ಶಿವಮೊಗ್ಗ: ಶ್ರೀಮತಿ ವಿಜಯಶ್ರೀ ಐ. ಎಸ್. ಇವರು ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪಿ. ನಿರಂಜನ ಇವರ ಮಾರ್ಗದರ್ಶನದಲ್ಲಿ”Biosynthesis Characterization and Pharmacotoxicological Effect of Noble Metal Nanoparticles and their Alloys” ವಿಷಯವಾಗಿ ಸಂಶೋಧನಾ ಅಧ್ಯಯನ ಮಾಡಿ, ಮಂಡಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ. ಇತ್ತೀಚೆಗೆ ವಿಶ್ವವಿದ್ಯಾಲಯವು ಏರ್ಪಡಿಸಿದ್ದ 28 ನೇ ಘಟಿಕೋತ್ಸವದಲ್ಲಿ ವಿಜಯಶ್ರೀ ಐ. ಎಸ್. ಅವರಿಗೆ ಪದವಿ ಪ್ರದಾನ ಮಾಡಲಾಯಿತು.