ರಾಜ್ಯ ಸರ್ಕಾರವು ರಚನೆ ಮಾಡಿರುವ ಎ.ಸಿ.ಬಿ ಗೆ ರಾಜ್ಯದ ಜನತೆಯ ಹೆಚ್ಚಿನ ವಿರೋಧ ಕಂಡುಬರುತ್ತಿದೆ. ಇದು ಲೋಕಾಯುಕ್ತ ಸಂಸ್ಥೆಯ ಕಳೆಬರವೆಂದೇ ವ್ಯಾಕ್ಯಾನಿಸಲಾಗುತ್ತಿದೆ. ಆದರೂ ಪಟ್ಟು ಬಿಡದ ಸಿದ್ದರಾಮಯ್ಯನವರ ಸರ್ಕಾರ ಎ.ಸಿ.ಬಿ ಯ ರಚನೆಗೆ ಮುಂದಾಗಿದೆ. ಎ.ಸಿ.ಬಿ ಯ ಸಂಪೂರ್ಣ ಹಿಡಿತ ಮುಖ್ಯಮಂತ್ರಿಗಳ ಕೈಯಲ್ಲಿ ಇರುವುದರಿಂದ ಭ್ರಷ್ಟಾಚಾರವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಯೋಚನೆಯನ್ನು ರಾಜ್ಯ ಸರ್ಕಾರ ಕೈ ಬಿಡುವುದೇ ಒಳಿತು
ಮಂಜುನಾಥ ಎಂ ದೇಸಾಯಿ
ಪತ್ರಿಕೋದ್ಯಮ ವಿಭಾಗ
ದಾವಣಗೆರೆ ವಿ ವಿ