ಪ್ರತಿಯೊಬ್ಬರ ವಿದ್ಯಾರ್ಥಿ ಜೀವನವೆಂಬುದು ಮರೆಯಲಾಗದ ನೆನಪುಗಳ ಕಂತೆ ನಾವೆಷ್ಟೇ ಅದನ್ನು ಮರೆತರು ಅದು ನಮ್ಮನ್ನು ಮರೆಯುವಂತೆ ಮಾಡುವುದಿಲ್ಲ. ಬಾಲ್ಯದಲ್ಲಿ ಕಳೆದ ಆ ದಿನಗಳು ಯವ್ವನ ವ್ಯವಸ್ಥೆಯಲ್ಲಿ ಮಾಡಿದ ತುಂಟಾಟಗಳು ನೆಪಿಸಿಕೊಂಡಗೆಲ್ಲ ನಮ್ಮನ್ನು ಬಿಕ್ಕಿ ಬಿಕ್ಕಿ ನಗುವಂತೆ ಮಾಡಿದರೆ ಕೆಲವು ನೆನಪುಗಳು ಮಾತ್ರ ನಮ್ಮನ್ನ ನಗುವಿನಾಚೆಯ ಹಿಂದೆ ಇರುವಂತ ದುಃಖದ ಲೋಕವನ್ನು ನೆನಪಿಸುತ್ತವೆ. ಅಂತಹ ಕೆಲವು ನೆನಪುಗಳು ನೆನಪಾದಗದ ಬರೆದ ನಾಲ್ಕಕ್ಷರಗಳೆ ಈ ಬರಹ.
ಬಾಲ್ಯದಲ್ಲಿ ಬುದ್ದಿಕಡಿಮೆ ನಾವಾಗಿಯೇ ತಿಳಿದು ಯೋಚಿಸುವ ಮನಸ್ಥಿತಿ ನಮಗಿರುವುದಿಲ್ಲ. ಆದರೂ ಅಲ್ಲಿ ಯೋಚಿಸಲಾಗದ ಹಲವು ವಿಷಯಗಳನ್ನು ಇಂದು ಯೋಚಿಸುವಂತೆ ಮಾಡುತ್ತಿದೆ. ಕಳೆದ ಅಷ್ಟು ನೆನಪುಗಳಲ್ಲಿ ನೆನಪಾಗುವುದು ಕೇವಲ ಕೆಲವು ನೆನಪುಗಳು ಮಾತ್ರ ಅಂತವುಗಳಲ್ಲಿ ಬಾಲ್ಯದಲ್ಲಿ ನಾನು ಮಾಡಿದ ತಪ್ಪುಗಳನ್ನು ಸದಾ ಗುರುಸುತಿದ್ದ ನನ್ನ ಗುರುಗಳು. ಒಮ್ಮೆ ನಾನು ನನ್ನ ಸ್ನೇಹಿತರ ಗುಂಪೊಂದು ಹೈಸ್ಕೂಲ್ ಹಂತದಲ್ಲಿ ಮದ್ಯಾಹ್ನದ ವೇಳೆ ಕ್ಲಾಸ್‌ಗೆ ಚಕ್ಕರ್‌ಹಾಕಿ ಬೇಲಿಸಾಲಲ್ಲಿ ಜೇನು ತರಲೆಂದು ಹೋದಾಗ ಜೇನನ್ನು ಹುಡುಕಿ ಹುಳುವಿನ ಹತ್ತಿರಿ ಕಚ್ಚಿಸಿಕೊಂಡು ಕೊನೆಗು ಅದರ ನೋವಿನಲ್ಲಿ ಜೇನಿನ ಸಿಹಿಯನ್ನು ಸವಿದು ಸ್ಕೂಲ್‌ನಳೊಗೆ ಬರುವತ್ತಿಗಾಗಲೆ ಕ್ಲಾಸ್‌ನಲ್ಲಿ ನಾನು ನನ್ನ ಗುಂಪಿನ ಬಗ್ಗೆ ಹಲವು ಚರ್ಚೆಗಳು ನಡೆದು ನಾವು ಬರುವ ದಾರಿವನ್ನೇ ಕಾದು ಕುಳಿತಿದ್ದ ನಮ್ಮ ಕ್ಲಾಸ್ ಟೀಚರ್ ನಮ್ಮ ಜೀವನದಲ್ಲಿ ಮುಂದೆ ಎನಾಗಬಹುದೆಂದು ಅಂದು ಹೇಳಿದ್ದು ಇಂದು ನೆನಪಾಗುತ್ತಿದೆ.
ಅಂದು ತುಂಬಾ ಸಿಟ್ಟಿನಿಂದ ನನಗೆ ನನ್ನ ತಂಡಕ್ಕೆ ಹೇಳಿದ ಮಾತುಗಳೆಂದರೆ ಜೀವನವೆಂಬುದು ಸಿಹಿಕಹಿಯ ತೋಟ ನೀನು ಹುಡುಕತ್ತಾ ಹೋದತೆಲ್ಲಾ ಸಿಹಿ ಸಿಗುವುದು ಅಸಾಧ್ಯ ಸಿಹಿ ಸವಿಯಲು ಇಚ್ಛಿಸಿದರೆ ಅದನ್ನ ನೀನೆ ಸೃಷ್ಠಿಮಾಡಿಕೊಳ್ಳಬೇಕಾಗಿತ್ತದೆ ಅದು ನೀನು ಅಂದುಕೊಳ್ಳುವಷ್ಟು ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಮುಂದೆ ಜೀವನದಲ್ಲಿ ಸಿಹಿ ಸವಿಯಬೇಕೆಂದು ಅಂದುಕೊಂಡಿದ್ದರೆ ಇಂದಿನಿಂದ ಚೇನ್ನಾಗಿ ಓದಬೇಕು ಒಂದು ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ಮುಟ್ಟಬೇಕು ಅಂದು ಮಾತ್ರ ಸಿಹಿಯೆಂಬುದು ನಿನ್ನ ಜೀವನದಲ್ಲಿ ತುಂಬಿಕೊಳ್ಳುತ್ತದೆ ಇಲ್ಲಾವಾದಲ್ಲಿ ಕಹಿಯೆಂಬುದು ನಿನ್ನನ್ನ ಸುತ್ತುವರೆಯುತ್ತದೆ. ಅವರು ಹೇಳಿದ ಮಾತುಗಳು ನನಗೆ ಅಷ್ಟು ಅರ್ಥವಾಗದೇ ಅವರು ಹೇಳಿದೆಕ್ಕೆಲ್ಲಾ ಹುಂ ಎಂದು ತಲೆ ಅಲ್ಲಾಡಿಸಿದ್ದೆ, ಆದರೆ ಇಂದು ಅವರು ಹೇಳಿದ ಮಾತುಗಳು ಮಾತ್ರ ಪ್ರತಿನಿತ್ಯ ಯೋಚಿಸುವಂತೆ ಮಾಡುತ್ತಿವೆ. ಅವರು ಹೇಳಿದಂತೆ ಜೀವನವು ಸಿಹಿಕಹಿ ತುಂಬಿದ ಸುಂದರ ತೋಟ ಸಿಹಿ ಹುಡುಕುತ್ತಾ ಹೋದರೆ ಹಲವು ತೊಂದರೆಗಳು ಜೇನಿನ ಹುಳುವಿನಂತೆ ನಮಗೆ ಕಚ್ಚುತ್ತವೆ. ಕಹಿಯೆಂಬುದು ನಿನಗೆ ಸವಿಯಲು ಮನಸ್ಸಿಲ್ಲದಿದ್ದರೆ ಸವಿಯಬೇಕಾಗುತ್ತದೆ.
ಇಂದು ಈ ನೆನಪುಗಳೆಲ್ಲಾ ನೆನಪಾಗಲು ಕಾರಣವೆಂದರೆ ನನ್ನ ಉನ್ನತ ಶಿಕ್ಷಣ ಮುಗಿದು ಕೆಲವು ದಿನಗಳಿಂದ ಕೆಲಸಕ್ಕಾಗಿ ನಾನಾ ಕಡೆ ಅಲೆದಾಗ ಗೊತ್ತಾಗುತ್ತಿದೆ. ಸರಿಯಾದ ಗುರಿಯನ್ನು ಅಂದಿನ ದಿನವೇ ನಾನು ದೃಢಪಡಿಸಿಕೊಂಡಿದ್ದರೆ ಇಂತಹ ಕಹಿ ಕಷ್ಟಗಳು ನನಗೆ ಎದುರಾಗುತ್ತಿರಲಿಲ್ಲ. ಅದಕ್ಕೆ ಹೇಳುತ್ತಾರೆ ವಿದ್ಯಾರ್ಥಿ ಜೀವನವೆಂಬುದು ಗೋಲ್ಡಂನ್ ಲೈಪ್ ಎಂದು ಆದರೆ ಅದು ಮುಗಿಯುತಿದ್ದಂತೆ ನೈಜ ಜೀವನದ ಪರಿಸ್ಥಿತಿ ನಮಗೆ ಅರಿವಾಗುತ್ತೆ. ಶಿಕ್ಷಕರು ಹೇಳುವ ಮಾತನ್ನು ಮನಸ್ಸಿನಾಳದಿಂದ ಯೋಚಿಸಬೇಕು ಸರಿಯಾದ ನಿರ್ಧಾರವನ್ನು ತೆಗುದುಕೊಂಡು ಜೀವನದ ಕ್ಷಣ ಮಾತ್ರದ ಖುಷಿಗೆ ಓತ್ತು ಕೋಡದೆ ಜೀವನಪೂರ್ತಿ ಸಿಹಿಯನ್ನು ಕಾಣುವಂತ ಜೀವನವನ್ನು ಸೃಷ್ಠಿಸಿಕೊಳ್ಳಬೇಕು ಇಲ್ಲಾವಾದರೆ ಕಹಿಯನ್ನ ಸವಿಯಲೆ ಬೇಕಾಗುತ್ತದೆ. ಕೇವಲ ವಿದ್ಯಾರ್ಥಿ ಜೀವನವೂ ಪುಸ್ತಕಕ್ಕೆ ಸೀಮಿತವಾಗದೇ ಪುಸ್ತಕವನ್ನು ಬಿಟ್ಟು ಹೊರಗಡೆ ಪ್ರಪಂಚದ ಕಡೆ ಗಮನಹರಿಸಿಬೇಕು. ಇಡೀ ಜಗತ್ತೇ ಇಂದು ಸ್ಪರ್ಧೆಯಲ್ಲಿ ನಿರತವಾಗಿದೆ ಕಲ್ಪನಾ ಪ್ರಪಂಚದಿಂದ ಹೊರಗೆ ಇನುಕಿ ನೋಡಿದರೆ ಮಾತ್ರ ನೈಜ ಪ್ರಪಂಚದ ಬಗ್ಗೆ ತಿಳುವಳಿಕೆ ಮೂಡುತ್ತದೆ. ಶಿಕ್ಷಕರು ಹೇಳುವ ಮಾತುಗಳಿಗೆ ಬೆಲೆಕೊಟ್ಟು ಸರಿಯಾದ ನಿರ್ಧಾರಗಳನ್ನು ಜೀವನದಲ್ಲಿ ಪಾಲಿಸಿಕೊಳ್ಳಿ ಸಿಹಿಯಾದ ಜೀವನವನ್ನು ತಾವುಗಳೆ ಸೃಷ್ಠಿಸಿಕೊಳ್ಳಿ. ಅಂದು ಸರಿಯಾದ ನಿರ್ಧಾರ ತೆಗೆದುಕೊಳ್ಳದ ನಾನು ಇಂದು ಹಲವು ಕಹಿಯನ್ನು ಸವಿದು ಸಿಹಿಯನ್ನು ಹುಡುಕುತ್ತಾ ಸಾಗುತ್ತಿದ್ದೇನೆ.

ಮಧುಕುಮಾರ್ ಬಿಳಿಚೋಡು
ಮೊ: 7353900950