2012 ರಲ್ಲಿ ಪಿಯುಸಿ ಪಾಸಾದ ನಂತರ ವಿದ್ಯಾಭ್ಯಾಸಕ್ಕೆಂದು ಹತ್ತಿರದ ತಾಲೂಕಾದ ಜಗಳೂರಿನಲ್ಲಿ ಬಿಎ ಪದವಿ ಮಾಡಲು ಬಸವ ಭಾರತಿ ಪ್ರಥಮದರ್ಜೆ ಕಾಲೇಜಿಗೆ ಸೇರಿದೆ ಅದುವೇ ಮೊದಲು ಊರು ಬಿಟ್ಟು ಮೊದಲ ಬಾರಿಗೆ ಓದುವ ಸಲುವಾಗಿ ಬೇರೆಕಡೆ ಹೋಗಿದ್ದೆಂದರೆ, ಆದರಲ್ಲು ಹೊಸ ಸ್ಥಳ ಸ್ವಲ್ಪ ಭಯ, ಹೊಸ ಕಾಲೇಜು ವಾತಾವರಣ ಹೇಗಿರುತ್ತೋ ಅನ್ನೊ ಕುತೂಹಲ. ಆದರೆ ಜಗಳೂರು ನನಗೆನು ಹೊಸದಲ್ಲ, ಅವಗಾವಗ ಬಸ್‍ನಲ್ಲಿ ಸುತ್ತಾಡಿದ ಸ್ಥಳಾವಾಗಿದ್ದರಿಂದ ದೊಡ್ಡ ಆತಂಕವೆನುಇರಲಿಲ್ಲ.

ಖಾಸಗಿ ವಿದ್ಯಾಸಂಸ್ಥೆ ಆಗಿದ್ದರಿಂದ ಸ್ವಲ್ಪ ಕಾಲೇಜಿನಲ್ಲಿ ಸ್ಟ್ರೀಕ್ಟ್. ಕಾಲೇಜಿನಲ್ಲಿ ಸೇರಿಕೊಂಡು ತಿಂಗಾಳಗುವ ತನಕ ಅವರಿವರನ್ನ ಪರಿಚಯಿಸಿಕೊಳ್ಳುವುದಲ್ಲೆ ಕಾಲ ಕಳೆದೊಯ್ತು. ಆವಾಗ ಪರಿಚಯವಾದವೇ ಈ ಮೋಹನ ಎಂಬ ಸ್ನೇಹಿತ. ತುಂಬಾ ವಿಚಾರವಾದಿ ಜೀವನದಲ್ಲಿ ಏನಾದರೂ ಒಂದು ಮಾಡಬೇಕೆನ್ನುವ ಛಲ ಅದರಲ್ಲೂ ಅಪ್ಪಟ ಕನ್ನಡ ಭಾಷೆಯನ್ನ ಮಾತನಾಡುವುದರಲ್ಲಿ ನೀಸ್ಸಿಮ. ಅವನು ಮಾತನಾಡು ಶೈಲಿಯಂತು ನಿಜಕ್ಕೂ ಸೋಜಿಗ, ಏಕೆಂದರೆಯಾರ ಬಳಿಯಾದರು ಏಕವಚನದಲ್ಲಿ ಮಾತನಾಡುತ್ತಾನೆ ಎಂದರೆ ಅದು ತುಂಬಾಕಡಿಮೆ. ಜೊತೆಗಿದ್ದ ಅಷ್ಟು ದಿನಗಳಲ್ಲಿ ಒಮ್ಮೆಯಾದರೂ ನನ್ನನು ಏಕವಚನದಲ್ಲಿ ಮಾತನಾಡಿಸಿದ್ದಾನೆ ಎಂದರೆ ಅದುತುಂಬಾ ವಿರಳ. ಓದುವ ವಿಚಾರದಲ್ಲಂತು ನಮಗಿಂತ ಸ್ವಲ್ಪ ಜಾಸ್ತಿನೆ ಒತ್ತುಕೊಡುತ್ತಿದ್ದ. ನಾನು ಅವನು ದಿನನಿತ್ಯ ಕಾಲೇಜು ಮುಗಿದ ನಂತರ ಒಂದೆ ಬಸ್ಸನ್ನ ಹತ್ತಿಕೊಂಡು ಹೋಗುತ್ತಿದ್ದೇವು ಅವನ ಊರು ತಾಲೂಕಿಗೆ ಕೇವಲ 10 ಕೀಲೋ ಮೀಟರ್ ಅಂತರದಲ್ಲಿ ಮಾತ್ರ, ನನ್ನದು 20 ಗಡಿದಾಟಿತ್ತು. ಇದುವೆ ಮೋಹನ ಕಥೆಗೆ ಮುನ್ನುಡಿ.

ಅವನು ಪದೇ ಪದೇ ನನ್ನ ಬಳಿ ಕೇಳುತ್ತಿದ್ದ ವಿಚಾರವೆಂದರೆ ಗೆಳೆಯ ಜೀವನದಲ್ಲಿ ನೀನು ಮುಂದೆ ಏನಾಗಬೇಕು ಅಂದರೆ ಯಾವತರನಾದ ಉದ್ಯೋಗಕ್ಕೆ ಹೋಗ ಬಯಸುತ್ತಿದ್ದೀಯ ಎಂದು. ನಾನು ಹೇಳುತ್ತಿದ್ದ ಕೆಲಸವೆಂದರೆ ಬರೆಯುವ ವಿಚಾರದಲ್ಲಿ ಯಾಕೋ ತುಂಬಾ ಆಸಕ್ತಿ ಇದೆ ಸರಿಯಾದ ಸಹಕಾರ, ಸಲಹೆ ಸಿಕ್ಕರೆ ಪತ್ರಿಕೋದ್ಯಮ ಕ್ಷೇತ್ರದಕಡೆ ಹೋಗಲು ಸಿದ್ಧನಿದ್ದೇನೆ ಎಂದು ಹೇಳುತ್ತಿದ್ದೇ.ಆದರೆ ಅವನ ವಿಚಾರಧಾರೆಗಳೇ ಬೇರೆಜೀವನದಲ್ಲಿ ಕನಸು ಕಟ್ಟಿದರೆ ಸ್ವಲ್ಪ ದೊಡ್ಡದಾಗಿಯೇಕಟ್ಟುಬೇಕು ಸಹಕಾರಕ್ಕಿಂತ ಶ್ರಮ ಮುಖ್ಯ ನಾನು ಪೊಲೀಸ್ ಆಗಬೇಕು ಅದರಲ್ಲೂ ಎಸ್‍ಐ ಆಗಬೇಕು ಹಾಗೇ ಆಗುತ್ತೇನೆ ಎಂದು ಬೀಗುತ್ತಿದ್ದ.ಆದರೆ ವಿಧಿಯಾಟದ ಮುಂದೆ ಅದುಯಾವುದು ಸಾಧ್ಯವಾಗಲಿಲ್ಲ.

2014 ರರಜೆ ವೇಳೆಯಲ್ಲಿ ಅವನು ಮತ್ತೆ ಅವನ ಅಕ್ಕ ಹಾಗೂ ಅಕ್ಕನ ಪುಟ್ಟ ಮಗು ಬೈಕ್‍ನಲ್ಲಿ ಚಲಿಸುವಾಗ ರಸ್ತೆ ಅಪಘಾತವಾಗಿ ಅವನ ಮೆದುಳು ನಿಷ್ಕ್ರೀಯಗೊಂಡು ಕೋಮ ಸ್ಟೇಜ್ ತಲುಪಿದ್ದ. ದೇವರದಯೆ ಎಂಬಂತೆ ಅವನ ಅಕ್ಕ ಹಾಗೂ ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿ ಚೇತರಿಸಿಕೊಂಡರು ಎಂಬ ಸುದ್ದಿ ತಿಳಿಯಿತು. ಆದರೆ ಮೋಹನ ಅಪಘಾತ ವಾದ ಕೆಲವು ತಿಂಗಳ ನಂತರತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದ.
ಅವನಿಗೆ ಹಾಗು ನನಗೆ ಪೇಸ್‍ಬುಕ್ ಇನ್ನು ಅವಾಗಿನ್ನು ಹೊಸತು. ಇಬ್ಬರು ಅದರಲ್ಲಿ ಚಾಟ್ ಮಾಡುವಾಗ ಅವನು ತಮಾಷೆಯಾಗಿ ಹೇಳುತ್ತಿದ್ದ ಮಾತುಗಳೆಂದರೆ, ಗೆಳೆಯ ಮುಂದೆ ನೀನು ಪತ್ರಿಕೋದ್ಯಮಿ ಆದರೆ ನನ್ನ ಬಗ್ಗೆ ಏನಾದರೂ ಬರೆಯಬೇಕು ನಾನು ಅದನ್ನ ಓದಬೇಕು ಎಂದು ಕಿಚಾಯಿಸುತ್ತಿದ್ದ, ಆದರೆ ಇಂದು ಬರೆದಿದ್ದೇನೆ ಓದಲು ಅವನಿಲ್ಲವೆಂಬ ಬೇಸರವಷ್ಟೇ.

ಕೆಲವು ತಿಂಗಳುಗಳ ಹಿಂದೆ ಎಂ.ಎ ಪತ್ರಿಕೋದ್ಯಮವನ್ನು ಮುಗಿಸಿ ಒಂದುಕಡೆ ಕೆಲಸಕ್ಕೆ ಸೇರಿದ್ದೇನೆ ಅಲ್ಪಸ್ವಲ್ಪ ಬರವಣಿಗೆಗಳನ್ನು ಬರೆಯುತ್ತಿದ್ದೇನೆ ಎಂಬ ಖುಷಿ ಅಷ್ಟೇ. ಕಳೆದ 4 ವರ್ಷಗಳ ನೆನಪು ಇಂದು ಕಾಡಲುಕಾರಣವೆನೆಂದರೆ ನಾನು ಕೆಲಸಕ್ಕೆ ಸೇರಿದ್ದು ಜೂನ್ ತಿಂಗಳಲ್ಲಿ ಅವನ ಹುಟ್ಟಿದ ದಿನಾಂಕ ಜುಲೈ 2 ರಂದು ಪೇಸ್‍ಬುಕ್‍ನಿಂದ ನನಗೊಂದುಸೂಚನೆ ಬಂತು ಮೋಹನ್ ಮತ್ತು ನನ್ನ ಸ್ನೇಹವಾಗಿ ನಾಲ್ಕು ವರ್ಷಗಳಾಯಿತು ಎಂದು ಬಂದಿದ್ದು ಮೊದಲ ಸೂಚನೆ.

ಆದರೆ ಎರಡನೇ ಸೂಚನೆ(ನೋಟಿಪಿಕೇಷನ್) ಅವನ ಹುಟ್ಟಿದ ಹಬ್ಬದ ಕುರಿತು ವಿಶ್ ಮಾಡಿಎಂದು ಪೇಸ್‍ಬುಕ್‍ನಲ್ಲಿ ಸಂದೇಶದ ರೂಪದಲ್ಲಿ ಬಂದಾಗ ಅವನ ನೆನಪು ಹೆಚ್ಚಾಗಿ ಕಾಡಲಾಂರಭಿಸಿತು. ಅಂದಿನಿಂದ ಅವನ ಬಗ್ಗೆ ಬರೆಯಲೆಂದರೆ ತಲೆಯಲ್ಲಿ ಏನು ಹೊಳೆಯುತ್ತಿರಲಿಲ್ಲ. ಆದರೆ ಅವನು ಹೇಳುತ್ತಿದ್ದ ನೀನು ನನ್ನ ಬಗ್ಗೆ ಏನಾದರೂ ಬರೆಯಬೇಕು ಅಷ್ಟೇ ಎಂದು, ಅದರ ಸಲುವಾಗಿ ತಿದ್ದಿತೀಡಿದ ನಾಲ್ಕು ಅಕ್ಷರಗಳೆ ಈ ಮೋಹನನ ಕುರಿತಾದ ಮೌನ ಬರವಣಿಗೆ.

ಅವನನ್ನು ಕಾಲೇಜಿನಲ್ಲಿ ಮೋಹನ ಎನ್ನುವುದಕ್ಕಿಂತ ಮನು ಎಂದು ಜಾಸ್ತಿಯಾಗಿ ಕರೆಯುತ್ತಿದೇವೆ. ಅವನ ಓದುವ ವಿಚಾರದಲ್ಲಿ ಸರ್‍ಗಳು ಕೂಡ ಅವನ್ನು ತುಂಬಾ ಹೊಗಳುತ್ತಿದ್ದರು ಆದರೆ ಇಂದು ಅವನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವದೇ ಮನಸ್ಸಿಗೆ ಗಾಢವೆನಿಸುತ್ತಿದೆ.

ನೋಡಲು ಸ್ವಲ್ಪಕಪ್ಪಾಗಿದ್ದರು ಮನಸ್ಸು ಮಾತ್ರ ಹಾಲಿನ ಹೊಳಪಿನಂತ್ತಿತ್ತು. ಅವನು ಇಂದೇನಾದರೂ ಇದ್ದಿದ್ದರೆ ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುವುದಂತು ನೂರಕ್ಕೆ ಸಾವಿರದಷ್ಟು ಸತ್ಯ. ಏಕೆಂದರೆ ಕಠಿಣ ಪರಿಶ್ರಮ ಸದಾ ಅವನಲ್ಲಿ ಎದ್ದು ತೋರುತ್ತಿತ್ತು. ಕಲ್ಪಿಸಿಕೊಳ್ಳಲಾಗದ ಸ್ಥಿತಿಗೆ ಇಂದು ಅವನು ತಲುಪಿದ್ದಾನೆ ಇನ್ನೆನಿದ್ದರು ಅವನನ್ನಕಲ್ಪನಾ ಲೋಕದಲ್ಲಷ್ಟೇ ಕಲ್ಪಿಸಿಕೊಳ್ಳಬೇಕು.
ಹೀಗೆ ಮೋಹನನ ಕಥಗೆ ಹಾಳೆಯಲ್ಲಿ ಪುಲ್‍ಸ್ಟಾಪ್ ಇಡಬೇಕು ಅನ್ನುವಷ್ಟೋತ್ತಿಗೆ ನನ್ನಕಣ್ಣಿನಿಂದ ಹೊರಬಂದ ನೂರಾರು ಕಣ್ಣಹನಿಗಳು ಕೆನ್ನೆ ಮೇಲಿಂದಜಾರಿ ಹಾಳೆಯ ಮೇಲೆಬಿದ್ದು, ಅಕ್ಷರಗಳೆಲ್ಲಾ ಕಣ್ಣಿರಿನ ಹನಿಗೆ ನೆನೆದು ಬೆಂದ್ದೊಗಿದ್ದವು. ಐ ಮಿಸ್‍ಯೂ ಮೋಹನ…..

 

-ಮಧುಕುಮಾರ್ ಬಿಳಿಚೋಡು

7353900950