ಚಿತ್ರದುರ್ಗ ನಗರದ ಕೊಳಚೆ ಪ್ರದೇಶದಲ್ಲಿನ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳು: ಒಂದು ಸಮಾಜಶಾಸ್ತ್ರೀಯ ಅಧ್ಯಯನ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಪೂರ್ಣಕಾಲಿಕ ಸಂಶೋಧನಾರ್ಥಿ ಹೆಚ್.ಇ. ಮಹಾಂತೇಶ ಅವರಿಗೆ ಪಿಎಚ್.ಡಿ ಪದವಿ ನೀಡಿದೆ.

ಸಹ್ಯಾದ್ರಿ ಕಾಲಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಹೆಚ್.ಎಸ್. ಕೃಪಾಲಿನಿ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಕೀಕೆರೆ ಗ್ರಾಮದ ಆರ್.ಈಶ್ವರಪ್ಪ ಹಾಗೂ ಎಂ.ಸಿ. ರುದ್ರಮ್ಮ ದಂಪತಿ ಪುತ್ರ.