ಶಂಕರಘಟ್ಟ : ಮನುಷ್ಯನ ವರ್ತನೆಯನ್ನು ಪರಿವರ್ತಿಸುವುದೇ ಶಿಕ್ಷಣವೆಂದು ಮಂಡರಗಿ ನಿಷ್ಕಲ ಮಂಟಪದ ಪರಮಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಭಾಂಗಣದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಪರಸ್ಪರ-೨೦೧೭-೧೮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನುಷ್ಯ ತನ್ನ ಅಮಾನವೀಯ ನಡೆಯಿಂದ ಮಾನವೀಯತೆಯ ನಡೆಗೆ, ಜಾತಿಯಿಂದ ಜಾತ್ಯಾತೀತೆಯ ಕಡೆಗೆ ಹೋಗುವುದೇ ನಿಜವಾದ ಶಿಕ್ಷಣ. ಶಿಕ್ಷಣವೆಂದರೆ ವಿಕಾಸ. ಅದು ನಿಂತ ನಿರಾಗಬಾರದು. ತಾರಬಲ, ಚಂದ್ರಬಲದ ಮೇಲೆ ಸಮಾಜವನ್ನು ಕಟ್ಟುವುದಕ್ಕಾಗುವುದಿಲ್ಲ ಜ್ಞಾನಬಲದಿಂದ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು. ಅಂಬೇಡ್ಕರ್ ಆಶಯದಂತೆ ಹೆಣ್ಣು ಗುಡಿಗುಂಡಾರದ ಮುಂದೆ ಕ್ಯೂನಲ್ಲಿ ನಿಲ್ಲದೇ ಗ್ರಂಥಾಲಯದಲ್ಲಿ ಎಂದ ಕ್ಯೂ ನಿಲ್ಲುತ್ತಾರೋ ಆಗ ದೇಶ ನಿಜವಾಗಿಯೂ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ. ಬಸವಣ್ಣ, ವಿವೇಕಾನಂದ ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸಿದರು.

ಆದರೆ ಇಂದು ದಿನಬೆಳಗಾದರೆ ಟಿವಿಯ ಮುಂದೆ ಪಂಚಾಂಗ ಹಿಡಿದು ಕುಳಿತುಕೊಂಡ ಕೆಲವರು ಎದುರಿಗೆ ಇರುವ ಮನುಷ್ಯರನ್ನು ಪ್ರೀತಿಯಿಂದ ಕಾಣಲು ಮಾರ್ಗದರ್ಶನ ಮಾಡದೇ ಕಾಣದೇ ಇರುವ ದೇವರನ್ನು ಪ್ರೀತಿಸುವುದನ್ನು ಕಲಿಸುತ್ತಿದ್ದಾರೆ. ಎಲ್ಲ ಧರ್ಮಗಳಲ್ಲೂ ಮೂಡನಂಬಿಕೆ ಇದೆ ಆ ಮೂಡ ನಂಬಿಕೆಯಿಂದ ವಿದ್ಯಾರ್ಥಿಗಳು ಹೊರಬಂದು ವೈಚಾರಿಕೆ ನೆಲೆಗಟ್ಟಿನಲ್ಲಿ ಬದಕು ಕಟ್ಟಿಕೊಳ್ಳುವ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದರು. ಕುಲಸಚಿವರಾದ ಪ್ರೊ.ಬೋಜ್ಯಾನಾಯಕ್‌ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನವನ್ನು ಪಡೆದಿದ್ದು, ಸ್ವಚ್ಛತಾ ಅಂದೋಲನದಲ್ಲಿ ಕರ್ನಾಟಕದ ನಾಲ್ಕು ವಿದ್ಯಾಸಂಸ್ಥೆಗಳು ಮಾತ್ರ ಸ್ಥಾನವನ್ನು ಪಡೆದಿದ್ದು, ಸಾಂಪ್ರಾದಾಯಿಕ ವಿಶ್ವವಿದ್ಯಾನಿಲಯಗಳಲ್ಲಿ ಕುವೆಂಪು ವಿವಿ ಮಾತ್ರ ತನ್ನ ಸ್ಥಾನ ಪಡೆದಿದೆ. ಇದರಲ್ಲಿ ಈ ಹಿಂದೆ ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಕೊಡುಗೆ ಆಪಾರವಾಗಿದೆ. ತಾವು ಆ ನಿಟ್ಟಿನಲ್ಲಿ ಪ್ರಯತ್ತಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಇಲ್ಲಿ ಓದಲು ಪೂರಕ ವಾತವರಣವನ್ನು ವಿವಿ ಕಲ್ಪಿಸಿದೆ ಅದನ್ನು ಸದುಪಾಯೋಗ ಪಡಿಸಿಕೊಳ್ಳಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದು ಕುಲಪತಿಗಳಾದ ಪ್ರೊ.ಜೋಗನ್ ಶಂಕರ್‌ರವರು ವಿದ್ಯಾರ್ಥಿ ಜೀವನ ಒಂದು ತಪಸ್ವಿ ಜೀವನ. ತಪ್ಪಸ್ಸಿನ ಮೂಲಕ ವಿದ್ಯಾರ್ಜನೆಯನ್ನು ಮಾಡಬೇಕು. ತಮ್ಮ ವಿದ್ಯಾರ್ಜನೆಗೆ ಹಾಗೂ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ವಿಶ್ವವಿದ್ಯಾನಿಲಯ ಹಲವಾರು ಕಾರ್ಯಕ್ರಮಗಳನ್ನು ವಿವಿ ಆವರಣದಲ್ಲಿ ರೂಪಿಸಿದೆ ವಿದ್ಯಾರ್ಥಿಗಳು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ತಯಾರಾಗಬೇಕೆಂದರು. ಕುವೆಂಪು ವಿಶ್ವವಿದ್ಯಾನಿಲಯ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಸೆಮಿಸ್ಟರ್ ಪದ್ಧತಿಯ ಅಳವಡಿಕೆ, ಸಿಬಿಎಸ್ಸಿ ಪದ್ಧತಿ ಜಾರಿ ಹೀಗೆ ಹತ್ತು ಹಲವು ಬಗೆಯಲ್ಲಿ ನಮ್ಮ ವಿಶ್ವವಿದ್ಯಾನಿಲಯ ಮುಂಚೂಣಿಯಲ್ಲಿದೆ. ೨೦೧೦-೨೦೧೬ರವರೆಗಿನ ಅವಧಿಯಲ್ಲಿ ಈ ರಾಜ್ಯದ ಇತರೆ ವಿಶ್ವವಿದ್ಯಾನಿಲಯಗಳಿಗಿಂತ ಊ-Iಟಿಜex ನಲ್ಲಿ  ಮುಂದಿದೆ. ಇದು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಗುಣಮಟ್ಟದ ಸಂಶೋಧನೆಗಳಿಂದ ಗುರುತಿಸಲ್ಪಡುತ್ತದೆ ಎಂದರು. ಇಲ್ಲಿನ ಅಧ್ಯಾಪಕರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದನ್ನು ಹೆಮ್ಮೆಯಿಂದ ತಮಗೆ ತಿಳಿಸಬಯಸುತ್ತೇನೆಂದರು. ಪ್ರಾರಂಭದಲ್ಲಿ ವಿದ್ಯಾರ್ಥಿಕ್ಷೇಮ ಪಾಲಾನ ವಿಭಾಗದ ನಿರ್ದೇಶಕರಾದ ಪ್ರೊ.ಡಿ.ಎಸ್. ಪೂರ್ಣಾನಂದ ಸ್ವಾಗತಿಸಿದರೆ, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕರಾದ ಡಾ.ವೆಂಕಟೇಶ್ ವಂದಿಸಿದರು. ಧರ್ಮಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.