ಅಂತರಾಳ

ಅವೈಜ್ಞಾನಿಕ ಲಾಕ್‌ಡೌನ್ ಪ್ರಕ್ರಿಯೆ ಹಿಂದಿನ ಮರ್ಮವೇನು?

  ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯಾ ಬಾಹುಳ್ಯವಿರುವ ದೇಶ. ಈ ದೇಶ ಹತ್ತಾರು ಸಾಂಕ್ರಾಮಿಕ ರೋಗಗಳಿಗೆ ಎದೆಗೊಟ್ಟು ನಿಂತು, ಅವುಗಳನ್ನು ನಿರ್ಮೂಲನೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಇಡೀ ದೇಶವೇ ಎಂದಿಗೂ ಸ್ತಬ್ಧಗೊಂಡದ್ದಿಲ್ಲ. ಸಾಂಕ್ರಾಮಿಕ ರೋಗಗಳು ಮಾರಣಾಂತಿಕವಾಗಿ ಹಬ್ಬಿದಾಗ ಜನರು ಸಾಮೂಹಿಕ ಗುಳೆ ಹೋಗಿರುವ ನಿದರ್ಶನಗಳು ಮಾತ್ರ ಇವೆ. ಆದರೆ, ಇದೇ ಪ್ರಥಮ ಬಾರಿಗೆ ಕೊರೊನಾ ಸೋಂಕನ್ನು ತಡೆಗಟ್ಟಲು ಇಡೀ ದೇಶವೇ ಬರೋಬ್ಬರಿ 50 ದಿನ ಲಾಕ್‌ಡೌನ್ ಆಯಿತು. (ಸಾರ್ಸ್, ಎಬೊಲೊ ಸೋಂಕಿಗೆ ಹೋಲಿಸಿದಾಗ ಕೊರೊನಾ ಸೋಂಕು ನಿರಪಾಯಕಾರಿ ಎಂದು ಗೊತ್ತಿದ್ದರೂ!!!)ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡವು. ಇದರಿಂದ ದೇಶದ ಆರ್ಥಿಕತೆಗೆ ಸರಿಸುಮಾರು 125 ಲಕ್ಷ ಕೋಟಿ ರೂಪಾಯಿ

ಚಿತ್ರದುರ್ಗದ ಏಳು ಸುತ್ತಿನಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.? ( ಭಾಗ-8)

೭) ಏಳನೇ ಸುತ್ತಿನಕೋಟೆ (ಏಕನಾಥೇಶ್ವರೀ ಬಾಗಿಲು) :- ಗಣೇಶನ ಗುಡಿಯ ಹಿಂಭಾಗದಲ್ಲಿರುವ ಮಹಾದ್ವಾರವೇ ಏಳನೇ ಸುತ್ತಿನ ಕೋಟೆಯ ಏಕನಾಥೇಶ್ವರೀ ಬಾಗಿಲು. ಏಕನಾಥೇಶ್ವರಿ ಅಂಕಣಕ್ಕೆ ಬಂದರೆ ಮನೋಹರ ದೃಶ್ಯಗಳು ಗೋಚರಿಸುತ್ತವೆ. ಮಧ್ಯರಂಗದ ದಕ್ಷಿಣ ಭಾಗದಲ್ಲಿರುವ ದಿಬ್ಬದ ಮೇಲೆ ಏಕನಾಥೇಶ್ವರಿ ದೇವಸ್ಥಾನವು ಎತ್ತರದಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿದೆ. ಇಲ್ಲಿ ದುರ್ಗದ ಅಧಿದೇವತೆಯಾದ ಏಕನಾಥೇಶ್ವರಿ, ಕಾಳಿಕಾಂಬಾ ಹಾಗೂ ಭೈರವ ವಿಗ್ರಹಗಳಿವೆ. ಈ ದೇವತಾ ಮಂದಿರವನ್ನು ಮೊದಲನೇ ಪಾಳೆಯಗಾರನಾದ ಮತ್ತಿತಿಮ್ಮಣ್ಣನಾಯಕನು ಕಟ್ಟಿಸಿದನೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ಇಲ್ಲಿರುವ ತೆಂಗಿನಕಾಯಿ ಗಾತ್ರದ ದಂತವೊಂದನ್ನು ಹಿಡಿಂಬನ ಹಲ್ಲು ಎಂದು ತೋರಿಸುತ್ತಾರೆ. ಮುಂಭಾಗದಲ್ಲಿರುವ ಉನ್ನತವಾದ ದೀಪಮಾಲೆ ಕಂಭವೂ, ಉಯ್ಯಾಲೆಯೂ, ಓಕುಳಿ ಹೊಂಡವೂ ಕಣ್ಮನ ಸೆಳೆಯುತ್ತವೆ. ಚಿತ್ರದುರ್ಗದ ಎರಡನೇ ಪಾಳೆಯಗಾರ ಗಡ್ಡದ

ಚಿತ್ರದುರ್ಗದ ಏಳು ಸುತ್ತಿನಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.? ( ಭಾಗ-7)

೬) ಆರನೇ ಸುತ್ತಿನ ಬಾಗಿಲು ಅಥವಾ ಟೀಕಿನ ಬಾಗಿಲು / ಗಣೇಶನ ಬಾಗಿಲು:- ಗಂಟೆ ಬಾಗಿಲು ನಂತರ ಬರುವ ಆರನೇ ಸುತ್ತಿನ ಕೋಟೆಯೂ ಅದರ ಹೆಬ್ಬಾಗಿಲಾದ ಟೀಕಿನ ಅಥವಾ ಟಾಕಿನ ಬಾಗಿಲು ಕಾಣುತ್ತೇವೆ. ಕೋಟೆಯ ಈ ಭಾಗವನ್ನು ಫಿರಂಗಿಕೋಟೆ ಎನ್ನುತ್ತಾರೆ. ಇತಿಹಾಸದ ಕಡತಗಳಲ್ಲಿ ಈ ಬಾಗಿಲನ್ನು ಪಾಳೆಯಗಾರನಾದ ಕಸ್ತೂರಿ ರಂಗಪ್ಪನಾಯಕ ಕಟ್ಟಿಸಿದನೆಂದೂ ಅದನ್ನು ಕಸ್ತೂರಿ ರಂಗಪ್ಪನಾಯಕನ ಬಾಗಿಲೆಂದೂ ಕರೆಯುತ್ತಾರೆ. ಅದರ ಮೇಲೆ ಫಿರಂಗಿ ಗಾಡಿಗಳು ಓಡಾಡಲು ಮತ್ತು ಫಿರಂಗಿ ಇಡಲು ಅನುಕೂಲವಿರುವುದೇ ಈ ಹೆಸರು ಬರಲು ಕಾರಣವಾಗಿದೆ. ಇದರ ಹೆಬ್ಬಾಗಿಲು ಸುಂದರವೂ, ಬಲಯುತವೂ ಆಗಿರುವುದರಿಂದ ಅದಕ್ಕೆ ಟೀಕಿನ ಅಥವಾ ಟಾಕಿನಬಾಗಿಲು ಎಂಬ ಹೆಸರಿದೆ. ಸೌಂದರ್ಯ ಹಾಗೂ ಭದ್ರತೆಯ ದೃಷ್ಟಿಯಿಂದ

ಚಿತ್ರದುರ್ಗದ ಏಳು ಸುತ್ತಿನಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.? ( ಭಾಗ-೬)

ಬೀಸುವ ಕಲ್ಲುಗಳು:- ಕಾಮನ ಬಾಗಿಲು ದಾಟಿದರೆ ಕಾವಲು ಗೃಹದ ಮುಂದೆ ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ದೂರ ಸಾಗಿದರೆ ಬಂದಮ್ಮನ ಗುಹೆ ಸಿಗುವುದು. ಒಳಗೆ ಭಿನ್ನವಾದ ಬನಶಂಕರಿ ವಿಗ್ರಹವಿದೆ. ಗುಹೆಯ ಮುಂಭಾಗದಲ್ಲಿ ಮದ್ದು ಮಿಶ್ರಿತ ಮಣ್ಣಿನ ರಾಶಿಯನ್ನು ನೋಡಬಹುದು. ಇಲ್ಲಿ ಮದ್ದಿನ ಮತ್ತು ಶಸ್ತ್ರಗಳ ತಯಾರಿಕೆಯ ಸ್ಥಳವಿದೆಂದು ತೋರುತ್ತದೆ. ಗುಹೆಯ ಪಕ್ಕದಲ್ಲೇ ನಾಲ್ಕು ಬೃಹದಾಕಾರದ ಬೀಸುವ ಕಲ್ಲುಗಳು ಇವೆ. ಅಲುಗಿನ ಚಕ್ರವೊಂದನ್ನು ಮಧ್ಯದ ಬಾವಿಯಲ್ಲಿ ನಿಲ್ಲಿಸಿ ಆನೆಯೊಂದರಿಂದ ಅದರ ಕಂಬವನ್ನು ಗಾಣದ ಎತ್ತಿನಂತೆ ತಿರುಗಿಸುತ್ತಿದ್ದರಂತೆ. ನಾಲ್ಕು ಬೀಸುವ ಕಲ್ಲುಗಳು ಸುತ್ತಿ ಸುತ್ತಿ ಮದ್ದನ್ನು ಅರೆಯುತ್ತಿದ್ದವಂತೆ. ಇಂತಹ ಕಲ್ಲಿನ ರುಬ್ಬುವ ಯಂತ್ರ ಭರತ ಖಂಡದಲ್ಲೇ ಇದ್ದಂತೆ ಕಂಡು ಬರುವುದಿಲ್ಲ. ಇದರ ಸಮೀಪದಲ್ಲಿಯೇ

ಚಿತ್ರದುರ್ಗದ ಏಳು ಸುತ್ತಿನಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.? ( ಭಾಗ-೨)

೧) ಹೊರಸುತ್ತುಕೋಟೆ (ಒಂದನೇ ಕೋಟೆ) : ಚಿನ್ಮೂಲಾದ್ರಿಯ ಸಪ್ತ ಶಿಖರಗಳನ್ನೂ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹಳೆಯ ಊರನ್ನೂ ಒಳಗೊಂಡಿದೆ. ಈ ಮಹಾದ್ವಾರದ ಎರಡೂ ಕೋಟೆಯು ಪಸರಿಸುತ್ತಾ ಹಳೆಯ ಊರನ್ನು ಸುತ್ತಿಕೊಂಡು ಚಿನ್ಮೂಲಾದ್ರಿ ಬೆಟ್ಟಗಳ ಹಿಂಭಾಗವನ್ನು ಸೇರಿದೆ. ಇದರ ಉದ್ದ ಸುಮಾರು ೧೨ ಕಿ.ಮೀ. ತಪ್ಪಲು ಪ್ರದೇಶದಲ್ಲಿ ಈ ಕೋಟೆಯ ಬಹುಭಾಗ ನಾಶವಾಗಿದೆ. ಇದರಲ್ಲಿ ರಂಗಯ್ಯನಬಾಗಿಲು, ಸಂತೇಬಾಗಿಲು, ಲಾಲ್‌ಗಡದ ಬತೇರಿಬಾಗಿಲು, ಉಚ್ಚಂಗಿಬಾಗಿಲು ಹಾಗೂ ಹನುಮನಬಾಗಿಲು ಎಂಬ ಐದು ಪ್ರಮುಖ ದ್ವಾರಗಳಿವೆ. ಈ ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಇವು ಪ್ರಮುಖ ದ್ವಾರಗಳಾಗಿದ್ದವು. ರಂಗಯ್ಯನ ಬಾಗಿಲು :- ಪೂರ್ವ ದಿಕ್ಕಿನ ಕೋಟೆಯ ಮಹಾದ್ವಾರವೇ ರಂಗಯ್ಯನಬಾಗಿಲು. ಇದನ್ನು ಪಾಳೆಯಗಾರ ಕಸ್ತೂರಿ ರಂಗಪ್ಪನಾಯಕನು ಮನೆದೈವ

ಚಿತ್ರದುರ್ಗದ ಏಳು ಸುತ್ತಿನಕೋಟೆಯ ಬಗ್ಗೆ ನಿಮಗೆಷ್ಟು ಗೊತ್ತು.?

ಚಿತ್ರದುರ್ಗಕ್ಕೆ ಬಂದಂತ ಪ್ರವಾಸಿಗರು ಕೋಟೆ ಕೊತ್ತಲು ಏಳು ಸುತ್ತಿನ ಕೋಟೆ ನೋಡಿ ಬೆರಗಾಗುತ್ತಾರೆ. ಆ ಏಳು ಸುತ್ತಿನ ಕೋಟೆಯ ಪರಿಚಯದ ಬಗ್ಗೆ ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು, ಅಂತರಾಳ ಕಾಲಂನಲ್ಲಿ ಹಲವು ಕಂತುಗಳಲ್ಲಿ ಬರೆಯಲಿದ್ದಾರೆ. -ಸಂ ಚಿತ್ರದುರ್ಗ ಕೋಟೆ ಕರ್ನಾಟಕದ ಅಮೂಲ್ಯ ಐತಿಹಾಸಿಕ ಸ್ಮಾರಕ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಲಾದ ಗಿರಿದುರ್ಗ, ಜಲದುರ್ಗ, ವನದುರ್ಗ ಹಾಗೂ ಧಾನ್ವನದುರ್ಗಗಳ ಲಕ್ಷಣಗಳನ್ನು ಒಳಗೊಂಡಿರುವ ವಿಸ್ಮಯಕಾರಿ ಚಿತ್ರದುರ್ಗ. ಇಲ್ಲಿ ಆಳಿದ ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ ರಾಜಮನೆತನದವರು ಈ ಕೋಟೆಯ ಮೂಲರಚನೆಗೆ ಕಾರಣರು. ಕೋಟೆಯ ವಿಸ್ತರಣೆ ನಡೆದುದು ಪಾಳೆಯಗಾರರ ಕಾಲದಲ್ಲಿ. ಇದು ಏಳು ಸುತ್ತಿನ ಕೋಟೆ.

ಒನಕೆಕಿಂಡಿ ಓಬವ್ವ : ದುರ್ಗದ ದುರ್ಗಿ ಎಂದು ಹೆಸರಾದ ಓಬಿಯ ಕುರಿತ ಲಾವಣಿ

ಎಲ್ಲೆಲ್ಲೇನೇನ್ ಅರಿವಾಗದತರ ಕತ್ತಲೆ ಮುಸುಕಿತ್ತು | ಅಲ್ಲಲ್ಲಿ ಕರಾಳ ಬಾನಿಲಿ ತಾರೆಗಳ್ ಮಿಂಚಿತ್ತು | ಚೋಳ್ ಗುಡ್ಡದ ಆ ಕಳ್ಳಿ ಅಟ್ಟದಲಿ ಫಿರಂಗಿ ಕೂತಿತ್ತು | ಧಾಳಿಯ ಮಾಡಿದ ವೈರಿಯ ದಳಗಳ ಆಟವು ಮುಗಿದಿತ್ತು | ಝಳು ಝಳು ಝಳು ಝಳು ಕಂದಕ ನೀರು ಆಡುತ ಹರಿದಿತ್ತು | ಮೇಲಾಕಾಶದ ನಕ್ಷತ್ತಗಳು ನೀರಲಿ ಮಿಂಚಿತ್ತು || ಕಿಂಡಿಯ ಮೂಲಕ ಕನ್ನವ ಕೊರೆಯಲು ವೈರಿಯ ಹೊಂಚಿತ್ತು | ಥಂಡಿಯ ಹವದಲಿ ಕಾರ್ಗತ್ತಲೆಯಲಿ ಅಡ್ಡಕ್ಕೆ ನೀರಿತ್ತು | ಅಂಡಲೆ ವರ ತರ ಗುಂಪದು ಕೂಡುತ ದಂಡನು ಸೇರ್‍ತಿತ್ತು | ಗಂಡೆದೆ ಧೈರ್ಯದಿ ಖಡ್ಗವ ಪಿಡಿದು ಮೌನದಿ ಸಾಗಿತ್ತು | ಸಿಹಿನೀರ್ ಹೊಂಡದ

ದೂರ ಆಗಿರುವ ಸಂಗಾತಿಯು ಮತ್ತೆ ಸೇರುವ ಗ್ರಹಣಕಾಲದ ತಂತ್ರ

ಅದ್ಯಾವುದೋ ವಿಷ ಘಳಿಗೆಯಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ವೈಮನಸ್ಸು ಉದ್ಭವಿಸುತ್ತದೆ. ಇದು ಕಾಲಕ್ರಮೇಣ ನೀವಿಬ್ಬರೂ ದೂರವಾಗುವ ಪ್ರಮೇಯ ಎದುರಾಗಬಹುದು. ನಿಮ್ಮ ಸಂಗಾತಿಯ ಪ್ರೀತಿಗಾಗಿ ತಾವು ಬಹಳಷ್ಟು ಅಪೇಕ್ಷೆ ಪಡುವಿರಿ. ಅವರ ದೂರ ನಿಮಗೆ ಮಾನಸಿಕವಾಗಿ ಕಾಡುತ್ತದೆ. ಅವರನ್ನು ಮತ್ತೆ ಸೇರಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುವಿರಿ. ಆದರೆ ನೀವು ಯಶಸ್ವಿಯಾಗದೆ ಹತಾಶ ಮನೋಭಾವನೆಯಲ್ಲಿ ಕಾಲ ಕಳೆಯಬಹುದು. ಇಂತಹ ಸಮಸ್ಯೆಗಳಿಗೆ ತಾವು ಗ್ರಹಣ ಕಾಲದಲ್ಲಿ ಈ ಪ್ರಕ್ರಿಯೆ ನಡೆಸುವುದರಿಂದ ನಿಮ್ಮ ಕಾರ್ಯ ನಿಶ್ಚಿತವಾಗಿ ಆಗುತ್ತದೆ. ಸಂಗಾತಿಯ ಹೆಸರನ್ನು ಪಂಚಲೋಹದ ತಗಡಿನಲ್ಲಿ ಬರೆದು ಒಂದು ಮಣ್ಣಿನ ಕುಡಿಕೆಯಲ್ಲಿ ಪಚ್ಚ ಕರ್ಪೂರ ಚಂದನ, ಅರಿಶಿನ ಶಿಖೆ, ತಾಮರ ಶಿಖೆ ಜೊತೆಗೆ ಹಾಕಿ

ಚಿತ್ರದುರ್ಗದ ಇತಿಹಾಸ / ಪಾಳೆಯಗಾರರ ಸಾಹಸ ವರ್ಣನೆ : ಲಾವಣಿ ಪದಗಳಲ್ಲಿ

ಚಿತ್ರದುರ್ಗದ ಇತಿಹಾಸ, ಸಾಹಸದ  ಬಗ್ಗೆ ಅದೇಷ್ಟೋ ಲಾವಣಿ ಪದಗಳು ಇದ್ದಿರ ಬಹುದು  ಆದರೆ ಅಂತಹುದ್ದೇ ಆದ ಲಾವಣಿ ಪದ. ಲಾವಣಿ ಹೇಗೆ ಹೇಳುತ್ತಾರೋ ಅದರೇ ರೀತಿಯಾಗಿ ಕೆ.ಗಣೇಶಯ್ಯ ಅವರು ಪದಗಳ ಮೂಲಕ ನಿಮ್ಮೊಂದೆ ಇಟ್ಟಿದ್ದಾರೆ. -ಸಂ   ಚಿತ್ತರದುರ್ಗದ ವಿಚಿತ್ರ ಕಥೆಗಳ ವಿಸ್ತಾರವ ಚೂರ್ ಬಿತ್ತುವೆನು | ಎತ್ತೆತ್ರದ ಏಳ್‌ಸುತ್ತಿನ ಕೋಟೆಯ ಎತ್ತರಿಸಿದವರ ನೆನಪಿದೆನು || ಚಿತ್ರದುರ್ಗವೆಂದ್ ಪ್ರತೀತಿ ಕಾರಣ ಚಿತ್ರನಾಯ್ಕನೊಂಶವು ಇನ್ನು | ಚಿತ್ರನಾಯ್ಕನ ವಂಶಕು ಮೊದಲು ಆಳ್ದವರಿತ್ತರು ಹತ್ತ್ ಹೆಸರನು || ತ್ರೇತಾಯುಗದಲಿ ಚಿನ್ಮೂಲಾದ್ರಿ ಪ್ರೀತಿ ಹೆಸರು ಹೊಂದಿದ ದುರ್ಗ | ಕೀರ್ತಿ ಪೊಂದಿತು ದ್ವಾಪರದಲಿ ಹಿಡಿಂಬಪಟ್ಟಣ ಎಂದುರ್ಗ | ಮತ್ತೆ ಕಲಿಯುಗದಿ ಮೊದಲ ಸಾಮ್ರಾಜ್ಯ

ಇಷ್ಟದ ಸಂಗಾತಿಯನ್ನು ಪಡೆಯುವ ಸರಳ ತಂತ್ರ

 ನೀವು ನಿಮ್ಮ ಜೀವನದಲ್ಲಿ ಇಷ್ಟದ ಸಂಗಾತಿಯನ್ನು ಪಡೆಯಲು ಬಯಸುತ್ತೀರಿ. ಆದರೆ ಅನಿವಾರ್ಯ ಕಾರಣಗಳಿಂದ ಅಥವಾ ಪರರ ವಿರೋಧ ಗಳಿಂದ ನಿಮ್ಮ ಇಷ್ಟಾರ್ಥವು ಕಮರಿ ಹೋಗುವ ಸಾಧ್ಯತೆ ಇರುತ್ತದೆ. ಮಾಡಿದ ಪ್ರೇಮ ಅಥವಾ ಮನಸ್ಸಿನ ಬಯಕೆಯನ್ನು ಪಡೆಯಲು ಹವಣಿಸುವುದು ಸಹಜವಾದದ್ದು ಆದರೆ ನಿಮ್ಮ ಮನೋ ಬಯಕೆಯಲ್ಲಿ ಕೆಲವರ ಹಸ್ತಕ್ಷೇಪ ಅಥವಾ ನಿಮ್ಮಲ್ಲಿನ ಆಕರ್ಷಣೆ ಕೊರತೆಯಿಂದಾಗಿ ನಷ್ಟವಾಗಬಹುದು. ನಿಮ್ಮ ಜೀವನದ ಸಂಗಾತಿಯನ್ನು ನೀವು ಆಯ್ಕೆ ಮಾಡಿಕೊಂಡು ಅವರ ಜೊತೆ ನಡಿಯುವ ಹೆಜ್ಜೆಯು ನಿಮ್ಮ ಗೆಲುವಿಗೆ ಪ್ರೇರಣೆ ದೊರೆಯುತ್ತದೆ. ಮನದಲ್ಲಿ ಬಯಕೆ ತುಂಬಿದ್ದರು ಅದನ್ನು ಈಡೇರಿಸಿಕೊಳ್ಳದೇ ಹತಾಶೆ ಇಂದ್ದಿದ್ದರೆ ನಿಮಗೆ ಬೇರೆ ಕಾರ್ಯಗಳಲ್ಲಿ ಆಸಕ್ತಿ ಬರುವುದಿಲ್ಲ, ಇದರಿಂದ ಖಿನ್ನತೆಯು ಸಹ ಅನುಭವಿಸಬಹುದು. ಇಂತಹ