ಕೆಲವರ ವಿಚಾರದಲ್ಲಿ ಅದೇಷ್ಟು ಸರಿಯೋ ನನಗೆ ಗೊತ್ತಿಲ್ಲ ಆದರೆ ನಮ್ಮ ವಿದ್ಯಾರ್ಥಿ ಜೀವನದಲ್ಲಿ ನಡೆದ ಘಟನೆ ಮರೆಯಲಾಗದು. ಅದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದ್ದರೆ ಈ ಮುಂದಿನ ಸಂಗತಿಯನ್ನು ಚಾಚು ತಪ್ಪದೆಓದಿ….

ಕಳೆದ ಎರಡು ವರ್ಷಗಳ ಹಿನದೆ ಅಂತಿಮ ಬಿಎ ಓದುತಿದ್ದ ನಾವು ನಮ್ಮ ಆಯ್ಕೆಯ ವಿಷಯದಲ್ಲಿ ಕೇವಲ ೧೯ ಜನ ವಿದ್ಯಾರ್ಥಿಗಳು, ಅದರಲ್ಲಿ ೧೪ ಜನ ಹುಡುಗರು ೫ ಜನ ಹುಡುಗಿಯರು ಮಾತ್ರ.. ಇನ್ನುಅಂತಿಮ ವರ್ಷದ ಬಿಎ ಬರೊವತ್ತಿಗೆ ಕೇವಲ ೧೨ ಜನ ಹುಡುಗರು. ಒಂದು ಹುಡುಗಿ ಮಾತ್ರ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ ನಮ್ಮ ಸೆಕ್ಷನ್‌ನಲ್ಲಿ ಮೋಜು ಮಸ್ತಿಗೆ, ಹೊಂದಾಣಿಕೆಗೆ ಹೆಚ್ಚು ಮಹತ್ವವನ್ನುಕೊಟ್ಟಿದ್ದೆವು.

ಒಬ್ಬಳೇ ಇದ್ದ ಹುಡುಗಿ ಬಗ್ಗೆ ಹೇಳುವುದಾದರೆ ಅವಳು ಅತಿ ಹೆಚ್ಚು ಹುಡುಗರ ಜೊತೆನೇ ಸ್ನೇಹ ಬೆಳದಿದ್ದರಿಂದ ಹುಡುಗರಂತೆಯೇ ಕಾಲೇಜಿನಲ್ಲಿ ವರ್ತಿಸುತ್ತದ್ದಳು. ನಾವು ಹೇಳೋ ವಿಚಾರಕ್ಕೆಲ್ಲಾ ಸವಾಲು ಹಾಕುತ್ತಿದ್ದಳು. ಗಂಡಿಗಿಂತ ನಾನೇನೂ ಕಡಿಮೆ ಇಲ್ಲ ಎಂಬುದನ್ನು ಪ್ರತಿದಿನ ನಮ್ಮ ಕ್ಲಾಸ್‌ನಲ್ಲಿ ಹೆಮ್ಮೆಪಡುತಿದ್ದಳು.
ಅದೇ ವರ್ಷ ಪ್ರವಾಸ ಹೋಗಲು ನಿರ್ಧರಿಸಿ ಕಡಿಮೆ ಸಂಖ್ಯೆ ಇರುವುದರಿಂದ ಗೋವಾ ಹೋಗಲು ನಮ್ಮ ಸರ್‌ಗಳನ್ನು ಒಪ್ಪಿಸಿದೆವು. ಇದಕ್ಕೆ ಸೂತ್ರಧಾರಿಯಾಗಿ ನಮ್ಮ ಕ್ಲಾಸ್ ಹುಡುಗಿ.
ನವೆಂಬರ್ ತಿಂಗಳಿನಲ್ಲಿ ದಿನಾಂಕ ಗೊತ್ತು ಮಾಡಿ ಅದಕ್ಕೆ ಬೇಕಾದ ಎಲ್ಲಾ ಸಿಧ್ಧತೆಗಳನ್ನು ಮಾಡಿಕೊಂಡು ಗೋವಾ ಕಡೆ ಪ್ರಯಾಣ ಹೊರಟೆವು. ರಾತ್ರಿ ಯಲ್ಲಾ ಕುಣಿದು ಕುಪ್ಪಳಿಸಿ ಬೆಳಗಾಗುವ ಹೊತ್ತಿಗೆ ಗೋವಾ ಸೇರಿಕೊಂಡು ಅಲ್ಲಿನ ಕಲ್ಲಗೊಟ್ ಬೀಚ್‌ನಲ್ಲಿ ಸಂಜೆ ನಾಲ್ಕು ಗಂಟೆಯ ತನಕ ಇದ್ದು ಅವರಿವರ ಜೊತೆ ಗ್ರೂಫ್ ಪೋಟೋ ಕ್ಲಿಕ್ಕಿಸಿಕೋಳ್ಳುತ್ತಿದ್ದೇವು.

ನಮ್ಮ ಗ್ರೂಫ್‌ನಲ್ಲಿ ಕೆಲ ಎಣ್ಣೆ ಪ್ರಿಯರು ಇದ್ದರು. ಮೊದಲೆ ಸ್ಕೇಚ್‌ಹಾಕಿ ನಾವು ತಂಗಲು ಮಾಡಿದ ಲಾಡ್ಜ್ ರೂಮ್‌ನಲಿ ಡಿಂಕ್ಸ್ ತರಿಸಿಕೊಂಡು ಸರ್‌ಗೆ ಹೇಳದಾಗೆ ಸಿದ್ಧತೆ ಮಾಡಿಕೊಂಡಿದ್ದರು.
ಸರ್ ಜೊತೆ ರಾತ್ರಿ ೯:೩೦ಗೆ ಊಟ ಮಾಡಿ ಕೆಲವರು ರೂಮ್‌ಗೆ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಬಂದೆವು. ಅಲ್ಲಿ ಮೂರು ರೂಮ್‌ಗಳನ್ನ ಮಾಡಿ ಸರ್‌ಗಳಿಗೆ ಒಂದು ರೂಮ್ ಹಾಗೂ ನಮ್ಮ ಕ್ಲಾಸ್ ಹುಡುಗಿಗೆ ಒಂದುರೂಮ್ ಹಾಗೂ ಹುಡುಗರಿಗೆ ಒಂದು ರೂಮ್‌ನಲ್ಲಿ ಹೋಗಿ ಸೇರಿಕೊಂಡು ಸಮಯ ಹನ್ನೋಂದು ಆಗುವ ತನಕ ಕಾದು ಮೊದಲೇತಂದಿಟ್ಟಿದ್ದ ಎಣ್ಣೆಯ ಬಾಟಲಿಗಳನ್ನು ಓಫನ್ ಮಾಡಿ ಕುಡಿಯಲು ಪ್ರಾರಂಭಿಸಿದರು. ಅದೇ ಸಮಯಕ್ಕೆ ನಮ್ಮ ಪಕ್ಕದ ರೂಮ್‌ನಲ್ಲಿ ಇದ್ದ ನಮ್ಮ ಕ್ಲಾಸ್‌ಮೆಂಟ್ ಹುಡುಗಿಯಾಕೋ ನಿದ್ದೆ ಬರುತ್ತಿಲ್ಲವೆಂದು ನಾವಿದ್ದರೂಮ್‌ಗೆ ಬಂದಳು. ಬಂದಿದ್ದೆತಡ ಗಾಬರಿಗೊಂಡ ನಾವು ಎಣ್ಣೆ ಬಾಟಲಿಗಳನ್ನು ಒಂದು ಮೂಲೆಯಲ್ಲಿ ಇಟ್ಟು ಬಾಗಿಲು ತೆರೆದು ಸುಮ್ಮನೇ ಏನೂ ಗೊತ್ತಿಲ್ಲದವರಂತೆ ಕುಳಿತಿದ್ದೆವು.. ಆ ಹುಡುಗಿಗೆ ನಮ್ಮಎಣ್ಣೆ ವಿಚಾರವನ್ನು ಯಾರೋ ಮೊದಲೆ ಹೇಳಿದ್ದರು ಅನ್ಸುತ್ತೇ, ಡ್ರಾಮಾ ಸಾಕು ನನಗೆ ಎಲ್ಲನೂ ಗೊತ್ತು ಎಂಜಾಯ್ ಮಾಡಿ ಎಂದು ಅಲ್ಲೆ ಕುಳಿತುಕೊಂಡಳು.

ಮತ್ತೇನೂ ಎಲ್ಲನೂ ಗೊತ್ತು ಅಂದ ಮೇಲೆ ಏನಿದೆಯಂದು ಮತ್ತೆ ಕುಡಿಯಲು ಆರಂಭಿಸಿದರು. ಸ್ವಲ್ಪ ಸಮಯ ಆಗುತ್ತಿದ್ದಂತೆ ಮಾತುಗಳು ಹೆಚ್ಚಾಗಿ ಹುಡುಗಿ ಹಾಗೂ ಹುಡುಗರ ಮಧ್ಯೆ ಪೈಪೋಟಿ ಉಂಟಾಗಿ ಹುಡುಗಿಗೆ ನೀನು ಎಂದಾದರು ಕುಡುದಿಯಾ ಎಂದು ಕೇಳಿದರು. ಅವಳು ಒಂದೆರೆಡೂ ಬಾರಿ ಮಾತ್ರ ಬಿಯರ್ ಕುಡುದಿದ್ದೆ ಎಂದು ಹೇಳಿದಳು. ಅಷ್ಟಕ್ಕೆ ಸುಮ್ಮನಾಗದ ನಮ್ಮುಡುಗರು ಹಾಟ್‌ಢ್ರಿಂಕ್ಸ್ ಕುಡಿಯೇ ನೀನು ಹೆಂಗಸು ಹಾಗಿದ್ದರೆ ಎಂದು ಸವಾಲು ಹಾಕಿದ್ದೆ ತಡಎಣ್ಣೆ ಬಾಟಲಿ ಹತ್ರ ಬಂದು ಎರಡು ಮೂರು ಪೆಗ್ ಕುಡಿದು ಸುಮ್ಮನಾದಳೂ ಅಷ್ಟಕ್ಕೆ ನಾವೆಲ್ಲರೂ ಅಲ್ಲಿಗೆದಂಗಾಗಿ ಹೋಗಿದ್ದೇವು.

ಅದೆ ಯಾವುದೋ ಗೋವಾದಲ್ಲಿ ಪಿನ್ನಿ ಎಂಬ ಡ್ರೀಂಕ್ಸ್ ವಿಷೇಶ ಎಂದು ಹೇಳಿದಕ್ಕೆ ಅದರಲ್ಲಿ ಎರಡು ಗ್ಲಾಸ್‌ಕುಡಿದು ಮಾತಾಡಲು ಶುರುಮಾಡಿದಳು. ಅಪ್ಪ ಅಪ್ಪ ಅವೇನು ಕೇಳುವಂತ ಮಾತುಗಳೇ ರಾತ್ರಿಯಲ್ಲಾ ಮಾತನಾಡಿ ಹುಡುಗರಿಗೆ ಕಾಟ ಕೊಟ್ಟಿದ್ದಳು. ಅವಳನ್ನ ಎಣ್ಣೆ ವಿಚಾರದಲ್ಲಿ ಕೆಣಕಿದ್ದೆ ತಪ್ಪಾಯಿತು ಎಂದು ಭಾವಿಸಿ ಅವಳನ್ನ ರೂಮ್‌ಗೆ ಬಿಟ್ಟು ಬಂದು ಮಲಗುವಾ ಎನ್ನವ ಷ್ಟೋತ್ತಿಗೆ ಸಮಯ ೨:೩೦ ದಾಟಿತ್ತು. ಅಂದೇ ನಾವೆಲ್ಲಾ ಹುಡುಗರು ನಿರ್ಧರಿಸಿ ಒಂದು ವಿಚಾರವನ್ನು ಅರಿತುಕೊಂಡೆವು’ ಹೆಣ್ಣು ಒಲಿದರೆ. ನಾರಿ ಗುಂಡು ಹೋಡದರೆ ಗಂಡು ಪರಾರಿ’ಎಂದು. ಅಂಥದೊಂದ್ದು ಘಟನೆ ನಡೆದಿದ್ದು ಅಂದಿನ ಹೊಸ ವರ್ಷದ ವೇಳೆನೇ… ಅದುವೇ ನಮ್ಮ ವಿದ್ಯಾರ್ಥಿ ಜೀವನದ ಗೋಲ್ಡನ್ ಟೈಮ್.ಆ ಘಟನೇಯಂತು ಎಂದು ಮರೆಯಲಾಗುತ್ತಿಲ್ಲ. ಪ್ರತಿ ನ್ಯೂ ಇಯರ್‌ಗೂ ನೆನಪಾಗಿ ಕಾಡುತ್ತಿರುತ್ತದೆ.

-ಮಧುಕುಮಾರ್ ಬಿಳಿಚೋಡು, ದಾವಣಗೆರೆ