ದಾವಣಗೆರೆ: ರಾಷ್ಟ್ರ ಮಟ್ಟದ ದಂತ ವೈದ್ಯಕೀಯ ಪ್ರಕಾಶನ ಸ್ಥಂಸೆಯಾದ ಫಮ್ಡೆಂಟ್‌ ಸಂಸ್ಥೆ ನೀಡುವ ದಂತ ವೈದ್ಯಕೀಯ ವಿಭಾಗದ ‘ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಪ್ರಶಸ್ತಿಯು ನಗರದ ಬಾಪುಜಿ ದಂತ ವೈದ್ಯಕೀಯ ಕಾಲೇಜಿನ ಡಾ.ವಿನಾಯಕ ಎ.ಎಂ ಅವರಿಗೆ ಲಭಿಸಿದೆ.

ಈಚೆಗೆ ಮುಂಬೈನಲ್ಲಿ ನಡೆದ 2017ನೇ ಫಮ್ಡೆಂಟ್‌ ಡೆಂಟಿಸ್ಟ್ರಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.