ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಗ್ರಾಮದ ಪ್ರಭು ಮತ್ತು ಗೆಳೆಯರು ಸಹಕಾರದಿಂದ  ಕವಿ ಸಣ್ಣಗೌಡ್ರು ನಾಗರಾಜ್ ಪ್ರಾಚೀನ ಕಾಲದ ಗೀರು ಚಿತ್ರಗಳಿರುವ ಬಂಡೆಗಳನ್ನು ಪತ್ತೆಮಾಡಿದ್ದಾರೆ. ಇಲ್ಲಿ ಕಲ್ಲಿನಿಂದ ಕುಟ್ಟಿ ,ಗೀರಿ,ಹಸು,ಗೂಳಿ,ಅಳೆಗುಳಿ ಆಟದ ಚಿತ್ರಣವಿದೆ ಇವು ಪ್ರಾಚೀನ ಕಾಲದ ಮಾನವನ ಬದುಕನ್ನು ನಿರೂಪಿಸುತ್ತವೆ.

ಬಿಸಿಲು,ಮಳೆ,ಜನ ಜಾನುವಾರುಗಳ ದಾಳಿಯಿಂದ ನಶಿಸುವ ಹಂತದಲ್ಲಿವೆ.ಪುರಾತತ್ವ ಇಲಾಖೆ ವೈಜ್ಞಾನಿಕ ಅಧ್ಯಯನ ನಡೆಸಿಇವುಗಳ ಕಾಲವನ್ನು ತಿಳಿಸಿ ಸಂರಕ್ಷಿಸಬೇಕೆಂದು ಐತಿಹಾಸಿಕ ಶಿಲಾ ಶಾಸನ ಸ್ಮಾರಕಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕವಿ ಸಣ್ಣಗೌಡ್ರು ನಾಗರಾಜ್ ತಿಳಿಸಿದ್ದಾರೆ.

ಕವಿ ಸಣ್ಣ ಗೌಡ್ರು ನಾಗರಾಜ್

ಮೊ: 9964502826