ದಾವಣಗೆರೆ: ವೀಕ್ಷಕರ ಮೇಲೆ ಕನ್ನಡ ಸುದ್ದಿವಾಹಿನಿಗಳ ಪ್ರಭಾವ ಒಂದು ಅಧ್ಯಯನ ಎಂಬ ವಿಷಯ ಕುರಿತಾಗಿ ಪತ್ರಕರ್ತ ವರದರಾಜು ಸಿ  ಮಂಡಿಸಿದ ಮಹಾಪ್ರಭಂದಕ್ಕೆ  ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿದೆ.

ಕುವೆಂಪು ವಿ ವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ  ಡಾ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಮಹಾಪ್ರಭಂದ ಮಂಡಿಸಿದ್ದರು . ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟದಲ್ಲಿರುವ   ಪತ್ರಿಕೋದ್ಯಮ ಮತ್ತು ಸಮೂಹ ಸಂವನಹ ವಿಭಾಗದಲ್ಲಿ ಸಲ್ಲಿಕೆಯಾದ ಮಹಾಪ್ರಭಂದಕ್ಕೆ ಇದೀಗ ಡಾಕ್ಟರೇಟ್ ನೀಡಲಾಗಿದೆ.

ಫೆ.15 ರಂದು ನಡೆಯುವ ಕುವೆಂಪು ವಿ ವಿ  ಘಟಿಕೋತ್ಸವದಲ್ಲಿ ಪದವಿ ಪ್ರಧಾನವಾಗಲಿದೆ.  ವರದರಾಜ್ ಸಿ ಇವರು ಸುವರ್ಣನ್ಯೂಸ್ ದಾವಣಗೆರೆ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .ದಾವಣಗೆರೆ ಜಿಲ್ಲಾ  ವರದಿಗಾರ ಕೂಟದ ಸದಸ್ಯ ಮತ್ತು ಹಿರಿಯ ಸಲಹೆಗಾರರು ಆಗಿದ್ದಾರೆ.