ಅದೇನೋ ಯಾಕೋ ಗೊತ್ತೆ ಇಲ್ಲ, ಸುಮ್ಮನೆ ನಾನಾಯ್ತು, ನನ್ನ ಕೆಲಸವಾಯ್ತು ಎಂದು ನನ್ನ ಪಾಡಿಗೆ ನಾನಿದ್ದ ಜೀವನದಲ್ಲಿ ಇದ್ದಕ್ಕಿದ್ದಹಾಗೆ ಕಾಲಿಟ್ಟಳು ಪ್ರೀತಿ. ಇರುಳಲ್ಲಿ ದೀಪವಿಡಿದು ನಿಂತು ಯಶಸ್ಸೆಂಬ ಹಾದಿ ತೋರಿಸಿದಳು. ನಾನು ಕಂಡಾಗಲೆಲ್ಲಾ ‘ನೀನೆಂದರೆ ನನಗೆ ತುಂಬಾ ಇಷ್ಟ, ಯಾವಾಗ ಮದುವೆ ಯಾಗ್ತೀಯಾ’ ಎಂದೇ ಕೇಳುತ್ತಿದ್ದಳು.

ಆಗ ನಾನು ಮುಗುಳು ನಕ್ಕಾಗ ಮನಸಾರೆ ನಗೋ ನೋಡೋ ಆಸೆಯಾಗಿದೆ ಎನ್ನುತ್ತಿದ್ದಳು. ಜೀವನದ ಕಷ್ಟ-ಸುಖಗಳನ್ನು ಅರಿತಿರುವ ಅವಳು ನನಗೂ ಅವನ್ನೆಲ್ಲಾ ಕಲಿಸಿದಳು. ಪ್ರತಿ ಗುರುವಾರ ಸಾಯಿಬಾಬಾ ಟೆಂಪಲ್ ಗೆ ಕರೆದೊಯ್ಯುವಳು, ವೀಕೆಂಡ್ ಗೆ ಒಂದೊಳ್ಳೆ ಕನ್ನಡ ಮೂವೀ ಜೊತೆಗೆ ಬೈಕ್ ನಲ್ಲಿ ಜಾಲೀರೈಡ್,  ನಾ ಆಫೀಸ್ ನಲ್ಲಿರುವಾಗ ನಾಲ್ಕೈದು ಪೋನ್ ಕಾಲ್ ಮಾಡಿ ವಿಚಾರಿಸುವಳು, ಇಷ್ಟು ಸಾಕಲ್ಲವೆ ಈ ಬಡಪಾಯಿ ಜೀವಕ್ಕೆ ಇನ್ನೇನು ಬೇಕು ಎನಿಸುವುದು ನನಗೆ. ಆಧುನಿಕ ಜೀವನದಲ್ಲಿ ಸೊರಗಿ ಹೋಗಿದ್ದ ನನಗೆ ಪ್ರೀತಿಯ ಪ್ರಪಂಚ ತೋರಿಸಿ ಹೊಸ ಚೈತನ್ಯವನ್ನು ನೀಡಿದವಳು ಪ್ರೀತಿ. ನಿಜ ಹೇಳಬೇಕೆಂದಕೆ ಪ್ರೀತಿಯಿಂದಾನೆ ನಾನು ಪ್ರೀತಿಯೆಂದರೆ ಏನು ಎಂದು ಅರಿತುಕೊಂಡೆ. ಚಿಕ್ಕ ವಯಸ್ಸಿನಲ್ಲಯೇ ತಾಯಿಯನ್ನು ಕಳೆದುಕೊಂಡಿದ್ದ ನನಗೆ ತಾಯಿ ಪ್ರೀತಿಯ ಕೊರತೆ ಹೆಚ್ಚಿತ್ತು. ಪ್ರೀತಿ ನನ್ನ ಜೀವನದಲ್ಲಿ ಬಂದಾಗಿನಿಂದ ತಾಯಿ ಪ್ರೀತಿ ಮತ್ತೆ ಸಿಕ್ಕಂತಾಗಿದೆ.

ಪ್ರೀತಿಯನ್ನು ನಾನು ಮೊದಲ ಬಾರಿಗೆ ನೋಡಿದ್ದು ಅನಾಥ ಮಕ್ಕಳಿಗೆ ಊಟ ಮಾಡಿಸುತ್ತಿರುವಾಗ. ನಾನು ಆಗಾಗ ಅನಾಥಾಲಯಗಳಿಗೆ ಭೇಟಿನೀಡಿ ಆದಷ್ಟೂ ಸಹಾಯ ಮಾಡುತ್ತಿರುತ್ತೇನೆ. ಅವಳು ಕೂಡ. ಹಾಗೆ ಪರಿಚಯವಾಗಿ. ನಮ್ಮ ಭಾವನೆಗಳು ಇಷ್ಟಗಳು ಒಂದೇಯಾಗಿದ್ದರಿಂದ ಪ್ರೀತಿಯೆ ನನಗೆ ನಿನ್ನ ಪ್ರೀತಿ ಬೇಕು, ಕೊಡುವೆಯಾ ಎಂದು ಕೇಳಿದಳು. ಅಲ್ಲಿಂದ ಇಲ್ಲಿಯವರೆಗೂ ನಾವಿಬ್ಬರು ದೇಹ ಎರಡು ಜೀವ ಒಂದು ಎಂಬಂತೆ‌ ಇದ್ದೇವೆ. ಅವಳು ನನ್ನನ್ನು ಚಿಕ್ಕ ಮಗುವಿನ ರೀತಿ ನೋಡಿಕೊಳ್ಳುತ್ತಿದ್ದರೆ ನನಗೆ ನನ್ನ ತಾಯಿಯೇ ನೆನಪಾಗುತ್ತಾರೆ. ಆಗ ಅವಳು ಅಳಬೇಡ ಚಿನ್ನು ನಿಮ್ಮ ತಾಯಿ ನಮ್ಮಿಬ್ಬರಿಗೆ ಮಗಳಾಗಿ ಜನಿಸುತ್ತಾಳೆ ಎಂದು ನನ್ನನ್ನು ಸಮಾಧಾನ ಪಡಿಸುತ್ತಿದ್ದಳು. ಒಳ್ಳೆಯದನ್ನು ಮಾಡುವವರಿಗೆ ಒಳ್ಳೆಯದೇ ಆಗುತ್ತದೆ ಎನ್ನುವ ಮಾತು ನಮ್ಮ ಜೀವನದಲ್ಲಿ ಸಾಬೀತಾಗಿದ್ದಂತೂ ನಿಜ. ಆದರೆ ನಮ್ಮ ಚೆಂದದ ಜೋಡಿಯ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ತಿಳಿಯದು. ನಮ್ ಪ್ರೀತಿ ನನ್ನಿಂದ ದೂರವಾದಳು. ಯಾಕೆ ನನ್ನ ಮರೆತೆ ಪ್ರೀತಿ, ನನ್ನಿಂದ ಏಕೆ ದೂರವಾದೆ, ನಿನ್ನ ಪ್ರೀತಿಯಿಂದ ಈ ಪ್ರಪಂಚವನ್ನು ಪರಿಚಯಿಸಿದೆ ಆದರೆ ಈಗೆ ನೀನೆ ಇಲ್ಲ, ಇನ್ನು ಈ ಪ್ರಪಂಚವೇಕೆ ಬೇಕು ನನಗೆ. ನೀನಿಲ್ಲದ ನನಗೆ ಮತ್ತೇ ನನ್ನ ತಾಯಿಯ ಪ್ರೀತಿಯ ಕೊರತೆ ಕಾಡುತ್ತಿದೆ. ನಿನ್ನ ಆಗಮನಕ್ಕಾಗಿ ನಿನ್ನ ಭೇಟಿಗಾಗಿ ನನ್ನ ಮನವು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದೆ, ನಿನ್ನ ಧ್ವನಿ ಕೇಳಲು ಮನವು ಚಡಪಡಿಸುತ್ತಿದೆ, ನಿನ್ನನು ಅಪ್ಪಿ ಮುದ್ದಾಡಲು ಕಾಯುತಿರುವೆ, ನನಗೋಸ್ಕರ ನಮ್ಮ ಪ್ರೀತಿಗೋಸ್ಕರ ಒಮ್ಮೆ ಕಣ್ಣೆದುರಿಗೆ ಬಾ. ನನ್ನ ಮನಸ್ಸಿಗೆ ಎಷ್ಟು ನೋವಾಗಿದೆ ಅಂದ್ರೆ ಈ ಪ್ರಪಂಚದಲ್ಲಿ ನಾನೇಕೆ ಇನ್ನು ಬದುಕಿದ್ದೇನೆ ಎನ್ನುವಷ್ಟು. ನೀನಿಲ್ಲದ ನನಗೆ ನೆಮ್ಮದಿ ಇಲ್ಲ, ನಿದ್ದೆ ಇಲ್ಲ, ಸಮಾಧಾನವಿಲ್ಲ. ಕ್ಷಣ ಕ್ಷಣಕ್ಕು ಭಯವಾಗುತ್ತಿದೆ ಮತ್ತೆ ನಿನ್ನ ನೋಡುತ್ತೇನೋ ಇಲ್ಲವೋ ಎಂದು. ನೀನಿಲ್ಲದ ಈ ಜೀವನ ಊಹಿಸಿಕೊಳ್ಳುವುದಕ್ಕು ಸಾಧ್ಯವಾಗುತ್ತಿಲ್ಲ. ಇನ್ನು ವಾಸ್ತವದಲ್ಲಿ ಅಸಾಧ್ಯವೆ‌ ಸರಿ. ಪ್ರಜ್ವಲಿಸುವ ಸೂರ್ಯನ ಹಾಗೆ ಹಗಲು ಬೆಳಕಿನಲ್ಲಿ ಕಂಗೊಳಿಸುತ್ತ ರಾತ್ರಿಯೆಲ್ಲಾ ಬೆಳದಿಂಗಳ ಚಂದ್ರನಂತೆ ಕನಸಲ್ಲಿ ಬಿಟ್ಟುಬಿಡದೆ ಕಾಡುತ್ತೀಯ. ಕತ್ತಲು ಇಲ್ಲವೆಂದರೆ ಬೆಳಕಿನ ಬೆಲೆ ತಿಳಿಯುತಿರಲಿಲ್ಲ ದುಖ: ಇಲ್ಲವೆಂದರೆ ನಗುವಿನ ಬೆಲೆ ತಿಳಿಯುತಿರಲಿಲ್ಲ ಅದೇ ನೋವು ತಿಳಿದಿಲ್ಲವೆಂದರೆ ಜೀವನ ನಮಗಾರಿಗೂ ತಿಳಿಯುವುದಿಲ್ಲ ಆದರೆ ಜೀವನವೆ ನೋವಾಗಿ ಬದುಕಲೆ ಸಾಯಲೆ ನೀನಿಲ್ಲದ ಬದುಕು ನನ್ಗೆ ಬೇಕೆ ಎಂದು ಹೃದಯ ಅಳುತ್ತಿದೆ. ನಿನ್ನ ಪ್ರೀತಿಯ ಹುಡುಗನನ್ನು ನೋಡವ ಆಸೆ ನಿನಗಿಲ್ಲವೆ. ನಿನ್ನ ನೋಡಿ ಮುದ್ದಾಡುವ ಆಸೆಯಾಗಿದೆ. ದಯವಿಟ್ಟು ಒಮ್ಮೆ ಕಣ್ಣ ಎದುರಿಗೆ ಬರುವೆಯಾ ಚಿನ್ನು…

ಇಂತಿ ನಿನಗಾಗಿ ಕಾಯುತ್ತಿರುವ ನಿನ್ನ ಮುದ್ದು
ಪ್ರಭು

ನಿಮ್ಮ ವಿಶ್ವಾಸಿ
ಪ್ರಭಾಕರ ಪಿ
ಪತ್ರಿಕೋದ್ಯಮ ವಿದ್ಯಾರ್ಥಿ
ಸರಳಾದೇವಿ ಪ್ರಥಮ ದರ್ಜೆ ಕಾಲೇಜ್ ಬಳ್ಳಾರಿ.
9980796846…