ಮೈಸೂರು: ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಪ್ರತಿಷ್ಠಿತ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ನಿವೃತ್ತ ಬೆರಳಚ್ಚುಗಾರರಾದ ಶ್ರೀಮತಿ ಅಬ್ಬಲಗೆರೆ ಮಠದ ಚನ್ನಯ್ಯ ದಾಕ್ಷಾಯಣಿ ಉಮೇಶ್ ಅವರ ಸಂಗೀತ ಮತ್ತು ಜಾನಪದ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಗುರುತಿಸಿ ಬೆಂಗಳೂರಿನ National Virtual University for Peace and Education ವತಿಯಿಂದ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.

ಶ್ರೀಯುತರು ದೇಶ ವಿದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿಯೂ ಸಂಗೀತ ಸೇವೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಶ್ರೀಯುತರನ್ನು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಹಾಗೂ ಪ್ರಚಾರ ಸಮಿತಿಯ ರಾಜ್ಯ ವಿಭಾಗದ ಸಂಚಾಲಕ, ದೇಹದಾನಿ ಮಲ್ಲಿಕಾರ್ಜುನಾಸ್ವಾಮಿ ಎಂ.ಎಸ್. ಸಿರಿಗೆರೆ, ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಹಿರಣ್ಣಯ್ಯ ಹಾಗೂ ಬೋಧಕ, ಬೋಧಕೇತರ ನೌಕರರು ಅಭಿನಂದಿಸಿದ್ದಾರೆ.

 

– ಎಂ.ಎಸ್. ಮಲ್ಲಿಕಾರ್ಜುನಸ್ವಾಮಿ

ಸಿರಿಗೆರೆ/ಮೈಸೂರು