ಅಂತರಾಳ

ಒಬ್ಬ ಡಾಕ್ಟರ್ ಮನಸು ಮಾಡಿದ್ರೆ ಜನರಿಗೆ ಸಹಕಾರಿ ಆಗಬಲ್ಲ: ವಿಶೇಷ ಸಂದರ್ಶನ

ಡಾ. ಮಲ್ಲಿಕಾರ್ಜುನ್ ಬಿಎಎಂಎಸ್ ಅವರೊಂದಿಗೆ ಪ್ರಭಾಕರ ಪಿ ಅವರು ಸಂದರ್ಶನವನ್ನು ಅಂತರಾಳದಲ್ಲಿ ಓದಿ -ಸಂ ವೃತ್ತಿಯಲ್ಲಿ ವೈದ್ಯರು ಹಾಗೂ ಸಿದ್ದಿ ಸಮಾಧಿ ಯೋಗ, ರೇಖಿ ಚಿಕಿತ್ಸೆ, ಓಂ ಶಾಂತಿ ಈ ರೀತಿಯ ಆಧ್ಯಾತ್ಮಿಕ ರಂಗದಲ್ಲಿ ಪರಿಣಿತರು. ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು. ರೋಗಿಗಳಿಗೆ ನೆರವಾಗುವರು. ಇಲ್ಲಿಯವರೆಗು ಸು.ಒಂದು ಲಕ್ಷಕ್ಕು ಹೆಚ್ಚು ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿದ್ದಾರೆ. ಅಷ್ಟೆ ಅಲ್ಲದೇ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತರಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದ್ದಾರೆ. ಇದರಿಂದ ಕೆಲವರ ಜೀವನ ಉಜ್ವಲವಾಗಿದೆ. ದೊಡ್ಡ ಸೆಲೆಬ್ರೆಟಿಯಾಗಿ ಗುರುತಿಸಿಕೊಳ್ಳುವುದು ಇಷ್ಟವಿಲ್ಲದಿರುವುದು ಹಾಗೂ ಜನಸೇವೆಯೇ ಮುಖ್ಯವೆಂದು ತಿಳಿದಿರುವ ಇವರು ಎಲೆಮರೆಯಕಾಯಿಯಾಗಿ ಜೀವಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಬೊಮ್ಮದೇವರಹಳ್ಳಿಯಲ್ಲಿ 1972ರಲ್ಲಿ ಬಡಕುಟುಂಬದಲ್ಲಿ ಹನುಮಂತಪ್ಪ ಗಂಗಮ್ಮ ದಂಪತಿಯ ಮಗುವಾಗಿ

ದಿಸ್ ಟೂರ್ ಫರ್ ಎವರ್ ಇನ್ ಮೈ ಲೈಫ್……….

ನಾನು ಓದುತ್ತಿರುವುದು ಡಿಗ್ರಿ ಫೈನಲ್ ಇಯರ್. ಎಲ್ಲರೂ ಮೂರು ವರ್ಷಗಳಿಂಗ ತುಂಬ ಆತ್ಮೀಯರಾಗಿದ್ದೇವೆ. ಕಾಲಕಳೆದಿದ್ದೆ ತಿಳಿಯಲಿಲ್ಲ ಆಗಲೆ ಡಿಗ್ರಿ ಕೊನೆ ಹಂತ ತಲುಪಿದ್ದೇವೆ. ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲರು ಚದುರಿಬಿಡುತ್ತೇವೆಂದು ಹೇಗಿದ್ದರು ಇದು ಡಿಸೆಂಬರ್ ಎಂದು ಒಂದು ವಾರದ ಟೂರ್ ಅನ್ನು ಎಂಜಾಯ್ ಮಾಡಲು ಎಲ್ಲರು ನಿರ್ಧರಿಸಿದೆವು. ಗುರುಗಳು ಸಹ ನಮ್ಮ ಜೊತೆಗೆ ಟೂರ್ ಗೆ ಓಕೆ ಅಂದರು. ನಾವೆಲ್ಲರೂ ನಿರ್ದರಿಸಿದ್ದು ಪರಿಸರ ವೀಕ್ಷಣೆ ಬೀಚ್ ಹಾಗೂ ದೇವಲಯಗಳ ದರ್ಶನಕ್ಕೆ. ಆಂಧ್ರ, ಕರ್ನಾಟಕ, ತಮಿಳುನಾಡು ಮೂರು ರಾಜ್ಯಗಳಲ್ಲಿ ಟೂರ್ ಪಿಕ್ಸಾಗಿ ಶುರುವಾಯಿತು. ಎಲ್ಲರು ತುಂಬ ಖುಷಿಯಲ್ಲಿ ಪ್ರವಾಸ ಎಂಜಾಯ್ ಮಾಡುತ್ತಿದ್ದರು. ನಾನು ಖುಷಿಯಾಗಿದ್ದರು ಸಹ ತಿಳಿಯದ ಬೇಜಾರು ನನ್ನ ಕಾಡುತ್ತಿತ್ತು.

ತರಬಾಳು ಹುಣ್ಣಿಮೆ: ಗುಜರಾತಿನ ಸಂತ್ರಸ್ತರಿಗೆ ಹಣ ಸಂಗ್ರಹಣೆ: ಸಿರಿಗೆರೆಯಲ್ಲಿ ನ್ಯಾಯಾಲಯ ಹೇಗೆ ನಡೆಯುತ್ತೆ.?

ಭಾಗ-3 ತರಳಬಾಳು ಹುಣ್ಣಿಮೆ 2001 ರಲ್ಲಿ ಗುಜರಾತ್ ರಾಜ್ಯದಲ್ಲಿ ಉಂಟಾದ ಭೂಕಂಪವು ಲಕ್ಷಾಂತರ ಜೀವರಾಶಿಗಳನ್ನು ಬಲಿ ತೆಗೆದುಕೊಂಡಿತು. ಆಗ ಅರಸೀಕೆರೆಯಲ್ಲಿ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಕೊನೆಯ ದಿನದ ಉತ್ವವವನ್ನು ರದ್ದುಪಡಿಸಲಾಯಿತು. ಬದಲಿಗೆ ಶ್ರೀ ತರಳಬಾಳು ಜಗದ್ಗುರುಗಳವರ ಪಾದಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಪಾದಯಾತ್ರೆಯ ಸಂದರ್ಭದಲ್ಲಿ ಸಂಗ್ರಹವಾದ ಬೃಹತ್ ಮೊತ್ತವನ್ನು ಗುಜರಾತಿನ ಸಂತ್ರಸ್ತ ಜನರಿಗೆ ಕಳುಹಿಸಲಾಯಿತು. ಈ ಮಹೋತ್ಸವ ನಡೆದ ಸ್ಥಳಗಳಲ್ಲಿ ಸಾರ್ವಜನಿಕ ಸೇವಾ ಕಾರ್ಯಗಳು ನಡೆದಿವೆ. ಅಲ್ಲಲ್ಲಿ ಸಂಗ್ರಹವಾದ ಹಣವನ್ನು ಅಲ್ಲಲ್ಲಿಯ ಜನೋಪಕಾರಿ ಕಾರ್ಯಗಳಿಗೆ ಬಳಸುವುದು ಈ ಮಹೋತ್ಸವದ ವೈಶಿಷ್ಟ್ಯವಾಗಿದೆ. ಚೆನ್ನಗಿರಿಯಲ್ಲಿ ಸುಸಜ್ಜಿತ ಆಸ್ಪತ್ರೆ, ಉಳಿದೆಡೆಗಳಲ್ಲಿ ಶಾಲಾ ಕಾಲೇಜುಗಳು, ಕಲ್ಯಾಣ ಮಂಟಪಗಳು ತಲೆಯೆತ್ತಿವೆ. ಶಿಕ್ಷಣದ ಮಹತ್ವವನ್ನು ಮನಗಂಡಿದ್ದ

ಸಿರಿಗೆರೆ: ತರಳಬಾಳು ಹುಣ್ಣಿಮೆ ಬಗ್ಗೆ ಏನಾದರು ಬಲ್ಲಿರಾ..!

ಈ ಬಾರಿ ಜಗಳೂರಿನಲ್ಲಿ  23 ರಿಂದ 31 ರವರೆಗೆ ತರಳಬಾಳು ಹುಣ್ಣಿಮೆ  ನಡೆಯುತ್ತಿರುವ ಸಂದರ್ಭದಲ್ಲಿ ತರಳಬಾಳು ಹುಣ್ಣಿಮೆ ನಡೆದು ಬಂದ ಹಾದಿ ಈ ವಿಚಾರಗಳನ್ನು ರಾ.ವೆಂಕಟೇಶ ಶೆಟ್ಟಿ ಅವರು ಬರೆಯುತ್ತಿದ್ದಾರೆ. ಹಲವು ಕಂತುಗಳಲ್ಲಿ . -ಸಂ   ಇತಿಹಾಸ ವಿಶ್ವಬಂಧು ಮರುಳಸಿದ್ಧರು 12 ನೆಯ ಶತಮಾನದ ಬಸವಾದಿ ಶಿವಶರಣರ ಸಮಕಾಲೀನರು. ಜನತೆಯ ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆ, ವಾಮಾಚಾರUಳನ್ನು ತೊಲಗಿಸಲು ಅವರು ಕಂಕಣಬದ್ಧರಾಗಿ ಶ್ರಮಿಸಿದರು. ಹುಟ್ಟಿನಿಂದ ಅಂತ್ಯಜರಾದರೂ ಆಚರಣೆಯಿಂದ ಮಹಾಮಾನವರಾದರು. ಸಮಾಜವನನ್ನು ಪಟ್ಟಭದ್ರ ಹಿತಾಸಕ್ತಿಗಳ ಕಬಂಧ ಬಾಹುಗಳಿಂದ ರಕ್ಷಿಸಲು ಆಜೀವಪರ್ಯಂತ ಹೋರಾಡಿದರು. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತರತಮ ಭಾವವಿಲ್ಲದ ನವಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ತಾವು ಹಚ್ಚಿದ ಧರ್ಮದ

ಅಲ್ಲಮಪ್ರಭು ಒಬ್ಬ ಬೌದ್ಧಿಕ ತತ್ವಜ್ಞಾನಿ. : ಡಾ.ಕುಮಾರಚಲ್ಯ

ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠವು ನೀಡುವ ಅಲ್ಲಮಪ್ರಭು ಪ್ರಶಸ್ತಿ ಪಡೆದ ಡಾ.ಕುಮಾರಚಲ್ಯ ಅವರನ್ನು ಡಾ. ನಲ್ಲಿಕಟ್ಟೆ ಸಿದ್ದೇಶ್ ಅವರು ಬಿಸಿ ಸುದ್ದಿಗಾಗಿ ವಿಶೇಷ ಸಂದರ್ಶನವನ್ನು ಅಂತರಾಳದ ಕಾಲಂ ನಲ್ಲಿ ನಡೆಸಿದ್ದಾರೆ. -ಸಂ ‘ ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ’, ‘ದೇವುಡು’ (ಜೀವನಚರಿತ್ರೆ), ‘ನವಾಬ’, ‘ಗುಲಾಬಿ ಮತ್ತು ಪಾರಿವಾಳ’ (ಕವನ ಸಂಕಲನ), ‘ಸಂಗತ’, ‘ಕಾಲಮಾನ’ ‘ಅಭಿಜ್ಞಾನ’, ‘ವಚನಕಾರರ ಜೀವನ ದೃಷ್ಟಿ’ (ವಿಮರ್ಶೆ), ‘ಹಿಂದಣ ಹೆಜ್ಜೆಯನರಿಯದೆ’ (ಸಂಶೋಧನೆ), ‘ಬೇರು ತೋರಿದ ಹಾದಿ’, ‘ಕಿನ್ನರಿ ಜೋಗಿಗಳು’ ‘ಜನಪದ ಸಾಹಿತ್ಯ ಪ್ರಕಾರಗಳು’ (ಜಾನಪದ), ‘ಕರ್ನಾಟಕ ಜಾತ್ರೆಗಳು’, ‘ಪ್ರಾದೇಶಿಕ ಜಾನಪದ’ (ಸಂಪಾದಿತ)-ಇವು ಅವರ ಕೃತಿಗಳು. ಇವರು ಕರ್ನಾಟಕ ಸರ್ಕಾರದ ಕನ್ನಡಭಾಷಾಭಿವೃದ್ಧಿ ಯೋಜನೆಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡಭಾರತಿಯ ಅಧ್ಯಾಪಕರ ಸಹಭಾಗಿತ್ವದಲ್ಲಿ

ಬಾರೆ ಗಿಡ ಹತ್ತಿ ಕಳಸ ಕೀಳುವ ಜಾತ್ರೆ ನೋಡಿದ್ದೀರ.?

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅರ್ಥದಷ್ಟು ಭಾಗದಲ್ಲಿ ಮ್ಯಾಸಬೇಡ ಹಾಗೂ ಕಾಡುಗೊಲ್ಲ ಬುಡಕಟ್ಟು ಸಮುದಾಯದವರೆ ಹೆಚ್ಚು ವಾಸಿಸುತ್ತಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿಯಲ್ಲಿ ನಡೆಯುವ ಶ್ರೀಕ್ಯಾತಪ್ಪನ ಪರೀಷೆ ಈ ಭಾಗದ ಬುಡಕಟ್ಟು ಸಮುದಾಯಗಳಿಗೆ ಸಂಸ್ಕøತಿ ಆಚರಣೆಯನ್ನು ಎತ್ತಿ ತೋರುವ ಜಾತ್ರೆಗಳಲ್ಲಿ ಒಂದಾಗಿದೆ. ಈ ಪರೀಷೆಯು ಒಂದು ತಿಂಗಳ ಕಾಲ ನಡೆಯುತ್ತದೆ. ಮೊದಲಿಗೆ ಕ್ಯಾತಗೊಂಡನಹಳ್ಳಿಯ ಕದರಿನರಸಿಂಹಸ್ವಾಮಿ, ದೇವರು ಉತ್ಸವ ನಂತರ ಬಂಜಗೆರೆಯ ವೀರಣ್ಣ, ವ್ರತೋತ್ಸವಸ್ವಾಮಿ ದೆವರು ಉತ್ಸವ ನಡೆದು ನಂತರದ ದಿನ ಕೊಣನ ಗೊಲ್ಲರು ಹಾಗೂ ಬೊಮ್ಮನಗೊಲ್ಲ ಅಣ್ಣ ತಮ್ಮಂದಿರ ವಂಶಸ್ಥರು ಹಾಗೂ ಗುಡಿಕಟ್ಟಿನ ಪೂಜಾರಿಗಳು ಯಜಮಾನರು ಗೌಡರು ಸೇರಿ ಕ್ಯಾತೆ ದೇವರ ಜಾತ್ರೆಯ ಕಾರ್ಯಕ್ರಮ ಬಗ್ಗೆ ಮಾತು

ದೀಪಾವಳಿ ಹಬ್ಬ ಆಚರಿಸುವುದರಲ್ಲೇನಿದೆ ವಿಶೇಷ.!

ದೀಪಾವಳಿ ಹಬ್ಬವು ಹಿಂದೂ ಜನಾಂಗದವರಿಗೆ ಒಂದು ಅಪಾರ ಪ್ರಸಿದ್ಧ ಹಬ್ಬ. ಅಕ್ಟೋಬರ್ ಅಥವ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಭಾರತೀಯ ಹಬ್ಬಗಳಲ್ಲಿ ಇದು ಒಂದಾಗಿದೆ. ದೀಪಾವಳಿ ಅಂದರೆ ’ದೀಪಗಳ ಸಾಲು” ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ. ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿಯ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ ಜನರಿಗೆ ಇದೆ. ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ಅಲ್ಲದೆ ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು

ದೀಪಾವಳಿ ಹಬ್ಬ ಪರಿಸರದ ಹಣ್ಣು, ಹೂವು, ತೆಂಗಿನಕಾಯಿ, ಮಣ್ಣಿನ ದೀಪಗಳನ್ನ ಬಳಸಿ ಹಬ್ಬ ಆಚರಿಸಿ 

ಚಿತ್ರದುರ್ಗ: ನಗರದ ವ್ಯಾಪಾರಸ್ತರು ಜನರನ್ನ ದೀಪಾ, ಹಣ್ಣು, ಹೂವು ಬಳಸಿ ದೀಪಾವಳಿ ಆಚರಿಸುವುದರಿಂದ ಪರಿಸರಕ್ಕೆ ಆಗುವ ಲಾಭಗಳನ್ನ ವಿವರಿಸಿ ತಿಳಿಸಿದರೆ ಪರಿಸರಕ್ಕೊಂದಿಷ್ಟು ಕೊಡುಗೆಯನ್ನ ನೀಡಿದಂತಾಗುವುದು. ಸಾವಿರಾರು ರೂಪಾಯಿಯ ಪಟಾಕಿ ಕೊಳ್ಳುವ ಬದಲು, ಮಕ್ಕಳಿಗೆ ತಿನ್ನಲು ವಿವಿಧ ಜಾತಿಯ ಹಣ್ಣುಗಳನ್ನ ಕೊಡಿಸಿ. ಅವರ ಆರೋಗ್ಯವನ್ನೂ ಋದ್ದಿಸಬಹುದು. ನಮ್ಮಲ್ಲೆ ರೈತರು ಬೆಳೆಯುವ ತರ ತರದ ಹೂವುಗಳನ್ನ ಬಳಸಿ ದೇವರನ್ನ ಶೃಂಗರಿಸಬಹುದು, ನಮ್ಮ ಕುಂಬಾರರೇ ಕೈಯಿಂದ ಮಾಡಿದ ಮಣ್ಣಿನ ಹಣತೆಗಳನ್ನ ಕೊಂಡು ದೀಪ ಬೆಳಗಿಸಿದರೆ ಈ ವರ್ಷದ ದೀಪಾವಳಿಯನ್ನ ಪರಿಸರ ಸ್ನೇಹಿಯಾಗಿಸಬಹುದು ಎಂದು ಪರಿಸರ ಕಾರ್ಯಕರ್ತ ಡಾ|| ಹೆಚ್. ಕೆ. ಎಸ್. ಸ್ವಾಮಿ ತಿಳಿಸಿದರು. ಅವರು ಚಿತ್ರದುರ್ಗ ನಗರದ ಹೂ, ಹಣ್ಣು, ತೆಂಗಿನಕಾಯಿ,

ಕಲೆಯೇ ಜೀವಾಳ ಎಂದ ಮಂಜಣ್ಣನ ಬಗ್ಗೆ ಒಂದಿಷ್ಟು..!

ಬಹುಶಃ ೧೯೮೫-೯೦ರ ದಶಕದಲ್ಲಿ ಚಿತ್ರದುರ್ಗ ನಗರದಲ್ಲಿ ಹವ್ಯಾಸಿ ರಂಗಚಟುವಟಿಕೆಗಳು ಹೆಚ್ಚಾಗಿ ನಡೆದಿದ್ದು ಅಂದರೆ ಅದು ರಚನ ಕಲಾತಂಡದಿಂದಲೇ ಇರಬೇಕು. ಹೆಚ್.ತಿಪ್ಪೇಸ್ವಾಮಿ ಹಾಗೂ ಮಂಜುನಾಥ ಅದರ ರುವಾರಿಗಳು. ಇಂದಿಗೂ ಮಂಜುನಾಥ ರವರನ್ನು ರಚನ ಮಂಜು ಎಂದೇ ಜನ ಗುರುತಿಸುತ್ತಾರೆ. ಅಂದಿನ ಕಾಲದಲ್ಲಿ ರಚನ ತಂಡದಿಂದ ಅನೇಕ ನಾಟಕಗಳು ಪ್ರದರ್ಶನಗೊಂಡವು. ಅವುಗಳಲ್ಲಿ ಸಂಕ್ರಾಂತಿ, ಜೋಕುಮಾರಸ್ವಾಮಿ, ಕೋಟ್, ಜಯಸಿದ ನಾಯಕ ಹಾಗೆಯೇ ಬ್ರೇಕ್ಟ್ ನಾಟಕಗಳು ಕರ್ನಾಟಕದಾದ್ಯಂತ ನೂರಾರು ಪ್ರದರ್ಶನ ಕಂಡವು. ರಚನ ತಂಡದ ನಾಟಕಗಳಿಗೆ ಅಂದಿನ ಕಾಲದ ರಂಗಭೂಮಿ ದಿಗ್ಗಜರುಗಳಾದ ಸುಭದ್ರಮ್ಮ ಮನ್ಸೂರ್, ಮರಳುಸಿದ್ದಪ್ಪ, ನಾಗರತ್ನಮ್ಮ, ಚಲನಚಿತ್ರ ನಟ ದಿವಂಗತ ಲೋಕೇಶ್ ಅಂತಹವರು ಇವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ರಚನ ತಂಡದ ಮಂಜಣ್ಣನವರ ಬಗ್ಗೆ

ಕನ್ನಡ ಅಕ್ಷರ ಉಚ್ಚಾರಣೆಯಿಂದ ವ್ಯಾಯಾಮ ಆಗುತ್ತೆ..! ಹೇಗೆ.?

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ. ಶುದ್ಧ ಪರಿಶುದ್ಧ ಜೇನಿನ ಹಾಗೆ…. ನಮ್ಮ ಕನ್ನಡ ಭಾಷೆ ಇದೆ. ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಹೀಗೆ  ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು. ಹೇಗೆಂದರೆ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ. ಕ ಖ ಗ