ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಯುಗ ಯುಗ ಕಳೆದರು ಮತ್ತೆ ಬರುವ ಯುಗಾದಿ ಹಬ್ಬವಲ್ಲ ಬರೀ ಪಂಚಾಂಗದ ಬದಲಾವಣೆ ಅಷ್ಟೇ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ಆಳುವವರ ಅಂತ್ಯವಾಗುತ್ತಿಲ್ಲ, ಬಡವರ ಕಷ್ಟಗಳು ನಶಿಸುತ್ತಿಲ್ಲ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ಸಮಾಜದಲ್ಲಿ ಕಿತ್ತು ತಿನ್ನುವ ಬಡತನ ಮತ್ತು ಜಾತೀಯತೆ ಎಂಬ ಪೆಡಂಭೂತ ನಿರ್ಮಾಲನೆಯಾಗಿತ್ತಿಲ್ಲ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ಸಾಲದಲ್ಲಿ ಬೆಂದು ಬಾಡುವ ದೇಶದ ಬೆನ್ನೆಲಬುಗಳ ಕಷ್ಟಗಳ ಮುಕ್ತಿಯಾಗುತ್ತಿಲ್ಲ.
ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ಹೆಣ್ಣಿನ ಷೋಷಣೆ, ಹಾಗೂ ಹತ್ಯಾಚಾರಗಳು ನಿಲ್ಲುತ್ತಿಲ್ಲ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ವರ್ಷಂತ್ಯಾದಲ್ಲಿ ಮೃತಪಟ್ಟ ಅಭೂತ ಪೂರ್ವ ವ್ಯಕ್ತಿಗಳು ಮರುಕಳಿಸುವುದಿಲ್ಲ.
ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು
ಕಾಮ ತೃಷೆಗೆ ಬಲಿಯಾದ ಮಾಂಸದ ಮುದ್ದೆಗಳ ಹಸುಳೆಯು ಆಳೂರ ಹದ್ದಿನ ಪಾಲಗುವುದು ನಿಲ್ಲುತ್ತಿಲ್ಲ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಚಿಗುರಿದ ವನದಲ್ಲಿ ಕೊಗಿಲೆ ಕೂಗವ ವಸಂತ ಕಾಲವಲ್ಲ, ದಿನದ ಬದಲಾವಣೆ ಅಷ್ಟೇ.

ಹೊಸ ವರ್ಷದ ಶುಭಾಶಯ ಕೊರಲು ನಾ ನಿನ್ನಗೆ ಹೊಸಬನಲ್ಲ, ಕೊರುವ ಶುಭಾಶಯವು ನಿನ್ನಗೆ ಹರ್ಷ ತರಲು ಇದು ನಮ್ಮ ಸಂಸ್ಕೃತಿಯಲ್ಲ, ಪಶ್ಚಾತ್ಯ ಸಂಸ್ಕೃತಿಯ ನೂಗ್ಗವತ್ತು ಎಳೆಯುತ್ತಿರುವ ದನವಾದವೆಲ್ಲ ಭಾರತೀಯರೆಲ್ಲಾ

                     ಸಂದೀಪ ಚಿಕ್ಕಮಲ್ಲನಹೊಳೆ.ಜಗಳೂರು