ಉಸಿರು ನೀನೆ, ಜೀವಾ ನೀನೆ  ನನಗೆ ಸರ್ವವೂ ನೀನೆ
ಕನಸಲ್ಲೂ ಮನಸಲ್ಲೂ ನಿನ್ನ ನೆನಪುಗಳೆ ಕಾಡುತ್ತಿವ ನನಗೆ

ಈ ವಿಶಾಲವಾದ ಜಗತ್ತಿನಲ್ಲಿ ಪ್ರೀತಿಯ ಲೋಕವಾಗಿತ್ತು ನಮ್ಮಿಬ್ಬರಿಗೆ. ನಿನಗೆ ನಾನು ನನಗೆ ನೀನು ಹಾಲು ಸಕ್ಕರೆಯಂತೆ ಕೂಡಿದ್ದೆವು. ನಮ್ಮಿಬ್ಬರ ಅನ್ಯೋನ್ಯ ಪ್ರೀತಿಗೆ ಕಾಲೇಜ್ ನಲ್ಲಿ ಪ್ರಿನ್ಸಿಪಲ್ ಸಹ ತಲೆಬಾಗಿದ್ದುಂಟು. ಒಂದು ಚಿಕ್ಕ ಜಗಳದಿಂದ ಪ್ರಾರಂಭವಾದ ನಮ್ಮ ಪ್ರೀತಿ ಆ ರೋಮಿಯೋ ಜುಲೆಟ್ ಗಿಂತ ಏನು ಕಡಿಮೆಯಿಲ್ಲ. ಇಡಿ ಕಾಲೇಜ್ ಎಲ್ಲಾ ಸೇರಿ ನಮಗೆ ಬೆಸ್ಟ್ ಲವರ್ಸ್ ಅವಾರ್ಡ್ ನೀಡಿದ್ದಾರೆ. ಜೀವನವನ್ನು ಗೆಲ್ಲುವ ಮಾರ್ಗ ಮತ್ತು ಅಗಾಧ ಆತ್ಮವಿಶ್ವಾಸವನ್ನು ತುಂಬುದವಳು ನೀನು. ನಾನು ಸೋತಾಗ ಧೈರ್ಯ ತುಂಬಿದವಳು ನೀನು. ನನ್ನ ಸ್ಪೂರ್ತಿ ನೀನು. ನನ್ನ ಉಸಿರು ನೀನು. ನನ್ನ ಜೀವ ನೀನು. ಆದರೆ ಕಾಲೇಜ್ ರಜೆಗೆಂದು ನಿಮ್ಮ ಅಜ್ಜಿಯ ಊರಿಗೆ ಹೋದ ನೀನು ಹಿಂತಿರುಗಿ ಬರಲೇ ಇಲ್ಲ. ಅದೊಂದು ದಿನ ಪೋನ್ ಮಾಡಿ ದಯವಿಟ್ಟ ನನಗೆ ಪೋನ್ ಮಾಡಬೇಡ ನಮ್ಮ ಪ್ರೀತಿಯನ್ನು ಇಲ್ಲಿಗೆ ನಿಲ್ಲಿಸಿಬಿಡೋಣವೆಂದು ಹೇಳಿದೆ ಆ ಕ್ಷಣವೆ ನನ್ನ ಹೃದಯ ಬಡಿತ ನಿಂತುಹೋಯಿತು. ಏಕೆಂದರೆ ನನ್ನ ಉಸಿರು ನೀನಾಗಿದ್ದೆ. ನಿನಗೆ ಏನಾಯಿತು ಯಾಕೆ ಈ ನಿರ್ಧಾರಕ್ಕೆ ಬಂದೆಯೆಂದು ನನಗೆ ತಿಳಿಯಲೆ ಇಲ್ಲ. ನನ್ನನ್ನು ಅರ್ಥಮಾಡಿಕೊಂಡವಳು ನೀನೊಬ್ಬಳೆ ಇನ್ನು ನೀನೆ ಇಲ್ಲವೆಂದರೆ ಈ ಬಾಳು ಅನರ್ಥವೆನಿಸಿದೆ. ನಿನಗಾಗಿ ಕಾಯದ ದಿನವಿಲ್ಲ. ನಿನ್ನನ್ನು ನೆನಸದ ದಿನವಿಲ್ಲ. ಏಕೆಂದರೆ ಮರೆತರೆ ತಾನೆ ನೆನೆಯೋಕೆ. ಚಂದಿರನ ಬೆಳದಿಂಗಳಲ್ಲಿ ನಮ್ಮ ಮನೆಯ ಟೆರಸ್ ನಲ್ಲಿ ನಿನ್ನ ಮಡಿಲಲ್ಲಿ ಮಲಗಿ ಚಂದಾಮಾಮ ಕಥೆಯನ್ನು ಕೇಳಿದ್ದನ್ನು ಹೇಗೆ ಮರೆಯಲಿ. ನಿನ್ನ ಕಣ್ಣುಗಳೆ ನನಗೆ ಶಕ್ತಿ ತುಂಬುವ ಸ್ಪೂರ್ತಿಯಾಗಿದ್ದವು, ಆದರೆ ಈಗ ನಿನ್ನ ದರ್ಶನವೆ ಇಲ್ಲವಾಗಿದೆ. ಸೊರಗಿ ಹೋಗಿದ್ದೇನೆ ನಿನ್ನ ನೆನಪುಗಳಲ್ಲಿ ಕೊರಗಿ ಕೊರಗಿ ಸೊರಗಿ ಹೋಗಿದ್ದೇನೆ. ಪ್ರತಿ ವೀಕೆಂಡ್ ಗೆ ನಿನಗಿಷ್ಟವಾದ ಸಿನಿಮಾಗೆ ಹೋಗುತ್ತಿದ್ದೆವು ಆದರೆ ಈಗ ವೀಕೆಂಡ್ ಬಂತೆಂದರೆ ಸಾಕು ನನ್ನ ಅಳು ಹೆಚ್ಚಾಗುತ್ತಿದೆ. ಜೀವನದ ಬಗ್ಗೆ ಎಷ್ಟೆಲ್ಲಾ ಕನಸುಗಳನ್ನು ಕಟ್ಟಿಕೊಂಡಿದ್ದೆವು ಆದರೆ ಆ ಕನಸುಗಳನ್ನು ನನಸಾಗಿಸಲು ಇಂದು ನೀನಿಲ್ಲ. ಮರಭೂಮಿಯಲ್ಲಿ ಏಕಾಂಗಿಯಾಗಿದ್ದ ನನಗೆ ಒಂಟೆಯಾಗಿ ಬಂದು ದಾರಿತೋರಿದೆ ನೀನು.  ಈಗ ಮತ್ತೆ ನೀನಲ್ಲದೆ ನನಗೆ ದಾರಿ ತೋಚದಾಗಿದೆ. ದಿನದ ಅನುಕ್ಷಣವು ನಿನ್ನ ನೆನಪಲ್ಲೆ ಕಾಲ ಕಳೆಯುತ್ತಿದ್ದೇನೆ.

ನನ್ನ ಮನಸ್ಸಿಗೆ ಎಷ್ಟು ನೋವಾಗಿದೆ ಅಂದ್ರೆ ಈ ಪ್ರಪಂಚದಲ್ಲಿ ನಾನೇಕೆ ಇನ್ನು ಬದುಕಿದ್ದೇನೆ ಎನ್ನುವಷ್ಟು. ನೀನಿಲ್ಲದ ನನಗೆ ನೆಮ್ಮದಿ ಇಲ್ಲ, ನಿದ್ದೆ ಇಲ್ಲ, ಸಮಾಧಾನವಿಲ್ಲ. ಕ್ಷಣ ಕ್ಷಣಕ್ಕು ಭಯವಾಗುತ್ತಿದೆ ಮತ್ತೆ ನಿನ್ನ ನೋಡುತ್ತೇನೋ ಇಲ್ಲವೋ ಎಂದು. ನೀನಿಲ್ಲದ ಈ ಜೀವನ ಊಹಿಸಿಕೊಳ್ಳುವುದಕ್ಕು ಸಾಧ್ಯವಾಗುತ್ತಿಲ್ಲ. ಇನ್ನು ವಾಸ್ತವದಲ್ಲಿ ಅಸಾಧ್ಯವೆ‌ ಸರಿ. ಪ್ರಜ್ವಲಿಸುವ ಸೂರ್ಯನ ಹಾಗೆ ಹಗಲು ಬೆಳಕಿನಲ್ಲಿ ಕಂಗೊಳಿಸುತ್ತ ರಾತ್ರಿಯೆಲ್ಲಾ ಬೆಳದಿಂಗಳ ಚಂದ್ರನಂತೆ ಕನಸಲ್ಲಿ ಬಿಟ್ಟುಬಿಡದೆ ಕಾಡುತ್ತೀಯ. ಮೋಡಕವಿದ ವಾತವರಣದಲ್ಲಿ ಮುಂಜಾನೆಯ ಮಂಜಿನಲ್ಲಿ ರಾಜ್ ಕುಮಾರ್ ಪಾರ್ಕ್ ನಲ್ಲಿ ಬಿಸಿ ಬಿಸಿ ಕಾಫೀ ಕುಡಿದಿದ್ದು, ಪ್ರತಿ ಗುರುವಾರ ಸಾಯಿಬಾಬ ಟೆಂಪಲ್ ಗೆ ಹೋಗಿದ್ದು, ಹೇಗೆ ಮರೆಯಲಿ ನಾನು ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ಕತ್ತಲು ಇಲ್ಲವೆಂದರೆ ಬೆಳಕಿನ ಬೆಲೆ ತಿಳಿಯುತಿರಲಿಲ್ಲ ದುಖ: ಇಲ್ಲವೆಂದರೆ ನಗುವಿನ ಬೆಲೆ ತಿಳಿಯುತಿರಲಿಲ್ಲ ಅದೇ ನೋವು ತಿಳಿದಿಲ್ಲವೆಂದರೆ ಜೀವನ ನಮಗಾರಿಗೂ ತಿಳಿಯುವುದಿಲ್ಲ ಆದರೆ ಜೀವನವೆ ನೋವಾಗಿ ಬದುಕಲೆ ಸಾಯಲೆ ನೀನಿಲ್ಲದ ಬದುಕು ನನ್ಗೆ ಬೇಕೆ ಎಂದು ಹೃದಯ ಅಳುತ್ತಿದೆ. ನಿನ್ನ ಪ್ರೀತಿಯ ಹುಡುಗನನ್ನು ನೋಡವ ಆಸೆ ನಿನಗಿಲ್ಲವೆ. ನಿನ್ನ ನೋಡಿ ಮುದ್ದಾಡುವ ಆಸೆಯಾಗಿದೆ. ದಯವಿಟ್ಟು ಒಮ್ಮೆ ಕಣ್ಣ ಎದುರಿಗೆ ಬರುವೆಯಾ ಚಿನ್ನು…

ಪ್ರಾಣ ಇರುವುದು ನಿನಗಾಗಿ
ಬರುವೆಯ ಚಿನ್ನ
ನಾನು ಇರುವುದು ನಿನಗಾಗಿ
ಮರೆಯಬೇಡ ಚಿನ್ನ
ನಿನಗಾಗಿ ಕಾಯುತ್ತಿದ್ದೇನೆ
ಒಮ್ಮೆಯಾದರೂ ನನ್ನ ಹಿಂತಿರುಗು ನೋಡು ಚಿನ್ನ
ಇದೇ ನನ್ನ ಕೋರಿಕೆ
ಚಿನ್ನ..

ಇಂತಿ ನಿನಗಾಗಿ ಕಾಯುತ್ತಿರುವ ಪ್ರೇಮಿ
ಪ್ರಭು

ಇಂತಿ ನಿಮ್ಮ ವಿಶ್ವಾಸಿ
ಪ್ರಭಾಕರ ಪಿ
9980796846.