2015 ರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರಾಷ್ಟೀಯ ಸೇವಾಯೋಜನೆಯನ್ನು ಜಿಲ್ಲಾಮಟ್ಟದಲ್ಲಿ ಏರ್ಪಡಿಸಿತ್ತು. ಅದರ ಸಂಪೂರ್ಣ ಜವಬ್ದಾರಿಯನ್ನು ಹೊನ್ನಾಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆತಿಥ್ಯವನ್ನು ವಹಿಸಿಕೊಂಡಿತ್ತು.ಸೇವೇಯ ಸವಿಜೇನ ಸವಿಯೋಣ ಬನ್ನಿ, ಸೇವೇಯ ಸವಿಜೇನ ಹಂಚೋಣ ಬನ್ನಿ. ಎಂಬ ಘೋಷಣೆಯೋಂದಿಗೆ ಜಿಲ್ಲೆಯಾದ್ಯಂತ ಎಲ್ಲಾ ಪ್ರಥಮ ಕಾಲೇಜಿನ ವಿದ್ಯಾರ್ಥಿಗಳು ಹೊನ್ನಾಳಿ ತಾಲೂಕಿನ ಅವಳಿಜವಳಿ ಹಳ್ಳಿಗಳೆಂದು ಪ್ರಸಿದ್ಧಿಯಾಗಿರುವ ಮಲ್ಲಿಗೆನಹಳ್ಳಿ ಮತ್ತು ಬೆಳಗುತ್ತಿ ಕಡೆಗೆ ಪ್ರಯಾಣ ಬೆಳೆಸಿದ್ದೆವು. ಒಂದು ವಾರದ ಆ ಶಿಬಿರಕ್ಕೆ ಸುಮಾರು ೧೫೦ ರಿಂದ ೨೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲನೆಯ ದಿನ ಬರೀ ಅವರಿವರನ್ನ ಪರಿಚಯಿಸುಕೊಳ್ಳುವಲ್ಲಿ ದಿನ ಕಳೆದವೆ. ನಂತರದ ದಿನ ವಿದ್ಯಾರ್ಥಿಗಳ ಸಂಖ್ಯಗೆ ಅನುಗುಣವಾಗಿ ಕೆಲವು ತಂಡಗಳನ್ನು ರಚಿಸಿಕೊಂಡು ಅದರ ಮುಖೇನ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದ್ದೇವು. ಅಲ್ಲಿನ ವಿದ್ಯಾರ್ಥಿಗಳಲ್ಲಿ ಮೊದಮೊದಲು ಆತಂಕ ಭಯವನ್ನು ದೂರ ಮಾಡಿ ನಂತರ ಹೊಂದಾಣಿಕೆ, ಸಹಬಾಳ್ವೆ, ಓಗಟ್ಟು, ಕಾರ್ಯಕ್ರಮ ನಿರ್ವಹಣೆ ಅದಕ್ಕೆ ಬೇಕಾದಂತ ಸಹಕಾರಗಳ ಬಗ್ಗೆ ಚರ್ಚಿಸಿ ಎಲ್ಲರಲ್ಲಿ ಸೃಜನಶೀಲತೆಯನ್ನು ಹುಟ್ಟುಹಾಕುವಲ್ಲಿ ನಾಗರಾಜ್‌ನಾಯ್ಕ್ ಮತ್ತು ರವಿಕುಮಾರ್ ಸರ್‌ಗಳು ಪ್ರಮುಖಪಾತ್ರವನ್ನು ವಹಿಸಿದ್ದರು. ಎನ್‌ಎಸ್‌ಎಸ್ ಎಂಬುದು ಒಂದು ಬಯಲು ವಿಶ್ವವಿದ್ಯಾನಿಲಯವಿದ್ದಂತೆ ಪುಸ್ತಕದ ಜ್ಞಾನದ ಜೊತೆಜೊತೆಗೆ ಬದುಕುವ ಶೈಲಿಯನ್ನು ತಿಳಿಸಿಕೊಡುವಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದೆ ಎನ್ನಬಹುದು. ಅಲ್ಲಿ ವಿವಿಧ ವಿಷಯಗಳ ಬಗ್ಗೆ ಅಂದರೆ ಪ್ರಸ್ತುತ ದಿನಮಾನಗಳಿಗೆ ಸೂಕ್ತವೆನಿಸುವ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು, ಮೂಢನಂಭಿಕೆ, ಆರೋಗ್ಯ, ಸ್ವಚ್ಛಬಾರತ್ ಅಭಿಯಾನ, ಸ್ತ್ರೀಯರ ಅನಿಷ್ಠ ಪಿಡುಗುಗಳ ಬಗ್ಗೆ ಎನ್ನು ಹತ್ತು ಹಲವು ವಿಚಾರಗಳ ಬಗ್ಗೆ ವಾರವಿಡೀ ಕಾರ್ಯಕ್ರಮದಲ್ಲಿ ತಿಳಿಸುತ್ತಿದ್ದರು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳಂತು ಅಲ್ಲಿಗೆ ಬರುತಿದ್ದಂತಹ ಸ್ಥಳಿಯರನೆಲ್ಲಾ ರಮಜಿಸುತಿದ್ದವು. ಆ ವಯೋಮಾನದಲ್ಲಿ ಕಣಿದು ಕುಪ್ಪಳಿಸುವ ಥ್ರಿಲ್ ಬೇರೆ ಬಿಡಿ….!!ಇನ್ನು ಪ್ರತಿದಿನ ತೀರ್ಥರಾಮೇಶ್ವರ ದೇವಸ್ಥಾನದ ವರೆಗೂ ನಡೆಸಿ ಯೋಗ ವ್ಯಾಯಾಮ ಇತ್ಯಾದಿಗಳನ್ನು ಮಾಡಿಸಿ ದೇವರ ದರ್ಶನವನ್ನು ಮಾಡಿಸಿ ಅಲ್ಲಿನ ತೀರ್ಥವನ್ನು ಸವಿಸಿ ನಮನ್ನು ಚುರುಕುಗೊಳಿಸುತ್ತಿದ್ದರು. ವಿದ್ಯಾರ್ಥಿತಳಲ್ಲಿನ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವುದರಲ್ಲಿ ಎನ್‌ಎಸ್‌ಎಸ್ ಶಿಬಿರವು ಮೊದಲಸ್ಥಾನವನ್ನು ಆಲಂಕರಿಸುತ್ತದೆ ಎಂದು ಹೇಳಬಹುದು. ಪ್ರೀತಿ ಮನೋರಂಜನೆಯನ್ನು ಅರಿಯುವಂತೆ ಮಾಡುತ್ತದೆ. ಅಂತಹ ಶಿಬಿರಿದ ಕೊನೆಯ ದಿನಕ್ಕೆ ಬಂದಾಗ ಎಲ್ಲರ ಮನದಲ್ಲಿಯು ಆತಂಕ ಸೃಷ್ಠಿಯಾಗಿತ್ತು ಏಕೆಂದರೆ ಅಲ್ಲಿ ಬಂದಿರುವಂತ ವಿದ್ಯಾರ್ಥಿಗಳೆಲೆಲ್ಲಾ ಅಷ್ಟೋಂದು ಆಳವಾದ ಹೊದಾಣಿಕೆಯ ಬೇರುರಿತ್ತು. ಅಂತಹ ಸಮಯದಲ್ಲಿ ನಮಗೆ ಸಾಮಾಜಿಕ ಜಾಲತಾಣವಾದ ವಾಟ್ಸಫ್ ನೆನಪಿಗೆ ಬಂತು ಅಲ್ಲಿನ ಎಲ್ಲಾ ವಿದ್ಯಾರ್ಥಿಗಳು ಸರ್‌ಗಳ ನಂಬರ್‌ಗಳನ್ನು ಕಲೆಕ್ಟ್‌ಮಾಡಿ ಒಂದು ಗ್ರೂಫ್‌ನ್ನು ರಚಿಸಿಕೊಂಡೆವು ಆ ಗ್ರೂಫ್‌ಗೆ ’ಲೆಕ್ಕಾಚಾರ ಗ್ರೂಫ್’ ಎಂದು ನಾಮಕರಣ ಮಾಡಿ ಅಲ್ಲಿನ ಕೆಲವು ವಿಶೇಷ ಸಂದಂರ್ಭಗಳಲ್ಲಿ ತೆಗೆದ ಪೋಟೋಗಳನ್ನು ರವಾನಿಸುತ್ತಾ ಹಾಗು ಅಲ್ಲಿನ ನಡೆದಂತಹ ಕಾಮಿಡಿ ವಿಚಾರಗಳ ಬಗ್ಗೆ ಚರ್ಚಿಸುತ್ತಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅವಲೋಕನ ಮಾಡುತ್ತಾ ಕಾಲಹರಣ ಮಾಡುತ್ತಿದ್ದೆವೆ. ಲೆಕ್ಕಾಚಾರ ಎಂಬ ಗ್ರೂಫ್‌ನ್ನು ರಚಿಸುವ ಮೂಲಕ ನನೆಲ್ಲಾ ಸ್ನೇಹಿತರನ್ನು ಕಾಣುವಂತೆ ಮಾಡಿದ ನನ್ನ ಗೆಳೆಯ ನಾಸೀರ್‌ಜಾನ್‌ಗೆ ಥ್ಯಾಂಕ್ಸ್……

ಮಧುಕುಮಾರ್ ಬಿಳಿಚೋಡು,

ದಾವಣಗೆರೆ