ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ವಿದ್ಯಾರ್ಥಿ ಜೀವನ ಎಂದರೆ ನೆನಪಾಗುವುದು ಮೊದಲು ಗೆಳತನ ಈ ವಿದ್ಯಾರ್ಥಿ ಜೀವನದೂದಕ್ಕೂ ಸ್ನೇಹಿತರ ಬಳಗವೇ ದೊಡ್ಡ ಅವಿಭಕ್ತ ಕುಟುಂಬವಾಗಿ ಮಾರ್ಪಟಿರುತ್ತೆ ಹಾಗೆಯೇ ನನ್ನ ಜೀವನದಲ್ಲೂ ಸಹ ಅದೋಷ್ಟೂ ಬೆಲೆ ಕಟ್ಟಲಾಗದ ಗೆಳೆಯ, ಗೆಳೆತಿಯರು ಬಾಂದವ್ಯದ ಬೆಸುಗೆಯಲ್ಲಿ ಮಿಂದ್ದೆದು ವಿದ್ಯಾರ್ಥಿ ಜೀವನದ ಸಾಗರದಲ್ಲಿ ಸ್ನೇಹವೆಂಬ ದೋಣಿಯಲ್ಲಿ ಪಯಣಿಸಿ ಬಂದವನು. ಸುಮಾರು ಎಂಟು ತಿಂಗಳ ಹಿಂದೆ ವಿದ್ಯಾರ್ಥಿ ಜೀವನಕ್ಕೆ ಫುಲ್ ಸ್ಟಾಪ್ ಹಿಡುವುದು ಅನಿವಾರ್ಯವಾಗಲ್ಲದೆ ಆ ವಿದ್ಯಾರ್ಥಿ ಜೀವನದ ಘಟ್ಟವೇ ಅಂತ್ಯವಾಗಿತ್ತು. ಆದ್ದರಿಂದ ಗೆಳತನದ ಸವಿಯುವ ಬಾಗ್ಯಕ್ಕೆ ನೀರೆರೆಯುವುದು ಎಲ್ಲಾ ಸ್ನೇಹಿತರಿಗೂ ಅನಿವಾರ್ಯವಾಗಿತ್ತು.

ಗೆಳೆಯರೆಲ್ಲಾ ಹತ್ತು ತಿಂಗಳು ಕಳೆದರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಸಂದರ್ಭ ಒದಗಿ ಬರಲ್ಲೆ ಇಲ್ಲ. ಹೀಗೆ ಎಲ್ಲಾರು ಒಂದೇಡೆ ಸೇರಬೇಕು ಎನ್ನುವ ಸ್ನೇಹಿತರ ಮಾತುಗಳನ್ನು ಒಟ್ಟುಗೂಡಿಸುವ ವ್ಯಾಟ್ಸ್‍ಪ್ ಗ್ರೂಪ್‍ನ ಸಂದೇಶಗಳಲ್ಲಿ ಇತ್ತಿಚಿನ ದಿನಗಳಲ್ಲಿ ಹಾಗಿಂದಾಗೆ ಚರ್ಚೆಗಳು ನೆಡೆಯುತಿತ್ತು. ಹೀಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಗೆಳತಿ ನಿರ್ಮಾಲನ ಮದುವೆಯ ಕಾರ್ಡ ವ್ಯಾಟ್ಸ್ ಆಪ್ ಗ್ರೂಪನಲ್ಲಿ ಬಂದು ಬಿತ್ತು ಮೊದಲ್ಲೇ ಎಲ್ಲಾ ಗೆಳೆಯರು ಒಂದಡೆ ಸೇರುವ ಕಾತುರದಿಂದ ಕುಳಿತಿದ್ದ ನಮ್ಮಗೆ ಗೆಳತಿ ನಿರ್ಮಲನ ಮದುವೆ ವೇದಿಕೆಯಾಗಿ ಮಾರ್ಪಟ್ಟಿತ್ತು.

ನಾವುಗಳೆಲ್ಲ ಸೇರುವುದಕ್ಕೆ ಇದೆ ಸರಿಯಾದ ಸಮಯ ಎಂದು ಗ್ರೂಪ್‍ನಲ್ಲಿ ಚರ್ಚಿಸಿ ತಿರ್ಮಾನಿಸಿ ಅವಳ ಮದುವೆ ತುಮಕೂರಿನಲ್ಲಿ ಇರುವುದರಿಂದ ಶನಿವಾರ ಸಂಚೆ ಕಾರ್ ಮಾಡಿಕೊಂಡು ತುವiಕೂರಿನ ಕಡೆ ಗೆಳೆಯರೆಲ್ಲ ಹೋರಟೇವು ಅಲ್ಲಿ ಹೋಗಿ ತಲುಪುವಲ್ಲಿ ಮದ್ಯೆ ರಾತ್ರಿ ಹನ್ನೆರಡಾಗಿ ಹೊಗಿತ್ತು. ಮದುಮಗಳಾದ ಗೆಳತಿಂiÀiನ್ನು ಮಾತನಾಡಿಸಿ ಗೆಳೆಯರೆಲ್ಲಾ ಸೇರಿ ಒಂದು ಸೆಲ್ಪಿಯನ್ನು ತೆಗೆದುಕೊಂಡೆವು ಹುತ್ತು ತಿಂಗಳಿಂದ ದೂರ ವಿದ್ದ ಗೆಳೆಯರೆಲ್ಲಾ ಸೇರಿದ ಖುಷಿಗೆ ಹಸಿವೆ ಕಾಣದೆ ಯಾರೋಬ್ಬರು ಊಟ ಮಾಡಲ್ಲಿಲ. ಮದ್ಯೆ ರಾತ್ರಿ ಮೀರಿ ಹೋಗಿದ್ದರು ಕಾರಿನಲ್ಲಿಯೇ ಕುಣಿದು ಕುಪ್ಪಳಿತ್ತಾ ತುಮಕೂರು ಸಿಟಿಯನ್ನು ಸುತ್ತಿದ್ದೆವು. ಆ ಸಮಯದಲ್ಲಿ ಪೊಲೀಸ್ ಅವರು ಶ್ವೆಟರ್ ಹಾಗೂ ಮಂಕಿ ಕ್ಯಾಪತರಹದ ಟೋಪಿ ದರಿಸಿದ ಪೊಲೀಸಪ್ಪನನ್ನೆ ಡ್ರಿಂಕ್ ಮತ್ತು ಸೀಗರೇಟ್ ಎಲ್ಲಿ ಸಿಗುತ್ತೆ ಅಂತ ಕೇಳಿ ಅವರು ಪೋಲಿಸ್ ಎಂದು ಗೊತ್ತಾದಾಗೆ ಅವರಲ್ಲಿ ಭಯದಿಂದ ಸಾರಿ ಕೇಳಿ, ಎಣ್ಣೆ ಸೀಗರೆಟ್ ಪ್ರೀಯರಿಗೆ ಅದು ಸೀಗದೆ ನಿರಾಶರಾಗಿ ಬಂದು ಚೌಟ್ರಿಯ ಮೇಲೆಚಾವಣಿಯಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಮಲಗಿದ್ದು ಏನೋ ಒಂದುತರಹದ ಬೇಸರ ಗೆಳೆಯರೆಲ್ಲಾರಲ್ಲಿ ಮನೆ ಮಾಡಿತ್ತು. ಆದರೆ ಮರುದಿನ ಎದ್ದು ಎಲ್ಲಾರು ಪ್ರೆಷಪಾಗಿ ತಿಂಡಿ ತಿನ್ನುವ ಮೊದಲೇ ಇನ್ನೂ ಮೂವರು ಗೆಳೆಯರು ಮದುವೆಯಲ್ಲಿ ಜಾಯಿನ್ ಆಗಿದ್ದು ಖುಷಿತಂದಿತ್ತು. ಹೀಗೆ ಎಲ್ಲಾ ಸ್ನೇಹಿತರು ಅವರ ಖುಷಿ ವಿನಿಮಯಸಿತ್ತಾ ಮೂಹೂರ್ತ ಮುಗಿಯುವ ಮುನ್ನವೇ ನೂgಕ್ಕೂ ಹೆಚ್ಚು ಸೆಲ್ಪಿಯನ್ನು ಕ್ಲಿಕಿಸಿಕೊಂಡಿದೆವು.

ಎಣ್ಣೆ ಸೀಗರೆಟ್ ಪ್ರೀಯರು ಮೂಹೂರ್ತ ಮುಗಿಯುವುದಕ್ಕೂ ಮುನ್ನವೇ ಬಾರ್‍ಗೆ ಲಗ್ಗೆ ಹಿಟ್ಟು ಸುರಪಾನವನ್ನು ಹೊಟ್ಟೆಯಲ್ಲಿ ಸೇರಿಸಿದ್ದರಿಂದ ಇಲ್ಲಸಲ್ಲದ ಸ್ನೇಹದ ಪ್ರೀತಿಯು ನಶೆಯಲ್ಲಿ ಉಂಬಳಿಸಿ ಕವನದ ರೂಪದಲ್ಲಿ ವಾಕ್ಯಗಳು ಬರುತ್ತಿತ್ತು. ಇದನ್ನು ನೋಡಿ ನಾನು ಮತ್ತು ಇನೊರ್ವ ಗೆಳೆಯರು ಅವರನ್ನು ರೆಗಿಸುತ್ತಾ ಮದುವೆಯ ರಿಸಪ್ಷ್ಯನಲ್ಲಿ ಡ್ಯಾನ್ಸ್ ಮಾಡಿಸಿ ಮಜ ತಗೆದುಕೊಂಡು ಎಲ್ಲಾರಿಗೂ ಮಜದ ರಸದೌತಣವನ್ನು ಉಣಬಡಿಸಿ ವಿಡಿಯೋ ಸಹ ಮಾಡಿದ್ದು ಅದನ್ನು ಮಾರೆನೆ ದಿನ ಗ್ರೂಪ್‍ನಲ್ಲಿ ಹಾಕಿ ರೇಗಿಸಿದ್ದು, ಹೀಗೆ ಮದುವೆಯ ಮುಗಿಯುವವರೆಗೂ ಒಂದಲ್ಲೊಂದು ರೀತಿ ಎಂಜಾಯ್ ಮಾಡಿ ವಿದ್ಯಾರ್ಥಿಯ ಗೆಳೆತನದ ಎಂಜಾಯ್ ಮೇಂಟ್ ಹಾಗೂ ದೂರ ವಿದ್ದ ಸ್ನೇಹಿತರನ್ನು ಒಟ್ಟು ಗೂಡಿಸುವ ಬಹು ಮುಖ್ಯವಾದಂತಹ ಪಾತ್ರ ಮದುವೆ ವಹಿಸುತ್ತದೆ. ಅದೆಷ್ಟೂ ದಿನ ಬೇಸರದಿಂದ ಕೂಡಿದ ಮನಸುಗಳನ್ನು ಖುಷಿಯಿಂದ ಇರಿಸಿ ಸಾವಿರಾರು ದೂರವಿದ್ದ ಗೆಳೆತನಕ್ಕೆ ಸೇತುವೆಯಾಗಿ ಸಹಾಯ ಮಾಡಿ ದೂರವಿದ್ದ ಗೆಳತನವನ್ನು ಹತ್ತಿರ ಮಾಡುವ ಮದುವೆಗೆ ನನ್ನದೊಂದು ಸೆಲ್ಯೂಟ್.

 

-ಸಂದೀಪ ಚಿಕ್ಕಮಲ್ಲನಹೊಳೆ ಜಗಳೂರು
9731899315

(ಸಾಂದರ್ಭಿಕ ಚಿತ್ರ)