ದಾವಣಗೆರೆ : ಶೋಷಿತ ವರ್ಗದವರು ಆಡಳಿತದ ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ ಜಿ ಸಾಗರ್ ಹೇಳಿದರು.

ಸದ್ಯ ಶೋಷಿತ ವರ್ಗಗಳಿಗೆ ಆಡಳಿತ ಕೊರತೆಯಿದೆ ಆಡಳಿತ ಅಧಿಕಾರವನ್ನ ನೀಡಿದಲ್ಲಿ ಈ ದೇಶವನ್ನು ಸಮರ್ಥವಾಗಿ ನಿಭಾಹಿಸಬಲ್ಲರು ಎಂದು ತಿಳಿ ಹೇಳಿದರು. ವಿಶ್ವವಿದ್ಯಾನಿಲದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ  “ಭಾರತ ಸಂವಿಧಾನ ದಿನಾಚರಣೆ’’ಯ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದ ಕಲ್ಬುರ್ಗಿಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ ಜಿ ಸಾಗರ್,

ಪ್ರಸ್ತುತ ಸಂವಿಧಾನದ ಅರಿವು ವಿದ್ಯಾರ್ಥಿಗಳಲ್ಲಿ ಅಗತ್ಯವಾಗಿದೆ. ಸ್ವಾತಂತ್ರ್ಯ ಸಿಕ್ಕು 69 ವರ್ಷಗಳಾದರೂ ಸ್ವಾತಂತ್ರ್ಯದ ಬಗ್ಗೆ ಪರೀಕ್ಷೆ ಒಳಪಡಿಸುವಂತ ಕಾಲ ಎದುರಾಗಿದೆ. ಸಂವಿಧಾನದ ಮುಖಾಂತರ ನೀಡಿದ ಒಂದು ಓಟು ಒಂದು ಮೌಲ್ಯವನ್ನ ಪಡೆದಿದೆ, ಅದು ತಮ್ಮ ಕಷ್ಟಗಳನ್ನ ನಿವಾರಿಸುವಂತ ನಾಯಕನನ್ನ ಆರಿಸವ ಆಯ್ಕೆ ಮಾಡುವ ಹಕ್ಕನ್ನ ನೀಡಿದೆ. ಭಾರತದಲ್ಲಿ ಹಿಮದೆ ಇದ್ದಂತಹ ಜಾತಿ ವ್ಯವಸ್ಥೆ ಹಾಗೂ ಅಸಮಾನತೆಯ ಸಲುವಾಗಿ ಹಾಗೂ ಶೋಷಿತ ವರ್ಗಗಳ ಏಳಿಗೆಗಾಗಿ ಹಲವು ದೇಶಗಳನ್ನ ಸುತ್ತಿ ಅಧ್ಯಯನ ಮಾಡಿ ಇಲ್ಲಿನ ಎಲ್ಲಾ ಜಾತಿ ಧರ್ಮಗಳನ್ನ ಮುಖ್ಯವಾಹಿನಿಗೆ ತರಲು ಸಂವಿಧಾನವನ್ನು ರಚಿಸಿ ಅಪಾರವಾದಂತ ಅವಕಾಶಗಳನ್ನು ಕೊಡುಗೆಗಳಾಗಿ ನೀಡಿದ್ದಾರೆ.

ಆದರೆ ಇಂದಿಗೂ ಸಹ ಈ ಜಾತಿವ್ಯವಸ್ಥೆ ಎಂಬುದು ಕಾಣುತ್ತಿದೆ. ಅಲ್ಲದೆ ಅವರ ಮೇಲೆ ಅತ್ಯಚಾರ, ಆರೋಪ, ಶೋಷಣೆಗಳು ಇಂದಿಗೂ ಆಗುತ್ತಿವೆ. ಮಿಸಲಾತಿ ಎಂಬುದು ದುರ್ಬಲ ವರ್ಗದವರಿಗೆ ಸಿಗಬೇಕಾದ ಭಾಗವಾಗಿದೆ. ಮಿಸಲಾತಿ ಎಂಬುದು ಶೊಷಿತ ವರ್ಗದವರ ಅಭಿವೃದ್ಧಿಯನ್ನ ಸಾಧಿಸಲು ಸಹಕಾರವಾಗಲಿದೆ. ಹಾಗೂ ಆದರೆ ಪ್ರಸ್ತುತ ಅಂತಹ ಭಾರತದ ಸಂವಿಧಾನಕ್ಕೆ ಅಪವಾದವನ್ನು ಮಾಡತ್ತಿದ್ದಾರೆ ಅದು ಇಡೀ ದೇಶಕ್ಕೆ ಅಪಮಾನ ಮಾಡಿದಂತೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ ಶಿಕ್ಷಣ ಪೂರಿತ ಜವಬ್ದಾರಿ ಎಂಬುದು ಯುವಕರಲ್ಲಿ ಮೂಡಬೇಕಿದೆ.

ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾದ ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೋ. ಬಿ ಪಿ ವೀರಭದ್ರಪ್ಪ ವಹಿಸಿದ್ದರು. ಇನ್ನೂ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಎಸ್ ವೈ ಹಲಸೆ ಪರೀಕ್ಷಾಂಗ ಸಚಿವರಾದ ಗಂಗಾಧರ್ ನಾಯ್ಕ್ ಹಣಕಾಸು ಸಚಿವರಾದ ಅನಿತಾ ಹೆಚ್ ಎಸ್ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ ಅಭಿವೃದ್ಧಿ ಘಟಕದ ಪ್ರೋ. ಲಕ್ಷಣ್ ಪಿ, ರಾಮಚಂದ್ರಪ್ಪ ಎ ಪಿ ಹಾಗೂ ಇತರೆ ವಿಭಾಗದ ಎಲ್ಲಾ ಭೋದಕ ಮತ್ತು ಭೋದಕೇತ್ತರ ಸಿಬ್ಬಂದ್ದಿ ವರ್ಗ ಮತ್ತು ವಿಶ್ವ ವಿದ್ಯಾನಿಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.