ಶಂಕರಘಟ್ಟ:    ಕನ್ನಡಭಾರತಿ ವಿಭಾಗದ ನಿರ್ದೇಶಕರಾದ ಪ್ರೊ. ಶಿವಾನಂದ ಕೆಳಗಿನಮನಿ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ಮಾಡಿದ ನಂದಿನಿ ಆರ್ ಅವರು “ಎಚ್ ದೇವೀರಪ್ಪನವರ ಸಾಹಿತ್ಯದಲ್ಲಿ ಆಶಯ ಮತ್ತು ವಿನ್ಯಾಸ” ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.