ವಿ.ವಿ ಅಯ್ಯೋ ! ನೋಡ್ತಾ-ನೋಡ್ತಾ ಸ್ನಾತಕೋತ್ತರ ಪದವಿಯ  ಮೊದಲ ಸೆಮಿಸ್ಟರ್ ಮುಗಿದೇ ಹೋಯಿತು. ಇಲ್ಲಿಓದಿದ್ದು ಬರೆದಿದ್ದಕ್ಕಿಂತ ತಿಳಿದಿದ್ದು ಕಲಿತದ್ದೇ ಹೆಚ್ಚು ಕಾರಣ ನಮ್ಮದು ಪತ್ರಿಕೋದ್ಯಮ ವಿಭಾಗ. ನಮಗೆ ಸೋಸೈಟಿನೆ ಸಿಲಬಸ್ ಮಾಧ್ಯಮಗಳೇ ಬುಕ್ಸ್ ,ಪ್ರಚಲಿತ ಘಟನೆಗಳೇ ಪ್ರಶ್ನೆಗಳಾಗಿವೆ. ಇದನ್ನು ಮೊದಲೇ ತಿಳಿದುಕೋಳ್ಳದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪಟ್ಟಪಾಡುಅಷ್ಟಿಷ್ಟಲ್ಲ.
’ಸಮಾಜದ ಆಗು-ಹೋಗುಗಳಕಡೆ ಗಮನ ಇರಲಿ, ಪ್ರತಿನಿತ್ಯ ನೀವು ಎರಡು-ಮೂರು ಪತ್ರಿಕೆಓದಬೇಕು ಅವುಗಳ ಕುರಿತುಚರ್ಚಿಸಬೇಕುಇಲ್ಲದಿದ್ದರೆ ನೀವುಗಳು ಪತ್ರಿಕೋದ್ಯಮಕ್ಕೆಯೋಗ್ಯರಲ್ಲ’ – ಇದುಪ್ರತಿನಿತ್ಯ ಪಾಠಕ್ಕೆ ಮುಂಚೆ ನಮ್ಮೆಲ್ಲಾ ಗುರುಗಳು ಪಠಿಸುತಿದ್ದ ಮಂತ್ರ ವಾಕ್ಯಇದನ್ನುಕೇಳಿ ನಾವುಗಳು ಮೊಳೆ ಹೊಡಿತಾರಲ್ಲೂಇವರುಎಂದುಗೊಣಗಿಕೊಂಡು ಸಮ್ಮನಾಗಿ ಬಿಡುತ್ತಿದ್ದೆವು.ಆ ಮೊಳೆಗಳೆ ಮಂದೆ ಪ್ರಶ್ನೆಗಳಾಗಿ ಬಂದು ನಮ್ಮ ತಳ/ತಲೆಚುಚ್ಚುತ್ತವೆಂದುಯಾರೂ ಊಹಿಸಿರಲಿಲ್ಲ.
ನಮ್ಮ ಪ್ರಶ್ನೆ ಪತ್ರಿಕೆಯಲ್ಲಿಎಲ್ಲವೂ ಸಿಲಬಸ್‌ನಿಂದ ಆಚೆಗಿನ ಪ್ರಶ್ನೆಗಳೇ.ಪ್ರಶ್ನೆಗಳಲ್ಲಿ ಪ್ರವಾಸಿಗನಾಗಿ ಮೋದಿ ಭಾಗ್ಯವಂತನಾಗಿ ಸಿದ್ದು ಬಂದಿದ್ದರು.ಕಲಾಪಗಳು, ಭ್ರಷ್ಟಾಚಾರ ,ಪ್ಯಾರಿಸ್‌ದಾಳಿ, ಅಸಹಿಷ್ಣುತೆ ಅಂಶ ಕುರಿತ ಪ್ರಶ್ನೆಗಳೂಇದ್ದವು. ಇಂತಹ ಪ್ರಶ್ನೆಯಿಂದನಮ್ಮ ಮೇಲೆಯೇಉಗ್ರರ ದಾಳಿಯಾಗಿ ಪರೀಕ್ಷಾ ಕೊಠಡಿಯೊಳಗೆ ಅಸಹಿಷ್ಣುತ ವಾತಾವರಣತುಂಬಿಕೊಂಡಂತಾಗಿತ್ತು.ಹೊರ ಬಂದವರೆ ಗುರುಗಳನ್ನುಡುಕಿ ಕೇಳಿದಾಗ ಅವರುಕೊಟ್ಟಉತ್ತರ ಆ ಮಂತ್ರವಾಕ್ಯವೇ..! ಜೊತೆಗೆ ’ನೀವು ಈ ಮಾತನ್ನುಅಂದೇ ಪಾಲಿಸಿದ್ದರೆ ನಿಮಗೆ ಪರೀಕ್ಷೆ ಹಿಂಗಾರು ಸೋನೆ ಮಳೆಯಾಗುತ್ತಿತ್ತು, ನೀವು ಪಾಲಿಸಲಿಲ್ಲ ಚೆನೈ ಪ್ರವಾಹವಾಗಿದೆ ಅಷ್ಟೇ’ ಎಂದುಟಾಂಗ್‌ಕೊಟ್ಟರು.
ಮೊದಲದಿನದ ಪರೀಕ್ಷೆ ಮುಗಿದ ಮೇಲೆ ಮುಂದಿನ ತಯಾರಿಗೆಕೆಲ ಸ್ನೇಹಿತರು ಪಠ್ಯಪುಸ್ತಕ ಬದಿಗಿಟ್ಟುಒಂದು ತಿಂಗಳ ದಿನಪತ್ರಿಕೆಗಳನ್ನುಒಂದೇದಿನದಲ್ಲಿಓದಿದ್ದುಉಂಟು! ಎಲ್ಲಾ ಪರೀಕ್ಷೆ ಮುಗಿದ ಮೇಲೆ ಕ್ಯಾಂಟಿನ್ ಸಂತಾಪ ಸಭೆ  ಸೇರಿದೆವು.  ಅಲ್ಲಿಇನ್ನು ಮುಂದೆಎಲ್ಲರೂ ಪ್ರತಿನಿತ್ಯಎರಡು ದಿನಪತ್ರಿಕೆಓದಲೇಬೇಕು ಕೇವಲ ಕ್ರೀಡಾ-ಸಿನಿಮಾ ಪುಟಕ್ಕೆ ಸೀಮಿತವಾಗುವಂತಿಲ್ಲ,  ಧಾರವಾಹಿಯ ಲಕ್ಷೀ-ಗೌರಿಯರನ್ನು ಬಿಟ್ಟು ನ್ಯೂಸ್‌ಚಾನೆಲ್‌ಕಡೆಗಮನಹರಿಸಬೇಕು, ಮುಖ್ಯ ಸುದ್ದಿಗಳನ್ನು ಎಲ್ಲರೊಡನೆಚರ್ಚಿಸೋಣಎಂದು ನಿರ್ಧರಿಸಿ ನಮಗೆ ನಾವೇ ಸಮಾಧಾನ ಮಾಡಿಕೊಂಡೆವು.

ಜಯಪ್ರಕಾಶ್ ಬಿರಾದಾರ್
(ಪತ್ರಿಕೋದ್ಯಮ ವಿಭಾಗ)
ದಾವಣಗೆರೆ