ಚಿತ್ರದುರ್ಗ:  ನಗರದ ಬಿ.ಎಲ್.ಗೌಡ ಲೇಔಟ್‍ನ ಸಿ.ರಾಣಿ ಬಾಲಕೃಷ್ಣ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಹೆಚ್.ಡಿ ಪದವಿ ನೀಡಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ.ವಿರೂಪಾಕ್ಷಿ ಪೂಜಾರಳ್ಳಿ ಅವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಕೆರೆಗಳು: ಚಾರಿತ್ರಿಕ ಅಧ್ಯಯನ” ಎಂಬ ವಿಷಯ ಕುರಿತು ಪಿಹೆಚ್.ಡಿ ಪ್ರಬಂಧ ಮಂಡಿಸಿದ್ದರು.

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ದಾಸರಮುತ್ತಿನಹಳ್ಳಿಯ ಪಿ.ಎಂ.ಚಿನ್ನಯ್ಯ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ.

ವ್ಯವಹಾರ ಆಡಳಿತ ಪ್ರಾಧ್ಯಾಪಕ ಡಾ.ಆರ್.ಮಹೇಶ್ ಅವರ ಮಾರ್ಗದರ್ಶನದಲ್ಲಿ ಫೈನಾನ್ಷಿಯಲ್ ಪಾಲಿಸೀಸ್ ಅಂಡ್ ಸ್ಟ್ರಾಟರ್‍ಜಿಸ್ ಆಫ್ ಸೆಲೆಕ್ಟ್ ಇಂಡಿಯನ್ ಕಾಂಗ್ಲೋಮೆರೆಟ್ಸ್ ಎಂಬ ಮಹಾಪ್ರಬಂಧಕ್ಕೆ ಪಿಹೆಚ್.ಡಿ ಪದವಿ ನೀಡಿ ಗೌರವಿಸಲಾಗಿದೆ.