ಅಂತರಾಳ

ಪಾಳೆಯಗಾರರು

ಕೋಟೆ ಬಗ್ಗೆ ತಿಳಿಯುವುದಕ್ಕೂ ಮುಂಚೆ ಯಾವ ಯಾವ ಕಾಲದಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ. -ಸಂ ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಮತ್ತು ಹಿರೇಗುಂಟನೂರು ಶಾಸನಗಳ ರೀತ್ಯಾ ಕ್ರಿ.ಶ. ಸುಮಾರು ೧೫೪೯ರಿಂದಲೇ ತಿಮ್ಮಣ್ಣನಾಯಕನು ಈ ಪ್ರಾಂತ್ಯದ ನಾಯಕ ಆಗಿದ್ದನೆಂಬುದು ತಿಳಿಯುತ್ತದೆ. ಜೊತೆಗೆ ಕೊನೆಯ ಮೆದಕೇರಿನಾಯಕನ ಆಳ್ವಿಕೆ ೧೭೭೯ರಲ್ಲಿ ಕೊನೆಗೊಳ್ಳುತ್ತದೆ. ಈ ನಾಯಕರು ಆಳಿದ್ದು ಕ್ರಿ.ಶ. ೧೫೪೯ ರಿಂದ ೧೭೭೯ ರವರೆಗೆ ಅಂದರೆ ಒಟ್ಟು ೨೩೧ ವರ್ಷ ಎನ್ನುವುದು ಸ್ಪಷ್ಟವಾಗುತ್ತದೆ. ಶಾಸನ, ವಂಶಾವಳಿ ಮತ್ತು ಕೈಫಿಯತ್ತು ಮಾಹಿತಿಯ ಸಮನ್ವಯದಲ್ಲಿ ಪಾಳೆಯಗಾರರ ಆಳ್ವಿಕೆ ವಿವರ ಸಂಗ್ರಹಿಸಬಹುದಾಗಿದೆ. ಮತ್ತಿ ತಿಮ್ಮಣ್ಣನಾಯಕ (ಕ್ರಿ.ಶ.ಸು. ೧೫೪೯-೧೫೫೭), ಒಂದನೇ ಓಬಣ್ಣನಾಯಕ ಅಥವಾ ಒಂದನೇ ಮೆದಕೇರಿ

ಪರಿಸರ ಮತ್ತು ಬಸ್ಮಾಸುರ

ಬಸ್ಮಾಸುರ ಕತೆ ನೆನಪಾಗುತ್ತದೆ. ಬಸ್ಮಾಸುರ ಶಿವನನ್ನು ಪೂಜೆ ಮಾಡಿ ಯಾರ ತಲೆಯ ಮೇಲೆ ಕೈ ಇಡುತ್ತೇನು ಅವನು ಸುಟ್ಟು ಬಸ್ಮನಾಗ ಬೇಕೆಂದು ವರವನ್ನು ಬೇಡಿಕೊಳ್ಳುತ್ತಾನೆ. ಶಿವ ತತಾಸ್ತು ಎಂದು ವರ ನೀಡುತ್ತಾನೆ. ವರ ಪರೀಕ್ಷೆ ಮಾಡಲು ಶಿವನ ತಲೆಯ ಮೇಲೆ ಕೈ ಇಡಲು ಮುಂದಾಗುತ್ತಾನೆ. ಆಗ ಬಸ್ಮಾಸುರನನ್ನು ಸಂಹಾರ ಮಾಡಲು ವಿಷ್ಟು ಹುಡುಗಿ ಅವತರ ಬಂದು ಡ್ಯಾನ್ಸ್ ಮಾಡುತ್ತಾ ಅವನ ಕೈಯನ್ನು ಅವನ ತಲೆ ಮೇಲೆ ಇಡುವಂತೆ ಮಾಡುತ್ತಾನೆ ಆಗ ಬಸ್ಮಾಸುರನು ಸುಟ್ಟು ಹೋಗುತಾನೆ ಎಂಬ ಕತೆ ಪುರಾಣದಲ್ಲಿ ಕೇಳಿದ್ದೆವೆ ಅಲ್ಲವೆ ಇಂದು ವಿಶ್ವ ಪರಿಸರ ದಿನಾಚರಣೆ ಮಾಡುತ್ತಿದ್ದೇವೆ. ಅದರಂತೆ ಬಸ್ಮಾಸುರನ ಕತೆ ನೆನಪಾಗುತ್ತದೆ. ಪ್ರತಿ ವರ್ಷ ಸರ್ಕಾರ

ಮ್ಯಾಗಿ ಮತ್ತು ರಾಗಿ ಮಾಲ್ಟ್

ನಾವು ಚಿಕ್ಕವರಿದ್ದಾಗ ಈ ತರಹದ ಫುಡ್ ಇರಿಲಿಲ್ಲ. ೨ ನಿಮಿಷದಲ್ಲಿ ಮ್ಯಾಗಿ ರೆಡಿ ಎಂಬ ಜಾಹೀರಾತು ಮಕ್ಕಳಿಗೆ ಅಷ್ಟೊಂದು ಹಿಡಿಸಿಬಿಟ್ಟಿದೆ. ಜೆಂಕ್ ಫುಡ್ ಮಕ್ಕಳಿಗೆ ಎಲ್ಲಿದ ಪ್ರೀತಿ. ಇಂದಿನ ಕಾಲದಲ್ಲಿ ಎಲ್ಲವೂ ರೆಡಿ. ಅದು ಏಕೆ. ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮಗಳೇನು ಎಂಬುದರ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಯಾರಿಗೂ ಅಷ್ಟರ ಮಟ್ಟಿಗೆ ಟೈಮ್ ಇಲ್ಲ. ಟೈಮ್ ಬಹಳ ಮುಖ್ಯವಾಗಿದೆ. ಈ ಟೈಮ್ ಭರಾಟೆಯಲ್ಲಿ ನಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಯೇ ಸಾಕ್ಷಿ. ಅದರಲ್ಲೂ ಪೋಷಕರಿಗೆ ಮಕ್ಕಳಿಗೆ ಕೊಡಿಸುವ ವಿದ್ಯಾಭ್ಯಾಸದ ಬಗ್ಗೆ ಇರುವಷ್ಟು ಕಾಳಜಿ ಊಟದ ಬಗ್ಗೆ ಗಮನಹರಿಸುತ್ತಿಲ್ಲ.  ಮಾತುಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮನೆ

ಎಲೆಕ್ಷನ ಅಂದರೆ ಹಬ್ಬದೂಟವೆ

86-87 ರ ವರ್ಷ. ಜನರ ಕೈಗೆ ಅಧಿಕಾರ ಕೊಡ ಬೇಕೆಂಬ ಉದ್ದೇಶದಿಂದ ಮಂಡಲ್ ಪಂಚಾಯತಿ ಬಂತು. ಅಂದು ನಡೆದ ಚುನಾವಣೆಯಲ್ಲಿ ನನ್ನ ಹತ್ತಿರದೊಬ್ಬರು ಚುನಾವಣಾ ಕಣದಲ್ಲಿದ್ದರು. ಅವರದು ಒಂದು ಕಿರಾಣಿ ಅಂಗಡಿ ಬೇರೆ. ನಾಮಿನೇಷನ್ ಮಾಡಿದಾಗನಿಂದ ಆ ಅಂಗಡಿಯಲ್ಲಿ ಪ್ರತಿಯೊಂದು ವಸ್ತುಗಳು ಫ್ರೀ. ಒಂದು ವಾರದಿಂದ ಮನೆಯ ಹಿತ್ತಲಲ್ಲಿ ಮಂಡಕ್ಕಿ ಮೆಣಸಿನಕಾಯಿ ಬಂದವರಿಗೆಲ್ಲಾ ಪುಕಸ್ಟೆ ಹಂಚಿದ್ದು. ಯಾಕೆ ಅಂತ ಕೇಳಿದೆ ಈ ನಮಗೆ ಓಟು ಹಾಕುತ್ತಾರೆ.ಗೆದ್ದೇ ಗಲ್ಲುತೇನೆ. ಎಂದು ಹೇಳಿದರು. ಆ ನಂತರ ಚುನಾವಣೆಯಲ್ಲಿ ಗೆದ್ರು. ಇನ್ನೊಂದು ಘಟನೆ ನನಗೆ ಹತ್ತಿರದ ಪರಿಚಯಸ್ತರು ಹಳ್ಳಿಯಲ್ಲಿ ದೊಡ್ಡ ಕುಟುಂಬ. ನೂರಾರು ಎಕರೆ ಭೂಮಿ, ಟ್ಯಾಕ್ಟರ್ ಮನೆಯಲ್ಲಿ ಆಳು, ಕಾಳುಗಳಿಗೇನು ಬರವಿಲ್ಲ.

ದ್ವೇಶಿಸುವುದು ಯಾರನ್ನ.?

ಅಂತೂ ಹಲವಾರು ಎಡರು ತೊಡರುಗಳ ಮಧ್ಯೆ ಆನ್ ಲೈನ್ ಪತ್ರಿಕೆ ಬಿಡುಗಡೆ ಗೊಂಡಿತು. ಏನು ಹೇಳ ಬೇಕೆಂದು ಮಾತುಗಳು ಬರುತ್ತಿಲ್ಲ. ಈ ಹಿಂದೆ ಪತ್ರರ್ತರು ತಾವೇ ಸ್ವಯಂ ನಿಯಂತ್ರಣಗಳನ್ನು ಹಾಕಿಕೊಳ್ಳುತ್ತಿದ್ರು. ಸಮಾಜದ ಬಗ್ಗೆ ,ಜನಪರವಿಚಾರಗಳಿಗೆ ಧ್ವನಿಯಾಗುತ್ತಿದ್ದರು. ಇಂದು ಕಾಲ ಬದಲಾಗಿದೆ. ವ್ಯವಸ್ಥೆ ದಿನ ದಿನಕ್ಕೆ ಹದಗೆಡತ್ತಿದೆ. ಎಲ್ಲವೂ ಎಲ್ಲರನ್ನು ದುಡ್ಡಿನಿಂದ ತೂಕ ಹಾಕಲಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿಯಲ್ಲಿ ಮುಳುಗಿದ್ದಾರೆ. ಕಾಲ ಬದಲಾಯಿತೆ ಎಂಬ ಪ್ರಶ್ನೆ ಕಾಡುತ್ತಿದೆ. ಅಥವ ನಾನು ಬದಲಾಗ ಬೇಕೆ? ಹೀಗೆ ಹಲವು ಹತ್ತು ಪ್ರಶ್ನೆಗಳು ನಿತ್ತ ಕಾಡುತ್ತಿವೆ. ಇವುಗಳಲೆದರ ಮಧ್ಯೆ ನಾನೊಂದು ಆನ್ ಲೈನ್ ಪತ್ರಿಕೆ ಶುರುಮಾಡಿದ್ದೇನೆ. ಕಾರ್ಯಕ್ರಮಕ್ಕೆ ಬಂದ ಎಲ್ಲರೂ ಕೇಳಿದ್ದು ಪತ್ರಿಕೆಗೆ ರೆವಿನ್ಯು ಹೇಗೆ

ಲೆಟರ್ ಪ್ರೆಸ್ ನಿಂದ ವೆಬ್‌ವರೆಗೆ

ನನ್ನ ಸ್ನೇಹಿತರು ಸಿಕ್ಕಾಗಲೆಲ್ಲಾ ನಿಮ್ಮದೇ ವಿಮೋಚನಾ ಪತ್ರಿಕೆ ಇದೆಯಲ್ಲಾ ಮತ್ತೆ ಪ್ರಾರಂಭಮಾಡಿ ಸಹಾಯ ಮಾಡುತ್ತೇವೆ ಎಂದು ಪದೇ ಪದೆ ಹೇಳುತ್ತಿದ್ದರು. ಆದರೆ ಮತ್ತೊಮ್ಮೆ ಆ ಸಾಹಸಕ್ಕೆ ಕೈಹಾಕುವುದು ಸಾಧ್ಯವಿಲ್ಲ ಎಂದು ಹಲವುಬಾರಿ ಹೇಳಿದ್ದೆ. ಅದು ೧೯೮೯-೯೦ ರ ವರ್ಷ. ಚಿತ್ರದುರ್ಗ ಜೆಲ್ಲೆಯಿಂದ ವಿಮೋಚನಾ ಸಂಗತಿ ವಾರ ಪತ್ರಿಕೆಯನ್ನು ಪ್ರಾರಂಭಮಾಡಿದೆ. ಅಂದಿನವರಿಗೆ ವಾರ ಪತ್ರಿಕೆ ಅಂದರೆ ಲಂಕೇಶ್ ಪತ್ರಿಕೆಯ ಪ್ರಭಾವ ಜಾಸ್ತಿ. ಲಂಕೇಶ್ ಪತ್ರಿಕೆಯಲ್ಲಿ ಸುದ್ದಿ ಬರುತ್ತದೆ ಅಂದರೆ ಪತ್ರಿಯೊಬ್ಬರಿಗೂ ಅದೊಂದು ರೀತಿಯ ನಡುಕ. ಅಂತಹ ಪ್ರಭಾವ ನನ್ನ ಮೇಲಿತ್ತು. ಮತ್ತು ಜನಪರ ಹೋರಾಟಗಳಲ್ಲಿ ಸಕ್ರೀಯನಾಗಿ ತೊಡಗಸಿಕೊಂಡಿದ್ದ ನನಗೆ ಹೋರಟ ಮತ್ತು ಪತ್ರಿಕೆ ನಡೆಸುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ.

ಬಿಸಿ ಸುದ್ದಿ june 1ಕ್ಕೆ ನಿಮ್ಮ ಮಡಲಿಗೆ

ಆತ್ಮೀಯ ಗೆಳೆಯರೆ, ಚಿತ್ರದುರ್ಗದಿಂದ ಆನ್ ಲೈನ್ ಪತ್ರಿಕೆ june ೧ ರಿಂದ ಪ್ರಾರಂಭವಾಗಲಿದೆ. ಚಿತ್ರದುರ್ಗದ ಜಿಲ್ಲೆಯ ಸುದ್ದಿಗಳು ಹಾಗೂ ರಾಜ್ಯ ಮತ್ತು ದೇಶದ ಸುದ್ದಿಗಳ ಗುಚ್ಚವನ್ನು ನಿಮ್ಮ ಕೈಗಿಡಲು ಬಿಸಿ ಸುದ್ದಿ ಬಳಗ ಸಿದ್ದವಾಗಿದೆ. ಆನ್ ಲೈನ್‌ನಲ್ಲಿ ಏನೆಲ್ಲಾ ಇರುತ್ತೆ.? ಸಂಪಾದಕೀಯ, ಅಂತರಾಳ, ಜಿಲ್ಲಾ ಸುದ್ದಿಗಳ, ಆರೋಗ್ಯ ಟಿಪ್ಸ್, ಪ್ರಮುಖ ಸುದ್ದಿಗಳು ವಾರಕ್ಕೊಮ್ಮೆ -ಕೃಷಿ, ಕವನ, ಸಮಾಜಮುಖಿ ಚಿಂತನೆಯ ಬರಹಗಳನ್ನು ಒಳಗೊಂಡ ವೆಬ್ ಪತ್ರಿಕೆ. ನೀವೂ ಬರೆಯ ಬಹುದು, ನಿಮ್ಮ ಸುತ್ತಲ್ಲ ಪ್ರದೇಶದಲ್ಲಿ ಸಂಸ್ಕೃತಿಯನ್ನು ಬಿಂಬಿಸುವಂತ ಜಾತ್ರೆ, ವಿಶೇಷವದ ಆಚರಣೆಗಳ ಬಗ್ಗೆ ಮಾಹಿತಿ ಇದ್ದರೆ ಬರೆಯಿರಿ. ವರದಿ ಚಿಕ್ಕದಾಗಿರಲಿ, ನುಡಿಯಲ್ಲಿ ಟೈಪ್ ಮಾಡಿದರೆ ಚೆನ್ನ. ಅದರ ಜೊತೆಗೆ ತಕ್ಕಂತ ಪೋಟೊಗಳು ಇದ್ದರೆ ಕಳುಹಿಸಿ. ನಿಮ್ಮಲ್ಲೆರ ಧ್ವನಿಗೆ