ನನ್ನ ಅವಳ ಪರಿಚಯ ತಡವಾಗಿದ್ದರು ಪ್ರೀತಿಯ ಅಂಕುರ ಬೆಳೆದಿದ್ದು ಬಹು ಬೇಗನೆ ನಮ್ಮ ಪ್ರೀತಿ ಬೆಳದಿಂಗಳ ಚಂದ್ರನಂತೆ ನಿಶ್ಕಲ್ಮಶವಾಗಿತ್ತು ನಿಜಕ್ಕೂ ಅವಳು ನನಗೆ ಸಿಕ್ಕಿದ್ದು ಒಂದು ಅಪರೂಪದ ಮುತ್ತು ಅಂದುಕೊಂಡಿದ್ದೆ ಏಕೆಂದರೆ ಆ ಮುಗ್ದ ಮನಸ್ಸಿನ ನನ್ನವಳು ಸೀರೆಯನ್ನುಟ್ಟು  ಕಪ್ಪು  ಕಾಡಿಗೆಯನ್ನಿಟ್ಟು  ಬರುವಾಗ ದೇವತೆಯಂತೆ  ಕಂಗೊಳಿಸುತ್ತಿದ್ದಳು  ಚಿಕ್ಕ ಪುಟ್ಟ ಛೇಷ್ಟೆ ಜಗಳಗಳು ಬಿಟ್ಟರೆ ಯಾವತ್ತು ನಮ್ಮಿಬ್ಬರ ನಡುವೆ ಸೀರಿಯಸ್ ಎನ್ನುವಂತಹ ಜಗಳವಾಗಿರಲಿಲ್ಲ ಕೋಪ ಬೆಟ್ಟದಷ್ಟಾಗಿರಲಿಲ್ಲ ಆದರೆ ಆದ್ಯಾರ ಕಣ್ಣುಬಿತೋ ನನ್ನ ಚಿನ್ನುಗೆ ನನ್ನ ಮೇಲೆ ಅನುಮಾನ ಎಂಬ ಭೂತ ಅವಳಲ್ಲಿ ಆವರಿಸಿತು ಅವತ್ತು ಎಂದಿನಂತೆ ನಾವಿಬ್ಬರು ಮೀಟಿಂಗ್ ಪಾಯಿಂಟ್ನಲ್ಲಿ  ಭೇಟಿಯಾದೇವು ಚಿನ್ನುಗೆ ಸಿಟ್ಟು ತಡೆಯಾಲಿಕ್ಕೆ ಆಗುತ್ತಿರಲಿಲ್ಲ ಏನ್ ಇವತ್ತು ಒಂಥರ ಇದ್ದೀಯಾ ಎಂದು ಕೇಳಿದ್ದೇ ತಡ ಅವಳಿಗೆ ಕೋಪ ತಡೆಯಲಾಗದೆ ನೀನು ನನಗೆ ಮೋಸ ಮಾಡಿದೆ ಮೋಸಮಾಡಿದೆ ಎಂದು ಕಣ್ಣಂಚಿನ ನೀರು ಸುರಿಸುತ್ತಾ ನನ್ನ ಕೆನ್ನಗೇ ರಪರಪನೇ ಬಾರಿಸಿದಳು ತಡೆಯಾಲಾಗದೇ ದೂರ ಹೋಗಿ ನಿಂತು ಜೋರಾಗಿ ಅಳಲಾರಂಭಿಸಿದಳು ಆ ಒಂದು ಕ್ಷಣ ನಾ ಮೌನೀಯಾದೆ ನನಗೆ ಅವಳ ಮೇಲೆ ಪ್ರೀತಿಯಿಲ್ಲದ್ದಿದರೆ ಅವಳಿಗೆ ತಿರುಗಿ ಹೊಡೆಯುತ್ತಿದ್ದೆ ಅಥವಾ ಅವಳು ಹೊಡೆದ ಸಿಟ್ಟಗೆ ಬಿಟ್ಟು ಹೋಗಿಬಿಡುತ್ತಿದೇ ಆದರೇ ಹಾಗೆ ಮಾಡಲಿಲ್ಲ ನನಗೆ ಅವಳನ್ನು ಕಂಡರೆ ಜೀವಕ್ಕಿಂತ ಹೆಚ್ಚು ಪ್ರೀತಿಯಿತ್ತು ಆಗ ಕಣ್ಣುಹೊರೆಸುತ್ತಾ ಹೇಳಿದೆ ನನ್ನ ಕೆನ್ನೆಗೆ ನೀನು ಅಷ್ಟೊಂದು ಹೊಡೆದೆಯಲ್ಲ ನಿನ್ನ ಕೈಗೆ ನೋವಾಗಲಿಲ್ಲವೇನೇ ನೋಡು ಎಷ್ಟು ಕೆಂಪಾಗಿದೆ ನೀನು ಹೇಳಿದ್ದರೆ ಸಾಕಿತ್ತು ನಾನೇ ನನ್ನ ಕೆನ್ನಗೆ ನಿನಗೆ ಸಮಾಧಾನ ಆಗುವವರೆಗೂ ಹೊಡೆದುಕೊಳ್ಳುತ್ತಿದ್ದೆನಲ್ಲ ನಾನು ಕಣ್ಣೀರಿಟ್ಟಿದ್ದು ನಿನಗೆ ನೆನಪು ಇದೀಯಾ?ಅವಳ ಹೋದ ದಾರಿಯನ್ನೇ ಮತ್ತೇ ಮತ್ತೇ ತಿರುಗಿ ನೋಡುತ್ತದ್ದೆನೆ ಕಳೆದು ಹೋದ ನನ್ನ ಮಧರವಾದ ದಿನಗಳು ಮರೆಯಲಾರದ ಕೋಟಿ ನೆನಪುಗಳು ಮತ್ತೇ ಬರಬಹುದೆಂಬ ಹುಸಿ ನಂಬಿಕೆಯ ಕಲ್ಲನಾ ಲೋಕದಲ್ಲಿದ್ದೆನೆ  ನನ್ನ ಕಣ್ಣಿನ ಹನಿಗಳು ಒಂದೊಂದಾಗಿ ಕರೆಯುತ್ತಿದೇ ಚಿನ್ನು ಬೇಗ ಎಲ್ಲಿದ್ದರು ಬಂದು ಬೀಡು ನಿನಗಾಗಿ ಕಾಯುತ್ತಿರುವ ಇಂತಿ ನಿನ್ನ ಪ್ರೀತಿಯ ಪೆದ್ದು ಹುಡುಗ.

ರಾಜು ಕಣದಮನೆ
ದ್ದಿತೀಯ ಪತ್ರಿಕೋದ್ಯಮ
ವಿದ್ಯಾರ್ಥಿ
ದಾವಣಗೆರೆ ವಿ.ವಿ