ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದಲ್ಲಿ ಪೂರ್ಣಕಾಲಿಕ ಸಂಶೋಧನಾರ್ಥಿಯಾಗಿ ಲೋಹಿತ್.ಎಚ್.ಎಮ್ ಇವರು ಕನ್ನಡ ಭಾರತಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನೆಲ್ಲಿಕಟ್ಟೆ.ಎಸ್.ಸಿದ್ದೇಶ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ, ಸಲ್ಲಿಸಿದ “ಕನ್ನಡ ದಲಿತ ಕಾವ್ಯ : ವಸ್ತು ಹಾಗೂ ಅಭಿವ್ಯಕ್ತಿಯ ವೈಶಿಷ್ಟ್ಯತೆ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರು ಹೊಸದುರ್ಗ ತಾಲೋಕಿನ ಹಳೇ ಕುಂದೂರು ಗ್ರಾಮದ ಶ್ರೀ ಮಲ್ಲೇಶಪ್ಪ.ಎಚ್ (ನಿವೃತ್ತ ಶಿಕ್ಷಕರು) ಹಾಗೂ ಶ್ರೀಮತಿ ಗಂಗಮ್ಮ ಇವರ ಮಗ.