ಹಾಸ್ಟೇಲ್ ಲೈಫ್ ಎಂಬುದು ಒಂದು ಸ್ವತಂತ್ರ್ಯವಾದ ಲೈಫು.

ಅಲ್ಲಿ ಯಾವುದೇ ಬಂಧು ಬಾಂಧವರು ಇರುವುದಿಲ್ಲ. ಇರುವುದೆಲ್ಲಾ ನಮ್ಮ ಸ್ನೇಹಿತರು, ಜೂನಿಯರ್‍ಸ್ ಹಾಗೂ ಸೀನಿಯರ್‍ಸ್ ಮಾತ್ರ. ಹಿಂದೆಂದೂ ಹಾಸ್ಟೇಲ್‌ನ ಅನುಭವವಿಲ್ಲದ ನನಗೆ ಬಿಎ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಹೋಗಬೇಕಾಯಿತು.

ಪ್ರತಿನಿತ್ಯ ಪ್ರಯಾಣ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಹಾಸ್ಟೇಲ್‌ಗೆ ಸೇರಿಕೊಂಡೆ. ಮೊದಮೊದಲು ಭಯ ಆತಂಕವು ಕಾಡುತ್ತಿತ್ತು. ನಂತರ ನನ್ನಂತೆಯೇ ಹಲವಾರು ಹುಡುಗರನ್ನ ನೋಡಿದ ಮೇಲೆ ನನಗೂ ಒಂದು ಕಡೆ ಧೈರ್ಯವು ಬಂತು ನಾನದರು ಬೇಕು ಕೆಲವೊಂದಿಷ್ಟು ಹುಡುಗರು ರೂಮ್‌ನಿಂದ ಹೊರಗಡೆ ಸಹ ಬರುತಿರಲಿಲ್ಲ. ಈಗೇ ಅಲ್ಲಿ ಒಬ್ಬರಿಗೊಬ್ಬರು ಪರಿಚಯವಾಗುವ ಸ್ಥಳವೆಂದರೆ ಊಟದ ಹಾಲ್ ಮತ್ತು ಬಾತ್‌ರೂಮ್‌ಗಳಲ್ಲಿ ಮುಖದ ಪರಿಚಯವಾಗಿ ನಂತರ ಮಾತಿನ ಮುಖಾಂತರ ಸ್ನೇಹವು ಬೆಳೆದುಕೊಳ್ಳುತಿತ್ತು.

ಅದು ಯಾವ ರೀತಿ ಎಂದರೆ ಬೆಳಿಗ್ಗೆ ಆದರೆ ಸಾಕು ಬಾತ್‌ರೂಮ್‌ಗಳ ಕಡೆ ಕಿವಿ ಹಾಯಿಸಿದರೆ ಸಾಕು ಬರಿ ಹಾಡುಗಳೇ ಕೇಳಿಬರುತ್ತಿದ್ದವು. ಅವುಗಳೆನು ಸಾಮಾನ್ಯ ಹಾಡುಗಳೇ ವಿಥ್ ಮ್ಯೂಸಿಕ್ ಸೇರಿ ಹಾಡಿನ ನಾಲ್ಕು ಸಾಲು ಪ್ರಾಸಗಳು ಸಹ ಹಾಡುತ್ತಿದ್ದರು. ಕೇವಲ ಕನ್ನಡ ಹಾಡುಗಳು ಮಾತ್ರವಲ್ಲದದೇ ಹಿಂದಿ, ತೆಲುಗು, ತಮಿಳು, ಮತ್ತಿತ್ತರ ಭಾಷೆಯ ಹಾಡುಗಳನ್ನ ಹಾಸ್ಟೇಲ್‌ನ ಬಾತ್‌ರೂಮ್‌ಗಳಲ್ಲಿ ಹಾಡುತ್ತಾರೆ. ಹಾಡುಮಾತ್ರವಲ್ಲದೆ ವಿಚಿತ್ರ ಡೈಲಾಗ್ಸ್‌ಗಳು ಹುಡುಗಿಯರ ಹೆಸರುಗಳನ್ನು ಜೋರಾಗಿ ಅರಚುತ್ತಾರೆ. ನಾವು ಅದನ್ನ ಕೇಳಿಕೊಂಡು ಕೆಲವೊಮ್ಮೆ ಸಾಥ್ ಕೊಟ್ಟು ONCE MORE GELEYA ಅಂದು, ಮತ್ತೊಮ್ಮೆ ಸಾಕು ಬಿಡಪಾ ತಂದೆ, ಎನ್ನುತ್ತಿದ್ದೆವು. ಕೆಲವೊಮ್ಮೆ ಹಾಸ್ಟೇಲ್‌ನ ಕೆಲವರು ಬೆಳಿಗ್ಗೆ ಹೋಗಿ ಬಾತ್‌ರೂಮ್‌ಗಳಲ್ಲಿ ಸೇರಿಕೊಂಡರೆ ಇನ್ನೊಬ್ಬರು ಹೋಗಿ ಆಯ್ತೆನೋ ನಿನ್ನ ಸಾಂಗ್ ಅನ್ನೋ ತನಕನು ಹೊರಗೆ ಬರುತ್ತಿರಲಿಲ್ಲ.

ಅಂದು ಗೊತ್ತಾಯಿತು ಹಾಸ್ಟೇಲ್‌ನಲ್ಲೂ ಕೂಡ ದೊಡ್ಡ ದೊಡ್ಡ ಸರಿಗಮಪ ಸ್ಟಾರ್‍ಸ್ ಸಿಂಗರ್‍ಸ್ ಇದ್ದಾರೆ ಅಂತ. ಇನ್ನು ಕೆಲವೊಮ್ಮೆ ಕರೆಂಟ್ ಹೋದಾಗ ಎಲ್ಲರೂ ಓಮ್ಮಲೇ ಕೂಗುವುದು, ಯಾವುದಾರದರು BIRTHDYA ಬಂದಾಗ ಅವರಿಗೆ ಗೊತ್ತಿಲ್ಲದಂತೆ ತಯಾರಿ ಮಾಡಿಕೊಂಡು ಮಧ್ಯರಾತ್ರಿ ಅವರನ್ನು ಏಳಿಸಿ ಅವರಿಗೆ ಶಾಕ್‌ಕೊಟ್ಟು ಕೇಕ್ ಕಟ್ಟುಮಾಡಿಸುತ್ತಿದ್ದೇವು. ನಂತರ ಅಲ್ಪಸಲ್ಪ ದುಡ್ಡು ಹಾಕಿ ಚಿಕನ್‌ತಂದು ಪಾರ್ಟಿ ಮಾಡುವ ಖುಷಿಯಂತು ಎಂದು ಮರೆಯದ ನೆನಪಾಗಿದೆ. ಮೋಜು ಮಸ್ತಿನ ಜೀವನಕ್ಕೆ ಹಾಸ್ಟೇಲ್ ಲೈಪು ಅಂತು ಪ್ರತಿಯೊಬ್ಬರನ್ನ ಕೈಬೀಸಿ ಕರೆಯುತ್ತದೆ. ಇನ್ನು ಕೆಲವೊಮ್ಮೆ ನಮ್ಮ ಸ್ನೇಹಿತರು ಊರಿಗೆ ಹೋಗಿ ಬಂದೆದ್ದಾರೆ ಎಂದರೆ ಸಾಕು ಅವನನ್ನ ಉಪಚರಿಸದೆ ಅವನು ತಂದಿರುವ ಬ್ಯಾಗ್‌ನಲ್ಲಿ ಏನಾದರು ತಿನ್ನುವ ಪದಾರ್ಥಗಳು ಇದಾವ ಎಂದು ಹುಡುಕಿ ಅದನ್ನು ತೆಗೆದು ಕೊಂಡು ಹೋಗಿ ಹಂಚಿಕೊಂಡು ತಿನ್ನುವುದು. ಐಪಿಲ್, ಕಬ್ಬಡ್ಡಿ ಲೀಗ್‌ಗಳು ಆರಂಭವಾದಗ ಟಿವಿ ಹಾಲ್‌ಗಳಲ್ಲಿ ಕೇಕೆ ಹಾಕಿ ಸಿಳ್ಳೆಹೊಡೆದು ಪಕ್ಕದ ಮನೆ ಆಂಟಿ ಅಂಕಲ್‌ನತ್ರ ಬೈಯಿಸಿಕೊಳ್ಳುವುದು ಸರ್ವೆ ಸಾಮಾನ್ಯವಾಗಿತ್ತು. ಈಗೆ ಹಾಸ್ಟೇಲ್‌ನ ಲೈಪು ಎಂಬುದು ಹೇಳಲಾಗದಂತ ಸ್ವತಂತ್ರ್ಯ ಸ್ವರ್ಗವೇ ಹಾಗಿತ್ತು.

 

-ಮಧುಕುಮಾರ್ ಬಿಳಿಚೋಡು, ದಾವಣಗೆರೆ