ಚಿತ್ರದುರ್ಗ: ನಗರದ ಸಂಗಮೇಶ್ವರ ಬಡಾವಣೆಯ ಡಾ.ಬಿ.ಪಿ. ಪ್ರದೀಪ್‌ಕುಮಾರ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪಿಎಚ್‌ಡಿ ನೀಡಿ ಗೌರವಿಸಿದೆ.

ಡಾ.ಎಂ.ಬಿ. ಮಂಜುನಾಥ್ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ, ಫ್ರೇಮ್‌ವರ್ಕ್ ಆಫ್ ಕಾಸ್ಟ್ ಎಫೆಕ್ಟಿವ್ ಹ್ಯಾಂಡ್ ಗೆಸ್ಚರ್ ರೆಕಗ್ನೈಜೇಶನ್ ಸಿಸ್ಟಂ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು.
ಡಾ. ಪ್ರದೀಪ್‌ಕುಮಾರ್ ಚಿತ್ರದುರ್ಗದ ನ್ಯಾಯವಾದಿ ಬಿ.ಕೆ. ಪುಟ್ಟಪ್ಪ ಅವರ ಪುತ್ರ. ಸದ್ಯ ಬೆಂಗಳೂರಿನ ಎಚ್‌ಕೆಬಿಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.