ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎಸ್.ಎನ್. ಯೋಗೀಶ್ ಅವರ ಮಾರ್ಗದರ್ಶನದಲ್ಲಿ ಆಶಾ. ಟಿ. ಅವರು “ಕರ್ನಾಟಕದಲ್ಲಿ ನಗರಸಭೆಗಳು: ಚಿತ್ರದುರ್ಗ ನಗರಸಭೆಯ ಆರ್ಥಿಕ ಅಧ್ಯಯನ” ಎಂಬ ವಿಷಯ ಕುರಿತು ಸಂಶೋಧನಾ ಅಧ್ಯಯನ ಕೈಗೊಂಡು, ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿದೆ. ಆಶಾ ಟಿ. ಅವರು ಚಿತ್ರದುರ್ಗ ತಾಲೂಕು ಬೆಳಗಟ್ಟ ಗ್ರಾಮದಲ್ಲಿರುವ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಸಂಸ್ಥಾಪಕ ಪೀಠಾಧ್ಯಕ್ಷರಾಗಿರುವ ಪೂಜ್ಯ ಶ್ರೀ ಮಾತೆ ಮಹದೇವಮ್ಮ ಅವರ ಸುಪುತ್ರಿಯಾಗಿರುವರು.

ಡಾ.ಬಿ.ಪಿ. ಪ್ರದೀಪ್‌ಕುಮಾರ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ

  ಚಿತ್ರದುರ್ಗ: ನಗರದ ಸಂಗಮೇಶ್ವರ ಬಡಾವಣೆಯ ಡಾ.ಬಿ.ಪಿ. ಪ್ರದೀಪ್‌ಕುಮಾರ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪಿಎಚ್‌ಡಿ ನೀಡಿ ಗೌರವಿಸಿದೆ. ಡಾ.ಎಂ.ಬಿ. ಮಂಜುನಾಥ್ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ, ಫ್ರೇಮ್‌ವರ್ಕ್ ಆಫ್ ಕಾಸ್ಟ್ ಎಫೆಕ್ಟಿವ್ ಹ್ಯಾಂಡ್ ಗೆಸ್ಚರ್ ರೆಕಗ್ನೈಜೇಶನ್ ಸಿಸ್ಟಂ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು. ಡಾ. ಪ್ರದೀಪ್‌ಕುಮಾರ್ ಚಿತ್ರದುರ್ಗದ ನ್ಯಾಯವಾದಿ ಬಿ.ಕೆ. ಪುಟ್ಟಪ್ಪ ಅವರ ಪುತ್ರ. ಸದ್ಯ ಬೆಂಗಳೂರಿನ ಎಚ್‌ಕೆಬಿಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಯಲುಸೀಮೆಯವರಿಗೆ ಮುಂಗಾರಿನ ಪ್ರವಾಸದ ಹಿತ:  ಹನುಮೇಶ್ ಭೀಮನಕೆರೆ

ಪ್ರವಾಸ ಎಂದಾಕ್ಷಣ ಬಹುತೇಕರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಅಲ್ಲಿ ಮೋಜು ಮಸ್ತಿಗೇನು ಬರವಿರುವುದಿಲ್ಲ, ಪ್ರವಾಸಕ್ಕೆ ಹೊರಡುವ ಮುನ್ನ ತಯಾರಿಯಂತೂ ಹೇಳತೀರದು. ಯೋಜನೆ ಹಾಕುವುದರಲ್ಲಿಯೇ ಮುಳುಗಿರುತ್ತೇವೆ. ಸಂಬಂಧಿಕರು, ಸ್ನೇಹಿತರು ಸೇರಿದಂತೆ ಎಲ್ಲರ ಬಳಿ ನಾವ್ ಟ್ರಿಪ್ ಹೋಗ್ತೀವಿ ಅಂತ ಡಂಗೂರ ಸಾರಿ ಹೇಳುವ ಬಳಗವು ಉಂಟು, ಅದರಂತೆ ನನಗೂ ಆ ಅನುಭವವಾಗಿದ್ದುಂಟು. ಮಧ್ಯ ಕರ್ನಾಟಕದ ಚಿತ್ರದುರ್ಗದವರಾಗಿದ್ದರಿಂದ ನಮ್ಮಲ್ಲಿ ಪ್ರವಾಸಗಳಿಗೆ ಹೆಚ್ಚಿನ ಆದ್ಯತೆ ಲಭಿಸುತ್ತದೆ, ಕಾರಣ ಚಿತ್ರದುರ್ಗ ಭೌಗೋಳಿಕವಾಗಿ ಬಯಲುಸೀಮೆ ಹಾಗೂ ಒಂದಷ್ಟು ಗುಡ್ಡಗಾಡು ಪ್ರದೇಶವನ್ನು ಹೊಂದಿರುವುದರಿಂದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಇಲ್ಲಿನ ಜನರನ್ನು ಆಕರ್ಷಿಸುತ್ತವೆ. ಅಂತೆಯೇ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನವರಿಗಂತೂ ಕೈ ಬೀಸಿ ಕರೆಯುವುದುಂಟು. ಮೂಲತಃ

ಶ್|…..ಇದು ಬಾಯ್ಸ್ ಹಾಸ್ಟೆಲ್ ಸೀಕ್ರೆಟ್: ಹನುಮೇಶ್ ಭೀಮನಕೆರೆ

ರಕ್ತ ಸಂಬಂಧಗಳಿಗಿಂತ ಮೀರಿದ ಬಂಧವಿದು, ಯಾವ ಬಿಂದುವಿನಲ್ಲಿ ಸಂಧಿಸದು, ಎಲ್ಲೋ ಹುಟ್ಟಿ…..ಎಲ್ಲೋ ಬೆಳೆದು….. ಇಲ್ಲಿ ಬಿಡಿಸಲಾರದ ಸ್ನೇಹದ ಸುಳಿಯಲ್ಲಿ ಸಿಲುಕುತ್ತೇವೆ. ನಾವೆಲ್ಲಾ ಉನ್ನತ ವಿದ್ಯಾಭ್ಯಾಸಕ್ಕೆಂದು ಮನೆ, ಊರು ಬಿಟ್ಟು ಇನ್ನೊಂದು ಊರಲ್ಲಿ ಬದುಕು ಕಟ್ಟಿಕೊಳ್ಳಲು ಬರುತ್ತೇವೆ. ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ ವಸತಿನಿಲಯಗಳು ಕೈಬೀಸಿ ಕರೆಯುತ್ತವೆ. ಈ ವಸತಿನಿಲಯಗಳು ನಮ್ಮೆಲ್ಲ ತರ್ಲೆ, ತುಂಟಾಟ, ಆಟೋಟಗಳಿಗೆ ಕೇಂದ್ರ ಬಿಂದುಗಳು. ಅಲ್ಲಿ ನಾವೇ ಮಾಲೀಕರು, ಇನ್ನೊಬ್ಬರ ಕಾಲೆಳೆಯೋದು, ಮತ್ತೊಬ್ಬರನ್ನು ಗೋಳಾಡಿಸೋದು ನಮ್ಮ ಮೋಜು ಮಸ್ತಿಗಾಗಿ ಬೇರೆಯವರನ್ನು ಬಕ್ರ ಮಾಡಿ ಅತೀವ ಆನಂದ ಪಡೆಯುತ್ತೇವೆ. ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಭೀಮನಕೆರೆ ಗ್ರಾಮದವನು, ನಮ್ಮೂರು ಬಿಟ್ಟು ಪಕ್ಕದ ಜಿಲ್ಲೆ ದಾವಣಗೆರೆಗೆ ಸ್ನಾತಕೋತ್ತರ