ಯುವಕರು ಅದರಲ್ಲೂ ಪ್ರೇಮಿಗಳು ತಮ್ಮ ಪ್ರೀತಿಯಲ್ಲಿ ಹುಡುಗಿ ಕೈಕೊಟಾಕ್ಷಣ ಜೀವನದಲ್ಲಿ ಸೋತಾಕ್ಷಣ ಏಕಾಂಗಿಗಳಂತೆ ವರ್ತಿಸುತ್ತಾರೆ. ತಮ್ಮ ಫೇಸ್ ಬುಕ್ ಪೋಸ್ಟ್ ಗಳಲ್ಲಿ ವಾಟ್ಸಾಪ್ ಡಿಪಿ ಹಾಗೂ ಸ್ಟೇಟಸ್ ಗಳಲ್ಲಿ ಏಕಾಂಗಿಯ ಭಾವನೆಗಳು ಏಕಾಂಗಿಯ ಭಾವಚಿತ್ರಗಳು ಐ ಯಾಮ್ ಅಲೋನ್ ಡೋಂಟ್ ಡಿಸ್ಟರ್ಬ್ ಮಿ ಎನ್ನುವ ಸ್ಟೇಟಸ್ ಭಾವನೆಗಳೆ ರಾರಾಜಿಸುತ್ತಿರುತ್ತವೆ. ದಯವಿಟ್ಟು ಯಾರು ನನ್ನನ್ನು ಡಿಸ್ಟರ್ಬ್ ಮಾಡಬೇಡಿ, ನಾನು ಏಕಾಂಗಿ ಎಂದೆಲ್ಲಾ ಬರೆದು ಪೋಸ್ಟ್ ಮಾಡಿರುತ್ತಾರೆ. ಒಂದು ಕ್ಷಣ ಒಂದೇ ಒಂದು ಕ್ಷಣ ಪ್ರಜ್ಞಾಪೂರ್ವಕವಾಗಿ ತಾರ್ಕಿಕವಾಗಿ ಯೋಚಿಸಿದಾಗ ತಿಳಿಯುತ್ತದೆ ನಾವೆಲ್ಲಾ ಏಕಾಂಗಿಗಳಲ್ಲ ಸಂಬಂಧಗಳ ಬಲೆಯಲ್ಲಿ ಬಂಧಿಯಾಗಿದ್ದೇವೆ ಎಂದು. ಪ್ರೀತಿಸಿದವರು ದೂರವಾದರೇನಂತೆ ಜೀವಕ್ಕೆ ಜೀವ ನೀಡುವ ಸ್ನೇಹಿತರಿಲ್ಲವೆ. ಈ ಪ್ರಪಂಚದಲ್ಲಿ ಪ್ರೀತಿಯಲ್ಲಿ  ಗೆದ್ದವಸಾಮಾಜಿಕ ಸೋತವರೆ ಹೆಚ್ಚು, ಪ್ರೀತಿಸಿದವರು ಕೆಲವರು ಇರಬಹುದು ಆದರೆ ಸ್ನೇಹಿತರು ಇಲ್ಲದವರು ಇರಲು ಸಾಧ್ಯವೇ ಇಲ್ಲ.

ಗೆಳೆಯರ ಬಳಿ ಶೇರ್ ಮಾಡದೇ ಇರುವ ಭಾವನೆಗಳಿಲ್ಲ ವಿಷಯಗಳಿಲ್ಲ. ಎಲ್ಲಾ ವಿಷಯಗಳನ್ನು ಸ್ನೇಹಿತರ ಬಳಿ ಶೇರ್ ಮಾಡುತ್ತೇವೆ. ನಮ್ಮ ಸುಖ:-ದು:ಖ, ನೋವು-ನಲಿವು ಎಲ್ಲವನ್ನು ತಪ್ಪದಲ್ಲೆ ಹಂಚಿಕೊಂಡು ನಮ್ಮ ಮನಸ್ಸಿನ ಭಾವನೆಗಳೆಲ್ಲಾ ಹೇಳಿ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ನಮ್ಮ ಬಳಿ ಗೆಳೆಯರಿರುವಾಗ ನಾವು ಏಕಾಂಗಿಗಳಾಗಲು ಹೇಗೆ ಸಾಧ್ಯ. ಏಕಾಂಗಿಯ ಭಾವನೆಗಳೆಲ್ಲಾ ನಮ್ಮ ಮನದ ಕಲ್ಪನೆಗಳಷ್ಟೆ. ನಮ್ಮ ಪ್ರೀತಿಯ ಹುಡುಗಿ ದೂರವಾದ ದು:ಖಕ್ಕೆ ಅವರದೇ ಲೋಕದಲ್ಲಿ ನೆನಪುಗಳಲ್ಲಿ ಮುಳಗಿ ಏಕಾಂಗಿ ಎನಿಸುವುದು ಸಹಜ. ಆದರೆ ಅದೇ ಜೀವನವಾಗಬಾರದಲ್ಲವೆ. ನಾವು ಸಮಾಜದಲ್ಲಿ ಜೀವಿಸುತ್ತಿದ್ದೇವೆ. ಸಾಮಾಜಿಕ ಸಂಬಂಧಗಳ ಬಲೆಯಲ್ಲಿ ಬಂಧಿಯಾಗಿದ್ದೇವೆ. ತಂದೆ-ತಾಯಿ, ಅಕ್ಕ-ತಮ್ಮ, ತಂಗಿ-ಅಣ್ಣ, ಚಿಕ್ಕಮ್ಮ-ಚಿಕ್ಕಪ್ಪ, ಅತ್ತೆ-ಮಾವ ಮುಖ್ಯವಾಗಿ ಸ್ನೇಹಿತರು ಎನ್ನುವ ಸಂಬಂಧಗಳೂ ನಮ್ಮನ್ನು ಏಕಾಂಗಿಗಳಾಗಲು ಬಿಡುವುದಿಲ್ಲ. ಸಂಬಂಧಗಳು ನಮ್ಮನ್ನು ಬಂಧಿಯಾಗಿಸುತ್ತವೆ. ಇತ್ತೀಚಿನ ದಿನಮಾನಗಳಲ್ಲಿ ಒಡಹುಟ್ಟಿದವರ ಬಳಿ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ಹೆಚ್ಚಾಗಿದೆ. ತಮ್ಮ ಪ್ರೀತಿಯನ್ನು ಸಹ ಸಲೀಸಾಗಿ ತಿಳಿಸುತ್ತಾರೆ. ಇನ್ನು ಕೆಲವರು ತಮ್ಮ ಸ್ನೇಹಿತರ ಬಳಿ ಭಾವನೆಗಳನ್ನು ಹಂಚಿಕೊಳ್ಳುವರು. ಯಾವುದೆ ಒಬ್ಬ ವ್ಯಕ್ತಿ ಬಹಳ ದಿನಗಳವರೆಗೆ ತನ್ನ ಭಾವನೆಗಳು ಮನದ ಆಸೆ ಆಕಾಂಕ್ಷೆಗಳನ್ನು ಮನಸ್ಸಿನಲ್ಲೇ ಇರಿಸಿಕೊಳ್ಳಲಾಗುವುದಿಲ್ಲ. ಒಂದಲ್ಲಾ ಒಂದು ದಿನ ತಮ್ಮ ಆತ್ಮೀಯರು ಸ್ನೇಹಿತರ ಜೊತೆ ಹಂಚಿಕೊಳ್ಳುತ್ತಾರೆ.

ಫ್ರೇಂಡ್ಸ್ ಜೊತೆ ಹಂಚಿಕೊಳ್ಳದ ವಿಷಯಗಳಿಲ್ಲ. ಫ್ರೇಂಡ್ ಶಿಪ್ ಗೆ ವಯಸ್ಸಿನ ಮಿತಿಯಿಲ್ಲ, ಅಂದ ಚಂದದ ಅಗತ್ಯೆಗಳಿಲ್ಲ, ಜ್ಞಾನವೂ ಅವರವರಿಗೆ ಬಿಟ್ಟಿದ್ದು ಇಲ್ಲಿ ಬೇಕಾಗಿರುವುದು ಒಂದೇ ಒಂದು ಅದಾವುದೆಂದರೆ ನಂಬಿಕೆ ವಿಶ್ವಾಸ ಒಳ್ಳೆಯ ಗುಣ. ಇಷ್ಟಿದ್ದರೆ ಸಾಕಲ್ಲವೆ ಸ್ನೇಹಕ್ಕೆ. ಗೆಳೆಯರೆಂದರೆ ಕರೆಯದೆ ಬರುವವರು, ಸುಮ್ಮನೆ ತಲೆತಿನ್ನುವವರು ಬೇಸರವಾದಾಗ ಹಾಸ್ಯ ಚಟಾಕಿ ಹಾರಿಸುತ್ತಾ ನಕ್ಕು ನಗಿಸುವವರು ಬೇಡ ಎಂದರು ತಿನ್ನಿಸುವವರು ಮುಖ್ಯವಾಗಿ ಕಷ್ಟಕಾಲದಲ್ಲಿ ಕೈ ಹಿಡಿಯುವವರೆ ಫ್ರೇಂಡ್ಸ್…

ಹಾಗಾಗಿ ಇಂತಹ ಫ್ರೇಂಡ್ಸ್ ನಮ್ಮ ಜೊತೆಗಿರುವಾಗ ಯಾರು ಏಕಾಂಗಿಗಳಲ್ಲ. ಪ್ರೀತಿಯಲ್ಲಿ ಸೋತಾಕ್ಷಣ ಜಗತ್ತೆ ಮುಳುಗಿ ಹೋಗುವುದಿಲ್ಲ. ಅದೆಲ್ಲಾ ಒಂದು ಕನಸು ಎಂದು ಹಾಗೂ ನಮ್ಮ ಜೀವನದ ಪುಸ್ತಕದಲ್ಲಿ ಅವರ ಪಾತ್ರ ಮುಕ್ತಾಯವಾಯಿತೆಂದು ಹೊಸ ಜೀವನ ಪ್ರಾರಂಭಿಸಿ. ಪ್ರೀತಿಯಲ್ಲಿ ಸೋತವರಿಗೆ ನನ್ನದೊಂದು ಮಾತು ಪ್ರೀತಿಯೇ ಜೀವನವಲ್ಲ, ಪ್ರೀತಿಯಲ್ಲಿ ಸೋತಾಕ್ಷಣ ಸಾಯುವ ನಿರ್ಧಾರಗಳನ್ನೆಲ್ಲಾ ಮಾಡಬೇಡಿ ಏಕೆಂದರೆ ಮುಂದೊಂದು ದಿನ ಶುಭದಿನ ನಿಮಗಾಗಿ ಕಾಯುತ್ತಿರುತ್ತದೆ ನಿಮಗೂ ಶುಭವಾಗುತ್ತದೆ ಆದರೆ ಅಲ್ಲಿಯವೆರೆಗೂ ಕಾಯಬೇಕಷ್ಟೆ. ನಿಮಗಾಗಿ ನಿಮ್ಮ ಸ್ನೇಹಿತರಿದ್ದಾರೆ, ನಿಮ್ಮನ್ನೆ ನಂಬಿರುವ ತಂದೆ-ತಾಯಿಯರಿದ್ದಾರೆ. ಅವರಿಗಾಗಿ ನಿಮ್ಮ ಹೊಸ ಜೀವನವನ್ನು ಪ್ರಾರಂಭಿಸಿ ಖಂಡಿತ ಯಶಸ್ವಿಯಾಗುತ್ತೀರ. ಶುಭವಾಗಲಿ…

ಪ್ರಭಾಕರ ಪಿ
ಪತ್ರಿಕೋದ್ಯಮ ವಿಭಾಗ
ಸರಳಾದೇವಿ ಪ್ರಥಮದರ್ಜೆ ಕಾಲೇಜ್
ಬಳ್ಳಾರಿ.