ಅದು ಬಿ.ಎಡ್‌ಓದುವ ಕಾಲೇಜಿನ ದಿನಗಳು. ಫ್ರಂಡ್ಸ್ ಜೊತೆಗೆ ಓದಾಯಿತು, ನಾನಾಯ್ತು ಎಂದು ನನ್ನ ಪಾಡಿಗೆ ನಾನಿದ್ದೆ. ಅದೊಂದು ದಿನ ನನ್ನ ಜೀವನ ಅದೆನೊ ಓಸತು ಎನಿಸಿತು. ನನ್ನಜೀವನದಲ್ಲಿ ತಂಗಾಳಿಯಂತೆ ಬಂದಳು ಆ ಚಲುವೆ. ಪ್ರಾರಂಭದಲ್ಲಿ ಫ್ರಂಡ್ ರೀತಿಯಲ್ಲೆ ಪರಿಚಯವಾಯ್ತು. ಆದರೂ ದಿನ ಕಳೆದಂತೆ ಹತ್ತಿರವಾದದ್ದೆ ತಿಳಿಯಲಿಲ್ಲ. ಕಾಲೇಜಿನಲ್ಲಿ ಎಲ್ಲರನ್ನು ಒಂದು ರೀತಿಕಂಡರೆ ನನ್ನನ್ನೆ ಒಂದು ರೀತಿ ಕಾಣುವಳು. ಬರುಬರುತ್ತಾ ತುಂಬಾ ಹತ್ತಿರವಾದಳು. ಅವಳಿಗೆ ನನ್ನ ಮುಗ್ದತೆಯೆಇಷ್ಟವಾಗಿತ್ತು. ಆ ನಂತರದ ದಿನಗಳ ಕಾಲೇಜ್ ಲೈಫ್‌ನಲ್ಲಿ ಕಳೆದಿದ್ದೆಲ್ಲಾ ಅವಳ ಜೊತೆಗೆ. ಈ ಜಗತ್ತಿನಲ್ಲಿ ಅತಿ ಸುಂದರವಾದ ಜಾಗಅಂದರೆ ಅದು ಹೃದಯಾನೆಕಣೆ ಪೆದ್ದು. ಯಾಕೆಗೊತ್ತಾ? ಅದನ್ನು ಯಾರು ಮುಟ್ಟೋಕಾಗಲ್ಲ, ನೋಡೊಕಾಗಲ್ಲ ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೊಕಾಗಲ್ಲ ಅದೆ ಚಿನ್ನು ನಿನ್ನ ಹಾಗೆ.
ಕಾಲೇಜಿನಲ್ಲಿ ನಡೆಯುವಎಲ್ಲಾ ಸಾಂಸ್ರೃತಿಕ ಕಾರ್ಯಕ್ರಮಗಳಲ್ಲಿ, ಎನ್‌ಎಸ್‌ಎಸ್‌ಕ್ಯಾಂಪ್‌ನಲ್ಲಿ, ಪ್ರೋಗ್ರಾಮ್‌ಗಳ ಯ್ಯಾಂಕರಿಂಗ್‌ನಲ್ಲಿ ನಮ್ದೆ ಸದ್ದು. ಆ ದಿನ ಅವಳು ಸ್ವರ್ಗದ ಅಪ್ಸರೆಯಂತೆ ಕಂಗೊಳಿಸುತ್ತಿದ್ದಳು. ಮಗುವಿನ ಮುಗ್ದತೆ, ಸೂರ್ಯನಂತೆ ಪ್ರಜ್ವಲಿಸುವ ಮುಖ, ಮನಸೆಳೆಯುವ ಕಣ್ಣಿನ ನೋಟ, ಕಂಡರೂ ಕಾಣದಂತೆ ನಾಚುವ ವರ್ತನೆ, ಕಮಲದಂತಹ ಮುಖ, ಮುಖದಲ್ಲಿ ಮೂಗುತ್ತಿ, ದಾಳಿಂಬೆ ಹಣ್ಣಿನಂತ ಹಲ್ಲುಗಳೂ, ತೊಂಡೆ ಹಣ್ಣಿನಂತಹ ತುಟಿ, ದುಃಖದಲ್ಲಿದ್ದಾಗ ಧೈರ್ಯ ತುಂಬುವಳು, ಸೋತಾಗ ಗೆಲುವಿನ ಹಾದಿ ತೋರಿಸುವಳು, ಬೇಸರವಾದಾಗ ಹಾಸ್ಯಚಟಾಕಿ ಹಾರಿಸುವವಳು, ಕೋಗಿಲೆಯಂತಹ ಕಂಠ, ಚಂದುಳ್ಳ ಚಲುವೆ, ಅವಳನ್ನು ನೆನಪಿಸಿಕೊಳ್ಳದ ಕ್ಷಣವಿಲ್ಲ ದಿನವಿಲ್ಲ. ಏಕೆಂದರೆ ನಿನ್ನನ್ನು ಮರೆತರೆತಾನೆ ನೆನಪಿಸಿಕೊಳ್ಳೊಕೆ.
ಏನೇ ಮಾಡಲಿ ನಾವಿಬ್ಬರೆ ಫಸ್ಟ್.ದಿನ ಕಳೆದಿದ್ದೆ ತಿಳಿಯಲಿಲ್ಲ ಆಗಲೆ ಕಾಲೇಜ್ ಮುಗಿಸುವ ಸಮಯ ಬಂತು.ಕೊನೆ ದಿನ ನಾನು ಅವಳ ಹತ್ತಿರಹೋಗಿ ನನ್ನ ಮನಸ್ಸೆಕೊ ಸರಿಯಿಲ್ಲಎಂದೆ. ಏನನ್ನೊ ಬಿಟ್ಟು ಹೋಗ್ತಿದೀನಿ ಎನ್ನುವ ಕೊರಗುಕಾಡಲು ಶುರುವಾಯ್ತು. ಅದೇನೆಂದು ತಿಳಿಯಲೇ ಇಲ್ಲ. ಕೊನೆಗೆ ಅವಳ ಹತ್ತಿರ ಹೋಗಿ ಹೇಳೆ ಬಿಟ್ಟೆ.ನಾನು ನನ್ನ ಜೀವನದಲ್ಲಿ ಮರೆಯಲಾರದ್ದು ಏನೊ ಬಿಟ್ಟು ಹೋಗ್‌ತಿದೀನಿ ಅನ್ಸುತ್ತೆ ಎಂದು ಹೇಳಿದೆ. ಕಣ್ಣಂಚಿನಲಿ ನೀರುತುಂಬಿತ್ತು.
ಆ ಕ್ಷಣ ಅವಳು ಹೇಳಿದ ಉತ್ತರಕ್ಕೆ ನನಗೆ ಆಶ್ಚರ್ಯವಾಯ್ತು. ಅದೆನೆಂದರೆ ನೀನು ನಿನ್ನ ಹೃದಯವನ್ನೆ ಬಿಟ್ಟು ಹೋಗ್ತಿದೀಯ ಎಂದಳು. ಆಗ ನಾನು ನನ್ನ ಹೃದಯ ನಿನ್ನ ಬಳಿ ಇದೆಕೊಟ್ಟಬಿಡಿ ನನಗೆ ಎಂದೆ. ಅಲ್ಲಿಂದ ಶುರುವಾಯ್ತು ನಮ್ಮ ಪ್ರೀತಿ. ಹತ್ತು ವರ್ಷ ಪ್ರೀತಿಸಿದರು ನಾವು ಇದೀಗ ಪ್ರೀತಿಸುತ್ತಿದ್ದೇವೆಎನ್ನುವ ಭಾವ. ಪ್ರೀತಿಸಿದೆವು ಈ ಲೋಕವನ್ನೆಲ್ಲಾ ಮರೆತು ಪ್ರೀತಿಸಿದೆವು. ಕಣ್ಣಿದ್ದುಕುರುಡರಾಗಿ ಪ್ರೀತಿಸಿದೆವು. ಮಕ್ಕಳ ಮುಗ್ದತೆಯಿಂದ ಅವಳ ಪ್ರೀತಿಯಿಂದ ನಾನು ನನ್ನನ್ನೆ ಮರೆತಿದ್ದೆ.
ಅದೊಂದು ದಿನ ಯಾರನ್ನೊ ಜೊತೆಗೆ ಕರೆತಂದಳು. ಯಾರೆಂದು ಕೇಳಿದಾಗ ಅವರೆ ನನ್ನ ಮುಂದಿನ ಜೀವನ ಎಂದಳು. ಆ ಕ್ಷಣ ಆ ಒಂದೆಒಂದು ಕ್ಷಣ ನನ್ನ ಹೃದಯದ ಬಡಿತವೆ ನಿಂತುಹೋಯಿತು. ನನಗೆ ಎಷ್ಟು ನೋವಾಗಿದೆ ಅಂದರೆ ನಾನೇಕೆ ಇನ್ನು ಬದುಕಿದ್ದೇನೆ ಅನ್ನುವಷ್ಟರ ಮಟ್ಟಿಗೆ ನೋವಾಗಿದೆ, ನೊಂದಿದ್ದೇನೆ. ನೀನಿಲ್ಲದೆಜೀವನ ಶೂನ್ಯಅನ್ನಿಸುತ್ತಿದೆ. ನೀನು ಚೆನ್ನಾಗಿರುತ್ತೀಯ ದಯವಿಟ್ಟು ನನ್ನನ್ನು ಮರೆತುಬಿಡು ಎಂದಳು. ಏನಾಯಿತೆಂದೆ ತಿಳಿಯಲಿಲ್ಲ. ಅವಳಿಗಾಗಿ ಎಲ್ಲಾ ಮಾಡಿದೆ. ಪ್ರಜ್ವಲಿಸುವ ಸೂರ್ಯನ ಹಾಗೆ ಹಗಲು ಬೆಳಕಿನಲ್ಲಿ ರಾತ್ರಿಯೆಲ್ಲಾ ಬೆಳದಿಂಗಳ ಚಂದ್ರನಂತೆಕನಸಲ್ಲಿ ಬಿಟ್ಟುಬಿಡದೆಕಾಡುತ್ತಿರುವ ನಿನ್ನ ಮುಖವನ್ನುಇನ್ನೊಮ್ಮೆ ನೋಡಬೇಕೆಂಬ ಮನದಾಸೆ ಮನಸ್ಸಿನಲ್ಲಿ ಮೂಡುತ್ತಿದೆ.
ಇರುಳೆಲ್ಲಾ ಕಳೆದೋಯ್ತು ನಿನದೊಂದು ಕನಸಲಿ, ಹಗಲೆಲ್ಲಾ ಕಳೆದೊಯ್ತು ಕನಸಿನ ನೆನಪಲಿ. ಮನಸ್ಸೆಲ್ಲೊ ಹೊರಟೋಯ್ತು ನಿನ್ನ ಸೇರುವ ನೆಪದಲಿ. ನಿದ್ರೆ ಬಾರದೆರಾತ್ರಿಯಲಿ ನಿನ್ನದೆ ನೆನಪುಗಳು ತಪ್ಪಿ ಬಂದೆ ನಿದ್ದೆಯಲೂ ನಿನದೆ ಕನಸುಗಳು. ಕತ್ತಲುಇಲ್ಲದಿದ್ದರೆ ಬೆಳಕಿನ ಬೆಲೆ ತಿಳಿಯುತ್ತಿರಲಿಲ್ಲ. ದುಃಖಇಲ್ಲದಿದ್ದರೆ ನಗುವಿನ ಬೆಲೆ ತಿಳಿಯುತ್ತಿರಲಿಲ್ಲ. ನೋವು ತಿಳಿದಿಲ್ಲವೆಂದರೆ ಜೀವನ ನಮಗಾರಿಗೂ ತಿಳಿಯುವುದಿಲ್ಲ. ನಿನ್ನ ಆಗಮನ ನಿರ್ಗಮನ ವಿಧಿ ಲಿಖಿತ. ಆದರೆ ನನ್ನಲ್ಲಿರುವ ನೀನು ಮತ್ತು ನಿನ್ನ ನೆನಪುಗಳು ಶಾಶ್ವತ.ಯಾರೊಕೊಟ್ಟ ನೋವು ಎರಡು ದಿನದಲ್ಲಿ ಮರೆಯಬಹುದು, ಆದರೆ ನಾವು ಯಾರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆಯೊ ಅವರುಕೊಟ್ಟ ನೋವಾಗಲಿ, ಖುಷಿ ಆಗಲಿ ಜೀವನ ಪೂರ್ತಿ ಮರೆಯೊಕಾಗಲ್ವಂತೆ ಹಾಗೆಯೇ ನಾನು ನಿನಗೆ ತುಂಬಾ ಪ್ರೀತಿಸ್ತೀನಿ ಅಲ್ವ ಸೊ ನೀನು ಕೊಡೊ ಪ್ರತಿಯೊಂದು ನೋವು ನಲಿವು ಜೀವನ ಪೂರ್ತಿ ಮರೆಯೋಕಾಗಲ್ಲ ಗೆಳತಿ.
ನಿನ್ನ ಒಳಿತಿಗಾಗಿ ನಿನ್ನಿಂದ ದೂರವಾಗಲೂ ಒಲ್ಲದ ಮನಸ್ಸಿನಿಂದ ಒಪ್ಪಿದೆ. ಕಣ್ಣಲ್ಲಿ ನೀರು ಬಂದರೂ ಅವಳಿಗಾಗಿ ಹಾಗೆ ಒರೆಸಿಕೊಂಡೆ. ಇಂದಿಗೂ ನಿನಗಾಗಿ ಕಣ್ಣಲ್ಲಿ ನೀರು ಬರುತ್ತಲೆ ಇವೆ ಆದರೂ ನಿನಗಾಗಿ ನಿನ್ನನ್ನೆತ್ಯಾಗ ಮಾಡಿದೆ. ಚೆನ್ನಾಗಿರು ಗೆಳತಿ, ಎಲ್ಲಿದ್ದರು, ನನ್ನ ನೆನೆಯದಿದ್ದರು, ಕಾಣದಿದ್ದರು ನೀನು ಚೆನ್ನಾಗಿರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುವೆ. ಚೆನ್ನಾಗಿರು.

– ಮುರಳಿ ಕೃಷ್ಣ ಕೆ.ವಿ
ರಾಂಪುರ.