ನೀನು ತುಂಬಾ ಬಿಜಿ ಇದ್ದಿಯಾ, ಫ್ರೀ ಇದಿಯೋ ನನಗೆ ಗೊತ್ತಿಲ್ಲ. ಆದರೂ ಯಾವಗಲಾದರೂ ನನ್ನ ನೆನಪಿಸಿಕೊಂಡು ನನ್ನ ಮೊಬೈಲ್‌ಗೆ ಬಂದು ತಪ್ಪಿದಕರೆ ಅಥವಾ ಸಂದೇಶ ಆದರೂ, ರವಾನಿಸುತ್ತಿಯೊ ಎಂಬ ದೂರದ ಆಸೆ ನನ್ನದು. ಅದಕ್ಕೆ ತಾಸಿಗೊಂದು ಸರಿ ಫೋನ್ ಹಿಡಿದು ನೋಡುತ್ತಾ ಇರುತ್ತೇನೆ. ಆದರೆ ನೀನು ನನ್ನ ಮರೆತು ಬಿಟ್ಟಿದ್ದಿಯಾ ಅನಿಸುತ್ತಿದೆ. ನಾನು ಜೊತೆಗೆಇದ್ದಾಗ ನನ್ನನು ಬಿಟ್ಟರೆ ಲೋಕವೆ ಇಲ್ಲಾ ಎಂಬಷ್ಟು ನನ್ನ ಅಚ್ಚಿಕೂಂಡವಳು ನೀನು..?

ನಮ್ಮ ಊರಿನಿಂದ ವಿದ್ಯಾಭ್ಯಾಸಕೇಂದು ಮಂಗಳೂರಿನಲ್ಲಿರುವ ಕರಾವಳಿ ಕಾಲೇಜಿನಲ್ಲಿ ಬಿ.ಎಡ್. ಮಾಡುವಾU ಉದಾಹರಣೆ ಕೌಶಲ್ಯಕೆಂದು ಒಂದು ಪಿಂಕ್ ರೋಸ್‌ತಂದಿದ್ದೆ, ಈ ಕೌಶಲ್ಯವನ್ನು ಪ್ರೇಸೆಂಟ್ ಮಾಡುವಾಗ ಆ ರೋಸ್‌ಕೈಯಲ್ಲಿ ಹಿಡಿದು, ಇದರ ಬಣ್ಣಯಾವುದೆಂದು ನಾ ನಿನ್ನ ಪ್ರಶ್ನೀಸಿದಾಗಿನಿಂದ ಹ ಆ ಸ್ನೇಹ, ಅಬ್ಬಾ..! ಅದನ್ನು ಮರೆಯಲು ಅಸಾಧ್ಯ.ಆ ಒಂದು ರೋಸ್ ನಿಂದ ನಮ್ಮ ಸ್ನೇಹ ಚಿಗುರಿತು, ಸ್ನೇಹಚಿ ಗುರಿದೆಂತೆಲ್ಲಾ ದಿನ ಬೆಳಗಾದರೆ ಸಾಕು ನನ್ನ ಎಲ್ಲಾ ಕಾರ್ಯಚಟುವಟಿಕೆಗಳು ಸಹ ಅವಳ ಸಂದೇಶದಜೊತೆ ಸಾಗುತ್ತಿದ್ದವು. ಹೀಗೆ ದಿನ ಉರುಳಿದಂತೆಲ್ಲಾ ಅವಳಲ್ಲಿ ಹಾಗೂ ನನ್ನಲ್ಲಿನ ಭಾವನೆಗಳನ್ನು ಹಂಚಿಕೊಳ್ಳತ್ತಾ ಇಬ್ಬರ ನಡುವಿನ ಸ್ನೇಹ ಇನ್ನುಗಟ್ಟಿಯಾಯಿತು. ಎಲ್ಲಾ ವಿಷಯಗಳಲ್ಲಿಯೂ ಸಹ ಕಾಳಜಿ, ಮಮತೆಯಿಂದ ಉಪಚರಿಸುತ್ತಿದ್ದಳು. ದಿನನಿತ್ಯ ನಾ ಕಾಲೇಜಿನೊಳಗೆ ಪ್ರವೇಶಿಸುತ್ತಿದಂತೆ ಮುಗುಳ್ನಕ್ಕು ನನ್ನ ಸನಿಹ ಬಂದು ಯೋಗಕ್ಷೇಮ

ವಿಚಾರಿಸಿ,ಕಾಲೇಜಿನಲ್ಲಿಕೊಡುವಂತಹ ವರ್ಕ್‌ಗಳಲ್ಲಿ ಸಹಾಯ ಮಾಡುತ್ತಿದ್ದವಳು. ಹೀಗೆ ನಮ್ಮ ಸ್ನೇಹ ಹೆಮ್ಮರವಾಗಿ ಬೆಳೆದಂತೆಲ್ಲಾ ನಮ್ಮ ಸಂವಹನದಲ್ಲಿ ಗೂಬೆ, ಕೋತಿ, ಎಂದು ಬದಲಾಯಿತು.

ನನ್ನ ನಿನ್ನ ಅತಿಯಾದ ಸ್ನೇಹ ನನ್ನಲ್ಲಿ ಪ್ರೀತಿಯಾಗಿ ಮೊಳಕೆಯೊಡೆಯಲು ಆರಂಭಿಸಿತ್ತು. ಆ ಪ್ರೀತಿಯನ್ನು ನಿನ್ನ ಸನಿಹ ಹೇಳಿಕೋಳ್ಳಬೇಕೆಂದು ನಾನು ನಿನ್ನ ಹತ್ತಿರ ಬಂದಾಗಲೆಲ್ಲಾಕುತೂಹಲ ಕೇರಳಿಸುತಿತ್ತು, ಹೇಳಬೇಕು ಅನ್ನುವಷ್ಟರಲ್ಲಿ ಏನು ಹೇಳದೆ ಕಾಲೇಜಿನಿಂದ ವಾಪಸ್ಸು ಆಗುತ್ತಿದ್ದೆ. ಆದರೆ ಅದ್ಯಾಕೋ ಏನೋ ಒಂದು ದಿನ ನೀನು ನನ್ನ ಸನಿಹ ಬಂದು ನೆನಪಿನ ಕಾಣಿಕೆಕೊಟ್ಟು ನನ್ನ ಸ್ನೇಹಕ್ಕೆ ಪುಲ್ ಸ್ಟಾಪ್‌ಇಟ್ಟು ಕೈ ಕುಲುಕಿ ಅಳುತ್ತಾ ಹೋದವಳು, ಇಂದಿಗೂ ನನ್ನಿಂದ ಮರೆಯಾದವಳು ನೀನು.? ನೀನ್ನ ನೆನಪಲ್ಲೆದಿನ ದೂಡುತ್ತಿರುವ ನನಗೆ ನಿನ್ನಿಂದ ಒಂದು ಕರೆಅಥವಾ ಸಂದೇಶಕ್ಕಾಗಿ ಬರದಿಂದ ಬೆಂದ, ಭೂಮಿಯು ವರುಣನಿಗಾಗಿಕಾಯುವರೀತಿಕಾಯುತ್ತಿರುವೆ ಗೆಳತಿ….ಇಂತಿ ನಿನ್ನ ನಂಬುಗೆಯ……

ಸಂದೀಪ ಚಿಕ್ಕಮಲ್ಲನಹೊಳೆ, ಜಗಳೂರು

          9713899315